Wednesday, November 1, 2017

*ಶಿರ್ಕ್ ಅಂದರೆ ಏನು?*

ಶಿರ್ಕ್ ಅಂದರೆ, "ಸರ್ವ ಶಕ್ತ ಎಂಬ ಅಲ್ಲಾಹನ ವಿಶೇಷತೆಯಲ್ಲಿ ಇತರರನ್ನು ಸಹ ಭಾಗಿಗಳಾಗಿ ಸಂಕಲ್ಪಿಸುವುದಾಗಿದೆ". ಅಂದರೆ, ಅಲ್ಲಾಹನೊಂದಿಗೆ, ಅಲ್ಲಾಹನ ಅದೇ ಶಕ್ತಿ ಮತ್ತೊಬ್ಬ ಸೃಷ್ಟಿಯಲ್ಲಿ ಇದೆ ಎಂಬ ವಿಶ್ವಾಸ ತಾಳುವುದಾಗಿದೆ ಶಿರ್ಕ್.

"ಶಿರ್ಕ್" ವಿಶ್ವಾಸದಿಂದ ಉದಯಿಸುತ್ತದೆಯೇ ಹೊರತು, ಬಾಹ್ಯ ಚಟುವಟಿಕೆಗಳಿಂದಲ್ಲ. ಬಾಹ್ಯ ಚಟುವಟಿಕೆಗಳಿಂದ ಒಂದೋ ಹರಾಂ ಆಗಿ ಬರಬಹುದು. ಆದರೆ, ಶಿರ್ಕ್ ನ ವಿಶ್ವಾಸ ಇಲ್ಲದಿದ್ದಾಗ ಅದು ಶಿರ್ಕ್ ಆಗಲು ಸಾದ್ಯವಿಲ್ಲ.

ಒಬ್ಬ ವ್ಯಕ್ತಿ ಅನ್ಯ ಧರ್ಮೀಯರು ಆರಾಧಿಸುವ ವಸ್ತುವಿನ ಮುಂದೆ ನಿಂತ ಮಾತ್ರಕ್ಕೆ ಅದರಲ್ಲಿ ಶಿರ್ಕ್ ಬರುವುದಾದರು ಹೇಗೆ?
 ಹಾಗೆ ನಿಂತ ಮಾತ್ರಕ್ಕೆ ಶಿರ್ಕ್ ಆರೋಪಿಸುವುದಾದರೆ, ಆರೋಪಿಸುವವರ ಅರ್ಥದಲ್ಲಿ  ಶಿರ್ಕ್ ನ ತಹ್ರೀಫ್ (ವ್ಯಾಖ್ಯೆ) ಏನು?

ಮನಸ್ಸಲ್ಲಿ ಶಿರ್ಕ್ ನ ವಿಶ್ವಾಸ ಇಲ್ಲದಿದ್ದಾಗ, ಕೇವಲ ಬಾಹ್ಯ ಚಟುವಟಿಕೆಯ ಆಧಾರದಲ್ಲಿ ಒಬ್ಬರ ಮೇಲೆ ಶಿರ್ಕ್ ಆರೋಪಿಸಿದರೆ, ಅದರ ವಿಧಿ ಏನು?  ಇದೊಂದು ಗಂಭೀರ ಆರೋಪವಾಗಿದೆ. ವಿನಾಕಾರಣ ಒಬ್ಬರ ಮೇಲೆ ಶಿರ್ಕ್ ಆರೋಪಿಸುವುದನ್ನು ಇಸ್ಲಾಂ ಕಠಿಣವಾಗಿ ವಿರೋಧಿಸುತ್ತದೆ.

"ಒಬ್ಬ ವ್ಯಕ್ತಿಯ ಮೇಲೆ ಕಾಫಿರ್ ಆರೋಪ ಹೊರಿಸಿದರೆ, ಆರೋಪಿಸಲ್ಪಟ್ಟ ವ್ಯಕ್ತಿ ಕಾಫಿರ್ ಅಲ್ಲದಿದ್ದರೆ, ಆರೋಪಿಸಿದವನು ಕಾಫಿರ್ ಆಗುತ್ತಾನೆ" ಎಂಬ ಪ್ರವಾದಿ ﷺ ರ ವಚನವನ್ನು ನಾವು ಮರೆಯಬಾರದು.
ತಪ್ಪು ಯಾರು ಮಾಡಿದರೂ ತಪ್ಪೇ. ತಪ್ಪನ್ನು ತಪ್ಪಾಗಿ ಕಾಣಬೇಕೇ ಹೊರತು ಶಿರ್ಕ್ ಆರೋಪಿಸಬಾರದು. ಒಬ್ಬರ ಮೇಲೆ ವ್ಯಕ್ತಿ ವೈರಾಗ್ಯಕ್ಕಾಗಿ, ಬಾಯಿಗೆ ಬಂದಹಾಗೆ ನಾವು ಬೊಗಳಿದರೆ, ಅದರಿಂದ ನಮ್ಮ ಪರಲೋಕ ಜೀವನಕ್ಕೆ ತೊಡಕೇ ಹೊರತು, ಆರೋಪಿಸಲ್ಪಟ್ಟವರಿಗೇನೂ ನಷ್ಟವಿಲ್ಲ.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment