Tuesday, October 31, 2017

*ಅಹ್ಲುಸ್ಸುನ್ನತ್ ವಲ್ ಜಮಾಅತ್*
*••••••••••••••••••••••••••••••••••••*
*📝ಮುನೀರ್ ಸಖಾಫಿ, ಸಾಲೆತ್ತೂರು*
*°°°°°°°°°°°°°°°°°°°°°°°°°°°°°°°°°*
   

*ವಿಷಯ 1:*

 *ಮೀಲಾದುನ್ನಬೀ.*
*------------------------------------------*
*ಭಾಗ ---2.*

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಸೋಮವಾರ ದಿನ ಜನಿಸಿದರೆಂದು ಇಮಾಮ್ ಮುಸ್ಲಿಂ ವರದಿ ಮಾಡಿದ ಹದೀಸಿನಲ್ಲಿದೆ.

*عَنْ أبِي قَتَادَةَ الأنْصَارِيِّ رَضِيَ اللهُ عَنْهُ أنَّ رَسُولَ الله صلى الله عليه وسلم سُئِلَ، عَنْ صَوْمِ الاثْنَيْنِ؟ فَقَالَ: «فِيهِ وُلِدْتُ وَفِيهِ أُنْزِلَ عَلَيَّ». ( مسلم 2750)*

*ಅಬೂಖತಾದ (ರ) ನಿವೇದನೆ, ಸೋಮವಾರದ ಉಪವಾಸದ ಬಗ್ಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಕೇಳಲ್ಪಟ್ಟಾಗ ಅಂದು ನಾನು ಜನಿಸಿದ ದಿನವೆಂದೂ ಆ ದಿನ ನನಗೆ ಖುರ್ ಆನ್ ಅವತರಿಸಲ್ಪಟ್ಟಿದೆ ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಉತ್ತರಿಸಿದರು.*
*(ಮುಸ್ಲಿಂ, 2750)*

ಅಲ್ಲಾಮ ಮುನಾವೀ(ರ) ಬರೆಯುತ್ತಾರೆ,

الاصح انه ولد بمكة بالشعب بعيد فجر الاثنين ثاني عشر  ربيع الاول عام الفيل ،ولم يكن يوم جمعة ولا شهر حرام دفعا لتوهم انه شرف بذلك الزمن الفاضل ،فجعل في المفضول لتظهر به رتبته علي الفاضل ،ونظيره دفنه بالمدينة دون مكة ،اذ لو دفن بها لقصد تبعا.(فيض القدير 3/768)

*ಗಜ ವರ್ಷದ ರಬೀವುಲ್ ಅವ್ವಲ್ 12 ರಂದು ಫಜ್'ರ್ ನ ಅಲ್ಪ ಸಮಯದ ಬಳಿಕ ಮಕ್ಕಾದಲ್ಲಿ ಹಾಶಿಂ ಕುಟುಂಬದಲ್ಲಿ*  *ಜನಿಸಿದರು. ಅವರ ಜನನ ಶುಕ್ರವಾರ ದಿನ  ಅಥವಾ ಯುದ್ಧ ನಿಷಿದ್ಧವಾದ ತಿಂಗಳಲ್ಲಿ (ದುಲ್ ಖ'ಅದ, ದುಲ್ ಹಿಜ್ಜ, ಮುಹರ್ರಮ್, ರಜಬ್)* *ನಡೆದಿಲ್ಲ. ಆ ಶ್ರೇಷ್ಟವಾದ  ವೇಳೆ ನಡೆದಿದ್ದಲ್ಲಿ ಆ ಸಮಯದ ಕಾರಣದಿಂದ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ* *ಮಹತ್ವವುಂಟಾಗಿದೆ ಎಂಬ ತಪ್ಪುಧಾರಣೆ ಉಂಟಾಗಬಹುದು. ಅದನ್ನು  ಹೊಗಲಾಡಿಸಲು ಬೇಕಾಗಿ ಬೇರೆಯೇ ದಿನದಲ್ಲಿ ಅವರ ಜನನ ಸಂಭವಿಸಿತು.*
*ಆದುದರಿಂದ ರಬೀವುಲ್ ಅವ್ವಲ್ ಸೋಮವಾರ  ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಕಾರಣದಿಂದ ಆ ತಿಂಗಳಿಗೆ ಮತ್ತು ಸೋಮವಾರದ ದಿನಕ್ಕೆ  ಇತರ  ತಿಂಗಳಿಗಿಂತಲೂ, ದಿನಗಳಿಗಿಂತಲೂ ಮಹತ್ವವುಂತಾಯಿತು ಎಂದು ತಿಳಿಯಬಹುದಲ್ಲವೇ.*
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಮಕ್ಕಾದಲ್ಲಿ ದಫನ್ ಮಾಡದೆ ಮದೀನದಲ್ಲಿ ದಫನ್ ಮಾಡಲು ಇದೇ ಕಾರಣವಾಗಿದೆ. ಮಕ್ಕಾದಲ್ಲಿ ದಫನ್ ಮಾಡುತ್ತಿದ್ದಲ್ಲಿ ಜನರು  ಮಕ್ಕಾ ಅವಲಂಬಿಸಿ ಹೋಗಿ ನಂತರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಗುರಿಯಿಡುತ್ತಿದ್ದರು.* (ಪ್ರಧಾನ ಉದ್ದೇಶ ಪವಾದೀ ಸಲ್ಲಲ್ಲಾಹು ಅಲೈಹಿವಸಲ್ಲಂ ಆಗುತ್ತಿರಲಿಲ್ಲ.)
*( ಫೈಳುಲ್ ಖದೀರ್ 3/768)*

