Tuesday, October 31, 2017

*SSF ಕಾರ್ಯಕ್ರಮದಲ್ಲಿ ಭಾಗವಹಿಸಿದವರು ತಪ್ಪು ಮಾಡಬಾರದಂತೆ..!*

SSF ನ ವೇದಿಕೆಯಲ್ಲಿ ಭಾಗವಹಿಸಿದ ವ್ಯಕ್ತಿಯೊಬ್ಬರು ತಪ್ಪು ಮಾಡಿದ್ದಾರಂತೆ. ಅದನ್ನು SSF ನ ತಲೆ ಮೇಲೆ ಕಟ್ಟಲು ಮತ್ತು ಅದಕ್ಕೆ SSF ನ್ನು ಹೊಣೆಯನ್ನಾಗಿಸಲು ಕೆಲವರು ಶ್ರಮಿಸುತ್ತಿದ್ದಾರೆ.

ಹಾಗಾದರೆ, ತಪ್ಪು ಮಾಡುವ ವ್ಯಕ್ತಿಯೊಂದಿಗೆ ಮಾತನಾಡಬಾರದಾ? ವೇದಿಕೆಗೆ  ಕರೆಯಬಾರದಾ? ವೇದಿಕೆಯಲ್ಲಿ ಭಾಗವಹಿಸಿದವರು ತಪ್ಪು ಮಾಡಬಾರದಾ? ಹೌದಾಗಿದ್ದರೆ, ಅದಕ್ಕೆ ಸೂಕ್ತ ಆಧಾರವನ್ನು ಕೊಡಬೇಕೆಂದು ಈ ಟೀಕಾಕಾರರಲ್ಲಿ ವಿನಂತಿಸುತ್ತಿದ್ದೇವೆ.

ಒಂದು ಊರಿನಲ್ಲಿ ಕಾರ್ಯಕ್ರಮ ನಡೆಯುವಾಗ, ಸ್ವಾಭಾವಿಕವಾಗಿ ಸ್ಥಳೀಯ ನಾಯಕರನ್ನು, ರಾಜಕೀಯ ಪ್ರಮುಖರನ್ನು ಕರೆಯಬೇಕಾಗುತ್ತದೆ. ಅದು ಇಂತಿಂತಹ ಪಕ್ಷದ ಅಭ್ಯರ್ಥಿಗಳೆಂದ ನೆಲೆಯಲ್ಲೋ, ಅವರ ಪೂರ್ವಪರ ನೋಡಿಯೋ ಅಲ್ಲ. ಇನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲ್ಪಡುವ ವ್ಯಕ್ತಿ ತಪ್ಪು ಮಾಡಿದ್ದರೆ, ಅದಕ್ಕೆ ಅವರು ಹೊಣೆಯೇ ಹೊರತು, ಕರೆಯಲ್ಪಡುವವರಾಗುವುದಿಲ್ಲ.
ಇನ್ನು, ತಪ್ಪು ಮಾಡಿದ ವ್ಯಕ್ತಿಯನ್ನು ವೇದಿಕೆಗೆ ಆಹ್ವಾನಿಸಬಾರದೆಂದಾದರೆ, ಇಲ್ಲಿ ಯಾರೂ ಯಾರನ್ನೂ ತಮ್ಮ ವೇದಿಕೆಗೆ ಆಹ್ವಾನಿಸುವಂತಿಲ್ಲ. ಯಾಕೆಂದರೆ, ಪ್ರವಾದಿಗಳ ಹೊರತು, ಈ ಭೂಮಿ ಮೇಲಿರುವ ಪ್ರತಿಯೊಬ್ಬ ಮನುಷ್ಯ ಕೂಡಾ ತಪ್ಪು ಮಾಡುವವರೇ ಆಗಿರುತ್ತಾರೆ.

*ವೇದಿಕೆಗೆ ಕರೆಯಬಾರದವರು ಯಾರೆಂದರೆ, ಮಹಿಳೆಯರು,  ನೂತನವಾದಿಗಳು ಇತ್ಯಾದಿ. ಯಾಕೆಂದರೆ, ಮಹಿಳೆಯರು ಅನ್ಯ ಪುರುಷರು ಇರುವಲ್ಲಿ ಬೆರೆತು ಇರುವುದನ್ನು ಮತ್ತು ವೇದಿಕೆ ಏರುವುದನ್ನು ಇಸ್ಲಾಂ ನಿಷಿದ್ಧ ಗೊಳಿಸಿದೆ. ಅದೇ ರೀತಿ ನೂತನವಾದಿಗಳನ್ನು ವೇದಿಕೆಗೆ ಆಹ್ವಾನಿಸಿದರೆ, ಅದು ಅವರನ್ನು ಗೌರವಿಸಿದಂತೆ. "ಯಾರಾದರು ನೂತನವಾದಿಗಳನ್ನು ಗೌರವಿಸಿದರೆ, ಅವನು ಧರ್ಮವನ್ನು ಒಡೆದವನಾಗುವನು" ಎಂಬುದು ಪ್ರವಾದಿ ﷺ  ರ ಹದೀಸ್ ಆಗಿದೆ. ಆ ಕಾರಣಕ್ಕೆ ನೂತನವಾದಿಗಳನ್ನು ವೇದಿಕೆಗೆ ಆಹ್ವಾನಿಸಬಾರದು.*

ತಪ್ಪು ಮಾಡಿದ ವ್ಯಕ್ತಿ SSF ನ ವೇದಿಕೆಯಲ್ಲಿ ಭಾಗವಹಿಸಿದ್ದು ತಪ್ಪು ಎಂದಾದರೆ, ಅದಕ್ಕಿಂತಲೂ ಸಾವಿರ ಪಟ್ಟು ಅಧಿಕ ತಪ್ಪು,
👉🏽 ಉಲಮಾ-ತಂಙಳ್ ಗಳನ್ನು ನಿಂದಿಸುವ, ಇಮಾಮರುಗಳ ಕಿತಾಬ್ ಗಳನ್ನು ಎಸೆದ, ಖುರ್ಆನಿಗೆ ಬೆಂಕಿಕೊಟ್ಟ, ಮದೀನದ ಹಸಿರು ಖುಬ್ಬಾವನ್ನು ಹೊಡೆದು ಉರುಳಿಸುತ್ತೇವೆಂದು ಶಪಥ ಮಾಡಿದ, ದರ್ಗಾಗಳನ್ನು ಹಾನಿಗೊಳಿಸಿದ, ಸುನ್ನಿಗಳ ಮಕ್ಕಳನ್ನು ಕತ್ತುಹಿಸುಕಿ ಕೊಂದು ಹಾಕಬೇಕೆಂದು ಭಾಷಣ ಮಾಡಿದವರನ್ನು ತಮ್ಮ ವೇದಿಕೆಗೆ ಆಹ್ವಾನಿಸಿದ್ದು ಮತ್ತು, ಅಂತಹವರನ್ನು ತಮ್ಮ ಸಂಘಟನೆಯ ಮೆಂಬರಾಗಿ ಸ್ವೀಕರಿಸಿದ್ದೂ ಆಗಿದೆ. ಇಷ್ಟೊಂದನ್ನು ತಮ್ಮ ಬತ್ತಳಿಕೆಯಲ್ಲಿ ಇಟ್ಟುಕೊಂಡವರಿಗೆ, SSF ಬಗ್ಗೆ ಮಾತೆತ್ತುವ ಅರ್ಹತೆ ಇದೆಯೇ.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

No comments:

Post a Comment