*ಝಿಯಾರತ್ತ್ ಕೇಂದ್ರ*
➖➖➖➖➖➖➖
♒3⃣8⃣♒
➖➖➖➖➖➖➖
*ಫಖ್'ರುಲ್ ಉಲಮಾ*
*#ಅಸ್ಸಯ್ಯಿದ್ #ಶೈಖ್ #ಜಿಫ್ರಿ #ತಂಗಳ್ (ರ)*
*ಕುಟ್ಟಿಚ್ಚಿರ, ಕಲ್ಲಿಕೋಟೆ*
➖➖➖➖➖➖➖➖➖
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
〰〰〰〰〰〰〰〰〰
✍ _ಗಫೂರ್ ಬಾಯಾರ್_
〰〰〰〰〰〰〰〰〰
🕌ಅತೀ ಬುದ್ಧಿಶಾಲಿಯೂ, ಖುರ್'ಆನ್, ಹದೀಸ್, ಫಿಖ್'ಹ್, ತಸವ್ವುಫ್ ಮುಂತಾದ ಹಲವಾರು ಗ್ರಂಥಗಳನ್ನು ಕರಗತ ಮಾಡಿಕೊಂಡ ಮಹಾನ್. ಹಲವಾರು ಭಾಷೆ ಸಾಹಿತ್ಯಗಳಲ್ಲಿ ಬಾಲ್ಯದಲ್ಲೇ ಪ್ರಾವಿಣ್ಯತೆಯನ್ನು ಗಳಿಸಿದವರು, ಇಮಾಂ ಹುಸೈನ್ (ರ) ರವರ ಕುಟುಂಬ ಪರಂಪರೆಯಲ್ಲಿ ಪ್ರವಾದಿ ನೆಬಿ ﷺ ರವರ 29'ನೇ ತಲೆಮಾರಿನವರಾದ ಸಯ್ಯಿದ್ ಮುಹಮ್ಮದ್ ಜಿಫ್ರಿ ತಂಙಳ್ (ರ) ರವರ ಮಗಗು, 18ನೇ ಶತಮಾನದ ಕಲ್ಲಿಕೋಟೆಯ ಖಾಝಿಯು ಆಗಿದ್ದ ಸಯ್ಯಿದ್ ಶೈಖ್ ಜಿಫ್ರಿ ತಂಙಳ್ (ರ)ರವರು ಹಿಜರಿ ವರ್ಷ 1139ರಲ್ಲಿ ಯಮನ್ ದೇಶದ ತರಿಮಿ ಎಂಬ ಸ್ಥಳದಲ್ಲಿ ಜನಿಸಿದರು.
ವಿದ್ಯಾಭ್ಯಾಸವನ್ನು ಮುಗಿಸಿ ತನ್ನ 20ನೇ ವಯಸ್ಸಿನಲ್ಲಿ ಭಾರತ ದೇಶದತ್ತ ಹೊರಟ ವ್ಯಾಪಾರ ಸಂಗದೊಂದಿಗೆ ಅಂದಿನ ಪಾಯಿಕ್ಕಪ್ಪಲ್ (ಚಾಪೆಹಡಗು)ಮೂಲಕ ಹಿಜರಿ ವರ್ಷ 1159
(A.D. 1741) ರಲ್ಲಿ ಕಲ್ಲಿಕೋಟೆಗೆ ತಲುಪಿದರು.
ನಬಿ ﷺ ರವರ 11ನೇ ತಲೆಮಾರಿನಲ್ಲಿ ಒಳಗೊಂಡ ಸಯ್ಯಿದ್ ಅಲವಿ ಬಿನ್ ಉಬೈದಿಲ್ಲಾಹಿ (ರ) ಎಂಬವರ ಸಂತಾನ ಪರಂಪರೆಯಾದ *ಬಾಅಲವಿ* ಸಾದಾತ್ತುಗಳಲ್ಲಿ ಪ್ರಮುಖರಾಗಿದ್ದಾರೆ ಶೈಖ್ ಜಿಫ್ರಿ ತಂಙಳ್(ರ) ರವರು.
