Tuesday, October 31, 2017

ಅಬೂ ಶಹೀರ್ ಬರೆದ *"ಪ್ರವಾದಿ ಕಾಲದಲ್ಲೇ ಮದ್ಸ್'ಹಬ್"* ಎಂಬ ಶೀರ್ಷಿಕೆಯಡಿ ಬಂದ ಚರಿತ್ರೆಯಲ್ಲಿ ಪುಟಿದೆದ್ದ ಸಂದೇಹಗಳು...
1) ಆಣೆ ಹಾಕಿ ನಿನ್ನನ್ನು ಮುಟ್ಟುವುದಿಲ್ಲ ಎಂದು ಸ್ವಹಾಬಿ ಪತ್ನಿಯೊಂದಿಗೆ ಹೇಳಿದ ಮಾತಿಗೂ ನಾಲ್ಕು ಅಗ್ರಗಣ್ಯ ಸ್ವಹಾಬಿಗಳು ಹೇಳಿದ ಉತ್ತರಕ್ಕೂ ಸಂಬಂಧವೇನು.?
ಅದೊಂದರಲ್ಲೂ ಆಣೆ ಹಾಕಿದ ಬಗ್ಗೆ ಪರಾಮರ್ಶೆ ಇಲ್ಲವಲ್ಲ.?
ಅವರು ಹೇಳಿದ ಯಾವುದೇ ಮಾತೂ ಅವರ ಉತ್ತರದಲ್ಲಿಲ್ಲ ತಾನೇ.?
2) ಆಣೆ ಹಾಕಿ ಹೇಳುವಾಗ ಅವರ *ಮನಸ್ಸಲ್ಲಿ* ಹಾಗೊಂದು (ಮುಟ್ಟಲಾರೆ ಎಂಬ)ಉದ್ದೇಶ ಅವರಿಗಿಲ್ಲವಾಗಿದ್ದಲ್ಲಿ ಅದರ ಬಗ್ಗೆ ತಲೆ ಕೆಡಿಸಬೇಕಿತ್ತೇ..?
ಈ ಎರಡು ಸಂದೇಹವನ್ನು ನಿವಾರಿಸಿ ಕೊಡಬೇಕಾಗಿ ವಿನಮ್ರ ವಿನಂತಿ..!
🚥🚥🚥🚥🚥🚥🚥🚥🚥
*ಅಸ್ಗರ್ ಅಲಿ ಚಿಕ್ಕಮಗಳೂರು* (ಸೌದಿ ಅರೇಬಿಯ)
🚥🚥🚥🚥🚥🚥🚥🚥🚥

ಉತ್ತರ : *"ಹೀನ್"* ಎಂಬ ಪದದ ಬಗ್ಗೆ ಪರಾಮರ್ಶೆ ಎರಡರಲ್ಲೂ ಇದೆ ತಾನೇ.?
ಪ್ರಸ್ತುತ ಸ್ವಹಾಬಿ ಹೇಳಿದ್ದು *"ಹೀನ್"* ತನಕ ಮುಟ್ಟಲಾರೆ.
ಪ್ರಸ್ತುತ *ಹೀನ್* ಅಂದರೆ ಎಷ್ಟು ವರ್ಷ ಎಂದು ಅವರಿಗೆ ತಿಳಿಯಬೇಕಿತ್ತು.
ಅದು ನಾಲ್ಕು ಅಗ್ರಗಣ್ಯ ಸ್ವಹಾಬಿಗಳು ಖುರ್'ಆನ್ ಆಧಾರ ಮೂಲಕ ಪ್ರಸ್ತುತ ಪದಕ್ಕೆ ನಾಲ್ಕು ಅರ್ಥವನ್ನು ನೀಡಿದರು.(ಸಮರ್ಥಿಸಿದರು)
ಪ್ರವಾದಿಯವರು ಅದನ್ನು ಅಂಗೀಕರಿಸಿ ನಾಲ್ಕರಲ್ಲಿ ಯಾವುದನ್ನು ಬೇಕಾದರೂ ಸ್ವೀಕರಿಸಬಹುದೆಂದರು.

