*ಮೌದೂದಿ ಕಛೇರಿಗೆ ಹೊಸ ವಹ್ಯ್ ಬಂದಿದೆ! ನಿಮಗೆ ತಿಳಿದಿದೆಯೇ?*
📝ಮುನೀರ್ ಸಖಾಫೀ, ಸಾಲೆತ್ತೂರು
(ಲೇಖನ ಉದ್ದವಿದೆ, ಕ್ಷಮಿಸಿ)
*ಮೌ*ದೂದಿ ಮೌಲವಿಯೊಬ್ಬರು 16 ವರ್ಷಗಳಿಂದ ಜುಮಾ ಖುತ್ಬವನ್ನು ಕನ್ನಡದಲ್ಲಿ ಓದಿದ ಬಗ್ಗೆ ವರದಿ ಕಂಡಾಗ ಅದಕ್ಕೆ ಪ್ರಾಮಾಣಿಕ ಪುರಾವೆಗಳೊಂದಿಗೆ ಒಂದು ಲೇಖನ ಬರೆದಿದ್ದೆ.
"ಖುತ್ಬಾ" ಎಂಬುವುದು ಪ್ರತ್ಯೇಕ ಆರಾಧನೆಯಾಗಿದೆ. ಒಂದು ಆರಾಧನೆಯನ್ನು ಅಲ್ಲಾಹನು ಮತ್ತು ಅಲ್ಲಾಹನ ಪ್ರವಾದಿವರ್ಯರು ತೋರಿಸಿಕೊಟ್ಟ ರೀತಿಯಲ್ಲೇ ನಿರ್ವಹಿಸಬೇಕೆಂದು ಶರಹುಲ್ ಮುಹದ್ದಬ್ ನ ಸಹಿತ ಹಲವು ಗ್ರಂಥಗಳ ಉದ್ಧರಣಿ ನೀಡಿದ್ದೆ.
ಚಿಂತಿಸುವವರಿಗೆ ಅದುವೇ ಧಾರಳ ಸಾಕಾಗಬಹುದು.
ಆದರೆ ದುರ್ವ್ಯಾಖ್ಯಾನ ಕೋರರಾದ ನೂತನವಾದಿಗಳು ಇದರಲ್ಲೂ ದುರ್ವ್ಯಾಖ್ಯಾನ ನಡೆಸಿದ್ದಾರೆ ಎಂಬುವುದು ಖೇದಕರ ಸಂಗತಿ.
ಇಬಾದತ್'ನ ಭಾಷೆಯನ್ನು ಬದಲಾವಣೆ ಮಾಡಬಹುದೆಂದು ಕಂಡು ಹಿಡಿದಿದ್ದಾರೆ.
ತೊಕ್ಕೋಟಿನಲ್ಲಿ ಇನ್ನು ಮುಂದಕ್ಕೆ ಕನ್ನಡ ನಮಾಜು ಬರುತ್ತದೆಯೇ ಎಂದು ಕಾದು ನೊಡಬೇಕು.
ಬಹುಷ ಮೌದೂದಿಗಳ ಕಚೇರಿಗೆ ಹೊಸ ವಹ್ಯ್ ಬಂದಿದೆಯೇ ಅಲ್ಲಾಹನೇ ಬಲ್ಲ!
ಕೆಲವೊಂದು ಸಂಗತಿಗಳು ತಿಳಿಸಲೋಸ್ಕರ ಇದನ್ನು ಬರೆಯುತ್ತಿದ್ದೇನೆ.
