Sunday, December 3, 2017

*ಝಿಯಾರತ್ತ್ ಕೇಂದ್ರ*
➖➖➖➖➖➖➖
  🕌🕌3⃣7⃣🕌🕌
〰〰〰〰〰〰〰
✍ _ಗಫೂರ್ ಬಾಯಾರ್_
〰〰〰〰〰〰〰
*#ತಾಜುಲ್ #ಔಲಿಯ*
*#ಮುಹಮ್ಮದ್ #ಖಾಸಿಂ #ವಲಿಯ #ತಂಙಳ್(ರ) #ಕವರತ್ತಿ, #ಲಕ್ಷದ್ವೀಪ.*
🕌🕌🕌🕌🕌🕌🕌

اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
----------------------------------
ಲಕ್ಷದ್ವೀಪ ಭಾಗದ ಚರಿತ್ರೆಯ ಅಧ್ಯಾಯನಾ ಪುಟಗಳಲ್ಲಿ ಇಂದಿಗೂ ನೆಲೆ ನಿಂತಿರುವ ಹಾಗೂ ಅಲ್ಲಿನ ಜನರ ಇಸ್ಲಾಮಿಕ  ಜೀವನದಲ್ಲಿ ಎದ್ದು  ಕಾಣುವ ಬಹುದೊಡ್ಡ ಆತ್ಮೀಯ ಕೇಂದ್ರವಾಗಿದೆ ಕರವತ್ತಿಯ ಮುಹಮ್ಮದ್ ಖಾಸಿಂ ವಲಿಯ ತಂಙಳ್(ರ) ರವರು.

 *ಮಹಾನುಭಾವರು ಕರ್ನಾಟಕದ ಅಂಕೋಲಾ ಎಂಬಲ್ಲಿ ಜನಿಸಿದರು. ಅರಬೀ ರಾಜ್ಯಗಳಿಗೆ ತೆರಳಿ ಸೂಫಿ ಮಾರ್ಗದಲ್ಲಿ ಪರಿಶೀಲನೆ ಹೊಂದಿ ಆಗಮಿಸಿದ ಮುಹಮ್ಮದ್ ಖಾಸಿಂ ತಂಙಳ್ (ರ) ರವರು ವಿವಿಧ ದ್ವೀಪುಗಳಿಗೆ ತೆರಳಿ ಕೊನೆಗೆ ಕವರತ್ತಿಯಲ್ಲಿ ಸ್ಥಿರವಾಗಿ ವಾಸವಾಗಿದ್ದರು.*

ಮುಹಮ್ಮದ್ ನಬಿ ﷺ ರವರ 29'ನೇ ಪುತ್ರ ಪರಂಪರೆಯಲ್ಲಿ ಒಳಗೊಂಡ ಮಹಾನವರು ಮೊದಲು ಕಣ್ಣೂರಿನ ಅರಕಲ್ ರಾಜ ಕುಟುಂಬದವರ ಅಧೀನದಲ್ಲಿರುವ  ಹೈದ್ರೋಸ್ ಮಸ್ಜಿದ್' ನಲ್ಲಾಗಿತು ವಾಸ್ತವ್ಯ ಮಾಡಿರುವುದು. ಅಲ್ಲಿಂದ ವಿವಿಧ ದ್ವೀಪುಗಳನ್ನು ಸಂದರ್ಶಿಸಿದರು.

ನಂತರ ಅಂದ್ರೋತ್ತ್ ದ್ವೀಪಿನ ಪಡಣಾತ ಪುದಿಯ ಪುರ ಎಂಬಲ್ಲಿಂದ ವಿವಾಹವಾದ ಮಹಾನವರು ಸ್ವಲ್ಪ ಕಾಲ ಅಲ್ಲೇ ವಾಸವಾಗಿದ್ದರು.
ತದನಂತರ ಪತ್ನಿ ಮಕ್ಕಳೊಂದಿಗೆ ಕವರತ್ತಿ ದ್ವೀಪಿಗೆ ಹೋಗಿ ಅಲ್ಲಿ ಖಾಯಂ ಆಗಿ ವಾಸ್ತವ್ಯ ಹೊಡ್ದಿದರು.

