Monday, December 4, 2017

*ಝಿಯಾರತ್ತ್ ಕೇಂದ್ರ​*
      4⃣9⃣
------------------------
*ಮಲಪ್ಪುರಂ ಶುಹದಾಅ್'ಗಳು. ವಲಿಯಂಗಾಡಿ ಜುಮಾ ಮಸ್ಜಿದ್ ಮಲಪ್ಪುರಂ.*
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
🕌🕌🕌🕌🕌🕌🕌🕌

ಮಲಪ್ಪುರಂ ಪಟ್ಟಣದ ಹತ್ತಿರ ನೆಲೆಗೊಳ್ಳುವ ಶುಹದಾಗಳ ಮಖಾಂ ಬಹಳ ಪ್ರಸಿದ್ಧವಾಗಿದೆ.
ವಲಿಯಂಗಾಡಿ ಜುಮಾ ಮಸ್ಜಿದ್'ನ ಸಮೀಪವಾಗಿದೆ ಈ ಶುಹದಾಗಳು ಅಂತ್ಯವಿಶ್ರಮಗೊಳ್ಳುತ್ತಿರುವುದು.

ಮಲಪ್ಪುರಂ (ಪಡೆ)ಯುದ್ಧಯಲ್ಲಿ ನಾಡು ರಾಜನ ಸೈನಿಕರೊಂದಿಗೆ ಹೋರಾಡಿ ವೀರ ಮರಣ ಹೊಂದಿದ 44 ಶುಹದಾಗಳ ಚರಿತ್ರೆಯಾಗಿದೆ ಇದು.

ಹಿಜರಿ 1141ರಲ್ಲಿ ಮಲಬಾರಿನಲ್ಲಿ ಸಾಮೂತಿರಿ ರಾಜನ ಆಡಳಿತವಾಗಿತ್ತು. ಜಾತಿ ಮತ ಭೇದವಿಲ್ಲದೆ ರಾಜನು ಎಲ್ಲರಿಗೂ ಸಹಾಯಗಳು ನೀಡುತ್ತಿದ್ದನು. ಸಾಮೂತಿರಿಯ ಅಧೀನದಲ್ಲಿದ್ದ ಮಲಪ್ಪುರಂ ಪ್ರದೇಶದ ಅಧಿಕಾರಿ ಪಾರನಬಿ ಎಂಬವರಾಗಿದ್ದರು. ಸಮೂತಿರಿ ರಾಜನ ಹಾಗೆಯೇ ಪಾರ ನಬಿಗೂ ಮುಸ್ಲಿಮರ ಮೇಲೆ ಉತ್ತಮವಾದ ಸ್ನೇಹ ಸಂಬಂಧವಿತ್ತು. ಪಾರ ನಬಿಯ ಸೈನ್ಯದಲ್ಲಿ‌ ಬಹು ಪಕ್ಷ ಸೈನಿಕರು ಮುಸ್ಲಿಮರಾಗಿದ್ದರು. ಆದರೆ ಪಾರ ನಬಿಗೂ ಸಾಮೂತಿರಿ ರಾಜನಿಗೂ ಮುಸ್ಲಿಮರೊಂದಿಗೆ ಇರುವ ಪ್ರೀತಿ, ಗೌರವ ಹಾಗು ಸೌಹಾರ್ದವೂ ಮೇಲ್ಜಾತಿಯವರಿಗೆ ಇಷ್ಟಪಡಲಿಲ್ಲ. ಅವರು ಈ ಸ್ನೇಹ ಸಂಬಂಧವನ್ನು ಇಲ್ಲದಾಗಿಸಲು ಹಲವು ಕುತಂತ್ರಗಳು ಹೆಣೆದರಾದರೂ ಯಾವುದೂ ಕೂಡಾ ಸಫಲವಾಗಲಿಲ್ಲ.

ತೆರಿಗೆ ಕೊಡದವರನ್ನು ಬಂಧಿಸಿ ಜೈಲಿನಲ್ಲಿ ಕೂಡಿ ಹಾಕುವ ಪದ್ದತಿ ಅಂದಿನ ನಿಯಮವಾಗಿತ್ತು.
ಸವರ್ಣರಲ್ಲಿ ಒಳಪಟ್ಟ ಒಬ್ಬನು ತೆರಿಗೆ ಕೊಡದ ಕಾರಣ ಪಾರ ನಬಿಯ ತೆರಿಗೆ ವಸೂಲು ಮಾಡುವವರಾದ ಅಲಿ ಮರಕಾರ್ ಅವನನ್ನು ಬಂದನದಲ್ಲಿರಿಸಿದರು. ಇದಾಗಿದೆ ಮಲಪ್ಪುರಂ ಯುದ್ಧಕ್ಕೆ ಕಾರಣವಾಗಿರುವುದು.

ಸವರ್ಣ ವಿಭಾಗದ ಜನರು ಮರಕಾರ್'ರವನ್ನು ವಧಿಸಲಿಕ್ಕಾಗಿ ಸೂತ್ರ ಹೆಣೆದರು.
ನಾಯರ್ ಸೈನಿಕರು ವಂಚನೆಯ ಮೂಲಕ ಅಲಿ ಮರಕಾರ್'ರವರನ್ನು ಖಡ್ಗದಿಂದ ಇರಿದರು. ಇದನ್ನು ನೋಡುತಿದ್ದ ಕುಂಞ ಅಹ್ಮದ್ ಎಂಬವರು ಮರಕಾರ್ ಅವರ ಜೊತೆಗೂಡಿ ನಾಯರ್ ಪಡೆಯನ್ನು ಧೀರವಾಗಿ ಎದುರಿಸಿದರು. ದೊಡ್ಡ ಸೈನಿಕ ಶಕ್ತಿ  ಇಲ್ಲದಿದ್ದರಿಂದ ಮರಕಾರ್ ಹಾಗೂ ಕುಂಞ ಅಹ್ಮದ್ ಎಂಬಿಬ್ಬರು ಹುತಾತ್ಮರಾದರು. ಆದರೂ ಈ ಇಬ್ಬರು ಸಿಂಹಗಳ ಖಡ್ಗದ ಇರಿತಕ್ಕೆ ಒಳಗಾಗಿ ಹಲವಾರು ನಾಯರ್ ಸೈನಿಕರು ಸಾವುಗೀಡಾಗಿದ್ದರು. ಈ ವಿಷಯ ತಿಳಿದ ಪಾರ ನಬಿ ರೋಷಗೊಂಡು, ಮುಸ್ಲಿಂ ಸಮುದಾಯದವರ ತೋಟಗಳನ್ನು, ಮನೆಗಳನ್ನು ಹಾಗು ಮಸ್ಜಿದ್'ಗಳನ್ನು ಸುಟ್ಟು ಹಾಕಿದನು. ಮುಸ್ಲಿಂ ಕುಟುಂಬಗಳ ಕೈವಶವಿರುವ ಸ್ಥಳಗಳನ್ನು ವಶಪಡಿಸಲು ಆಜ್ಞೆ ಹೊರಡಿಸಿದನು. ಇದರಿಂದ್ದ ಮುಸ್ಲಿಮರು ಅತೀವ ದುಃಖದಲ್ಲಾದರು. ಮಹಿಳೆಯರನ್ನು, ಮಕ್ಕಳನ್ನು ಹತ್ತಿರದ ಊರಿಗೆ ಕಳುಹಿಸಿ, ಪುರುಷರು ಮಸೀದಿಯಲ್ಲಿ ಅಭಯ ಪ್ರಾಪ್ತಿಸಿದರು.
ಇದರ ನಡುವೆ ಹಲವು ಮುಸ್ಲಿಂ‌ ನಾಯಕರು ಪಾರ ನಬಿಯೊಂದಿಗೆ ಶಾಂತಿಗಾಗಿ ಅಪೇಕ್ಷಿಸಿದರೂ ಅವನು ಸಮ್ಮತಿಸಿಲ್ಲ.

ಮಸೀದಿಯನ್ನು ನಾಯರ್ ಸೈನಿಕ ಪಡೆ ಆಕ್ರಮಿಸಿದರು.
ಕೊನೆಗೆ ಯಾವುದೇ ಹಾದಿ ಕಾಣದಾಗ ಮುಸ್ಲಿಮರು ವಿಶುದ್ಧ ಯುದ್ಧ ಮಾರ್ಗಕ್ಕೆ ದುಮುಕಿದರು. ಯುದ್ಧದ ಪ್ರಥಮ ಘಟ್ಟದ್ದಲ್ಲಿ ಮುಸ್ಲಿಂ ಸೈನ್ಯಕ್ಕೆ ಮುನ್ನಡೆ ಸಾದಿಸಿದೆಯಾದರೂ, ಯುದ್ಧ ಸ್ಥಳದಿಂದ ಹಿಂದಿರುಗಿ ಓಡಿ ಹೋದ ಪಾರ ನಬಿಯ ಸೈನ್ಯ, ನಂತರ ಸರ್ವ ಸಜ್ಜೀಕರಣದೊಂದಿಗೆ ಮರಳಿ ಬಂದರು.
2ನೇ ಹಂತದ ಯುದ್ಧದಲ್ಲಾಗಿದೆ 44 ಮುಸ್ಲಿಮರು ಶಹೀದಾಗಿರುವುದು.
ಇವರೊಂದಿಗೆ ಮುಸ್ಲಿಮರಿಗಾಗಿ ಸಹಾಯಗಳು ಮಾಡಿದ ಒಬ್ಬ ಆಚಾರಿಯು ಹುತಾತ್ಮರಾಗಿದ್ದಾರೆ.

ಯುದ್ಧದ ನಂತರ ಪಾರ ನಬಿಯ ಸೈನ್ಯವು ಮಸ್ಜಿದ್'ಗೆ ಬೆಂಕಿ ಕೊಟ್ಟು ಹೊತ್ತಿಸಿದರು. ಮಸೀದಿಯೊಳಗೆ ಇದ್ದ ಹಲವಾರು ಮುಗ್ದ ಜನರು ಬೆಂಕಿಯ ಆಹುತಿಗೆ ಮಡಿದರು.

ಯುದ್ಧ ಮುಗಿದ ದಿನದಿಂದ ಪಾರ ನಬಿಗೂ, ಕುಟುಂಬದವರಿಗೂ ಹರಡುವ ಮಾರಕ ಖಾಯಿಲೆ ಹಿಡಿಯಿತು. ಹಲವಾರು ವೈದ್ಯರಿಗೆ ತೋರಿಸಿದರೂ ರೋಗ ವಾಸಿಯಾಗಲಿಲ್ಲ.
ಪಾರ ನಬಿ ಇದರ ಕಾರಣವನ್ನು ಹುಡಿಕಿದಾಗ, ತಾನು ಮಾಡಿದ ಘೋರ ಅನ್ಯಾಯ ನೆನಪಾಗಿ, ತನ್ನ ತಪ್ಪಿನ ಅರಿವಾಯಿತು.
ಬಳಿಕ ಮಸ್ಜಿದ್ ಸುಟ್ಟದಕ್ಕೆ  ಪ್ರಾಯಶ್ಚಿತವಾಗಿ ಅಲ್ಲಿಯೇ ಒಂದು ಮನೋಹರವಾದ ಮಸ್ಜಿದ್ ನಿರ್ಮಿಸಿದನು. ಬಡವರಿಗೆ ಮನೆಗಳನ್ನು ಕಟ್ಟಿಸಿ ಕೊಟ್ಟನು. ಸೌಜನ್ಯವಾಗಿ ಔಷದಿಯನ್ನು ವಿತರಿಸಿದನು. ಇದರೊಂದಿಗೆ ಅವನ ಮತ್ತು ಕುಟುಂಬದವರ ಖಾಯಿಲೆಗಳು ಸಂಪೂರ್ಣವಾಗಿ ಗುಣಮುಖವಾಯಿತು.

ವಳ್ಳುವನಾಡಿನಿಂದ ಆಗಮಿಸಿದ ಜಮಾಲ್ ಮೂಪ್ಪನ್ ಎಂಬವರ ನೇತೃತ್ವದಲ್ಲಿ ಅಲ್ಲಿರುವ ಇತರರು ಸೇರಿ ಹುತಾತ್ಮರ ಜನಾಝಗಳನ್ನು ದಫನ್ ಮಾಡಿರುವುದು.

ಎಲ್ಲಾ ವರ್ಷವೂ ಶಹ್'ಬಾನ್ 09'10ಕ್ಕೆ ಅಲ್ಲಿ ಆಂಡ್ ನೇರ್ಚೆ ನಡೆಯುತ್ತದೆ.

ಮಸೀದಿಗೆ ಹೋಗುವ ದಾರಿಯಲ್ಲಿ ಹಲವಾರು ಸದಾತ್ತುಗಳ ಮಕ್ಬರಗಳು ಒಂದು ಮಖಾಂನಲ್ಲಿದೆ.

ದಾರಿ: ಮಲಪ್ಪುರಂ ಉತ್ತರದಿಂದ ವೆಂಗರ ರೂಟ್'ನಲ್ಲಾಗಿದೆ.
ಶುಹದಾಅ್'ಗಳ ಮಖಾಂ ಇರುವುದು.

✍ಗಫೂರ್ ಬಾಯಾರ್
🍁🍁🍁🍁🍁🍁🍁🍁🍁


No comments:

Post a Comment