*ಖುತ್ಬಾದ ಉದ್ದೇಶ*
ಕೆಲವರು ಭಾವಿಸಿದಂತೆ ಖುತ್ಬಾ ಎಂಬುವುದು ಜನರಿಗೆ ಧರ್ಮದ ನಿಯಮಗಳನ್ನು ಕಲಿಸಿ ಕೊಡುವ ಕೇವಲ ಪ್ರವಚನವಲ್ಲ. ಹೊರತು ಅಲ್ಲಾಹು, ರಸೂಲ್, ತಖ್'ವ, ಮುಂತಾದ ಪ್ರಧಾನ ಕಾರ್ಯಗಳನ್ನು ನೆನಪಿಸಿ ಕೊಡುವ ಕಾರ್ಯವಾಗಿದೆ ಖುತುಬ. ಆದುದರಿಂದಲೇ ಅಲ್ಲಾಹನನ್ನು ಸ್ತುತಿಸುವುದು, ಪ್ರವಾದೀ ﷺ ರ ಮೇಲೆ ಸ್ವಲಾತ್, ಅಲ್ಲಾಹನನ್ನು ಭಯಪಡುವಂತೆ ವಸಿಯ್ಯತ್ ಮಾಡುವುದು, ಒಂದು ಆಯತ್ ಪಾರಾಯಣ ಮಾಡುವುದು, ಸತ್ಯ ವಿಶ್ವಾಸಿಗಳಿಗೆ ಬೇಕಾಗಿ ಪ್ರಾರ್ಥಿಸುವುದು ಮುಂತಾದ ಕಾರ್ಯಗಳನ್ನು ಖುತ್ಬಾದ ಅರ್'ಕಾನ್ (ಖಡ್ಡಾಯ ಭಾಗ) ಗಳಾಗಿ ವಿಧಿಸಲ್ಪಟ್ಟಿದೆ.
ಇಷ್ಟು ಕಾರ್ಯಗಳು ಮಾತ್ರ ಖುತ್ಬಾದಲ್ಲಿ ಇದ್ದರೆ ಆ ಖುತುಬಾ ಸ್ವಹೀಹ್ ಆಗುವುದು. ಉದಾಹರಣೆಗೆ ಒಬ್ಬರು ಖತೀಬರು ಈ ರೀತಿ ಓದಿದರೆ👇
الحمد لله ،صلي الله علي محمد،اتقوا الله ،انا اعطيناك الكوثر ،اللهم اغفر للمؤمنين
ಆ ಖುತ್ಬ ಸಿಂಧುವಾಗಿದೆ. ಕಾರಣ ಖುತ್'ಬಾದಲ್ಲಿ ಇರಬೇಕಾದ ಖಡ್ಡಾಯ ಭಾಗಗಳು ಇದರಲ್ಲಿ ಅಡಗಿದೆ. ಇದರಲ್ಲಿ ಹಂದ್, ಸ್ವಲಾತ್, ಅಲ್ಲಾಹನನ್ನು ಭಯಪಡುವಂತೆ ವಸಿಯ್ಯತ್ ಎಂಬೀ ಮೂರು ಕಾರ್ಯಗಳು ಎರಡು ಖುತ್ಬಾದಲ್ಲೂ ಇರಬೇಕು.
ಆದುದರಿಂದ ಅರ್'ಕಾನ್ ಗಳು ಮಾತ್ರವಿರುವ ಈ ಕುತ್ಬಾದಿಂದ ಉದ್ದೇಶಿಸಲ್ಪಡುವುದು ಏನೋ ಅದುವೇ ಆಗಿದೆ ಖುತ್ಬಾದ ಉದ್ದೇಶ. ಸವಿಸ್ತಾರವಾಗಿ ಜನರಿಗೆ ಕ್ಲಾಸ್, ಪ್ರವಚನ ನೀಡುವುದಾದರೆ ಕೇವಲ ಅರ್'ಕಾನ್'ಗಳು ಮಾತ್ರ ಹೇಳಿ ನಡೆಸುವ ಖುತ್ಬ ಸ್ವಹೀಹ್ ಆಗಲು ಸಾಧ್ಯವಿಲ್ಲ.
ಅಲ್ಲಾಹನು, ರಸೂಲ್, ತಖ್ವ ಎಂಬೀ ಕಾರ್ಯಗಳನ್ನು ವಾರಕ್ಕೊಮ್ಮೆ ನೆನಪಿಸಿ ಕೊಡುವ ಕಾರ್ಯ ಮಾತ್ರ ಖುತ್ಬಾದ ಉದ್ದೇಶ.
