Wednesday, November 1, 2017

*ನಮಗೂ ಹೇಳಲಿಕ್ಕಿದೆ ನೈಜ*
——————————————
 *ಇಸ್ಲಾಮಿನ ಪರಂಪರೆ* 
———————————

*ನಮಗೂ ಹೇಳಲಿಕ್ಕಿದೆ* 
ನಿಮಗೂ ಹೇಳಲಿಕ್ಕಿದೆ ಆದರೆ ಹೇಳಿಕೆಗಳು ಕೇವಲ ತೋರಿಕೆ ಮಾತ್ರವಾಗಬಾರದು. ಪವಿತ್ರ ಖುರ್ಆನ್ ವ್ಯಕ್ತವಾದ ನುಡಿಯ ಮುಂದೆ ಮಾನವ ರಾಶಿಯರಿಗೆ ಹೇಳುತ್ತದೆ *لم تقولون مالا تفعلون* ನೀವು ಕಾರ್ಯರೂಪಕ್ಕೆ ತರದಂತಹ ಕಾರ್ಯಗಳನ್ನು ಯಾಕೆ ಇತರರಿಗೆ  ಹೇಳುತ್ತಿದ್ದೀರಿ...?? ಇದು ಪವಿತ್ರ ಕುರ್ಆನಿನ ಗೌರವ್ಯುತ ಸಂದೇಶ. "ಮಾತಿಗಿಂತ ಕೃತಿಮೇಲು" ಎಂಬ ಕನ್ನಡ ನಾಣ್ಣುನುಡಿಯು ಇದನ್ನೇ ಸಾರುತ್ತದೆ.ಹೌದು....!

*ನಮಗೂ ಹೇಳಲಿಕ್ಕಿದೆ*

ಜಾಗತಿಕವಾಗಿ ಹಲವಾರು ಪಾಶ್ಚಾತೀಕರಣಗಳು ತಾಂಡವಾಡುತ್ತಿದೆ. ಹೊಸ ಜಗತ್ತಿನ ನವಪೀಳಿಗೆಗಳಿಗೆ ಪುರಾತನ ಇತಿಹಾಸ ಪಾರಂಪರಿಕ ಧಾರ್ಮಿಕತೆಗಳು ಬೇಡವಾಗುತ್ತಿದೆ.ಮಾನವ ತನಷ್ಟಕ್ಕೆ ಹೊಂದಿಕೊಂಡು ನೈಜತೆಯನ್ನು ಮರೆಮಾಚಿ ನೂತನವನ್ನು ಪ್ರದರ್ಶಿಸುತ್ತಾನೆ. ನೈಜ ಇಸ್ಲಾಮಿನ ತತ್ವಾದರ್ಶಗಳನ್ನು ಅಡವಿಯಿಡುತ್ತಿದ್ದಾನೆ.

