*ಅಹ್ಲುಸ್ಸುನ್ನತ್ ವಲ್ ಜಮಾಅತ್*
*••••••••••••••••••••••••••••••••••••*
*📝ಮುನೀರ್ ಸಖಾಫಿ, ಸಾಲೆತ್ತೂರು*
*°°°°°°°°°°°°°°°°°°°°°°°°°°°°°°°°°*
*ವಿಷಯ : 1*
*ಮೀಲಾದುನ್ನಬೀ*
*ಭಾಗ ---12.*
______________________________________
*ವಹ್ಹಾಬಿಗಳ ಮೌಲಿದ್ ಮತ್ತು ಸೀರಣೆ ವಿತರಣೆ.*
ಈದ್ ಮೀಲಾದ್ ಗೆ ಪುರಾವೆ ಖುರ್'ಆನ್ ಮತ್ತು ಹದೀಸುಗಳಲ್ಲಿ ಹಾಗೂ ಇಮಾಮರುಗಳ ಗ್ರಂಥಗಳಲ್ಲಿ ಧಾರಾಳ ಇವೆ.
ಏನೇ ಪುರಾವೆ ಮಂಡಿಸಿದರೂ ಸಲಪಿಗಳು ಅಂಗೀಕರಿಸುವವರಲ್ಲ ಎಂಬುವುದು ಎಲ್ಲರಿಗೂ ತಿಳಿದ ವಿಚಾರ.
ಮೌಲಿದ್ ನಲ್ಲಿ ಸೀರಣೆ ವಿತರಣೆ ಮಾಡುವುದಕ್ಕೂ ಕೂಡಾ ಪ್ರಮಾಣವಿದೆ.
ಮೌಲಿದ್ ಮತ್ತು ಸೀರಣೆಯನ್ನು ಗೇಲಿ ಮಾಡುವ ಆಧುನಿಕ ಸಲಪಿಗಳಿಗೆ ಪೂರ್ವ ಕಾಲದ ಸಲಪಿಗಳು ಮೌಲಿದ್ ಮತ್ತು ಸೀರಣೆ ತಿಂದು ಮೌಲಿದ್ ಮಾಡಿದ ಬಗ್ಗೆ ಅವರದ್ದೇ ಪತ್ರಿಕೆಯಲ್ಲಿ ಬರೆದಿದ್ದಾರೆ.
ಈ ಲೇಖನ ಬರೆಯುವಾಗ ಮಿತ್ರರೊಬ್ಬರು "ರಬಿವುಲ್ ಅವ್ವಲ್ 12 ರಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಉಪವಾಸ ಆಚರಿಸಿದ್ದರು ಎಂಬುವುದನ್ನು ಹೇಳಿ ಸುನ್ನಿಗಳು ಮೀಲಾದ್'ನ ಹೆಸರಲ್ಲಿ ಹೊಟ್ಟೆ ತುಂಬಾ ತಿಂದು ಮೀಲಾದ್ ಆಚರಿಸುತ್ತಾರೆ" ಎಂಬ ಸುನ್ನಿಗಳನ್ನು ಹಿಯಾಳಿಸುವ ಸಲಪಿಯ ಲೇಖನವನ್ನು ಕಳುಹಿಸಿದರು.
ಮಾನ್ಯ ವಹ್ಹಾಬಿಗಳೇ!!
ಖುರ್'ಆನ್ ಮತ್ತು ಹದೀಸ್ ಪುರಾವೆ ಹೇಳುವ ಬದಲು ನಿಮ್ಮ ನಾಯಕರ ಮೀಲಾದ್ ಮತ್ತು ಸೀರಣೆಯ ಕುರಿತು ನೀವು ಬರೆದದ್ದನ್ನು ಇಲ್ಲಿ ನೀಡುತ್ತಿದ್ದೇನೆ.
ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಉಪವಾಸ ಆಚರಿಸಿ ಮೀಲಾದ್ ಆಚರಿಸಿದರೆ ನೀವು ಕೂಡಾ ಹಾಗೇ ಮಾಡಬಾರದೇಕೆ? ಎಂದು ಕೇಳಿದ ವಹ್ಹಾಬಿಯು ಈ ಪ್ರಶ್ನೆಯನ್ನು ಮೌಲಿದ್ ನಡೆಸಿ ಸೀರಣೆ ತಿಂದ ಮುದಿ ನಾಯಕರ ಕಬರಿಗೆ ಫ್ಯಾಕ್ಸ್ ಮಾಡಲಿ.
ವಹ್ಹಾಬಿಯ ಪತ್ರಿಕೆಯಲ್ಲಿ ಬರೆಯುವುದನ್ನು ನೋಡಿ,
_ರಬೀವುಲ್ ಅವ್ವಲ್ ತಿಂಗಳನ್ನು ಮುಸ್ಲಿಮರು ಎಲ್ಲರೂ_ _ಆಚರಿಸುತ್ತಾರೆ. ಆಚರಿಸಬೇಕಾಗಿದೆ. ಈ ಆಚರಣೆ ಹಲವು ಒಳಿತನ್ನು ಉಂಟು ಮಾಡುತ್ತದೆ. ಪುಣ್ಯ ಪ್ರವಾದಿಯೊಂದಿಗೆ ಸ್ನೇಹವನ್ನು ಹೃದಯದಲ್ಲಿ ಭಧ್ರಗೊಳಿಸುತ್ತದೆ. ಅವರ ಉತ್ತಮ ಗುಣಗಳನ್ನು ಸ್ಮರಿಸುವುದಕ್ಕೆ ಅದು ಹೇತುವಾಗುತ್ತದೆ._
(ಅಲ್ ಮುರ್ಶಿದ್; ಪುಸ್ತಕ 4, ಪುಟ 22).
ಈದ್ ಮೀಲಾದ್ ಆಚರಿಸಬೇಕೆಂದು ಇಲ್ಲಿ ಸಲಪಿಗಳೇ ಆಹ್ವಾನ ನೀಡಿದ್ದಾರೆ.
ಅಂದಿನ ಸಲಪಿಗಳಿಗೆ ಅನುವದನೀಯವಾದ್ದು ಈಗಿನ ಸಲಪಿಗೆ ಬಿದ್'ಅತ್ ಆದದ್ದು ಹೇಗೆ?
ಈ ಹೇಳಿದ ನಿಮ್ಮ ತಾತಂದಿರಾದ ವಹ್ಹಾಬಿಗಳು ನರಕದಲ್ಲಾ?
ನೀವು ಓದುವ ಆಯತ್, ಹದೀಸ್ ಅವರಿಗೆ ಸಿಗಲಿಲ್ಲವೇ?
*ವಹ್ಹಾಬಿಗಳ ಮೌಲಿದ್ ಮಜ್ಲಿಸ್*
ಸಲಪಿ ಬರೆಯುತ್ತಾನೆ;
_ರಬೀವುಲ್ ಅವ್ವಲ್ ತಿಂಗಳನ್ನು ಯಾವ ರೀತಿ ಆಚರಿಸಬೇಕೆಂದೂ ಪ್ರವಾದಿಯೊಂದಿಗೆ ಗೌರವವನ್ನು ಯಾವ ರೀತಿ ತೋರ್ಪಡಿಸಬೇಕೆಂದು ನಮಗೆ ಪರಿಶೀಲಿಸೋಣ._
_ರಬೀವುಲ್ ಅವ್ವಲ್ ತಿಂಗಳು ಆಗಮಿಸಿದಲ್ಲಿ ಮನೆ ಮನೆಗಳಲ್ಲಿ ಮೌಲಿದ್ ಓದುವ ಸಂಪ್ರದಾಯ ಕಾಲಾಂತರಗಳಿಂದ ನಮ್ಮ ಊರುಗಳಲ್ಲಿ ನಡೆದು ಬರುತ್ತಿದೆ._
(ಅಲ್ ಮುರ್ಶಿದ್, ಪುಸ್ತಕ:2; ಪುಟ 267)
_*ಮೌಲಿದ್ ಗಾಗಿ ಕಮಿಟಿ ಮತ್ತು ನೇರ್ಚೆ ಹಣ*_
_ಈ ರಬೀವುಲ್ ಅವ್ವಲ್ ರಲ್ಲಿ *ಸೀರಾ ಪ್ರಚಾರ ಸಂಘ* ಎಂಬ ಹೆಸರಲ್ಲಿ ಅಥವಾ *ಇಸ್ಲಾಮ್ ಸಂರಕ್ಷಣಾ ಸಂಘ* ಎಂಬ ಹೆಸರಲ್ಲಿ ಎಲ್ಲಾ ಪ್ರದೇಶಗಳಲ್ಲೂ ಕಮಿಟಿ ರೂಪೀಕರಿಸಬೇಕು. ಅದು ನಮ್ಮ ತೌಬಾಗಿರುವ ಕಾರಣವಾಗಿರಲಿ. ಆ ಸಂಘದಲ್ಲಿ ಸದಸ್ಯರಾದ ಎಲ್ಲರೂ ಅವರವರ ತಾಕತ್ತಿನಂತೆ ಸ್ವಂತವಾಗಿ *ಫೀ ಸಬೀಲಿಲ್ಲಾಹ್ ಫಂಡ್* ಎಂಬ ಹೆಸರಲ್ಲಿ ಫಂಡ್ ಶೇಕರಿಸಬೇಕು. ಎಲ್ಲಾ ರಬೀವುಲ್ ಅವ್ವಲ್ ತಿಂಗಳಿನಲ್ಲಿ ಮೌಲಿದ್ ಮಜ್ಲಿಸ್ ಮುಖಾಂತರ ಮುಶಾವರ ನಡೆಸಿ_
