Friday, November 3, 2017

*ಸಂದೇಶಗಳನ್ನು ರವಾನಿಸುವವರೇ ಎಚ್ಚರಿಕೆ..!!!*

ಎಲ್ಲರ ಕೈಯಲ್ಲಿಯೂ ಸ್ಮಾರ್ಟ್‌‌ಫೋನ್.
ನೆಟ್‌ವರ್ಕ್‌ ಕಂಪನಿಗಳಿಂದ ಭರ್ಜರಿ ಆಫರ್.
ಎಷ್ಟು ಬೇಕಾದರು call ಮಾಡಬಹುದು.
ತಿಂಗಳಿಗೆ 100MB ಉಪಯೋಗಿಸುತ್ತಿದ್ದವನಿಗೆ
ದಿನಕ್ಕೆ 1GB' ಸಿಕ್ಕಿದರೂ ಸಾಕಾಗುತ್ತಿಲ್ಲ.
ಕೈಯಂಗಳದಲ್ಲಿ ಎಲ್ಲವೂ ಲಭ್ಯ.
'ಆಫರ್‌'ನೀಡಿ ಮನುಷ್ಯನನ್ನು ಮಂಗನಂತೆ ಮಾಡಲು Port ಸೌಲಭ್ಯ.
ಜೀವನ ಸಾಗುತ್ತಲಿದೆ.
ಗುರಿಯಿಲ್ಲದ ಬಿಲ್ಲಿನಂತೆ.
ಎಲ್ಲೆಲ್ಲಿಯೂ ವಾಟ್ಸಪ್, ಫೇಸ್‌ಬುಕ್, ಟ್ವಿಟರ್....
ಹಗಲು ರಾತ್ರಿ ಆನ್‌ಲೈನ್‌.
ಬ್ರೇಕಿಂಗ್ ನ್ಯೂಸ್'ಗಳ ಸತ್ಯಾಸತ್ಯಗಳನ್ನು ತಿಳಿಯದಿದ್ದರೂ ಇತರರಿಗೆ ಮೊದಲು ರವಾನಿಸುವವನು ನಾನಾಗಬೇಕು ಎಂಬ ಹುಚ್ಚು.

ಕಳೆದೊಂದು ದಿನ ಪವಿತ್ರ ಝಂಝಂ'ನ 445 ಅಡಿ ಆಳಕ್ಕೆ ಕ್ಯಾಮೆರಾ ಇಳಿಸುವ ವೀಡಿಯೊ.
ಮಾಶಾ‌ಅಲ್ಲಾಹ್ ಎಂಬ ಕಮೆಂಟ್‌ನೊಂದಿಗೆ ರವಾನಿಸುವ ಸ್ಪರ್ಧೆ.
ಆದರೆ ಪವಿತ್ರ ಝಂಝಂ ಬಾವಿಯ ನಿಜವಾದ ಆಳದ ಕುರಿತು ಯಾರುಕೂಡ ಚಿಂತಿಸಲಿಲ್ಲ.
30 ಮೀಟರ್‌ಗಿಂತಲೂ ಕಡಿಮೆ.
ಅಥವಾ 100 ಅಡಿಗಿಂತಲೂ ಕಡಿಮೆ.
ಇದರ ಕುರಿತು ಒಂದಿಷ್ಟು ಜ್ಞಾನವಿಲ್ಲದವ ಈಗಲೂ ಹಲವಾರು ಗ್ರೂಪ್‌ಗಳಿಗೆ ಕ್ಯಾಮೆರಾ ಇಳಿಸುತ್ತಿದ್ದಾನೆ.

