*ಝಿಯಾರತ್ತ್ ಕೇಂದ್ರ*
👉�10👈
➖➖➖🕌➖➖➖
✍ -ಗಫೂರ್ ಬಾಯಾರ್-
*ವಲಿಯಕತ್ತು ಅಸ್ಸಯ್ಯದ್ ಖುತುಬ್ ಮುಹಮ್ಮದ್ ಇಬ್ನು ಹಾಮಿದ್ ಶೈಖ್ ಅಲಿ ಸ್ವಾಹಿಬುಲ್ ವಹ್ಥ್ ವಲಿಯ ಸಿದಿ ತಂಗಳ್ رضي الله عنه ಕೊಯಿಲಾಂಡಿ,*
ಯೆಮೆನಿನ ಹಳ್ರಮಿ *ಬಾಅಲವಿ'* ಸಾದಾತ್ತುಗಳಿಂದ ಕೇರಳಕ್ಕೆ ಮೊದಲನೇಯವರಾಗಿ ಆಗಮಿಸಿದ
*ಶೈಖ್ ಅಲಿ* ಪರಂಪರೆಯ ಸಯ್ಯದವರಾಗಿದ್ದಾರೆ.
ಹಿಜಿರಿ; 1080 ರಲ್ಲಿ ಹಳರ್ ಮೌತ್ತಿನ ತರಿಮಿನಲ್ಲಿ ಜನಿಸಿದರು:
ತರಿಮಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಮೇಲೆ ಮಸ್ಜಿದುಲ್ ಹರಮಿನಲ್ಲಿ ವಿದ್ಯಾರ್ಥಿಯಾದರು. ನಂತರ ತರಿಮಿಗೆ ಹಿಂದಿರುಗಿದರು.
ಅಲ್ಲಿಂದ ಇಸ್ಲಾಂ ಧರ್ಮ ಪ್ರಭೋಧನೆಗಾಗಿ ಕಲ್ಲಿಕೋಟೆಗೆ ಬಂದರು.
ತದನಂತರ..
ಕೊಯಿಲಾಂಡಿ ಸ್ಥಿರ ವಾಸವಾದ್ದರು.
ದೀರ್ಘ ಕಾಲ ಮುದರ್ರಿಸಾಗಿ ಸೇವೆ ಮಾಡಿದರು, ಧಾರಾಳ ಜನರು ಮಹಾನುಬಾವರ ಮುಖಾಂತರ ಇಸ್ಲಾಂ ಧರ್ಮವನ್ನು ಅಶ್ಲೇಸಿದ್ದರು.
" ಸಯ್ಯದುಲ್ ಮುರ್ಶಿದಿನ್ ಅಬ್ದುಲ್ಲಾಹಿ ಇಬ್ನು ಅಲವಿ ಹದ್ದಾದ್ (ರ) ರವರ ಪುತ್ರರಾದ ಸಯ್ಯದ್ ಹಸ್ಸನ್ ಇಬ್ನು ಹದ್ದಾದ್ (ರ)ರವರ ಶೈಖ್, ನಖ್ಷಬಂದಿ ತ್ವರೀಖತ್ತಿನಲ್ಲಿ ಸಯ್ಯದ್ ಅಲಿ ಸೂರತ್ತಿ (ರ)ರವರ [ ಗುಜರಾತಿನ ಸೂರತ್ತ್]
ಶೈಖ್ ಕೂಡ ಆದ್ದರು,....
ಸಯ್ಯದ್ ಶೈಖ್ ಇಬ್ನು ಮುಹಮ್ಮದ್
ಜಿಫ್ರಿ (ರ) ಕಲ್ಲಿಕೋಟೆ....
ಸಯ್ಯದ್ ಅಬ್ದುರಹ್ಮಾನ್ ಅಲ್ ಹೈದ್ರೋಸ್ (ರ) ಪೊನ್ನಾನಿ ವಲಿಯ ಜಾರಂ,....
ಸಯ್ಯದ್ ಹಸನ್ ಜಿಫ್ರಿ (ರ) ಮಂಪುರಂ,....
ವರಕ್ಕಲ್ ಸಯ್ಯದ್ ವಲಿಯ ತಂಗಳ್
ಬಾ ಅಲವಿ (ರ) ಪುತಿಯಯಂಗಾಡಿ,....
ಸಯ್ಯದ್ ಸೈನ್ ಇಬ್ನು ಹಾಮಿದ್ (ರ) ಚೆರಿಯ ಸೀದಿ ತಂಗಳ್ ವಡಕರ,....
ಅರಕ್ಕಲ್ ವಲಿಯ ರಾಜ (ರ) ಕಣ್ಣೂರ್,....
ಹೀಗೆ ಕೇರಳವನ್ನು ಧನ್ಯಗೊಳಿಸಿದ..
ಹಲವಾರು ಮಹಾ ಮನೀಷಿಗಳ ಆತ್ಮೀಯ ಗುರುವಾಗಿದ್ದರು ಮಹಾನವರು.
ಹಿಜಿರಿ: 1160ರಲ್ಲಿ ಈ ಲೋಕದಿಂದ ಯಾತ್ರೆಯಾದರು.
ಕೊಯಿಲಾಂಡಿಯ ವಲಿಯಕತ್ತ್ ಮಸ್ಜಿದಿಗೆ ಸಮೀಪ, ವಲಿಯಕತ್ತ್
ಮಖಾಮಿನಲ್ಲಾಗಿದೆ, ಬಹುಮಾನ್ಯರಾದ ' ಇಲ್ಮುಲ್ ಬಹರ್, ಸ್ವಾಹಿಬುಲ್ ವಹ್ಥ್ ಅಸಯ್ಯದ್ ಖುತುಬ್ ಜಮಾಲುದ್ದೀನ್ ಮುಹಮ್ಮದ್ ಇಬ್ನು ಹಾಮಿದ್ ಶೈಖ್ ಅಲಿ ವಲಿಯ ಸೀದಿ ತಂಗಳ್ (ರ) ರವರು ಅಂತ್ಯ ವಿಶ್ರಮ ಹೊಂದುತ್ತಿರುವುದು..
🕌ಮಹಾನವರನ್ನು ಸಂದರ್ಶಿಸಲು, ಝಿಯಾರತ್ತ್ ಮಾಡಲು, ಚರಿತ್ರೆ ತಿಳಿಯಲು, ಹಾಗೂ ಅವರ ಸಚ್ಚರಿತವಾದ ಪಾದೆಯನ್ನು ಹಿಂಬಾಲಿಸಲು,
ಅಲ್ಲಾಹು ನಮಗೆ ತೌಫೀಖ್ ನೀಡಿ ಅನುಗ್ರಹಿಸಲಿ..
ಆಮೀನ್..
✍ಗಫೂರ್ ಬಾಯಾರ್
🍂🍂🍂🍂🍂🍂🍂🍂
No comments:
Post a Comment