ಇದರಲ್ಲಿ ಇನ್ನೊಂದು ರಹಸ್ಯ ಪಾಠವನ್ನು ಮನವರಿಕೆ ಮಾಡಬೇಕಾಗಿದೆ.
ನಾಲ್ವರು ಸ್ವಹಾಬಿಗಳು ಕ್ರಮಪ್ರಕಾರವಾಗಿ ಸಿಕ್ಕಿದ್ದೂ, ಹೇಳಿಕೆ ನೀಡಿದ್ದೂ (ಜೀವನಪರ್ಯಂತ, ನಲ್ವತ್ತು ವರ್ಷ, ಒಂದು ವರ್ಷ, ಒಂದು ದಿನ)ಕಾಕತಾಳೀಯವೇ.?
ಅದೇ ರೀತಿ ಒಬ್ಬರು ತಿಳಿದ ಶ್ಲೋಕ ಇನ್ನೊಬ್ಬರಿಗೆ ತಿಳಿಯದೇ ಹೋಗಲು ಕಾರಣವೇನು.?
ಇದೆಲ್ಲ ಪ್ರಸಕ್ತವೆನಿಸಿದ ಸಂದೇಹಗಳಾಗಿವೆ.
ಅದಕ್ಕೂ ಸ್ಪಷ್ಟ ಉತ್ತರವನ್ನು ವಿಧ್ವಾಂಸರು ನೀಡಿದ್ದಾರೆ.

ಕಾಲಾನಂತರ ನಾಲ್ಕು ಮದ್ಸ್'ಹಬ್ ಬರಲಿವೆ. ಅದಕ್ಕೆ ಪುರಾವೆ ಬೇಕು ತಾನೇ.? ಮದ್ಸ್ ಹಬನ್ನು ನಿರಾಕರಿಸುವ ಜನತೆಗೆ ಉತ್ತರ ಈಗಲೇ ನೀಡಬೇಕೆಂಬುದು ಅಲ್ಲಾಹನ ತೀರ್ಮಾನ.
ಹಾಗೆ ಪ್ರವಾದಿಯವರಿಗೂ ಮೊದಲೇ ತಿಳಿದಿತ್ತು ಅದು ಜನರ ಮುಂದೆ ಸಾಬೀತು ಪಡಿಸಬೇಕಿತ್ತು ಅದು ಈ ಘಟನೆಯಿಂದ ಸಾಧಿಸಿತು.

2) "ಮನಸ್ಸಲ್ಲಿ ಒಂದು ಹೊರಗೆ ಇನ್ನೊಂದು" ಈ ರೀತಿ ಇಸ್ಲಾಮಿನ ಕೆಲವೊಂದು ನಿಯಮಗಳಿಗೆ ಸಲ್ಲುವುದಿಲ್ಲ. ಹಾಗ ಬಂದಲ್ಲಿ ಹೊರಗಿನ (ಳಾಹಿರ್)ಮಾತನ್ನೇ ಸ್ವೀಕರಿಸಲಾಗುವುದು.
نحن نحكم بالظواهر
ಅದರಲ್ಲೊಂದು ತ್ವಲಾಖ್.
ಉದಾ : ನಿನ್ನನ್ನು ನಾನು ತಲಾಖ್ ಮಾಡಿದ್ದೇನೆ ಎಂದು ಪತ್ನಿಯೊಂದಿಗೆ ತಮಾಷೆಗೆ ಹೇಳಿದರೂ ಪ್ರಸ್ತುತ ತಲಾಖ್ ಸಿಂಧುವಾಗುವುದು.
ಮತ್ತೆ "ನಾನು ಸುಮ್ಮನೆ ಹೇಳಿದ್ದು ಮನಸ್ಸಲ್ಲಿದ್ದಿಲ್ಲ" ಎಂದು ಹೇಳಿದರೆ ಅದನ್ನು ಸ್ವೀಕರಿಸದೆ ಹೇಳಿದ ಮಾತನ್ನೇ ಪರಿಗಣಿಸಲಾಗುತ್ತದೆ.

*ಅಬೂ ಶಹೀರ್*

No comments:

Post a Comment