ಕೇರಳದಲ್ಲಿ ಇಸ್ಲಾಮಿಕ ದರ್ಶನವನ್ನು ಜನರಿಗೆ ತಲುಪಿಸಿದ ಪ್ರಮುಖರಲ್ಲಿ ಓರ್ವರಾಗಿದ್ದಾರೆ ಮಹಾನವರು. ಮಹಾನುಬಾವರ ಮುಖಾಂತರ ಹಲವಾರು ಜನರು ಇಸ್ಲಾಮಿನ ಸುಂದರ ಆಶಯಕ್ಕೆ ಸೇರ್ಪಡೆಗೊಂಡಿದ್ದರು.
ಕಲ್ಲಿಕೋಟೆಗೆ ತಲುಪಿದ ಮಹಾನವರ ಜೀವನ ಶೈಲಿಯನ್ನು, ಸ್ವಭಾವ ಗುಣವನ್ನು ಹಾಗೂ ಆತ್ಮ ಶುದ್ದಿಯನ್ನು ಕಂಡು ಅಂದು ಕೊಲ್ಲಿಕೋಟೆಯ ರಾಜನಾದ ಸಾಮೂದಿರಿ *"ಮಾನ ವಿಕ್ರಮನ್"* ಎಂಬ ರಾಜನು, ಇಸ್ಲಾ0 ಧರ್ಮ ಪ್ರಚಾರಕ್ಕೂ, ಸೌಕರ್ಯಪ್ರದವಾಗಿ ವಾಸಿಸಲು ಕುಟ್ಟಿಚ್ಚಿರ ಎಂಬ ಸ್ಥಳದ ಪೂರ್ವ ಭಾಗದಲ್ಲಿ ಮನೆ ಮತ್ತು ಸ್ಥಳವನ್ನು ಬಿಟ್ಟು ಕೊಟ್ಟರು.
ಮಹಾನವರನ್ನು ಮನಸಾರೆ ಇಷ್ಟಪಟ್ಟ ಸಾಮೂದಿರಿ ರಾಜನು ಶೈಖ್'ರವರಲ್ಲಿ ಇಲ್ಲಿಂದ ಬಿಟ್ಟು ಹೋಗಬಾರೆದೆಂಬ ಅಪೇಕ್ಷೆಯನ್ನು ಮುಂದಿಟ್ಟರು. ಈಗ ಇದು
*ಜಿಫ್ರಿ ಹೌಸ್* ಎಂಬ ನಾಮದಿಂದ ತಿಳಿಯಲ್ಪಡುತ್ತದೆ. *ಮಾಳಿಯೆಕಲ್ ಭವನಂ* ಎಂದಾಗಿತ್ತು ಹಳೆಯ ಹೆಸರು. ಇದರ ಹೊರತಾಗಿ ಕಲ್ಲಾಯಿ ಎಂಬ ಊರಿನಲ್ಲಿ ತೆಂಗಿನ ತೋಟವನ್ನು ಮಹಾನವರಿಗೆ ದಾನವಾಗಿ ಕೊಟ್ಟಿದ್ದರು.
ತದನಂತರ ಶೈಖ್ (ರ) ಕೊಯಿಲಾಂಡಿಗೆ ಹೋಗಿ ಸಯ್ಯಿದ್ ಮುಹಮ್ಮದ್ ಹಾಮಿದ್ ತಂಙಳ್(ರ) ರವರ ಶಿಷ್ಯತ್ವವನ್ನು ಸ್ವೀಕರಿಸಿದರು. ನಂತರದ ದಿನಗಳಲ್ಲಿ ಅವರಿಬ್ಬರು ಕೇರಳವೆಲ್ಲ ಸಂಚರಿಸಿ ಪರಿಶುಧ್ಧ ಇಸ್ಲಾಂ ಧರ್ಮಕ್ಕೆ ಜನರನ್ನು ಆಹ್ವಾನಿಸಿದರು. ಅಲ್ಲದೆ ಮುಸ್ಲಿಮರಿಗೆ ದೀನಿ ವಿಷಯದಲ್ಲಿ ಉತ್ತೆಚನ ನೀಡಿದರು. ಮಸ್ಜಿದ್'ಗಳು, ಮದ್ರಸಗಳು ನಿರ್ಮಿಸಲು ನೇತೃತ್ವ ಕೊಟ್ಟರು.
