Monday, December 4, 2017

*ಝಿಯಾರತ್ತ್ ಕೇಂದ್ರ*
      ✳4⃣7⃣✳
*ಕುಂಬೋಳ್ ಸದಾತ್ತುಗಳು*
------------------------
_ಸಯ್ಯಿದ್ ಮುಹಮ್ಮದ್ ಫಝಲ್ ಪೂಕೋಯ ತಂಗಳ್ (ಖ:ಸಿ) ಕುನ್ನಿಲ್ ಕುಂಬೋಳ್, ಕಾಸರಗೋಡು._
     👉ಭಾಗ-01
➖➖➖➖➖➖➖➖➖
*اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ*
☪☪☪☪☪☪☪☪☪

ತನ್ನ ತಂದೆಯವರಾದ ಪಾಪ್ಪಂ ಕೋಯ ತಂಗಳ್ (ಖ:ಸಿ) ರವರ  ಜೀವನ ಶೈಲಿಯನ್ನು ಸಂಪೂರ್ಣವಾಗಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಫಝಲ್ ಪೂಕೋಯ ತಂಙಳ್ (ಖ:ಸಿ) ರವರು ಆತ್ಮೀಯ ರಂಗದಲ್ಲಿ ಪ್ರಸಿದ್ಧರಾಗಿದ್ದರು. ಹಲವಾರು ಕಷ್ಟ ಕಾರ್ಪಣ್ಯಗಳಿಂದ ಬಳಲುತ್ತಿರುವ ಸಾಮಾನ್ಯ ನಾಗರಿಕರಿಗೆ ಆಶ್ವಾಸನೆಯ ಸಂಕೇತವಾಗಿದ್ದರು ಫಝಲ್ ಪೂಕೋಯ ತಂಗಳ್ (ಖ:ಸಿ) ಎಂಬ ಮಹಾನವರು.

ಹಿಜರಿ ವರ್ಷ 1325ರಲ್ಲಿ ಕುಂಬಳೆಯಲ್ಲಾಗಿದೆ ಮಹಾನರ ಜನನ: ತಂದೆಯವರ ಮರಣಾ ನಂತರ ಅವರ ಹಾದಿಯಲ್ಲೇ  ಪ್ರಶೋಭಿಸಿದರು.

ಸಾಮಾನ್ಯ ರೀತಿಯ ಜೀವನದ ನಡುವೆಯೂ ಹಲವಾರು (ಕಶ್ಫ್ ಕರಾಮತ್ತು ) ಪವಾಡಗಳ ಮೂಲಕ ಜನ ಹೃದಯಗಳಲ್ಲಿ ಸ್ಥಿರ ಪ್ರತಿಷ್ಠೆಗಳಿಸಿದರು. ಅಲ್ಲಾಹನ ಪ್ರೀತಿಗಾಗಿ ತನ್ನ ಜೀವನ ಮುಡಿಪಾಡಗಿಟ್ಟ, ಅವರ ಮಾದರಿಯೋಗ್ಯವಾದ ಜೀವನವನ್ನು ಕಂಡು ಬಹುತೇಕ ಅಮುಸ್ಲಿಂ ಬಾಂಧವರು ಕೂಡಾ  ಗೌರವಿಸುತ್ತಿದ್ದರು. ಬಿಳಿ ತಲೆಕಟ್ಟು/ಮುಂಡಾಸು, ಶುಭ್ರ ವಸ್ತ್ರ ಹಾಗೂ ಹಸಿರು ಶಾಲು ತೊಟ್ಟು ಭಕ್ತಿಯೊಂದಿಗಿನ ಜೀವನ ಶೈಲಿಯ ವ್ಯಕ್ತಿತ್ವವು ಎಲ್ಲರಿಂದಲೂ ಆಕರ್ಷಿಸಲ್ಪಡುತ್ತಿತ್ತು.