ಅದೊಂದು ಭಾಷಣವಾಗಿದ್ದರೆ ಎಲ್ಲಾ ಶುಕ್ರವಾರ ಒಂದೇ ರೀತಿಯ ಹಮ್ದ್ , ಸ್ವಲಾತ್, ತಖ್ವಾ ಸಾಲದು, ಹೊರತು ಹೊಸ ಹೊಸ ಅರ್'ಕಾನ್ ಹೇಳಿ ಖುತ್ಬಾ ನಿರ್ವಹಿಸಲು ಹೇಳಬೇಕಿತ್ತು.
ಒಟ್ಟಿನಲ್ಲಿ *ಖುತ್ಬಾ ಓದುವುದರ ಉದ್ದೇಶ ಕೇವಲ ಪ್ರವಚನವಲ್ಲ. ಹೊರತು ಅಲ್ಲಾಹನ ಮತ್ತು ರಸೂಲರ ಬಗ್ಗೆ ವಾರಕ್ಕೊಮ್ಮೆ ನೆನಪಿಸಿ ಕೊಡುವ ಒಂದು ಆರಾಧನೆಯಾಗಿದೆ ಎಂಬುವುದು ಈ ಹೇಳಿದ್ದರಿಂದ ಮನದಟ್ಟಾಯಿತು*
*ಖುತ್ಬಾ ಖುರ್'ಆನಿನಲ್ಲಿ*
ಪವಿತ್ರ ಖುರ್'ಆನಿನಲ್ಲಿ ಖುತ್ಬಾದ ಬಗ್ಗೆ ದ್ಸಿಕ್ರ್ ಎಂಬ ಪ್ರಯೋಗವನ್ನು ನಡೆಸಲಾಗಿದೆ.
ಅಲ್ಲಾಹನು ಹೇಳುತ್ತಾನೆ,
يَا أَيُّهَا الَّذِينَ آمَنُوا إِذَا نُودِيَ لِلصَّلَاةِ مِن يَوْمِ الْجُمُعَةِ فَاسْعَوْا إِلَىٰ ذِكْرِ اللَّهِ وَذَرُوا الْبَيْعَ ۚ ذَٰلِكُمْ خَيْرٌ لَّكُمْ إِن كُنتُمْ تَعْلَمُونَ
(الجمعة 9)
ಸತ್ಯ ವಿಶ್ವಾಸಿಗಳೇ!
ಶುಕ್ರವಾರ ನಮಾಝಿಗೆ ಕರೆಯಲ್ಪಟ್ಟರೆ ಅಲ್ಲಾಹನ ದ್ಸಿಕ್ರ್ ಗೆ ನೀವು ಹೋಗಿರಿ ಮತ್ತು ಮಾರಾಟಗಳನ್ನು -ವ್ಯವಹಾರಗಳನ್ನು ತ್ಯಜಿಸಿರಿ. ನೀವು ಕಾರ್ಯಗಳನ್ನು ತಿಳಿಯುವವರಾಗಿದ್ದರೆ
ಅದಾಗಿದೆ ನಿಮಗೆ ಉತ್ತಮ. (ಜುಮುಅ :9)
ಈ ಸೂಕ್ತವನ್ನು ವ್ಯಾಖ್ಯಾನಿಸಿ ಇಮಾಮ್ ರಾಝೀ(ರ) ಬರೆಯುತ್ತಾರೆ,
(الى ذكر الله)الذكر هو الخطبة عند الاكثر من اهل التفسير (رازي)
ಅಧಿಕ ಮುಫ್ಫಸ್ಸಿರ್ ಗಳ ಅಭಿಪ್ರಾಯ ಪ್ರಕಾರ 'ದ್ಸಿಕ್ರ್' ಎಂಬುವುದರ ಉದ್ದೇಶ 'ಖುತ್ಬ' ಆಗಿದೆ.(ತಫ್'ಸೀರು ಕಬೀರ್)
ಮೌದೂದಿಗಳ 'ಪವಿತ್ರ ಖುರ್'ಆನಿನಲ್ಲೂ ಕೂಡಾ ಇದೇ ಅರ್ಥವನ್ನು ನೀಡಲಾಗಿದೆ.
