ಝಿಯಾರತ್ತ್ ಕೇಂದ್ರ
👉�14👈
🌷ಭಾಗ 02🌷
*ಖುತುಬುಲ್ ಆಲಂ ಸಿ. ಎಂ ವಲಿಯುಲ್ಲಾಹಿ ಮಡವೂರ್, (ಖ:ಸಿ) ಕಲ್ಲಿಕೋಟೆ.*
〰〰〰〰〰〰〰
✍ ಗಫೂರ್ ಬಾಯಾರ್
〰〰〰〰〰〰〰
🕌ತದನಂತರ ಯಾತ್ರೆಗಳ ಕಾಲವಾಗಿತ್ತು.
ಬಹು ಕಾಲ ಪೂರ್ವಿಕರಾದ ಪುಣ್ಯಾತ್ಮರುಗಳ ಮಖ್ಬರಗಳನ್ನು ಸಂದರ್ಶಿಸುವುದು ವಾಡಿಕೆ ಆಗಿತ್ತು. ಕೆಲವು ಕಾಲ ಆರಾಧನಾ ಕರ್ಮಗಳಿಗಾಗಿ ವನ ಮತ್ತು ಗುಡ್ಡಕಾಡುಗಳತ್ತ ಸಾಗುತ್ತಿದ್ದರು. ಕೆಲವು ಸಂದರ್ಭದಲ್ಲಿ ವನಾಂತರದಲ್ಲಿ ವನ್ಯ ಜೀವಿಗಳ ನಡುವೆ ಕಂಡಿರುದಾಗಿ ಕೆಲವರು ತಮ್ಮಊರ ಸಾರ್ವಜಿನಿಕರಿಗೆ ಮಾಹಿತಿ ನೀಡುತ್ತಿದ್ದರು.
ಕೊನೆಯ ಕಾಲದಲ್ಲಿ ಸುಮಾರು 10 ವರ್ಷಗಳ ಕಾಲ ಕಲ್ಲಿಕೋಟೆಯ ಮಮ್ಮುಟ್ಟಿ ಮೂಪ ಎಂಬವರ ನಿವಾಸದಲ್ಲಿ ವಾಸವಾಗಿದ್ದರು. ಆ ವಾಸ ಸ್ಥಳಕ್ಕೆ ನೂರಾರು ಜನರು ಮಾಹಾನುಭಾವರು ಆಶೀರ್ವಾದ ಪಡೆಯಲು ಬಂದು ಹೋಗುತ್ತಿದ್ದರು. ಸಂದರ್ಶಿಸಲು ಬಂದು ಹೋಗುವವರಿಗೆ ಸಂತೋಷ ಮತ್ತು ಸಾಂತ್ವನ ನೀಡುತ್ತಿದ್ದರು.
ಕೆಲವು ಸಂದರ್ಭಗಳಲ್ಲಿ ಸಂದರ್ಶಕರೊಂದಿಗೆ ದೂರವಿದ್ದು ಆರಾಧನಾ ಕರ್ಮಗಲ್ಲಿ ನಿರತರಾಗುತ್ತಿದ್ದರು. ಈ ಸಮಯಗಳಲ್ಲಿ ಹಲವು ಪವಾಡಗಳನ್ನು ಕಾಣಲು ಸಾಧ್ಯವಾಗುತ್ತಿತು.
ಮಹಾನುಭಾವರಿಗೆ ಹತ್ತಿರದ ಬಾಂಧವ್ಯ ಇರುವರೊಂದಿಗೆ ಸಂದರ್ಶನಾವಕಾಶ ನಿರಾಕರಿಸುತ್ತಿರಲಿಲ್ಲ. ಉದಾಹರಣೆಗೆ *ತಾಜುಲ್ ಉಲಮಾ (ಖ:ಸಿ), ಅವೇಲತ್ತ್ ತಂಗಳ್ (ಖ:ಸಿ), ಕಾಂತಪ್ಪುರಂ ಎ.ಪಿ ಉಸ್ತಾದ್, ಮೊದಲಾದವರು.*
ಮಹಾನುಭಾವರ ಪ್ರಾಯ 63 ರ ಸಂದರ್ಭದಲ್ಲಿ ಆರೋಗ್ಯ ತುಂಬಾ ಕ್ಷೀಣಿಸಲ್ಪಟ್ಟಿತ್ತು. ಈ ಸಂದರ್ಭದಲ್ಲಿ ಜನ ಸಂಪರ್ಕವನ್ನು ಸಂಪೂರ್ಣವಾಗಿ ನಿಲ್ಲಿಸಿದರು.
