Thursday, November 2, 2017

🔰 *ಬಹ್ರುಲ್ ಉಲೂಂ*🔰
ಪವಿತ್ರ ಸನಿಹದಲಿ ತೆಗೆದ ಧ್ಯೇಯ
🔰   *ಇಹ್ಯಾಉಸ್ಸುನ್ನ*   🔰

*————————————————————*
ಕೇರಳದ ಮಲಪ್ಪುರಂ ಜಿಲ್ಲೆಯ ಒದುಕ್ಕುಙಲ್ ಎಂಬಲ್ಲಿ ಅಹ್ಲುಸ್ಸುನ್ನತಿವಲ್ಜಮಾಅದ ಕೇಂದ್ರ ಬಿಂದುವಾಗಿ ರಾರಾಜಿಸುತ್ತಿರುವ  *ಜಾಮಿಅ ಇಹ್ಯಾಉಸ್ಸುನ್ನ ಅರಬಿಕ್ ಕಾಲೇಜ್* ನ ಕುರಿತು ಒಂದಿಷ್ಟು..........       

*~~~~~~~~~~~~~~~~~~~~~~~*

*ಸಮಸ್ತದ*  ಹಲವಾರು ಉಲಮಾ  ಶಿರೋಮಣಿಗಳ ಗುರುವರ್ಯರಾಗಿದ್ದಾರೆ ಉಸ್ತಾದುಲ್ ಅಸಾತೀದ್ ಎಂದೇ ಖ್ಯಾತರಾದ   *ಶೈಖುನಾ ಬಹ್ರುಲ್ ಉಲೂಂ ಒ.ಕೆ. ಝೈನುದ್ದೀನ್ ಕುಟ್ಟಿ ಮುಸ್ಲಿಯಾರ್ (ನ.ಮ)*.

1956 ರಲ್ಲಿ ಶೈಖುನಾ ನಡೆಸಿದ ಹಜ್ ಕರ್ಮದ ಭಾಗವಾಗಿ ಮದೀನ ರೌಲಾ ಶರೀಫ್ ಝಿಯಾರತ್ ನಡೆಸಲು ಹೋಗಿದ್ದರು.
ಆ ಸಂದರ್ಭದಲ್ಲಿ ಮದೀನಾದ ಮಸ್ಜಿದುನ್ನಭವಿಯ ಸುತ್ತ ಸ್ವಹಾಬಿಗಳು ನಿರ್ಮಿಸಿದ ಮಸೀದಿಗಳನ್ನು ನೋಡಿದರು. ಪವಿತ್ರವಾದ ಇಷ್ಟೊಂದು ದೊಡ್ಡ ಮಸೀದಿ(ಮಸ್ಜಿದುನ್ನಭವಿ)ಯ ಮುಂದೆ
ಈ ಸಣ್ಣ ಮಸೀದಿಗಳ ಅವಶ್ಯಕತೆಯಿರಲಿಲ್ಲವಾದರೂ
ಈ ಮಸೀದಿಯ ಕಾರಣದಿಂದ ಸ್ವರ್ಗದಲ್ಲಿ ಒಂದು ಭವನ ಪಡೆಯಬೇಕೆಂಬ ಆಗ್ರಹದಲ್ಲಾಗಿರಬಹುದು ಸ್ವಹಾಬಿಗಳು ಈ ಮಸೀದಿಗಳನ್ನು ನಿರ್ಮಿಸಳು ಕೈ ಹಾಕಿದ್ದು ಎಂದು ಹೇಳಿದರು.
ನಂತರ ತನಗೂ ಒಂದು ಮಸೀದಿ ನಿರ್ಮಿಸಬೇಕು ಆ ಕಾರಣದಿಂದ ನನಗೂ ಸ್ವರ್ಗದಲ್ಲಿ ಒಂದು ಭವನ ಪಡೆಯಬೇಕೆಂದು ಆಗ್ರಹಿಸಿದ ಶೈಖುನಾ ಮದೀನಾದ ಪ್ರವಾದಿ ಮುಹಮ್ಮದ್ ﷺ ರವರ ಪವಿತ್ರ  ಸನಿಹದಲ್ಲಿ ಮಸೀದಿ ನಿರ್ಮಾಣದ ಧಿಟ್ಟ ನಿರ್ಧಾರವನ್ನು ಕೈಗೊಂಡು ಊರಿಗೆ ಮರಳಿದರು. ತನ್ನಲ್ಲಿದ್ದ ಕೊಂಚ ಹಣವನ್ನು ಹಿಡಿದು ಒದುಕ್ಕುಂಙಲ್ ವೇಂಙರ ದಾರಿಯ ಬಳಿ ಮಸೀದಿ ನಿರ್ಮಾಣಕ್ಕೆ ಕೈ ಹಾಕಿದ ಶೈಖುನಾ ಹಲವು ದಾನಿಗಳ ಸಹಾಯ ಸಹಕಾರದಿಂದ ನಿರ್ಮಾಣ ಪೂರ್ತಿಗೊಳಿಸಿದರು.
1958 ರಮಳಾನ್ ತಿಂಗಳಲ್ಲಿ ಶೈಖುನಾ  ಆ ಮಸೀದಿಯ ಉದ್ಘಾಟನಾ ಕಾರ್ಯಕ್ರಮ ನೆರೆವೇರಿಸಿದರು.
ಸದ್ರಿ ಮಸೀದಿಗೆ ಶಿಲನ್ಯಾಸಗೈದ ಶೈಖುನಾರವರ ಚಿಕ್ಕಪ್ಪರೂ ಆದ ಇರಿಂಙಲ್ಲೂರ್ ಕುಂಞ ಅಹ್ಮದ್ ಮುಸ್ಲಿಯಾರ್ ರವರ ನಿರ್ದೇಶನದಂತೆ ದರ್ಸ್ ಆರಂಭಿಸಬೇಕೆಂಬ ಆಗ್ರಹವಿದ್ದರೂ ಸಾಂಪತ್ತಿಕ ಕೊರತೆಯಿಂದಾಗಿ ದರ್ಸ್ ಯೋಜನೆಯನ್ನು ಮುಂದೂಡಿದ್ದರು.
ಆ ಸಂದರ್ಭದಲ್ಲಿ ಪ್ರಮುಖ ವಿಧ್ವಾಂಸರೂ ಶೈಖುನಾರ ಶಿಷ್ಯರೂ ಆದ ಅಬ್ದುಲ್ ಮಜೀದ್ ಮುಸ್ಲಿಯಾರ್ ರವರು ಯಾವುದೇ ವೇತನ ಆಗ್ರಹಿಸದೆ ಅಲ್ಲಿ ದರ್ಸ್ ನಡೆಸುವ ಅಭಿಲಾಶೆಯನ್ನು ಶೈಖುನಾರ ಮುಂದಿಟ್ಟರು.
ಆ ವಿಷಯ ಕೇಳಿ ತಾನರಿಯದೇ ತನ್ನ ಆಗ್ರಹವನ್ನು ಅಲ್ಲಾಹು ಸಫಲೀಕರಿಸುತ್ತಿದ್ದಾನೆ ಎಂದು ಸಂತೋಷದೊಂದಿಗೆ ಒಪ್ಪಿಗೆ ಸೂಚಿಸಿದರು.
ಶೈಖುನಾರ ಸಹ ಹಾಜಿಯೂ ಆಗಿದ್ದ ಅಬ್ದುಲ್ ಮಜೀದ್ ಮುಸ್ಲಿಯಾರ್ ರವರು ಶೈಖುನಾರ ಬಳಿ ಬಂದು ಹೇಳಿದರು...