ಹಜ್ಜ್, ಮತ್ತು ಬೈತುಲ್ ಮುಖದ್ದೀಸ್ ಯಾತ್ರೆ ಕೈಗೊಂಡರು. ಹಾಗೂ ಭಾರತದ ಹಲವಾರು ಪುಣ್ಯ ಸ್ಥಳಗಳ ಸಂದರ್ಶನ ಮುಗಿಸಿ ಪುನಃ ಕಲ್ಲಿಕೋಟೆಗೆ ಮರಳಿದರು.
ಮೈಸೂರು ಸಿಂಹ ಎಂಬ ಹೆಸರಿನಲ್ಲಿ ವಿಶ್ವ ವಿಖ್ಯಾತರಾದ ಶಹೀದೆ ಮಿಲ್ಲತ್ ಹಝ್ರತ್ *"ಟಿಪ್ಪು ಸುಲ್ತಾನ್" (ರ)ರವರ, ತಂದೆಯವರಾದ ಹೈದರಾಲಿ ಖಾನ್ (ರ), ಸಯ್ಯಿದ್ ಅಲವಿ ಮಂಪುರಂ ತಂಙಳ್ (ರ), ಉಮರ್ ಖಾಝಿ (ರ), ಬಾನಿ ಹಝ್ರತ್ತ್ ವೆಲ್ಲೂರ್ (ರ), ಶೈಖ್ ಅಲಿ ಬರಾಮ್ (ರ) ಮೊದಲಾದ ಪ್ರಮುಖರು ಮಹಾನವರ ಶಿಷ್ಯಗಣಗಳಲ್ಲಿ ಒಳಪಡುತ್ತಾರೆ.*
ಒಮ್ಮೆ ಟಿಪ್ಪು ಸುಲ್ತಾನ್ (ರ)ರವರು ಮಹಾನವರನ್ನು ಭೇಟಿಯಾಗಿ ಮರಳುವಾಗ ಸುಲ್ತಾನರು (ರಾಜರು) ಸಮ್ಮಾನಿಸಿದ ಉಡುಗೊರೆಯನ್ನು ಮಹಾನುಭಾವರು ಸ್ವೀಕರಿಸಲು ಮೈಮನಸು ಕಾಣಿಸಿದರು.
ನಿರ್ಬಂಧಿಸಿದಾಗ ಊರಿನವರಿಗೆ ಕುಡಿಯುವ ನೀರಿನ ಪದ್ದತಿ ಕೊಡುದಾದರೆ ಸ್ವೀಕರಿಸುತೇನೆ ಎಂದರು.
ಅದಾಗಿದೆ ಈಗ *ಕಲ್ಲಿಕೋಟೆ ಪಟ್ಟಣದಲ್ಲಿರುವ ಪ್ರಸಿದ್ದವಾದ ಮಾನಾಂಜಿರ ಕೊಳ.!! ಇದಕ್ಕಾಗಿ ಸಾಮೂದಿರಿ ಮಾನ ವಿಕ್ರಮನ್ ಭೂಮಿ ಕೊಟ್ಟರು. ಟಿಪ್ಪು ಸುಲ್ತಾನರು (ರ) ಖರ್ಚು ವಹಿಸಿದರು. ತಂಙಳವರು ಸ್ಥಳ ನಿರ್ಣಹಿಸಿದರು*
ಹಲವಾರು ಗ್ರಂಥಗಳನ್ನು ರಚಿಸಿ ವ್ಯಾಜ ತ್ವರಿಕತ್ತನ್ನು, ವಹ್ಹಾಬಿಸಂನನ್ನು ಅತೀ ಶಕ್ತವಾಗಿ ಎದುರಿಸಿ ಅಹ್ಲುಸ್ಸುನ್ನವನ್ನು ಬಲಪಡಿಸಿದರು.
*ಕನ್'ಸುಲ್ ಬರಾಈನುಲ್ ಕಸ್'ಬಿಯ್ಯ, ನತಿಜತ್ತುಲ್ ಕವಾಯ ಮುಸ್'ಲಕಿ ಜೌಹರಿಲ್ ಜವಾರಿಯ್ಯಾ, ಅಲ್ ಕೌಕಬುದ್ದರ್'ರಿಯ್ಯಅನ್ ಇರ್'ಶಾದತ್ತುಲ್ ಜಿಫ್'ರಿ, ಮಾಡಲಾದವುಗಳು ಮಹಾನವರ ಪ್ರಮುಖ ಗ್ರಂಥಗಳಾಗಿದೆ.*
ಯೆಮನ್ ದೇಶದ ಹಳರ್'ಮೌತ್ತಿನಿಂದ ಇಲ್ಲಿಗೆ ಆಗಮಿಸಿದವರಾಗಿದ್ದಾರೆ ಬರಾಮಿಗಳು.
ಜಿಫ್ರಿ ತಂಙಳ್ (ರ)ರವರ ಸಮಕಾಲಿಗರಾದ ಅಲಿ ಬರಾಮಿ (ರ) ಎಂಬವರು ಮಹಾನವರೊಂದಿಗೆ ವ್ಯಾಪಾರ ಮಾಡಿದವರಾಗಿದ್ದಾರೆ. ಅವರ ಮಕ್ಬರವು ಜಿಫ್ರಿ ಹೌಸ್'ನಲ್ಲಾಗಿದೆ ಇರುವುದು.
ಹಿಜರಿ ವರ್ಷ 1222ರ ದುಲ್ ಖಅದ್ 8 ಗುರುವಾರ (ಎ.ಡಿ. 1808 ಜನವರಿ 8) ದಂದು ಮಹಾನರಾದ ಶೈಖ್ ಜಿಫ್ರಿ ತಂಙಳ್ (ರ)ರವರು ಈ ಲೋಕದಿಂದ ಯಾತ್ರೆಯಾದರು.
ಮಂಬುರಂ ತಂಙಳ್(ರ)ರವರು ಮತ್ತು ವೆಳಿಯಂಗೂಡ್ ಉಮರ್ ಖಾಝಿ (ರ) ರವರಿಬ್ಬರು ಜನಾಝ ಸಂಸ್ಕರಣಕ್ಕೆ ನೇತೃತ್ವ ವಹಿಸಿದರು.
ಫಖ್'ರುಲ್ ವುಜೂದ್ ಸಯ್ಯಿದ್ ಅಲಿಯ್ಯು ಝುರತ್ತಿ ಅಲ್ ಹೈದರೂಸಿ (ರ) [ವೆಳಿಯಂಗೋಡ್ ಸಾದಾತ್ತುಗಳ ವಂಶ ನಾಥರು) ಜನಾಝ ನಮಾಜಿಗೆ ನೇತೃತ್ವ ಕೊಟ್ಟರು.
ಜಿಫ್ರಿ ಹೌಸ್'ನ ಪೂರ್ವ ಭಾಗದಲ್ಲಿ ಹಳೆ ಕಾಲದ ಪ್ರೌಢಿಯೊಂದಿಗೆ ಮಹಾನವರು ವಿಶ್ರಮಿಸುತ್ತಾರೆ. ತನ್ನ ಪುತ್ರರಾದ ಶೈಖ್ ಅಬ್ದುಲ್ಲ ಜಿಫ್ರಿ (ರ), ಶೈಖ್ ಅಲವಿ ಜಿಫ್ರಿ (ರ), ಶೈಖ್ ಮುಹಮ್ಮದ್ ಜಿಫ್ರಿ (ರ), ಶೈಖ್ ಫಳ್'ಲ್ ಜಿಫ್ರಿ (ರ) ಹಾಗು ಅನೇಕ ಶಿಷ್ಯರು ಇಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ.