ಅವರು ಹೇಳುವುದು ನೋಡಿ,
"ಈ ಆಜ್ಞೆಯಲ್ಲಿ 'ದಿಕ್ರ್' ಎಂದರೆ ಖುತ್ಬಾ (ಪ್ರವಚನ) ಆಗಿದೆ"
(ಪವಿತ್ರ ಕುರ್'ಆನ್. ಪುಟ: 940)
ಖುತ್ಬಾದ ಬಗ್ಗೆ ದಿಕ್ರ್ ಎಂದು ಹೇಳಿದ್ದನ್ನು ಅವರೂ ಕೂಡಾ ಒಪ್ಪಿದಂತಾಯಿತು.
*ಖುತ್ಬಾ ಹದೀಸಿನಲ್ಲಿ*
ಪ್ರಬಲವಾದ ಹದೀಸಿನಲ್ಲಿ ಖುತ್ಬಾದ ಬಗ್ಗೆ ದ್ಸಿಕ್ರ್ ಎಂದು ಹೇಳಲಾಗಿದೆ.
عن أبي هريرة قال قال النبي صلى الله عليه وسلم إذا كان يوم الجمعة وقفت الملائكة على باب المسجد يكتبون الأول فالأول ومثل المهجر كمثل الذي يهدي بدنة ثم كالذي يهدي بقرة ثم كبشا ثم دجاجة ثم بيضة فإذا خرج الإمام طووا صحفهم ويستمعون الذكر
(صحيح البخاري 877)
ಅಬೂಹುರೈರ (ರ) ವರದಿ, ಪ್ರವಾದೀ ﷺ ರು ಹೇಳಿದರು.
"ಶುಕ್ರವಾರ ದಿವಸ ಮಸೀದಿಯ ಬಾಗಿಲ ಬಳಿ ನಿಂತು ಮಲಕುಗಳು ಮೊದಲು ಬರುವವರ ಬಗ್ಗೆ ಬರೆಯುವರು. ಬೇಗನೆ ಬರುವವರಿಗೆ ಒಂದು ಒಂಟೆ, ನಂತರ ಬರುವವರಿಗೆ ಹಸು, ಅದರ ನಂತರ ಬರುವವರಿಗೆ ಒಂದು ಆಡು, ನಂತರ ಬಂದವನಿಗೆ ಒಂದು ಕೋಳಿ, ಅದರ ನಂತರ ಬಂದವನಿಗೆ ಒಂದು ಮೊಟ್ಟೆ ದಾನ ಮಾಡಿದ ಪ್ರತಿಫಲ ಲಭಿಸುವುದು. ಇಮಾಮ್ ಖುತುಬ ನಿರ್ವಹಿಸಲು ಆರಂಭಿಸಿದಲ್ಲಿ ಮಲಕುಗಳು ಬರೆಯುವ ಗ್ರಂಥವನ್ನು ಮಡಚಿ 'ದ್ಸಿಕ್ರ್' ಆಲಿಸಲು ಕುಳಿತುಕೊಳ್ಳುವರು".(ಬುಖಾರಿ 877)
ಇಲ್ಲೂ ಕೂಡಾ ಖುತ್ಬಾದ ಬಗ್ಗೆ "ದ್ಸಿಕ್ರ್" ಎಂದು ಹೇಳಿದ್ದನ್ನು ಸ್ಮರಿಸಬಹುದು.
