Monday, December 4, 2017

*ಝಿಯಾರತ್ತ್ ಕೇಂದ್ರ*
   🕌 4⃣4⃣🕌
〰〰〰〰〰〰〰〰〰
*ತವಕ್ಕಲ್ ಮಸ್ತಾನ್ (ರ)     ಮೆಜೆಸ್ಟಿಕ್, ಬೆಂಗಳೂರು.*
➖➖☪☪☪☪➖➖
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
🕌🕌🕌🕌🕌🕌🕌🕌🕌

17ನೇ ಶತಮಾನದಲ್ಲಿ ಇಸ್ಲಾಮಿಕ್‌ ಪ್ರಭೋಧನೆಯಾರ್ಥ ಭಾರತಕ್ಕೆ ಆಗಮಿಸಿದ ಮೂರು ಮಹಾತ್ಮರಾಗಿದ್ದಾರೆ *ಮಾಲಿಕ್ ಶಾಹ್ ಮಸ್ತಾನ್ (ರ), ಟಿಪ್ಪು ಮಸ್ತಾನ್ (ರ), ತವಕ್ಕಲ್ ಮಸ್ತಾನ್ (ರ) ಎಂಬವರು .*

ಇಂದು ಬೆಂಗಳೂರಿನ ಸಿಟಿ ಮಾರ್ಕೆಟಿನಲ್ಲಿ ಹೋಟೆಲ್ ಲೂಸಿಯ'ದ ಹತ್ತಿರ ಮಾಲಿಕ್ ಶಾಹ್ ಮಸ್ತಾನ್ (ರ) ರವರು ಅಂತ್ಯ ವಿಶ್ರಮಗೊಳ್ಳುತ್ತಿದ್ದಾರೆ.
ಟಿಪ್ಪು ಮಸ್ತಾನ್ (ರ) ರವರ ಮಖ್ಬರ ತಮಿಳು ನಾಡಿನ ವೆಲ್ಲೂರು ಜಿಲ್ಲೆಯ ಅರ್ಕೋಟ್ ಎಂಬ ಸ್ಥಳದಲ್ಲಿದೆ.

ಇನ್ನೊಬ್ಬ ಮಹಾತ್ಮರಾದ "ತವಕ್ಕಲ್ ಮಸ್ತಾನ್ (ರ) ರವರ ಮಖಾಮಿನ ಕುರಿತಾಗಿದೆ ನಾವು ಇಲ್ಲಿ ಪ್ರತಿಪಾದಿಸುವುದು.

ಬೆಂಗಳೂರಿನ ಅತೀ ಪ್ರಸಿದ್ಧವಾದ ಮಕ್ಬರಗಳಲ್ಲೊಂದಾಗಿದೆ ತವಕ್ಕಲ್ ಮಸ್ತಾನ್ (ರ) ರವದ್ದು. ಅವರ ದರ್ಗಾ ನೆಲೆಗೊಳ್ಳುತಿರುವುದು ಬೆಂಗಳೂರಿನ ಮೆಜಸ್ಟಿಕ್'ನ ಹತ್ತಿರವಾಗಿದೆ.

ಸುಲ್ತಾನ್ ಹೈದರಾಲಿ (ರ)ರವರ ಆರಂಭ ಕಾಲವಾದ 1680ಗಳಲ್ಲಿ ಕುದುರೆ ವ್ಯಾಪಾರ ನಿಮಿತ್ತ ಭಾರತಕ್ಕೆ ಆಗಮಿಸಿದವರಾಗಿದ್ದಾರೆ ಪ್ರಸುತ್ತ 3 ಸೂಫಿವರ್ಯರು ಎಂದೂ ಚರಿತ್ರೆ ಇದೆ.

 ಬ್ರಿಟೀಷರ ವಿರುದ್ಧ ತೆರೆದ ಯುದ್ಧ ಪ್ರಸ್ತಾಪ ಮಾಡಿದ ಸುಲ್ತಾನ್ ಹೈದರಾಲಿ (ರ) ಯವರ ಕೋಟೆ ನಿರ್ಮಾಣಕ್ಕೆ ತವಕ್ಕಲ್ ಮಸ್ತಾನ್ (ರ)ರವರ ಪ್ರಯತ್ನ ಬಹಳ ಪ್ರಸಿದ್ಧವಾಗಿದೆ. "ಮಿರ್ಝಾ ಬೇಗ್" ಎಂಬ ಹೆಸರಿನಲ್ಲಿ ಒಬ್ಬ ಕೂಲಿಗಾರನ ವೇಷದಲ್ಲಿ ಕೋಟೆ ನಿರ್ಮಾಣದಲ್ಲಿ ತಲ್ಲೀನರಾದ ಅವರ ಕೆಲಸವು, ಕೆಲಸದಲ್ಲಿರುವ ಆತ್ಮ ಸಮರ್ಪಣೆಯು ಉಳಿದ ಕೆಲಸಗಾರರಿಗೆ ಪ್ರಚೋದನೆಯು, ಮಾದರಿಯೋಗ್ಯವು ಆಗಿತ್ತು.

