*_ಪತ್ನಿಯೊಂದಿಗೆ ವಿರಸ ಮೂಡಿದರೆ ನೆನಪಿಡಬೇಕಾದ ವಿಷಯಗಳು_*
➖➖➖➖➖➖➖➖
*ನೀನು ಅವಳನ್ನು ಹೆಣ್ಣುನೋಡಲು ಹೋಗಿ ಇಷ್ಟಪಟ್ಟ ಮೊದಲ ದಿನ*
*ಮದುವೆಯಾಗಿ ಅವಳ ಮನೆಯಿಂದ ಅವಳು ಹೊರಡುವಾಗ ಅವಳ ಕಣ್ಣಿನಿಂದಿಳಿದ ಕಣ್ಣೀರು*
*ಇಷ್ಟರವರೆಗೆ ಕಾಣದ ನಿನ್ನ ಮನೆಗೆ ಹೆದರಿಕೆಯ ಸಂಕೋಚದೊಂದಿಗೆ ಬಂದ ಮೊದಲ ದಿನ*
*ಮೊದಲ ರಾತ್ರಿ*
*ಅವಳು ಮಾಡಿಕೊಟ್ಟ ಆಹಾರದ ರುಚಿ*
*ನೀನು ಅವಳೊಂದಿಗೆ ಕೋಪಗೊಂಡಾಗ ಕಂಡ ಅವಳ ಮುಖ*
*ನಿನ್ನನ್ನು ಕಾಣದಿರುವಾಗ ಅವಳಲ್ಲುಂಟಾದ ತಳಮಳ*
*ರಸ್ತೆ ದಾಟುವಾಗ ನಿನ್ನ ಕೈಯನ್ನು ಗಟ್ಟಿಯಾಗಿ ಹಿಡಿಯುವ ಅವಳ ಕೈಗಳು*
*ಪರಸ್ಪರ ಷೇರ್ ಮಾಡಿ ನೀವಿಬ್ಬರೂ ತಿಂದುಂಡ ತಿಂಡಿತಿನಿಸುಗಳು*
*ಭಯವುಂಟಾಗ ನಿನ್ನನ್ನು ಗಟ್ಟಿಯಾಗಿ ತಬ್ಬಿಹಿಡಿದ ದಿನರಾತ್ರಿಗಳು*
*ನಿನ್ನ ಕಾಮಿಡಿಗಳನ್ನು ಕಂಡು ಅವಳು ನಗುತ್ತಿದ್ದ ನಿಮಿಷಗಳು*
*ನಿದ್ರೆ ಮಾಡದೆ ನಿನಗಾಗಿ ಕಾದುಕುಳಿತ ರಾತ್ರಿಗಳು*
*ಅವಳಿಗೆ ಸರ್ಪ್ರೈಝಾಗಿ ಅವಳಿಷ್ಟಪಟ್ಟ ಏನಾದರೂ ನೀನು ತೆಗೆದುಕೊಟ್ಟಾಗ ಸಂತೋಷದಿಂದ ಅರಳಿದ ಅವಳ ಮುಖ*
*ನಿನಗೆ ನೋವಾದರೆ ನೋವಾಗುವ ಅವಳ ಮನಸ್ಸು*
*ವಾರೆಗಣ್ಣಿನಿಂದ ನಿನ್ನನ್ನೇ ನೋಡಿ ಸಂತಸಪಡುವ ಅವಳ ಹೃದಯ*
*ನಿನ್ನೊಂದಿಗೆ ಏಕಾಂತದಲ್ಲಿರುವಾಗ ಅವಳ ಮುಖದಲ್ಲಿ ಕಾಣುವ ನಗು*
*ನಿನ್ನೊಂದಿಗೆ ಸುತ್ತಾಡುವಾಗ ಅವಳಲ್ಲುಂಟಾಗುವ ಉಲ್ಲಾಸ*
➖➖➖➖➖➖➖➖
ಒಂದೇ ಒಂದು ನಿಮಿಷ ಇದೆಲ್ಲವೂ ನಿನ್ನ ಮನಸ್ಸಿನಲ್ಲಿ ಬಂದರೆ ಅವಳಿಲ್ಲದೆ ನಿನ್ನ ಜೀವನ ಕೇವಲ ಶೂನ್ಯ ಎಂದು ನಿನಗೆ ಮನದಟ್ಟಾಗಬಹುದು..
ಅವಳೊಂದಿಗಿರುವ ನಿನ್ನ ಪ್ರೀತಿ ಜಾಸ್ತಿಯಾಗಬಹುದು....
〰〰〰〰〰〰〰〰
ಅನು: *ಜಬ್ಬಾರ್ ಸಖಾಫಿ ಕನ್ಯಾನ*
No comments:
Post a Comment