Tuesday, October 31, 2017

🌟🌟🌟🌟🌟🌟🌟🌟🌟🌟🌟🌟 *ಪ್ರವಾದಿ ಕಾಲದಲ್ಲೇ ಮದ್ಸ್'ಹಬ್* 🍁🍁🍁🍁🍁🍁🍁🍁🍁🍁🍁🍁
*ಅಬೂ ಶಹೀರ್ ಮದನಿ ಕಬಕ*

*﷽*

*ಸಂಚಿಕೆ* -0⃣2⃣ *(ಕೊನೇಯ ಸಂಚಿಕೆ)*

*(... ನಿನ್ನೆಯಿಂದ..)*

ಆಗುವುದಾಗಲಿ... ಇದಕ್ಕೆ ಪರಿಹಾರ ಸಿಗಲು ಪರಮೋನ್ನತ ನ್ಯಾಯಾಧಿಪತಿ, ನೀತಿವಂತ ನ್ಯಾಯಾಧೀಶ ಅಂತ್ಯ ಪ್ರವಾದಿ ಮುಹಮ್ಮದ್ ಪೈಗಂಬರ(ಸ.ಅ) ರವರನ್ನೇ ಬೇಟಿಯಾಗೋಣ...
 ಈ ವಿಷಯದಲ್ಲಿ ಅಂತಿಮ ತೀರ್ಮಾಣ ಅಲ್ಲಿಂದಲೇ ಪಡೆಯೋಣ..
 ಎಂದೆನಿಸಿ ನೇರ ಪ್ರವಾದಿ ಬಳಿ ಸಾಗಿದರು....

*ನೆಬಿ(ಸ.ಅ)ರವರಲ್ಲಿ ತನ್ನ ಸಮಸ್ಯೆ ವಿವರಿಸಿ ಅದಕ್ಕೆ ನಾಲ್ಕು ಪ್ರಗಲ್ಬ ನಾಯಕರು ನೀಡಿದ ಉತ್ತರವನ್ನೂ ವಿವರಿಸಿದರು.ಅದರಲ್ಲಿ ನಾನು ಯಾವುದನ್ನು ಸ್ವೀಕರಿಸಬೇಕು ಎಂಬ ಬಗ್ಗೆ ಗೊಂದಲ ಸೃಷ್ಠಿಯಾದಾಗ ಇಲ್ಲಿ ಬಂದಿದ್ದೇನೆ ಎಂದಾಗ..*

ಪ್ರವಾದಿ (ಸ.ಅ) ನಾಲ್ವರನ್ನೂ ಕರೆತರಲು ಆಜ್ಞಾಪಿಸಿದರು..
ನಾಲ್ವರೂ ಬಂದು ಪ್ರವಾದಿ(ಸ.ಅ) ರವರ ಮುಂದೆ ನಿಂತರು...!

ಪ್ರವಾದಿ(ಸ.ಅ) ಅಬೂಬಕರ್ ಸಿದ್ದೀಖ್(ರ)ರವರೊಂದಿಗೆ ಕೇಳಿದರು..
ತಾವು.. *ಮರಣದ ತನಕ ಮುಟ್ಟುವಂತಿಲ್ಲ*  ಎಂದು ಯಾವ ಆಧಾರದಲ್ಲಿ ಹೇಳಿದ್ದೀರಿ..?
    ಸಿದ್ದೀಖ್ : ನಾನು ಖುರ್'ಆನ್ ನ ಆಧಾರದಲ್ಲಿ ಹೇಳಿದ್ದೇನೆ

ನೆಬಿ(ಸ) :ಯಾವ ಸೂಕ್ತದಲ್ಲಿದೆ ಹೇಳು ನಾ ಕೇಳುತ್ತೇನೆ ನೋಡೋಣ..

