Sunday, October 29, 2017

*ಮೌಲಿದ್ ಆಚರಿಸುವುದು ಶಿರ್ಕೇ ?*

✍ *ಎಂ ಹೆಚ್ ಹಸನ್ ಝುಹ್ರೀ, ಮಂಗಳಪೇಟೆ*

ಭಾಗ 1⃣

ಸಾಧಾರಣವಾಗಿ ಸಲಪಿಗಳು ಮೌಲಿದ್ ಕುರಿತು ಮಾಡುವ ಆರೋಪ *""ಮೌಲಿದ್ ನಲ್ಲಿ ಶಿರ್ಕ್ ಇದೆ. ಅದಕ್ಕಾಗಿ ಅದನ್ನು ಓದಬಾರದು""*

ಶಿರ್ಕ್ ಇಲ್ಲದ ಮೌಲಿದ್ ಓದಬಹುದೇ ? ಎಂದು ಕೇಳಿದರೆ ಸಲಪಿ ಅದಕ್ಕೂ ಇಲ್ಲ ಎನ್ನುತ್ತಾನೆ.

ವಾಸ್ತವದಲ್ಲಿ ಮೌಲಿದ್ ಓದುವುದನ್ನೇ ಸಲಪಿ ವಿರೋಧಿ ಸುತ್ತಾನೆ. *ಮೌಲಿದ್ ವಿರೋಧಿ ಸಲು ಶಿರ್ಕ್ ಒಂದು ನೆಪ ಮಾತ್ರ. ಶಿರ್ಕ್ ಇದ್ದರು ಇಲ್ಲದಿದ್ದರು ಸಲಪಿಗೆ ಮೌಲಿದ್ ಅಲರ್ಜಿ ಯಾಗಿದೆ.* ಜನರನ್ನು ಮಂಕು ಮರುಳ ಮಾಡಲು ಶಿರ್ಕ್ ಎಂಬ ಮುದ್ರೆ ಒತ್ತುತ್ತಾರೆ.

*ಸುನ್ನೀ ಗಳು ಓದುವ ಮೌಲಿದ್ ನಲ್ಲಿ ಶಿರ್ಕ್ ಇದೆಯೇ ?*
ಖಂಡಿತಾ ಇಲ್ಲ. ಸಲಪಿ ಖುರ್ ಆನ್, ಹದೀಸ್ ಕಲಿತಿಲ್ಲ. ಇಮಾಮರುಗಳ ಗ್ರಂಥ ಗಳ ಬಗ್ಗೆ ಅರಿವೇ ಇಲ್ಲ. *ಗೂಗಲ್ ನಲ್ಲಿ ಸರ್ಚ್ ಮಾಡಿ ಅಥವಾ ಯಾರೋ ಬರೆದಿಟ್ಟ ಪುಸ್ತಕಗಳನ್ನು ಓದಿ ಶಿರ್ಕ್ ,ಶಿರ್ಕ್ ಎನ್ನುತ್ತಾನೆ*

ಮೌಲಿದ್ ಗೆ ವಿರುದ್ಧ ವಾಗಿ ಸಲಪಿ ತೋರಿಸುವ ಆಯತ್,ಹದೀಸ್ ಗಳಿಗೂ ಮೌಲಿದ್ ನಲ್ಲಿರುವ ವಿಷಯಗಳಿಗೂ ಯಾವುದೇ ಸಂಬಂಧ ವಿಲ್ಲ.

ಶಿರ್ಕ್ ,ಶಿರ್ಕ್ ಎಂದು ದಿನಕ್ಕೆ ಸಾವಿರಾರು ಬಾರಿ ಹೇಳುವ ಸಲಪಿಯೊಂದಿಗೆ ಶಿರ್ಕ್ ಏನೆಂದು ಕೇಳಿ. ಆತನಿಗೆ ಅದು ಗೊತ್ತಿಲ್ಲ. ಶಿರ್ಕ್ ಏನೆಂದು ಕಲಿಯದ, ತಿಳಿಯದ ಸಲಪಿ ಯ ಶಿರ್ಕ್ ಬೋಧನೆ ಹೇಗಿರಬಹುದೆಂದು ಊಹಿಸಿ.

ಮೌಲಿದ್ ನಲ್ಲಿ ಶಿರ್ಕ್ ಇದೆಯೇ ಎಂಬುದು ಅರ್ಥವಾಗ ಬೇಕಿದ್ದರೆ ಶಿರ್ಕ್ ಏನೆಂದು ತಿಳಿಯಬೇಕು.

ಇನ್ಸಾ ಅಲ್ಲಾಹ್ ಮುಂದಿನ ಭಾಗದಲ್ಲಿ ಶಿರ್ಕ್ ಏನೆಂದು ವಿವರಿಸುತ್ತೇನೆ.

*ಕೆಡುಕಿನ ವಿರುದ್ಧ ಅಕ್ಷರ ಸಮರ*

( 📚 *ಸುಸಾಮ*📚
🌐🌐🌐🌐🌐🌐🌐

No comments:

Post a Comment