ಎಲ್ಲಾ ಕೂಲಿ ಕೆಲಸಗಾರರು ದಿನೇನೇ ಸಂಬಳ ಪಡೆದುಕೊಳ್ಳುತ್ತಿದ್ದರೂ, ಮಹಾನರು ವಾರಕ್ಕೊಂದು ದಿವಸದ ವೇತನವನ್ನು ಕೂಡಾ ಪಡೆಯುತ್ತಿರಲಿಲ್ಲ. ಈ ಅವಸ್ಥೆ ಕೋಟೆ ನಿರ್ಮಾಣ ಮುಗಿಯುವವರೆಗೂ ಮುಂದುವರಿಯಿತು.
ಮಹಾನವರ ಸಂಬಳ ಒಂದು ದೊಡ್ಡ ಸಂಖ್ಯೆಯಾಗಿ ಉಳಿಯಿತು.
ಈ ವಿಷಯ ಸುಲ್ತಾನ್ ಹೈದರಾಲಿ (ರ) ರವರು ತಿಳಿದು, ಕೂಡಲೇ ಮಹಾನರನ್ನು ಕರೆದುಕೊಂಡು ಬರಲು ರಾಜ ಕಲ್ಪನೆ ಹೊರಡಿಸಿದರು.
ಮಿರ್ಝಾ ಬೇಗ್'ರನ್ನು ಹುಡುಕುತ್ತಾ ಹೊರಟ ರಾಜರ ಸೈನಿಕರಿಗೆ ಅವರನ್ನು ಕಾಣಲು ಸಾಧ್ಯವಾಗಿಲ್ಲ. ಬದಲಾಗಿ ಅವರು ತಂಗಿದ್ದಲ್ಲಿ ಅವರ ತುಂಡು ತುಂಡಾದ ಶರೀರ ಭಾಗಗಳು ಚೆಲ್ಲಾಪಿಲ್ಲಿಯಾಗಿ ಕಂಡರು.
ಇದನ್ನು ಕಂಡ ಸೈನಿಕರು ಭಯಭೀತರಾಗಿ ಕಂಪಿಸುತ್ತಾ ಕೂಡಲೇ ರಾಜರ ಸನ್ನಿಧಿಗೆ ಧಾವಿಸಿದರು.
ಏನು ಆಶ್ಚರ್ಯ..!!
ಅಲ್ಲಿ ಮಿರ್ಝಾ ಬೇಗ್ ಮಂದಹಾಸದಿಂದ ಸುಲ್ತಾನ್ ಹೈದರಾಲಿ (ರ) ಯವರೊಂದಿಗೆ ಮಾತನಾಡುತ್ತಿದ್ದರು.
ನಂತರದ ಸಮಯದಲ್ಲಿ ಅನ್ವೇಷಣೆ ನಡೆಸಿದಾಗ ಅವರು ಮಿರ್ಝಾ ಬೇಗ್ ಅಲ್ಲವೆಂದೂ, ಅಲ್ಲಾಹನ ವಲಿಯ್ಯ್, ವಿದ್ವಾಂಸರು ಆದ ತವಕ್ಕಲ್ ಮಸ್ತಾನ್ (ರ) ರವರಾಗಿದ್ದಾರೆ ಎಂದು ತಿಳಿಯಿತು.

ರಾಜರ ಸೈನಿಕರು ಅವರ ಶರೀರ ಚೆಲ್ಲಾಪಿಲ್ಲಿಯಾಗಿ ಕಂಡ ಸ್ಥಳದಲ್ಲಾಗಿದೆ ಮಹಾನವರನ್ನು ವಫಾತ್ ಆದ ನಂತರ ದಫನ್ ಮಾಡಿರುವುದು.
ಈ ಸ್ಥಳವು ಮೊದಲು ಜನವಾಸವಿಲ್ಲದ ವನ ಪ್ರದೇಶವಾಗಿತ್ತು.
ಇಲ್ಲಿ ಏಕಾಂತ ವಾಸವಿದ್ದ ಮಹಾನವರು ಹೆಚ್ಚಾಗಿ ಜನರಿಂದ ದೂರ ಉಳಿದು ಇಬಾದತಿನಲ್ಲಿ ತಲ್ಲೀನರಾಗಲು ಶ್ರಮಿಸುತ್ತಿದ್ದರು.