_ಈ ಫಂಡ್ ಹೇಗೆ ಖರ್ಚು ಮಾಡಬೇಕೆಂದು ತೀರ್ಮಾನಿಸಬಹುದಾಗಿದೆ._
(ಅಲ್ ಮುರ್ಶಿದ್; ಪುಸ್ತಕ 1, ಪುಟ:197)
_*ಸಲಪಿಗಳ ಭರ್ಜರಿ ಸೀರಣೆ ವಿತರಣೆ*_
_ಈ ಸಂದರ್ಭದಲ್ಲಿ ಎರಡು ವರ್ಷಗಳಿಂದ "ಮುಸ್ಲಿಂ ಐಕ್ಯ ಸಂಘಂ" ಎಂಬ ಸಂಘಟನೆಯ ವತಿಯಿಂದ ನಡೆಸುತ್ತಿರುವ ಮೌಲಿದ್ ಕಾರ್ಯಕ್ರಮ ಈ ವರ್ಷ ರಬೀವುಲ್ ಅವ್ವಲ್ 12 ರಂದು ಬಹಳ ಸೊಗಸಾಗಿ ನಡೆದ ಸಂಗತಿಯನ್ನು ಪ್ರೀತಿಯ ಓದುಗರಿಗೆ ಸಂತೋಷಪೂರ್ವಕ ತಿಳಿಸಬಯಸುತ್ತೇವೆ._
_ಸಭೆಯಲ್ಲಿ ಹಾಜರಾದವರಿಗೂ ಅಲ್ಲದವರಿಗೂ ಒಂದು ಆತಿಥ್ಯ ನೀಡಲಾಯಿತು._
(ಅಲ್ ಇರ್ಶಾದ್: ಪುಸ್ತಕ 1, ಸಂಚಿಕೆ 5; 1343 ಅಬೀವುಲ್ ಅವ್ವಲ್ :158)
ಸೀರಣೆ ಎಂಬುವುದನ್ನು ಸಲಪಿ ಮಲಯಾಳಂ ನಲ್ಲಿ "ವಿರುನ್ನ್" (ಆತಿಥ್ಯ) ಅಂತ ಹೇಳಿದ್ದಾನೆ.
ಸಲ್ಪಿಗಳೇ!
ಹೇಗಿದೆ ವಹ್ಹಾಬಿಗಳ ಮೌಲಿದ್ ಮತ್ತು ಸೀರಣೆ ವಿತರಣೆ.
ಪುರಾವೆ ಕೇಳಿ ಮುಸ್ಲಿಮರನ್ನು ವಸ್ವಾಸ್ ಮಾಡುವ ಬದಲು ನಿಮ್ಮ ಪೂರ್ವಿಕರು ಮೌಲಿದ್ ಮಾಡಿ ನೇರ್ಚೆ ಹಣ ಶೇಕರಿಸಿ, ಸೀರಣೆ ಕೊಟ್ಟ ಮಹಾ ಪಾಪಕ್ಕೆ (ಆಧುನಿಕ ಸಲಪಿಗಳ ಅಭಿಪ್ರಾಯ ಪ್ರಕಾರ) ಇಸ್ತಿಗ್'ಫಾರ್ ಕೇಳಿರಿ.
ಇದೆಲ್ಲವೂ ನಿಮ್ಮ ತಾತಂದಿರಿಗೆ ಹಲಾಲ್.
ನಿಮಗೆ ಶಿರ್ಕ್, ಬಿದ್'ಅತ್.
ಇದೆಂತಹಾ ದೀನಯ್ಯಾ?!
*ಮುಂದುವರಿಯುವುದು.............*
*📝ಮುನೀರ್ ಸಖಾಫಿ, ಸಾಲೆತ್ತೂರು*
No comments:
Post a Comment