Thursday, December 7, 2017

ತಂದೆ ಮತ್ತು ಮಗಳು ಗಾಳಿಪಟವನ್ನು ಹಾರಿಸುತ್ತಿರುವಾಗ ತಂದೆ ತನ್ನ ಮಗಳೊಡನೆ ಕೇಳುತ್ತಾನೆ.
"ಮಗಳೇ ಒಂದು ಪ್ರಶ್ನೆ,ಇದಕ್ಕೆ ಸರಿಯಾದ ಉತ್ತರ ನೀನು ನೀಡಬೇಕು."
"ಗಾಳಿಪಟ ಹಾರಿಸುವಾಗ ನೂಲಿನ ಕೆಲಸವೇನು"?
"ಅಪ್ಪ..  "ನೂಲು... ಆ ಗಾಳಿಪಟವನ್ನು ಹಾರಲು ಬಿಡದೆ ಎಳೆದು ಹಿಡಿದಿರುವುದು" ಮಗಳು ತಟ್ಟನೆ ಉತ್ತರ ಕೊಟ್ಟಳು

ತಂದೆ : " ಅಲ್ಲ ಮಗಳೇ... ನೂಲು.. ಆ ಗಾಳಿಪಟಕ್ಕೆ ಗುರಿ ತಪ್ಪದೆ ಹಾರಲು ಅನುವು ಮಾಡಿ ಕೊಡುವುದು"

ಮಗಳು ಇದನ್ನು ಕೇಳಿ ಹಾಸ್ಯ ರೂಪದಲ್ಲಿ ನಕ್ಕಳು.

ಅದು ಕಂಡ ತಂದೆ ಒಂದು ಕತ್ತರಿಯಿಂದ ನೂಲನ್ನು ತುಂಡು ಮಾಡಿದನು.ನಿಯಂತ್ರಣ ತಪ್ಪಿದ ಆ ಗಾಳಿಪಟ ಸ್ವಲ್ಪ ಮುಂದೆ ಹಾರಿ ತಲೆ ಕೀಳಾಗಿ ಚಿಂದಿ ಚಿಂದಿಯಾಗಿ ಕೆಳಗೆ ಬಿತ್ತು.ಇದನ್ನು ನೋಡಿ ನಿಂತ ಮಗಳೊಡನೆ
"ಮಗಳೇ ಇದಾಗಿದೆ ವಾಸ್ತವ ...   ನೂಲು ಗಾಳಿಪಟವನ್ನು ಹಾರಲು ಬಿಡದೆ ಎಳೆದು ಹಿಡಿದಿರುವುದಾಗಿ ನೀನು ಭಾವಿಸಿದ್ದಿ.  ನೂಲಿನ ನಿಯಂತ್ರಣ ಬಿಟ್ಟರೆ ಸ್ವತಂತ್ರವಾಗಬಹುದು ಎಂದು ನೀನು ನಂಬಿದ್ದಿ.. ಆದರೆ ಆ ಸ್ವತಂತ್ರ ಎಷ್ಟೊಂದು ಅಲ್ಪಕಾಲವೆಂದು ನಿನಗೆ ಅರ್ಥವಾಯಿತಲ್ಲವೇ?
ನೀನು ಎಂಬ ಗಾಳಿಪಟವನ್ನು ನಿಯಂತ್ರಿಸುವ ನೂಲಾಗಿದೆ ಈ ಅಪ್ಪ , ನನ್ನ ನಿಯಂತ್ರಣದಲ್ಲಿ ನಿನಗೆ ಎಷ್ಟು ಎತ್ತರಕ್ಕೂ ಹಾರಬಹುದು. ಸ್ವತಂತ್ರವಾಗಿ ಹಾರಬಹುದು ಎಂಬ ಭ್ರಮೆಯಲ್ಲಿ ನನ್ನನ್ನು ನೀನು ಕೊಯ್ಯಬೇಡ ..."

( ಈ ಕಾಲದಲ್ಲಿ ಬೆಳೆದು ಬರುತ್ತಿರುವ  ಎಲ್ಲಾಮಕ್ಕಳಿಗಾಗಿ ...)

 ಮಲಯಾಳದಿಂದ ಕನ್ನಡಕ್ಕೆ..

No comments:

Post a Comment