ಸಿದ್ದೀಖ್(ರ) : ಹತ್ತನೇ ಅಧ್ಯಾಯವಾದ ಸೂರತ್ ಯೂನುಸ್ ನ 98ನೇ ಸೂಕ್ತದಲ್ಲಿ ಹೇಳುವುದು..
فمتعناهم الي حين....
ಯೂನುಸ್ ನೆಬಿಯ ಸಮೂಹವನ್ನು ಮರಣ* ತನಕ ಭೂಮಿಯಲ್ಲಿ ಸುಖಗಳೊಂದಿಗೆ ನೆಲೆಸಿದರು.
ಇಲ್ಲಿ ಮರಣ ತನಕವೆಂದಲ್ಲವೇ ತಾವು ಕಲಿಸಿದ್ದು..?
ಆದ್ದರಿಂದ ಮರಣ ತನಕ ಪತ್ನಿಯನ್ನು ಮುಟ್ಟುವಂತಿಲ್ಲ ಎಂದುಬಿಟ್ಟೆ.

ನೆಬಿ(ಸ.ಅ) : ಸರಿ ತಾವು ಖುರ್'ಆನ್ ಆಧಾರದಲ್ಲಿ ವಿಧಿಸಿದ್ದೀರಿ.. ಸರಿದು ನಿಲ್ಲಿ..!
ಉಮರ್'ರವರೇ ತಾವು ಹೇಗೆ ನಲ್ವತ್ತು ವರ್ಷದ ಬಳಿಕ ಮುಟ್ಟಬಹುದೆಂದಿರಿ..?

ಉಮರ್(ರ) : ನಾನು ಕೂಡಾ ಖುರ್'ಆನಿನ ಆಧಾರದಲ್ಲೇ ಹೇಳಿದೆ ಪ್ರವಾಚಕರೇ..!

ನೆಬಿ(ಸ.ಅ) : ಯಾವ ಸೂಕ್ತ ಅದಕ್ಕೆ ಆಧಾರ..?

ಉಮರ್(ರ) :75ನೇ ಅಧ್ಯಾಯವಾದ ಸೂರತ್ ಇನ್'ಸಾನ್'ನ ಒಂದನೇ ಸೂಕ್ತ...
هل اتى علي الانسان حين من الدهر .......
ಮನುಷ್ಯ ರೂಪವನ್ನು ಸೃಷ್ಠಿಸಿ ನಲ್ವತ್ತು ವರ್ಷಗಳ ಬಳಿಕ ಅದಕ್ಕೆ ಆತ್ಮ(ರೂಹ್)ನೀಡಿದೆ.
ಇಲ್ಲಿ ಹೀನ್" ಎಂಬ ಪದಕ್ಕೆ ತಾವಲ್ಲವೇ 40 ವರ್ಷವೆಂದು ಅರ್ಥ ನೀಡಿದ್ದು.

ನೆಬಿ(ಸ.ಅ): ಅದು ಸರಿ ತಾವು ಕೂಡಾ ಖುರ್'ಆನನ್ನೇ ಆಧರಿಸಿ ಉತ್ತರಿಸಿದ್ದೀರಿ..ಬೆಷ್ಟ್..! ತಾವೂ ಸರಿದು ನಿಲ್ಲಿ..!
ಉಸ್ಮಾನ್'ರವರೇ ತಾವೇಗೆ ಒಂದು ವರ್ಷದ ಬಳಿಕ ಸ್ಪರ್ಶಿಸಬಹುದೆಂದಿರಿ..?

ಉಸ್ಮಾನ್(ರ) :ನಾನೂ ಕೂಡಾ ಖುರ್'ನ್ ನೋಡಿಯೇ ವಿಧಿಸಿದ್ದು..!

ನೆಬಿ(ಸ.ಅ) : ಯಾವ ಸೂಕ್ತ ವಿವರಿಸುವಿರಾ..?