ತನ್ನ ಸ್ವದೇಶವನ್ನು ನೆನಪಿಸುವ ರೀತಿಯಲ್ಲಿ *ಕೊಲಿಯಾಲ* ಎಂಬ ನಾಮದಲ್ಲಿರುವ  ಮನೆಯಲ್ಲಾಗಿತು ಮಹಾನುಭಾವರು ವಾಸ ಇದ್ದಾರಾದರೂ ಎಲ್ಲಾ ದ್ವೀಪುಗಳನ್ನು ಮಹಾನವರು ನಿರಂತರ ಸಂದರ್ಶಿಸುತ್ತಿದರು.

ಅವರು ನೇತೃತ್ವ ಕೊಟ್ಟು ನಿರ್ಮಿಸಿದ *ಉಜ್'ರಾ ಎಂಬ ಹೆಸರಿನಲ್ಲಿರುವ ಮಸ್ಜಿದುಗಳು* ಲಕ್ಷದ್ವೀಪಿನ ಜನ ವಾಸವಿರುವ ಎಲ್ಲಾ ದ್ವೀಪುಗಳಲ್ಲಿ ಇಂದಿಗೂ ಕಾಣಬಹುದು.
ಆ ಮಸ್ಜಿದುಗಳಲ್ಲಿ ಶುಕ್ರವಾರ ಹಾಗು ಸೋಮವಾರ ಎಂಬಿ ದಿವಸಗಳಲ್ಲಿ ಮತ್ತು ಈದ್ ನಂತಹ ವಿಶೇಷ ದಿನಗಳಲ್ಲಿ ಮಹಾನವರು ಸ್ಥಾಪಿಸಿದ *ರಿಫಾಯಿ ರಾತೀಬು* ತಲತಲಾಂತರವಾಗಿ ಇಂದಿಗೂ ನಿರ್ವಹಿಸಿಕೊಂಡು ಬರುತ್ತಿದೆ.

ದ್ವೀಪುಗಳ ರಾಜಧಾನಿಯಾದ ಕರವತ್ತಿ ದ್ವೀಪಿನ ಮದ್ಯಭಾಗದ ಶಾಂತ ಸುಂದರವಾದ ಗುಡ್ಡದ ಮೇಲೆ ತಲೆ ಎತ್ತಿ ನಿಂತಿರುವ ಉಜ್ರಾ ಮಸ್ಜಿದಿನ ಮುಂಭಾಗದಲ್ಲಿರುವ "ಕುಳಿಕರ" (ಮಕ್ಬರ)ದಲ್ಲಿ ಮಹಾನರಾದ ಸಯ್ಯಿದ್ ಖಾಸಿಂ ತಂಙಳ್ (ರ) ರವರು ಅಂತ್ಯ ವಿಶ್ರಮಪಡೆಯುತ್ತಾರೆ. ಅದರ ಹತ್ತಿರದ ಇನ್ನೊಂದು ಮಖಾಮಿನಲ್ಲಿ ಮಹಾನವರ ಸಹಧರ್ಮಿಣಿ ಮತ್ತು ಮಕ್ಕಳ ಮಖ್ಬರಗಳಿವೆ.

ಕೆತ್ತನೆಯ ಕೆಲಸಗಳಿಂದ ಅಲಂಕೃತವಾದ ಮಸ್ಜಿದ್ ಮತ್ತು ಮಹಾನವರ ಮಖ್ಬರ ಝಿಯಾರತ್ತಿಗೂ ವಿವಿಧ ದ್ವೀಪುಗಳಿಂದಲೂ, ವಿವಿಧ ರಾಜ್ಯಗಳಿಂದಲೂ ಅಸಂಖ್ಯಾ ಜನರು ಬರುತ್ತಿದ್ದಾರೆ.