ನಿರ್ಜನವಾದ ಸ್ಥಳವಾಗಿದ್ದ ಇಲ್ಲಿ ಒಂಟಿಯಾಗಿ ಕುಳಿತು ಖುರ್'ಆನ್ ಪಾರಾಯಣ ಮಾಡುತ್ತಿರುವ ಮಹಾನರೊಂದಿಗೆ ಸುಲ್ತಾನ್ ಹೈದರಾಲಿ (ರ) ಯವರ ಸೈನಿಕರು ಹೋಗಿ, ತಮಗೆ ಏನು ಸೇವೆ ಬೇಕಾದರೂ ಮಾಡಿ ನೆರವೇರಿಸಲು ನಮಗೆ ಸುಲ್ತಾನರು ಕಲ್ಪನೆ ಕೊಟ್ಟಿರುತ್ತಾರೆಂದು ಹೇಳಿದರು.
ನನಗೆ ಯಾವುದೇ ಸೇವೆಯ ಅಗತ್ಯವಿಲ್ಲವೆಂದು ಹೇಳಿದ ಮಹಾನವರು ಇಲ್ಲಿ ಅಲ್ಲಾಹನಿಗೆ ಆರಾಧನೆ ಮಾಡಲಿಕ್ಕಾಗಿ ಒಂದು ಮಸ್ಜಿದ್' ಬೇಕೆಂದು ಆವಶ್ಯಪಟ್ಟರು.

ಮಹಾನವರ ಆವಶ್ಯಕತೆ ಪ್ರಕಾರ ಸುಲ್ತಾನ್ ಹೈದರಾಲಿ (ರ) ಯವರು ದೊಡ್ಡದೊಂದು ಮಸ್ಜಿದ್ ನಿರ್ಮಿಸಿ ಕೊಟ್ಟು, ಮಸ್ಜಿದ್'ನ ಸುತ್ತಲೂ ಇರುವ 600 ಎಕ್ಕರೆ ಸ್ಥಳವನ್ನು ಬಾಬನವರಿಗೆ ಕೊಟ್ಟರು.
ಈ ಮಸ್ಜಿದ್ ಆಸ್ಥಾನವಾಗಿ ಮಹಾನವರು ದೀನೀ ಪ್ರಬೋಧನೆಯಲ್ಲಿ ನಿರತರಾದರು.

ಬಾಬ ಎಂಬ ಹೆಸರು ಗೌರವಪೂರ್ವಕವಾಗಿ ಮಹಾನವರನ್ನು ಕರೆಯುವ ಹೆಸರಾಗಿದೆ.

ಮಹಾನುಭಾವರನ್ನು ಕಾಣಲು, ದುವಾ ವಸಿಯ್ಯತ್ ಮಾಡಲು ಕರ್ನಾಟದಿಂದಲೂ, ಹೊರಗಿನ‌ ರಾಜ್ಯದಿಂದಲೂ ಧಾರಾಳ ಜನರು ಬರುತ್ತಿದ್ದರು.

ವಫಾತ್ತಿನ ನಂತರವೂ ಜನರು ಅಲ್ಲಿಗೆ ದಿನನಿತ್ಯ ಝಿಯಾರತ್ತಿಗಾಗಿ ಬರುತ್ತಾರೆ.
ಮಹಾನವರು ಇಹಲೋಕ ತ್ಯಜಿಸಿ ವರ್ಷಗಳು ಕಳೆದರೂ ಆ ನೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಯುತ್ತಿದೆ.

ದಾರಿ: ಬೆಂಗಳೂರು ಮೆಜೆಸ್ಟಿಕ್ ನಿಲ್ದಾಣದ ಹತ್ತಿರವಾಗಿದೆ ಈ ಮಖಾಂ ನೆಲೆಗೊಳ್ಳುತ್ತಿರುವುದು.

✍ಗಫೂರ್ ಬಾಯಾರ್
♎♎♎♎♎♎♎♎♎


No comments:

Post a Comment