ನಾವು ಮದೀನದಲ್ಲಿದ್ದ ಸಂದರ್ಭದಲ್ಲಿ ತನಗೆ ತಾನು ಒಂದು ದೊಡ್ಡ ವಿಧ್ಯಾ ಸಮುಚ್ಛಯದಲ್ಲಿ ಮುದರ್ರಿಸರಾಗಿಯೂ ಆ ಸಮುಚ್ಛಯದ ಹೆಸರೂ ಇಹ್ಯಾಉಸ್ಸುನ್ನ ಎಂದಾಗಿಯೂ ಕನಸು ಕಂಡಿದ್ದೆ.
ಆದ್ಧರಿಂದ ಈ ದರ್ಸಿಗೆ ಇಹ್ಯಾಉಸ್ಸುನ್ನ ಎಂದು ಹೆಸರಿಡುವ ಆಗ್ರಹವನ್ನು ಮುಂದಿಟ್ಟರು.
ಆಗ ಶೈಖುನಾ ರವರು  ಕನಸು ಬಿದ್ದದ್ದು ಮದೀನಾದಲ್ಲಿ ಅಲ್ಲವೇ ಎಂದು ಹೇಳಿ ಆ ಹೆಸರಿಡಲು ಒಪ್ಪಿದರು.
1996ರಲ್ಲಿ ದಿಯೋಬಂದ್ನಲ್ಲಿ ಉನ್ನತ ವ್ಯಾಸಾಂಗ ಮುಗಿಸಿ ಬಂದ ಶೈಖುನಾರ ಶಿಷ್ಯರಲ್ಲಿ ಪ್ರಮುಖರಾದ ರಈಸುಲ್ ಉಲಮಾ ಇ ಸುಲೈಮಾನ್ ಉಸ್ತಾದರು ಇಹ್ಯಾಉಸ್ಸುನ್ನ ಗೆ ಪ್ರಿನ್ಸಿಪಾಲರಾಗಿ ನೇಮಕಗೊಂಡರು. ಅದರೊಂದಿಗೆ ಇಹ್ಯಾಉಸ್ಸುನ್ನದ ಉನ್ನತಿಗೆ ಮತ್ತೊಂದು ಗರಿ ಸಿಕ್ಕಿತು.
ಆದರೆ  ಅದು ಶತ್ರುಗಳ ಕೆಂಗಣ್ಣಿಗೂ ಗುರಿಯಾದದ್ದು ಖೇದಕರ.
ಮುಸ್ಲಿಂ ಲೀಗಿನ ಹಲವು ರಾಜಕೀಯ ಕುತಂತ್ರಿಗಳು ರಾಜಕೀಯ ಬಲದಿಂದ ಇಹ್ಯಾಉಸ್ಸುನ್ನಕೆ ಬೀಗ ಜಡಿಸಿದ್ದು ಕಾಲಕ್ರಮೇಣ ಅವರ ಪರಾಜಯಕ್ಕೆ ನಾಂದಿಯಾಯಿತು.
ತನ್ನ ಪ್ರಧಾನ ಗುರುವರ್ಯರ ಸಂಸ್ಥೆಗೆ ಜಡಿಸಿದ ಬೀಗವನ್ನು ತೆರೆಯಿಸಿದ  ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಇಹ್ಯಾಉಸ್ಸುನ್ನದ ಉನ್ನತಿಗಾಗಿ ಶೈಖುನಾರೊಂದಿಗೆ ಕೈ ಜೋಡಿಸಿದರು.!
ಸಣ್ಣ ಸಿರಾಂಬಿಯಲ್ಲಿ ಆರಂಬಿಸಿದ ಇಹ್ಯಾಉಸ್ಸುನ್ನ ದರ್ಸ್
1990 ರಲ್ಲಿ ಶೈಖುನಾ ಒ.ಕೆ.ಉಸ್ತಾದರು ಮುದರ್ರಿಸರಾಗಿ ಆಗಮಿಸುವುದರೊಂದಿಗೆ ಜಾಮಿಅ ಇಹ್ಯಾಉಸ್ಸುನ್ನ ಅರಬಿಕ್ ಕಾಲೇಜ್ ಎಂಬ ಹೆಸರಲ್ಲಿ ಮುತವ್ವಲ್ ಕೋರ್ಸ್ ಆರಂಭಗೊಂಡು ದೊಡ್ಡ ವಿದ್ಯಾ ಸಮುಚ್ಛಯವಾಗಿ ಮಾರ್ಪಟ್ಟಿತು.
ಪ್ರಸ್ತುತ ಸಂಸ್ಥೆಯ ಪ್ರಿನ್ಸಿಪಾಲರಾದ ರಈಸುಲ್ ಉಲಮಾರನ್ನು ಹಾಗೆಯೇ ಮುಂದುವರಿಯಲು ಸೂಚಿಸಿದ ಶೈಖುನಾ ಮುದರ್ರಿಸರಾಗಿಯೇ ಮುಂದುವರೆದಿದ್ದು ವಿಶೇಷ.
ನಂತರ ಯಾವುದೇ ಅಡೆತಡೆಗಳಿಲ್ಲದೆ ಧಾರ್ಮಿಕ ಶಿಕ್ಷಣ ಕ್ರಾಂತಿ ಸೃಷ್ಚಿಸುತ್ತಿರುವ ಇಹ್ಯಾಉಸ್ಸುನ್ನ ಕೇರಳದಲ್ಲಿಯೇ ಮೊಟ್ಟಮೊದಲ ಬಾರಿಗೆ ಕೈರೋದ ಅಝ್ಹರಿಯ್ಯ ಸಂಸ್ಥೆಯೊಂದಿಗೆ ಅಫ್ಲಿಯೇಟ್ ಮಾಡಿಸಿದ ಸಂಸ್ಥೆ ಎಂಬ ಹೆಮ್ಮೆಗೂ ಪಾತ್ರವಾಗಿದೆ.