*ಮಹಾನವರ ಪೌತ್ರರಲ್ಲಿ ಶೈಖ್ ಫಳ್'ಲ್ ಜಿಫ್ರಿ (ರ) ರವರು ಕಾರಂದೂರ್ ಮರ್ಕಝಿನ ಅಧ್ಯಕ್ಷರು ಹಾಗು ಎ.ಪಿ. ಉಸ್ತಾದರ ಹಿತೈಷಿಯೂ ಆಗಿದ್ದರು.*
ಕಲ್ಲಿಕೋಟೆ ನಗರದ ಹತ್ತಿರ ಹಳೆ ಕಾಲದ ಪ್ರತಾಪದೊಂದಿಗೆ ನೆಲೆಗೊಳ್ಳುವ ಕುತ್ತಿಚ್ಚಿರ ಎಂಬ ಸ್ಥಳದಲ್ಲಾಗಿದೆ ಜಿಫ್ರಿ ಹೌಸ್ ಇರುವುದು. ಈ ಹಳೆಯ ಇಸ್ಲಾಮಿಕ ಸ್ಥಳವನ್ನು ನೋಡಲೇ ಬೇಕಾಗಿದೆ.
ಮಹಾನವರನ್ನು ಝಿಯಾರತ್ತ್ ಮಾಡಲು, ಅವರ ಬರ್ಕತ್ತಿನಿಂದ ಅಲ್ಲಾಹು ನಮ್ಮ ಇಹಪರ ವಿಜಯಗೊಳಿಸಲಿ ಆಮೀನ್.
ದಾರಿ: ಕಲ್ಲಿಕೋಟೆ ರೈಲು ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿದೆ ಕುಟ್ಟಿಚಿರ ಜಿಫ್ರಿ ಹೌಸ್.
☪ _ಇತಿಹಾಸ ಪ್ರಸಿದ್ಧವಾದ ಜಿಫ್ರಿ ಹೌಸ್ ಮಖಾಮಿನಲ್ಲಿ ಅಂತ್ಯವಿಶ್ರಾಂತಿ ಹೊಂದಿರುವ ಮಹಾನವರ 216'ನೇ ಐತಿಹಾಸಿಕ ಉರೂಸ್ ಮುಬಾರಕ್ ಕಾರ್ಯಕ್ರಮವು ಆಗಸ್ಟ್ 1, 2, 3, 2017ಕ್ಕೆ ವಿಜೃಂಭಣೆಯಿಂದ ನಡೆಯುತ್ತಿದೆ. ಪ್ರಸ್ತುತ ಕಾರ್ಯಕ್ರಮಕ್ಕೆ ಪ್ರಮುಖ ಸಯ್ಯಿದ್ ಸಾದಾತುಗಳು, ಉಲಮಾ ಉಮರಾ ನಾಯಕರೂ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ _*ಖಾಯಿದುಝ್ಝಮಾನ್ ಶೈಖುನಾ ಖಮರುಲ್ ಉಲಮಾ, ಸುಲ್ತಾನುಲ್ ಉಲಮಾ ಕಾಂತಪುರಂ ಎ. ಪಿ. ಅಬೂಬಕ್ಕರ್ ಮುಸ್ಲಿಯಾರ್ (ಉಸ್ತಾದ್) ರವರು ಭಾಗವಹಿಸಲಿರುವರು.*_
✍ಗಫೂರ್ ಬಾಯಾರ್
🕎🕎🕎🕎🕎🕎🕎🕎🕎





No comments:
Post a Comment