ಕೇರಳದ ಕಾಲಿಕಟ್‌ನಲ್ಲಿ ಕಳೆದ ವರ್ಷ...
ತನ್ನ ಪ್ರೇಮದ ಹುಚ್ಚಿಗೆ ಸಿಲುಕದ ಹೆಣ್ಣೊಂದರ ಫೋಟೋ ಇತರ ಧರ್ಮಿಯನ ಜೊತೆ ಪರಾರಿ ಎಂಬ ಕಮೆಂಟ್‌ನೊಂದಿಗೆ ಅವನು ರವಾನೆಮಾಡುತ್ತಾನೆ.
ಗ್ರೂಪ್‌ನಿಂದ ಗ್ರೂಪ್‌ಗೆ ಮಂಗನಂತೆ ಜಿಗಿದ ಸಂದೇಶ ರಾತ್ರಿಯ ಇರುಳು ಬೆಳಕಾಗುವಷ್ಟರಲ್ಲಿ ಗಲ್ಫ್‌ನಲ್ಲಿರುವ ತಂದೆಯ ವಾಟ್ಸ‌ಪ್‌ಗೆ ತಲುಪುತ್ತದೆ.
ಸಿಡಿಲು ಬಡಿದಂತೆ ಬಂದ ವಾರ್ತೆಯ ನಿಜ ತಿಳಿಯಲು ಮನೆಗೆ ಫೋನ್ ಮಾಡಿದಾಗ ಏನೂ ತಿಳಿಯದ ಮುಗ್ಧ ಮಗಳು ಇನ್ನು ಕೂಡಾ ನಿದ್ರೆಯಿಂದ ಎದ್ದಿರಲಿಲ್ಲ.
ಆ ಕುರಿತು ಸೈಬರ್ ಪೋಲಿಸ್‌ಗೆ ದೂರು ನೀಡಲು ಗಲ್ಫ್‌ನಿಂದ ಬಂದ ತಂದೆಯ ಮುಂದೆ ಮಾನಹಾನಿ ಮೂಲಕ ಆತ್ಮಹತ್ಯೆ ಮಾಡಿಕೊಂಡ ಮುದ್ದು ಮಗಳ ಮಯ್ಯಿತ್.
ಈಗ ಮಾನಸಿಕ ರೋಗದ ಲಕ್ಷಣಗಳಿಂದ ಆ ತಂದೆ ಮಾನಸಿಕ ಆರೋಗ್ಯ ಕೇಂದ್ರದಲ್ಲಿದ್ದಾರಂತೆ.
ಯಾವುದೋ ಒಬ್ಬ ಕಾಮಹುಚ್ಚನ ಸಂದೇಶ ಒಂದು ಕುಟುಂಬವನ್ನೇ ನಾಶಮಾಡಿದೆ.
ಅವಳನ್ನು ಕೊಂದವರು ಯಾರು..?
ನಮ್ಮಂತವರ ಷೇರುಗಳಾಗಿರಬಹುದಲ್ಲವೇ..?
ಇದೊಂದು ಉದಾಹರಣೆ ಮಾತ್ರ.

ಅಂತಹ ಅದೆಷ್ಟೋ ಸಂದೇಶಗಳನ್ನು ದಿನನಿತ್ಯ ನಾವು ನೋಡುತ್ತೇವೆ.
ನೈಜತೆಯ ಅರಿವಿಗೆ ನಿಲ್ಲದೆ ರವಾನಿಸಿತ್ತೇವೆ ಅದರಿಂದಾಗಿ
ಅದೆಷ್ಟೋ ಜನರ ಮಾನ ಹರಾಜಾಗಿರಬಹುದು..?

ಸೇಫ್ಟಿಪಿನ್ ನುಂಗಿದ ಮಗು,
ಖಬರ್‌ನಲ್ಲಿ ಹೆಬ್ಬಾವು,
ಆಪರೇಷನ್‌ಗೆ ವಾಟ್ಸಪ್ ಕಂಪನಿ ಹಣ ಕೊಡುವುದಂತೆ,
ಸಮುದಾಯದ ನಡುವೆ ಮಾನ್ಯತೆಯಲ್ಲಿ ಜೀವನ ನಡೆಸುವವರ ಕುರಿತು ಇಲ್ಲಸಲ್ಲದ ಮಸಾಲೆ ಸೇರಿಸಿದ ಸಂದೇಶ,
ಧಾರ್ಮಿಕ ವಿಚಾರಗಳಲ್ಲಿ ಎಗ್ಗಿಲ್ಲದೇ ಫತ್ವ ನೀಡುವ ಜಾಹಿಲ್‌ಗಳ ಸಂದೇಶ....
ನೆರೆಮನೆಯವನ ಮರಣಕ್ಕೆ ವಾಟ್ಸಪ್‌ನಲ್ಲಿ ಕುಳಿತು ಇನ್ನಾಲಿಲ್ಲಾಹ್ ಟೈಪಿಸಿ ತಅ್‌ಝಿಯತ್ ಮುಗಿಸಿ ನಿಟ್ಟುಸಿರುಬಿಡುತ್ತಿರುವ ಮಾನವ.......

ಒಳಿತುಗಳು ಮರೀಚಿಕೆಯಾಗುತ್ತಿರುವ ನ್ಯೂಜನರೇಷನ್ ಯುಗದಲ್ಲಿ ಮಾದರಿಯಾಗೋಣ ಬನ್ನಿ...

قال النبي صلى الله عليه وسلم: كَفَى بِالْمَرْءِ إِثْمًا أَنْ يُحَدِّث بِكُلِّ مَا سَمِعَ (أَخْرَجَهُ مُسْلِم )

🖋ಕಾತಿಬ್ ಕೂರ್ಗ್..

No comments:

Post a Comment