*ನಮಗೂ ಹೇಳಲಿಕ್ಕಿದೆ*
 ಸ್ತ್ರೀ ಸಮುದಾಯವು ಇಂದಿನ ಜಗತ್ತಿನಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಸ್ತ್ರೀ ಸ್ವಾತಂತ್ರ್ಯ  ಚಿತ್ರೀಕರಣದ ಹೆಸರಿನಲ್ಲಿ ಶೋಷಣೆ ಮಾಡಲಾಗುತ್ತಿದೆ. ಪರ್ದದೊಳಗೆ  ಹೂವಿನಂತೆ ಸುಂದರವಾಗಿ ಸಂರಕ್ಷಣೆಯಿಂದ ಬಾಳಬೇಕಾದ ಹೆಣ್ಣನ್ನು ಉಪಕರಣಗಳಂತೆ ವೇದಿಕೆಯಲ್ಲಿ ಪ್ರದರ್ಶಿಸಲಾಗುತ್ತಿದೆ. ಇದು ನೈಜ ಇಸ್ಲಾಮಿನ ಪಾರಂಪರ್ಯಕ್ಕೆ ತದ್ವಿರುಧ್ಧ ಆಶಯವೆನ್ನದೆ ವಿಧಿಯಿಲ್ಲ.
ಪುಣ್ಯ ಪ್ರವಾದಿ (ಸ.ಅ)ರವರು ಧಾರ್ಮಿಕ ಚಟುವಟಿಕೆಗಳು ಧರ್ಮದ ಆಚಾರ ವಿಚಾರಗಳನ್ನು ಕಲಿಸಿಕೊಡುವಾಗ ಧರ್ಮ ವಿರೋಧಿ ಚಟುವಟಿಕೆಗಳಿಗೆ ಕಿಂಚಿತ್ತು ಪ್ರೋತ್ಸಾಹಿಸಲಿಲ್ಲ ತಾನು ಧರ್ಮದ ನಾಯಕನಾಗಿ ಊರಿನ ರಾಜನಾಗಿ ಎಲ್ಲಾ ಹಂತಗಳಲ್ಲಿ ಅಂಗೀಕರಿಸಲ್ಪಟ್ಟ ಜನ ನೇತಾರರಾಗಿದ್ದರೂ  ತನ್ನ ಪ್ರಿಯ ಪತ್ನಿಯಂದಿರನ್ನಾರನ್ನೂ ರಾಜಕೀಯ ವೇದಿಕೆಗಳಿಗೆ ಹತ್ತಿಸಿರಲಿಲ್ಲ ˌರಾಣಿಯಾಗಿ ಪ್ರದರ್ಶಿಸಿರಲಿಲ್ಲ ˌ ಹೊರ ಜಗತ್ತಿಗೆ ಸೌಂದರ್ಯ ಅಲಂಕರಿಸಿರಲಿಲ್ಲ ˌ ಕಾರಣ ಪತ್ನಿಯಂದಿರ ಸೌಂದರ್ಯ ಲೋಪವಲ್ಲ ಆಯಿಷಾ (ರ.ಅ) ಅಂದಿನ ಕಾಲದ ಸುಂದರ ತರುಣಿಯಾಗಿದ್ದರು. ಅಂಗವಿಕಲಿಯರಾಗಿರಲಿಲ್ಲ  ಜ್ಞಾನಭಂಢಾರದ ಕೊರತೆಯಿರಲಿಲ್ಲ ಹೊರತು ಇದು ನೈಜ ಇಸ್ಲಾಮಿನ ಸುಂದರ ಆಶಯ.

*ನಮಗೂ ಹೇಳಲಿಕ್ಕಿದೆ* 
ತನ್ನ ಜೀವನದ 63 ಸಂವತ್ಸರಗಳಲ್ಲಿ ಪವಿತ್ರ ಪಾವನ ಶುಧ್ಧ ಜೀವನ ನಡೆಸಿ ಯಾವುದೇ ಕಳಂಕವಿಲ್ಲದ ವೈಮನಸ್ಸಿಲ್ಲದೆ ಸುಂದರ ಬದುಕನ್ನು ತೋರಿಸಿ ಕೊಟ್ಟ *ಪುಣ್ಯ ಪ್ರವಾದಿ (ಸ) 40*ವರ್ಷಗಳವರೆಗೆ "ಅಲ್- ಅಮೀನ್" ಎಂಬ ಪವಿತ್ರ ನಾಮವನ್ನು ಅಲಂಕರಿಸಿದ್ದರು. ಆಸೂಯೆ ಎಂಬ ಏಕ ಕಾರಣದಿಂದಾಗಿ 40ನೇ ವಯಸ್ಸಿನಲ್ಲಿ ದೊರೆತ ಪ್ರವಾದಿತ್ವವನ್ನು ನಿಷೇಧಿಸಿದ ಅರಬಿಗಳು ಏನೆಲ್ಲಾ ಹೇಳಿ ಹಿಯ್ಯಾಲಿಸಿದರು ಕಳ್ಳ ಪ್ರವಾದಿಯೆಂಬ ಆರೋಪಗಳು ಸುರಿಮಳೆಗೈದರು ˌ ಮುಂದುವರಿದ ಭಾಗವೆಂಬಂತೆ ಕಲ್ಲೆಸೆದರು.ಒಂಟೆಯ ಒಡಲಕರುಳನ್ನು ಹಾರ ಹಾಕಿದರು ˌರಕ್ತಹೀರಿಸಿದರುˌ ಗಾಯ ಮಾಡಿದರು ˌವಧಿಸಲು ಮುಂದಾದರು ಅನುಯಾಯಿಗಳಲ್ಲಿ ಹಲವರನ್ನು ಪವಿತ್ರ ಧರ್ಮಕ್ಕೆ ಬಂದರೆಂಬ ಏಕಕಾರಣಕ್ಕಾಗಿ ಕೊಂದೇಬಿಟ್ಟರು...!! ಆದರೆ ಪುಣ್ಯ ಪ್ರವಾದಿ (ಸ) ರವರು ಕಿಂಚಿತ್ತು ದೃತಿಕೆಡದೆ ನೈಜ ಹಾದಿಯಲ್ಲೇ ಮುಂದೆ ಸಾಗಿದರು.ಪ್ರತಿಕಾರವಿಲ್ಲ ˌ ಸೇಡು ತೀರಿಸಲಿಲ್ಲ ˌ ಕೊಲೆ ಮಾಡಲಿಲ್ಲ ಎಲ್ಲಾವು ದೀನಿಗಾಗಿ ತಾಳ್ಮೆಯಿಂದ ಸಹಿಸಿದರು. ಇದು ನೈಜ ಇಸ್ಲಾಮಿನ ಪರಂಪರೆ.
ಸಂದಿಗ್ಧ ಸಂದರ್ಭಗಳು ಒದಗಿ ಬಂದಾಗ ನಿರ್ವಹವಿಲ್ಲದೆ ಅಲ್ಲಾಹನಾಜ್ಞೆಯಂತೆ ಬದ್ರ್ ಉಹ್ದ್ ಗಳಂತ ಯುಧ್ಧಗಳು ನಡೆದು ಹೋಯಿತು.ಇದು ತೀರ್ವವಾದದ ಉಗ್ರವಾದದ ಯುಧ್ಧಗಳಲ್ಲ ಕೊಮುವಾದವನ್ನು ಪ್ರೋತ್ಸಾಹಿಸುವ ಯಾವುದೇ ಒಂದು ನುಡಿಯನ್ನು ಪುಣ್ಯ ನೆಬಿ (ಸ) ಹೇಳಾಲೇ ಇಲ್ಲ ಇದು "ಸಮುದಾಯ ˌಸಮುದಾಯ" ಎಂದು ಗೋಗರೆಯುವವರು ಚಿಂತಿಸಬೇಕಾಗಿದೆ.