ಈದ್ ದಿನಗಳಲ್ಲಿ ಮಹಾನುಭಾವರ ಮಖಾಂ ಶರೀಫಿನ ಮುಂದೆ ಪ್ರತ್ಯೇಕ ದಿಕ್ರ್'ಗಳು ಸಂಘಟಿಸುತ್ತಾರೆ.
ಅದೇ ದಿನ ಮಹಾನವರ *ಟೋಪಿ,  ಮರದ ಮೆಟ್ಟಿಲು* ಮೊದಲಾದವುಗಳನ್ನು ಪ್ರದರ್ಶನಕ್ಕೆ ಇಡುತ್ತಾರೆ.
ಮಹಾನವರನ್ನು ಅಲ್ಲಿನ ಜನರು *ವಲಿಯ ಶೈಖ್ ತಂಙಳ್ ಅಥವಾ ವಲಿಯ ತಂಙಳ್ ರ. ( ದೊಡ್ಡ ತಂಙಳ್ ರ. ) ಎಂದಾಗಿದೆ ಕರೆಯುತ್ತಿರುವುದು.*

 ಜೀವಿತ ಕಾಲದಲ್ಲಿಯೂ ಹಾಗೂ ಮರಣಾ ನಂತರವೂ ಹಲವಾರು ಕರಾಮತ್ತುಗಳು (ಪವಾಡ) ಕಾಣಲ್ಪಡುತ್ತಿದ್ದವು.

 ಮಹಾನವರ ಹೆಸರನಲ್ಲಿ ಪರಿಶುಧ್ದ ಖುರ್'ಆನ್ ಪಾರಾಯಣ ಮಾಡುವುದು ಹಾಗೂ ಹರಕೆ (ನೇರ್ಚೆ) ಮಾಡುವುದು  ಗರ್ಭಿಣಿಗಳ ಸುಖ ಪ್ರಸವಕ್ಕೆ ಫಲಪ್ರದವಾಗಿದೆ.

ಮಹಾನವರು ಚಿರನಿದ್ರೆಯಲ್ಲಿರುವ ಕವರಿತ್ತಿ ದ್ವೀಪಿನಲ್ಲಿ ಕಾಗೆಗಳಿಗೆ ವಾಸ ಮಾಡಲು ಯೋಗ್ಯವಾದ ಸ್ಥಳವಲ್ಲ ಎಂಬುದಕ್ಕೆ ಚರಿತ್ರೆಪರವಾದ ಪಶ್ಚಾತಾಳವಿದೆ.

ನಿಮಿಷಗಳು ಎಡೆಬಿಡದೆ ನಿತ್ಯ ವುಝುನೊಂದಿಗೆ ಶುದ್ದಿಯಲ್ಲಿ ಜೀವಿಸುತ್ತಿದ್ದ  ಮಹಾನುಭಾವರ ಮೈ ಮೇಲೆ ಒಮ್ಮೆ ಕಾಗೆಯೊಂದು ಹಿಕ್ಕೆ ಹಾಕಿತ್ತು ಇದನ್ನು ಮನಗಂಡ ಮಹಾನವರು  ಆ ಕಾಗೆಯನ್ನು ಹಿಡಿದು ಆಜ್ಞೆಯಿತ್ತರು ಇನ್ನು ಮುಂದೆ ನಿನ್ನ ವರ್ಗವನ್ನು ಇಲ್ಲಿ ಕಾಣಬಾರದೆಂದು ತಾಕೀತು ಕೊಟ್ಟು ಬಿಡುಗಡೆ ಮಾಡಿದರು. ಅಂದಿನಿಂದ ಕಾಗೆಯ ವರ್ಗವನ್ನು ಅಲ್ಲಿ ಕಾಣಲಿಲ್ಲವೆಂಬುದು ಕಾಲವೇ ಸಾಕ್ಷಿಯಾಗಿದೆ.!