ಇಹ್ಯಾಉಸ್ಸುನ್ನ ಗೆ ಇರುವ  ಸಂಭ್ರಮಗಳೆಂದರೆ ಸನದುದಾನ  ಹಾಗು ಮೀಲಾದ್ ಸಮ್ಮೇಳನವಾಗಿದೆ.
1992ರಲ್ಲಾಗಿದೆ ಪ್ರಥಮ ಸನದುದಾನ ನಡೆದದ್ದು.
ಜನಕೂಟವನ್ನು ಒಗ್ಗೂಡಿಸಿ ವಿಜ್ರಂಭನೆಯಿಂದ ನಡೆಸಲು ಶೈಖುನಾರಿಗೆ ಇಷ್ಚವಿರಲಿಲ್ಲ. ಆದ್ದರಿಂದ ಕೆಲವು ಪಂಡಿತರನ್ನು ಹಾಗು ಮುತಅಲ್ಲಿಮರನ್ನು ಒಗ್ಗೂಡಿಸಿ ಸಣ್ಣ ರೂಪದಲ್ಲಿ ನಡೆಸುವುದು ಇಹ್ಯಾಉಸ್ಸುನ್ನದ ವಾಡಿಕೆ.
ಇಂದಿನ ವರೆಗೂ ಅದೇ ರೀತಿ ನಡೆಯುತ್ತಾ ಬಂದಿದೆ.
ಆದರೆ ಪ್ರವಾದಿﷺ ರವರ ಜನ್ಮದಿನದ ಅಂಗವಾಗಿ ನಡೆಸಲ್ಪಡುವ ಮೀಲಾದ್ ಸಮ್ಮೇಳನ ಹಲವಾರು ಉಲಮಾಗಳನ್ನು ಹಾಗು ಜನಕೂಟವನ್ನು ಒಗ್ಗೂಡಿಸಿವಿಜ್ರಂಭನೆಯಿಂದ ಶೈಖುನಾ ಒ.ಕೆ.ಉಸ್ತಾದರ ನೇತೃತ್ವದಲ್ಲಿ ನಡೆಸಲ್ಪಡುತ್ತಿತ್ತು.
ಶೈಖುನಾರ ವಫಾತಿನ ನಂತರಾ ಸಂಸ್ಥೆಯ ರುವಾರಿಯಾದ ರಈಸುಲ್ ಉಲಮಾರ ನೇತೃತ್ವದಲ್ಲಿ ನಡೆಸಲಾಗುತ್ತಿದೆ.
ಅದೇ ರೀತಿ ಈ ವರ್ಷದ ಮೀಲಾದ್ ಸಮ್ಮೇಳನವು  *ಪುಣ್ಯ ಪ್ರವಾದಿ ﷺ ತೆರೆಗೆ ಕೊನೆಯಿಲ್ಲದ ಸ್ನೇಹ ಪ್ರಪಂಚ*  ಎಂಬ ಧ್ಯೇಯದೊಂದಿಗೆ 2017ಡಿಸಂಬರ್ 15,16,17 ದಿನಾಂಕಗಳಲ್ಲಿ ದ್ಸಿಕ್ರ್  ಹಲ್ಕಾ,ಮೌಲಿದ್ ಮಜ್ಲಿಸ್,ಧ್ವಿದಿನ ಪ್ರಭಾಷಣ,ಮೀಲಾದ್ ಫೆಸ್ಟ್ ,ಮೀಲಾದ್ ರ್ಯಾಲಿ,ಹುಬ್ಬುರ್ರಸೂಲ್ ಸಮ್ಮೇಳನ,ಮುಂತಾದ ಕಾರ್ಯಕ್ರಮಗಳೊಂದಿಗೆ ಜರಗಳಿದೆ .ಪ್ರಸ್ತುತ ಕಾರ್ಯಕ್ರಮಕ್ಕೆ ಇಹ್ಯಾಉಸ್ಸುನ್ನದಲ್ಲಿ ಕನ್ನಡ ಡಿಂಡಿಮವ ಭಾರಿಸಿ ಕರ್ನಾಟಕದ ಖ್ಯಾತಿಯನ್ನು ಬಾನೆತ್ತರಕ್ಕೇರಿಸಿದ ವಿದ್ಯಾರ್ಥಿ ಸಂಘಟನೆಯಾದ *(KSA)ಇಶಾಅತುಸ್ಸುನ್ನ ಕರ್ನಾಟಕ ಸ್ಟೂಡೆಂಟ್ಸ್ ಅಸೋಸಿಯೇಷನ್*  ನ ಪರವಾಗಿ ಎಲ್ಲಾ ಮುಸ್ಲಿಂ ಬಾಂಧವರಿಗೆ *ಉಸ್ತಾದುಲ್ ಅಸಾತೀದ್ ನಗರಕ್ಕೆ  ಹೃದಯಂತರಾಳದಿಂದ ಸ್ವಾಗತಕೋರುವ......*