*ನಮಗೂ ಹೇಳಲಿಕ್ಕಿದೆ*
ಭಾರತೀಯ ಮುಸ್ಲಿಮರ ನೈಜ ಇಸ್ಲಾಮಿನ ಪರಂಪರೆಯ ಪ್ರವಾದಿ ಸಹಚಾರಿ ಮಾಲಿಕ್ ಬಿನ್ ದೀನಾರ್ (ರ) ರವರೂ ಸಂಗಡಿಗರು ಪಾವನ ದೀನಿನ ಬಿತ್ತನೆಯು ಭವ್ಯ ಭಾರತದಲ್ಲಿ ಬಿತ್ತಿಸಿದರು. ಫಲವತ್ತಾದ ಬಿತ್ತನೆಯು ಅನ್ಯಧರ್ಮಿಯರಲ್ಲಿ ಹರಡಿತು ಸುಂದರ ಸ್ಪಷ್ಟ ನೈಜ ಪರಂಪರೆಯನ್ನು ಹೊಂದಿದ ಇಸ್ಲಾಮಿಗೆ ಅವರೆಲ್ಲರು ಧಾವಿಸಿದರು. ನೆಬಿ (ಸ) ರ ದಿವ್ಯವಚನ ಈಮಾನ್ ಎಂದರೆ ಯಮನ್ ತತ್ವಜ್ಞಾನಿಯರೆಂದರೆ ಯಮನಿಯರು ಎಂಬ ಮಾತಿನಂತೆ ಭಾರತಕ್ಕೆ *ಯಮನಿನ ಜಿಫ್ರೀ ಬಾ-ಅಲವಿ ಬುಖಾರಿ* ಯರು ಬಂದು ದೀನಿ ಜ್ಞಾನ ಬೆಳಕನ್ನು ಪದರಿದರು ನಂತರ  *ಮಖ್ ದೂಮಿ* ಯರು ದೀನಿವಿಜ್ಞಾನ ಕ್ರಾಂತಿಯನ್ನೇ ನಡೆಸಿದರು ಇಂದು 40 ಜನ ಒಳಗೊಂಡ ಪಾವತೀತ ಹಡಗನ್ನು ವಿಶ್ವಕಂಡ ಅಧ್ಭುತ  ವಿಧ್ವಾಂಸ *ಕಾಂತಪುರಂ  ಉಸ್ತಾದ್* ಹಾಗೂ *ಇ.  ಸುಲೈಮಾನ್ ಉಸ್ತಾದ* ರು ಮುನ್ನಡೆಸುತ್ತಿದ್ದು ಮಾನವನ ಉಭಯಲೋಕ ಯಶಸ್ಸಿಗೆ ಮಾರ್ಗರೇಖೆಗಳನ್ನು ತೋರಿಸಿ ಕೊಟ್ಟು ಇಸ್ಲಾಮಿನ ಜೀವನ ವಿಧಾನ ಆಚಾರ ವಿಚಾರ ಅನುಷ್ಠಾನಗಳನ್ನು ಪ್ರಚಲಿಸುವಲ್ಲಿ ಯಶಸ್ಸಿಯಾದರು.