 ಕೆಲವು ವರ್ಷಗಳ ಮುಂಚೆ
ಈ ವಿಷಯವನ್ನು ತಿಳಿದ ನೂತನವಾದಿಗಳಾದ ಸಲಫಿಗಳು ಮತ್ತು ಯುಕ್ತಿವಾದಿಗಳು ಸೇರಿ ಮಹಾನವರ ಕರಾಮತ್ತುಗಳನ್ನು ನಿಷೇಧಿಸಲು ತಂತ್ರಪೂರ್ವಕವಾಗಿ ಹಡಗು ಮೂಲಕ ಕೆಲವು ಕಾಗೆಗಳನ್ನು ತಂದರು ಆದರೆ ಇಲ್ಲಿಗೆ ತಲುಪಿದ ಕೂಡಲೇ ಕಾಗೆಗಳು ಸತ್ತು ಹೋದವು. ಇದಕ್ಕೆ ಇಲ್ಲಿಯ ಪ್ರದೇಶವಾಸಿಗಳು ಇಂದಿಗು ನೇತ್ರ ಸಾಕ್ಷಿಗಳಾಗಿದ್ದಾರೆ.

ಮಹಾನವರ ಐದು ಪುತ್ರರಲ್ಲಿ ಕಿರಿಯರಾದ ಸಯ್ಯಿದ್ ಯೂಸುಫ್ ವಲಿಯುಲ್ಲಾಹಿ (ರ) ಯವರು ಕೂಡ ಆತ್ಮೀಯ ರಂಗದಲ್ಲಿ ಅತ್ಯುನ್ನತಿಗೆ ತಲುಪಿದ ಮಹಾ ಮಾನುಷಿಯಾಗಿದ್ದಾರೆ. #ಅವರ #ಮಖಾಂ #ಕುಂದಾಪುರದಲ್ಲಿ #ಇದೆ.

ಮಹಾನವರ
ಪವಾಡಗಳನ್ನು ಹಾಗು ಜನರಿಗೆ ಮಾಡಿದ ಸೇವೆಗಳನ್ನು ನೆನಪಿಸುವ ಹಲವಾರು ಕೀರ್ತನೆಗಳು, ಹಾಡುಗಳು, ಕತೆಗಳು ಮತ್ತು ಬೈತ್ತುಗಳು ಇಂದು ಕೂಡ ದ್ವೀಪುಗಳಲ್ಲಿ ಪ್ರಚಾರದಲ್ಲಿದೆ.

 ಮಹಾನುಭಾವರ ಉರೂಸು ಎಲ್ಲಾ ವರ್ಷ ಮುಹರಂ ತಿಂಗಳ 10ಕ್ಕೆ ಆಚರಿಸಲಾಗುತ್ತದೆ.

ಮಹಾನವರ ಆಶೀರ್ವಾದ ಲಭಿಸುವ ಮುಖ್ಲಿಸುಗಳಲ್ಲಿ ಅಲ್ಲಾಹು ನಮ್ಮೆಲ್ಲರನ್ನೂ ಸೇರಿಸಿ ಅನುಗ್ರಹಿಸಲಿ ಆಮೀನ್.

⛴🚁 ದಾರಿ: ಅಧಿಕೃತರ ಅನುಮತಿಯಿಂದಿಗೆ ಕೊಚ್ಚಿಯಿಂದ ಹಡಗು ಹಾಗು ವಿಮಾನ ಮೂಲಕ ಕವರತ್ತಿ ದ್ವೀಪಿಗೆ ತಲುಪಬಹುದು.

✍ಗಫೂರ್ ಬಾಯಾರ್
🕎🕎🕎🕎🕎🕎🕎


No comments:

Post a Comment