ಉಸ್ಮಾನ್(ರ) : 14 ನೇ ಅಧ್ಯಾಯವಾದ ಸೂರತ್ ಇಬ್'ರಾಹೀಮ್ ನ 25 ನೇ ಸೂಕ್ತ..
تؤتي اكلها كل حين...
ಒಂದು ಮರದ ಬಗ್ಗೆ ವಿವರಿಸಿದ ಖುರ್'ಆನ್ ಅದು ಎಲ್ಲಾ ವರ್ಷವೂ ಹಣ್ಣು ಕಾಯಿಗಳನ್ನು)ನೀಡುತ್ತದೆ ಎಂದಿದೆ.
ಇಲ್ಲಿ "ಹೀನ್"ಎಂಬ ಪದಕ್ಕೆ ಒಂದು ವರ್ಷವೆಂದಲ್ಲವೇ ತಾವು ಅರ್ಥೈಸಿದ್ದು..?

ನೆಬಿ(ಸ.ಅ) : ಸರಿ..! ತಾವೂ ಕಡಿಮೆಯೇನಲ್ಲ ಸರಿಯಿರಿ..!
ಅಲೀರವರೇ ತಾವು ಹೇಗೆ ಅಷ್ಟು ಸುಲಭದಲ್ಲಿ ನಾಳೆಯೇ ಮುಟ್ಟಬಹುದೆಂದು ವಿಧಿ ಪ್ರಖ್ಯಾಪಿಸಿದ್ದೀರಿ...?

ಅಲಿ(ರ) : ಇವರಿಗೆ ಒಟದೊಂದು ಸೂಕ್ತ ಆಧಾರವಾಗಿದ್ದರೆ ನನಗೆ ಒಂದೆಡೆಯೇ ಎರಡು ಆಯತ್ ಆಧಾರವಿದೆ.

ನೆಬಿ(ಸ.ಅ) :ಯಾವುದದು ನೋಡೋಣ ಓದು..?

ಅಲಿ(ರ) : ಒಂದು ದಿನದ ನಮಾಜಿನ ಕುರಿತು ಖುರ್'ಆನ್.. ತನ್ನ ಮೂವತ್ತನೇ ಅಧ್ಯಾಯವಾದ ಸೂರತ್ ರೂಮ್ ನ 17, 18 ನೇ ಸೂಕ್ತದಲ್ಲಿ ವಿವರಿಸಿದ್ದು ಹೀಗೆ ತಾನೇ..?
فسبحان الله حين تمسون وحين تصبحون. وله الحمد في السموات والارض وعشيا وحين تظهرون.

ನೆಬಿ(ಸ.ಅ) : ಭಲೇ ಭೇಷ್..!
ಅಸ್'ಹಾಬೀ ಕನ್ನುಜೂಮ್ ಬಿ ಅಯ್ಯಿಹಿಮ್ ಇಖ್'ತದೈತುಮ್ ಫಹ್'ತದೈತುಮ್.. ಎಂದು ನಾಲ್ವರನ್ನೂ ಶ್ಲಾಘಿಸಿದರು.
(ನನ್ನ ಸ್ವಹಾಬಿಗಳೆಲ್ಲರೂ ನಕ್ಷತ್ರದಂತೆ ಯಾರನ್ನು ಅನುಕರಿಸಿದರೂ ಸತ್ಯಪಥಕ್ಕೆ (ಸ್ವರ್ಗಕ್ಕೆ) ತಲುಪುವಿರಿ..!

ಹಡಗಿನಲ್ಲಿ ರಾತ್ರಿ ಸಟಚರಿಸುವವರು ದಡವನ್ನು ಸೇರಲು ನಕ್ಷತ್ರವನ್ನು ಅನುಕರಿಸುತ್ತದ್ದರು. ಯಾವ ನಕ್ಷತ್ರವನ್ನು ನೋಡಿ ಹೋದರೂ ದಡ ಸೇರುತ್ತಿದ್ದರು)

ಜಗಳವಾಡಿದ ಸ್ವಹಾಬಿ ಯಾರನ್ನು ಅನುಕರಿಸಿರಬಹುದೆಂದು ಊಹಿಸಬಹುದು.

*(ಮುಗಿಯಿತು)*

✍🏻.. *ಅಬೂ ಶಹೀರ್ ಮದನಿ ಕಬಕ*
🌟🌟🌟🌟🌟

No comments:

Post a Comment