*ಅಲ್ಲಾಹು ನಮ್ಮೆಲ್ಲಾ ಉಸ್ತಾದರುಗಳಲ್ಲಿ ಮರಣ ಹೊಂದಿದವರ  ದರಜವನ್ನು ಉತ್ತುಂಗಕ್ಕೇರಿಸಿ.. ಜೀವಿಸುತ್ತಿರುವವರಿಗಿ ಪೂರ್ಣ ಆಫಿಯತ್ತಿನೊಂದಿಗೆ ಧೀರ್ಘಾಯಸ್ಸು ನೀಡಿ ಅನುಗ್ರಹಿಸಲಿ.....ಆಮೀನ್*

🅱Ⓜ♑

⚜ *ಬಿ.ಎಂ.ನೌಫಲ್* ⚜
*~~~~~~~~~~~~~~~~~~~~~~~*
💐💐💐💐💐💐💐💐💐💐💐
📢📢📢📢📢📢📢📢📢📢
*ಜಾಮಿಅ ಇಹ್ಯಾಉಸ್ಸುನ್ನ ಅರಬಿಕ್ ಕಾಲೇಜ್*
ಒದುಕ್ಕುಂಙಲ್ >ಮಲಪ್ಪುರಂ >ಕೇರಳ 

*ಮೀಲಾದ್ ಮಹಾ ಸಮ್ಮೇಳನ*

2⃣0⃣1⃣7⃣ ಡಿಸಂಬರ್
1⃣5⃣ 1⃣6⃣ 1⃣7⃣     
    ಶುಕ್ರ       ಶನಿ       ರವಿ

@ಉಸ್ತಾದುಲ್ ಅಸಾತೀದ್ ನಗರ   

ಬನ್ನಿರಿ..ಸಹಕರಿಸಿ..ವಿಜಯಗೊಳಿಸಿರಿ..
🌷🌷🌷🌷🌷🌷🌷🌷🌷🌷🌷

No comments:

Post a Comment