*ನಮಗೂ ಹೇಳಲಿಕ್ಕಿದೆ*
ನೈಜ ಇಸ್ಲಾಮಿನ ಪರಂಪರೆಯನ್ನು ಅಂಗಿಕರಿಸಿದವರು ಕೇವಲ ಸುನ್ನಿಗಳು ಮಾತ್ರ ತಮಗೆ ಇಸ್ಲಾಮನ್ನು ಪರಿಚಯಿಸಿ ಕೊಟ್ಟ ಪುಣ್ಯ ನೆಬಿ (ಸ) ರೊಂದಿಗೆ ವಿಶ್ವಾಸ ಕೊರತೆಯಿರುವ ಯಾವುದೇ  ನೂತನವಾದದ ಆಶಯಗಳನ್ನು ತನ್ನ ಒಡಲಲ್ಲಿ ಬಳಸಿದವರಿಗೆ ಒಮ್ಮೆಯು ಇಲ್ಲಿ ಸ್ಥಾನವಿಲ್ಲ ಮಹತ್ವವಿಲ್ಲ ಅವರೊಂದಿಗೆ ಸ್ನೇಹ ಸಮ್ಮಿಲನಗಳಿಲ್ಲ ಸೌಹಾರ್ದತೆಯಿಲ್ಲ ನಮಗೆ ಕಳಬೇರಕೆಯಿಲ್ಲ ಕಳಬೆರೆಕೆಯಾಗಿ ಅನ್ನ ತಿನ್ನುವ ಎಲ್ಲರೂ ನಮಗೆ ಆಗುವವರೆಂಬ ವಾದ ಬಾಲಿಶವಾದುದ್ದು ಕಾರಣ ಇಲ್ಲಿ ನೆಲೆ ನಿಲ್ಲಬೇಕಾದದ್ದು ನೈಜ ಇಸ್ಲಾಮಿನ ಪರಂಪರೆ.
ಮುಸ್ಲಿಂ ಯುವ ಜನತೆ ಉಲಮಾಗಳ ಆದೇಶಗಳನ್ನು ಪಾಲಿಸಿ ಸೌಹಾರ್ಧಯುತವಾಗಿ ಬದುಕಿ ನಾಳೆಯನ್ನು ಉಜ್ವಲಗೊಳಿಸಲು ಪ್ರಯತ್ನಿಸಬೇಕು. ಕ್ಷಣಕ ಆವೇಶ ಮತ್ತು ತಪ್ಪು ಮಾರ್ಗದರ್ಶನದಿಂದ ಉಂಟಾಗುವ ಅಪಾಯಗಳು ದೂರ ವ್ಯಾಪಕವಾಗಿದ್ದು ಬಹಳಷ್ಟು ಸಂಯಮ ಮತ್ತು ಎಚ್ಚರವನ್ನು ಪಾಲಿಸಿ ಮಾತ್ರ ಸಮುದಾಯ ಬಾಂಧವರು ಮುಂದಡೆಯಬೇಕು ಇಲ್ಲದಿದ್ದರೆ ಇಡೀ ಮುಸ್ಲಿಂ ಸಮುದಾಯವನ್ನು ಚಿತ್ರಿಸಿ ಎಸೆದುಕೊಳ್ಳಲು ಹವಣಿಸುತ್ತಿರುವವರ ಕೈಗೆ ನಾವೇ ಕಲ್ಲು
ಕೊಟ್ಟಂತೆ
ಕೊನೆಯದಾಗಿ ಹೇಳುವವರೊಂದಿಗೆ ಕೇಳುವವರೊಂದಿಗೆ ನಮಗೂ ಹೇಳಕ್ಕಿದೆ ನೈಜ ಇಸ್ಲಾಂ ಎಂದರೆ ಅದುವೇ
*ಅಹ್ಲು ಸುನ್ನ ವಲ್ ಜಮಾಅತ್.*

✍🏻❇ *ನೌಷಾದ್ ಮುರ (ಮರ್ಕಝ್)* ❇

No comments:

Post a Comment