ಕೊನೆ ಸಂದರ್ಭದಲ್ಲಿ ಅನಾರೋಗ್ಯ ಹೆಚ್ಚದಾಗ ಹತ್ತಿರದಲ್ಲಿ ನೆರದಿರುವವರೊಂದಿಗೆ ರಾತ್ತಿಬ್ ಮತ್ತು ದಿಕ್ರ್ ಗಳನ್ನು ಹೇಳಲು ನಿರ್ದೇಶಿಸುತ್ತಿದ್ದರು.
(ಎಪ್ರಿಲ್ 11,1991 ಶುಕ್ರವಾರ) ಹಿಜರಿ ವರ್ಷ 1411 ಶವ್ವಾಲ್ ತಿಂಗಳ 4ರಂದು ಬೆಳಿಗ್ಗೆ 9:15ಕ್ಕೆ ಮಹಾನವರು ಈ ನಶ್ವರ ಲೋಕದಿಂದ ನಮ್ಮನ್ನುಗಲಿದರು.
ಮರಣ ವಾರ್ತೆ ಹರಡುತ್ತಲೇ ನಾನಾ ಭಾಗಗಳಿಂದ ಜನರು ಹರಿದು ಬಂದರು.
ಕಲ್ಲಿಕೋಟೆ ಶೈಖ್ ಮಸೀದಿಯಲ್ಲಿ ಜನಾಝ ನಮಾಜಿನ ನಂತರ, ಮಧ್ಯಾಹ್ನ ಸ್ವದೇಶವಾದ ಮಡವೂರಿಗೆ ಜನಾಝವನ್ನು ಕೊಂಡೊಯ್ಯಲಾಯಿತು. ಅಲ್ಲಿ ಘಟ್ಟಾನು ಘಟ್ಟವಾಗಿ ನಡೆದ ಜನಾಝ ನಮಾಜಿನ ನಂತರ ರಾತ್ರಿ 9 ಘಂಟೆಗೆ, *ಮರ್ಹೂಂ ಅವೇಲತ್ ತಂಗಳ್ (ಖ:ಸಿ) ಹಾಗು ಕಾಂತಪುರಂ ಎ.ಪಿ ಉಸ್ತಾದ್* ಮೊದಲಾದವರು ಸೇರಿ ಜನಾಝವನ್ನು ದಫನ ಮಾಡಿದರು.
ತಂದೆ ಕುಂಞಿ ಮಾಹಿನ್ ಕೋಯ ಮುಸ್ಲಿಯಾರ್ (ಖ:ಸಿ) ರವರ ಮಖ್ಬರದ ಸಮೀಪವಾಗಿದೆ ಮಹಾನವರ ಕೂಡ ಅಂತ್ಯ ವಿಶ್ರಮ.
ಮಹಾನರ ಸ್ಮಾರಕವಾಗಿ ಹಲವಾರು ಸಂಭ್ರಮಗಳು ಇಂದು ಊರಿನ ನಾನಾ ಭಾಗಗಳಲ್ಲಿ ಕಾರ್ಯಾಚರಿಸುತ್ತಿದೆ.
ವಫಾತ್ತಿನ ನಂತರವು ಮಹಾನುಬಾವರ ಕಶ್ಫ್ ಕರಾಮತ್ತಿನಿಂದ ಸಾವಿರಾರು ಜನರಿಗೆ ಸಾಂತ್ವನವಾಗುತ್ತಿದೆ.
ಶೈಖುನಾ ಸಿ.ಎಂ. ವಲಿಯುಲ್ಲಾಹಿಯವರು ಅಂತ್ಯ ವಿಶ್ರಮ ಪಡೆಯುತ್ತಿರುವ ಮಡವೂರ್ ಎಂಬ ಊರು ಇವತ್ತು ಅತೀ ದೊಡ್ಡ ಝಿಯಾರತ್ತ್ ಕೇಂದ್ರವಾಗಿದೆ. ದಿನ ನಿತ್ಯ ಸಾವಿರಾರು ಜನರ ಸಂದರ್ಶನವಾಗಿತ್ತಿದೆ.
ಮಹಾನರ ಬರ್ಕತ್ತಿನಿಂದ ಅಲ್ಲಾಹು ನಮ್ಮೆಲ್ಲರ ಇಹಪರ ಲೋಕ ವಿಜಯಗೊಳಿಸಲಿ.
ಆಮೀನ್..
✍ ~ಗಫೂರ್ ಬಾಯಾರ್~
🕌🕌🕌🕌🕌🕌🕌🕌


No comments:
Post a Comment