ಬಡವರಿಗೂ, ಸಮುದಾಯ ಸ್ಥಾಪನೆಗಳಿಗೂ ಮಹಾನವರ ಕಾರುಣ್ಯ ಸಹಾಯ ಹಸ್ತ ಸದಾ ಇರುತಿತ್ತು.
 ಜೀವನದ ಕೊನೆಯ ಕಾಲದಲ್ಲಿ ತಂದೆಯವರ ಆರಾಧನೆ ಸ್ಥಳವಾಗಿದ್ದ "ಪಾಪ್ಪಂ ಕೋಯ ನಗರ್'ನಲ್ಲಿ" ಸ್ವಂತವಾಗಿ ವಖ್ಫ್ ಮಾಡಿದ ಒಂದು ಎಕ್ಕರೆ ಸ್ಥಳದಲ್ಲಿ ತನ್ನದೇ ಮೇಲುಸ್ತವಾರಿಯಲ್ಲಿ ಮಸೀದಿ ನಿರ್ಮಿಸಿ, ತನ್ನ ಕರ್ಮ ಭೂಮಿಯಾಗಿ ಆರಿಸಿ ನೆಲೆಗೊಂಡ ಮಹತ್ತಾದ ಸ್ಥಾಪನೆಯಾಗಿದೆ "ಕುಂಬೋಳ್ ಪಾಪ್ಪಂಕೋಯ ನಗರ್ ಬದ್ರಿಯ್ಯ ಜುಮಾ ಮಸ್ಜಿದ್." ಅಲ್ಲಿಯೇ ತನ್ನ ಮೆಲ್ನೋಟದಲ್ಲಿ ಉತ್ತಮವಾದ ಒಂದು ದರ್ಸ್'ಅನ್ನು ತಂಙಳ್'ರವರು ಸ್ಥಾಪಿಸಿದರು.
ಪ್ರಸ್ತುತ ಮಸ್ಜಿದ್'ನ ಅಧೀನದಲ್ಲಿ ಇನ್ನು ಕೆಲವು ಸ್ಥಾಪನೆಗಳು ನಂತರದ ಕಾಲಗಳಲ್ಲಿ ಸ್ಥಾಪಿಸಲಾಯಿತು.
ಫಝಲ್ ತಂಗಳ್ (ಖ:ಸಿ) ರವರ "ಪಾಪ್ಪಂಕೋಯ ಹೌಸ್" ಇಂದು ಕೂಡಾ ಸಂದರ್ಶಕರ ಕೇಂದ್ರವಾಗಿದೆ.
ಕಾಸರಗೋಡಿನ ಪಟ್ಲದ ಸಯ್ಯಿದ್ ಹುಸೈನ್ ಬಾಅಲವಿ ಅಟ್ಟಕೋಯ ತಂಗಳ್ (ಖ:ಸಿ)ರವರ ಪ್ರಥಮ ಪುತ್ರಿ ಉಮ್ಮು ಹಲೀಮ ಬೀವಿಯಾಗಿದ್ದಾರೆ ಫಝಲ್ ಪೂಕೋಯ ತಂಗಳ್ (ಖ:ಸಿ) ರವರ ಸಹಧರ್ಮಿಣಿ.

ಪತಿಯ ನೆರಳಾಗಿ ಜೀವಿಸಿದ ಮಹದಿಯವರು ದೀನಿ ಚೌಕಟ್ಟಿನಲ್ಲಿ ನೆಲೆಗೊಂಡು ಇಬಾದತ್ತ್ ವಿಷಯದಲ್ಲಿ ಸಯ್ಯಿದ್ ವಂಶಕ್ಕೆ ಮಾದರಿಯಾಗಿದ್ದರು.
ಮಹದಿಯವರಲ್ಲಿ ದು:ಆ ವಸಿಯ್ಯತ್ ಮಾಡಿಸಲು, ಅನುಗ್ರಹ ಕೇಳಲು ದೂರದ ಸ್ಥಳಗಳಿಂದ ಜನರು‌ ಈಗಲೂ ಪಾಪ್ಪಂಕೋಯ ಹೌಸಿಗೆ  ತಲುಪುತ್ತಿದ್ದಾರೆ.

ಕೆಲವೊಮ್ಮೆ ಕುಂಬೋಳ್ ಮನೆತನಕ್ಕೆ ತಲುಪುತ್ತಿದ್ದ ಪಂಡಿತ ಲೋಕದ ಶಿರೋಮಣಿಗಳಾದ ಮಡವೂರ್ ಸಿ.ಎಂ. ವಲಿಯುಲ್ಲಾಹ್ (ಖ:ಸಿ), ಶಂಸುಲ್ ಉಲಮಾ ಈ.ಕೆ. ಉಸ್ತಾದ್ (ಖ:ಸಿ), ತಾಜುಲ್ ಉಲಮಾ ಉಳ್ಳಾಲ ತಂಙಳ್ (ಖ:ಸಿ), ಕೋಟ್ಟುಮಲ ಉಸ್ತಾದ್ (ಖ:ಸಿ) ಹಾಗೂ ವೈಲಿತ್ತರ ಉಸ್ತಾದ್ (ಖ:ಸಿ) ಮೊದಲಾದ ಹಲವಾರು ಮಹಾತ್ಮರುಗಳು ಮಹದಿಯವರ ಬಳಿ ದು:ಆ ವಸಿಯ್ಯತ್ತ್ ಮಾಡುತ್ತಿದ್ದರು.

ಕುಂಬೋಳ್ ಸಯ್ಯಿದ್ ಕುಟುಂಬಕ್ಕೆ ಬೆಳಕಾಗಿರುವ ಪಾಪ್ಪಂಕೋಯ ಹೌಸ್'ನಲ್ಲಿ ವಾಸಿಸುವ ಸಯ್ಯಿದತ್ತ್ ಉಮ್ಮು ಹಲೀಮಾ ಬೀವಿಯವರಿಗೆ  ಅಫಿಯತ್ತ್'ನಿಂದ ಕೂಡಿದ ದೀರ್ಘಾಯುಷ್ಯ ಕರುಣಿಸು ಅಲ್ಲಾಹ್..
ಆಮೀನ್..

🔹ಮುಂದುವರಿಯುವುದು..

    ಅನುವಾದ:
✍ ಗಫೂರ್ ಬಾಯಾರ್
✒✒✒✒✒✒✒✒✒

No comments:

Post a Comment