ಮದೀನಾ ಗೆ ಹೋಗುವ ಮುಸ್ಲಿಮರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸಂದರ್ಶಿಸಲೆಂದೇ ಹೋಗುತ್ತಾರೆ. ಹೊರತು ಕೇವಲ ಮಸೀದಿ ಸಂದರ್ಶನವಲ್ಲ.ಮಸೀದಿ ಮಾತ್ರ ಗುರಿಯಾಗಿದ್ದರೆ ಅತ್ಯಂತ ಪುಣ್ಯ ಮಸೀದಿಯಾದ ಮಕ್ಕ ಮಸೀದಿಗಿಂತ ಕಡಿಮೆ ಮಹತ್ವವಿರುವ ಮದೀನ ಮಸೀದಿಗೆ ಹೋಗಬೇಕಾಗಿಲ್ಲ ತಾನೇ?.

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ರಬೀವುಲ್ ಅವ್ವಲ್ 12 ರಂದು ಜನಿಸಿದರೆಂಬ ಕಾರಣಕ್ಕೆ ಮಕ್ಕ ನಿವಾಸಿಗಳು ಅಂದು ಪ್ರವಾದಿವರ್ಯರು ಜನಿಸಿದ  ಸ್ಥಳ ಸಂದರ್ಶಿಸುತ್ತಿದ್ದರು.

ಇಮಾಮ್ ಖಸ್ತಲ್ಲಾನೀ (ರ)ಬರೆಯುತ್ತಾರೆ;

(وقيل )ولد (لاثني عشر)من ربيع الاول (وعليه عمل اهل مكة )قديما وحديثا في(زيارتهم موضع مولده في هذا الوقت )اي ثاني عشر ربيع .(المواهب اللدنية 1^132)
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ರಬೀವುಲ್ ಅವ್ವಲ್ 12 ರಂದು ಜನಿಸಿದ್ದಾರೆ ಎಂಬ ಅಭಿಪ್ರಾಯವಿದೆ. ಆದುದರಿಂದಲೇ ಪೂರ್ವ ಕಾಲದ ಮತ್ತು ಈ ಕಾಲದ ಮಕ್ಕಾ ನಿವಾಸಿಗಳು ರಬೀವುಲ್ ಅವ್ವಲ್ 12 ರಂದು  ಅವರು ಜನಿಸಿದ ಸ್ಥಳ ಸಂದರ್ಶನ ನಡೆಸುವುದು.*
*(ಅಲ್ ಮವಾಹಿಬುಲ್ಲದುನ್ನಿಯ್ಯ ಝುರ್'ಖಾನಿ ಸಹಿತ ನೋಡಿರಿ 1/132)*

ಇದೇ ರೀತಿ ಇಮಾಮ್ ಹಲಬೀ(ರ)ಹೇಳಿದ್ದಾರೆ,

 *وكانت ولادته صلي الله عليه وسلم يوم الاثنين في شهر ربيع الاول لعشر خلون منه ........وقيل ولد ليلا  وعليه عمل اهل مكة في زيارة موضع موله الشريف صلي الله عليه وشلم (سيرة الحلبية 3/496)*

*ರಬೀವುಲ್ ಅವ್ವಲ್ 12 ರಂದು ಮಕ್ಕಾ ನಿವಾಸಿಗಳು ಪ್ರವಾದಿ ಸಲ್ಲಲ್ಲಾಹು* *ಅಲೈಹಿವಸಲ್ಲಮರು ಜನಿಸಿದ ಸ್ಥಳವನ್ನು ಸಂದರ್ಶಿಸಿದರು.*
*(ಸೀರತುಲ್ ಹಲಬಿಯ್ಯ3/496)*




*ಮುಂದುವರಿಯುವುದು.............*

*✍ಮುನೀರ್ ಸಖಾಫಿ, ಸಾಲೆತ್ತೂರು*
31/10/2017

No comments:

Post a Comment