*ಅದು ಕೇವಲ "ದ್ಸಿಕ್ರ್" ನಂತೆ ಅಲ್ಲ. ಅತ್ತಹಿಯ್ಯಾತ್, ತಕ್ಬೀರತುಲ್ ಇಹ್ರಾಮ್ ನಂತಹ ದ್ಸಿಕ್ರ್ ಎಂದು ಇಮಾಮ್ ನವವೀ (ರ) ಹೇಳಿದ್ದನ್ನು ಒಂದನೇ ಲೇಖನದಲ್ಲಿ ಬರೆದಿದ್ದೇನೆ.*
ಅತ್ತಹಿಯ್ಯಾತ್, ತಕ್ಬೀರತುಲ್ ಇಹ್ರಾಮ್ ನ ಭಾಷೆ ಬದಲಿಸಕೂಡದು. ಅದೇ ರೀತಿಯಾಗಿದೆ ಖುತ್ಬಾವು ಕೂಡಾ.
ಇಮಾಮ್ ಇಬ್ನ್ ಹಜರ್ (ರ) ಬರೆಯುತ್ತಾರೆ.
ಅಲ್ಲಾಹನನ್ನು ಸ್ಮರಿಸಬೇಕಾದ ಆರಾಧನೆಯಾಗಿದೆ ಖುತುಬಾ. ಆದುದರಿಂದ ರಸೂಲರನ್ನೂ ಹೇಳಬೇಕಾಯಿತು. ಅಝಾನ್ ಮತ್ತು ನಮಾಝಿನಲ್ಲಿರುವಂತೆ.
(ತುಹ್ಫಾ 2/446)
ಅಝಾನ್ ದ್ಸಿಕ್ರ್ ಆಗಿದೆ. ನಮಾಝ್ ದ್ಸಿಕ್ರ್ ಆಗಿದೆ. ಅದನ್ನು ತರ್ಜಮೆಗೊಳಿಸಬಾರದು.ಅದೇ ರೀತಿಯಾಗಿದೆ ಖುತುಬ ಎಂಬುವುದು ಇದರಿಂದ ಸ್ಪಷ್ಟ.
*ಸತ್ಯ ಒಪ್ಪಿಕೊಂಡ ವಹ್ಹಾಬೀ ಮೌಲವೀ*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು, ಸ್ವಹಾಬಿಗಳು, ತಾಬಿವುಗಳು, ಯಾರೂ ಕೂಡಾ ಅರಬಿಯೇತರ ಭಾಷೆಯಲ್ಲಿ ಖುತ್ಬಾ ನಿರ್ವಹಿಸಿಲ್ಲ. ಅರಬೇತರ ಊರುಗಳಲ್ಲಿ ಅವರು ಖುತ್ಬಾ ನಿರ್ವಹಿಸುವಾಗ ಅರಬಿಯಲ್ಲೇ ಖುತ್ಬಾ ನಿರ್ವಹಿಸಿದ್ದಾರೆ. ಮೊಟ್ಟ ಮೊದಲನೇಯದಾಗಿ ಖುತ್ಬಾವನ್ನು ಅರಬಿಯಲ್ಲದ ಭಾಷೆಯಲ್ಲಿ ನಿರ್ವಹಿಸಿದ್ದು ತುರ್ಕಿಯಲ್ಲಿ ಮುಸ್ತಫಾ ಕಮಾಲ್ ಪಾಷಾ ಎಂಬವರಾಗಿದ್ದರೆಂದು ವಹ್ಹಾಬಿಗಳ ನಾಯಕ ರಶಿದುರ್ರಿಳಾ ತನ್ನ "ತಫ್ಸೀರುಲ್ ಮನಾರ್" ನಲ್ಲಿ ಹೇಳುತ್ತಾರೆ.
ಅವರು ಹೇಳುವುದು ನೋಡಿ,👇
لا يزالون يقرؤون القرآن وأذكار الصلاة والحج وغيرها بالعربية ، وكذلك خطبة صلاة الجمعة والعيدين إلا ما شذت به الحكومة الكمالية التركية فأمرت الخطباء بأن يخطبوا بالتركية تمهيدا للصلاة بها لخلع ربقة الإسلام ، وقد بلغنا أن جماعة المصلين من الترك لما سمعوا خطبة الجمعة بالتركية نكروها ، ونفروا منها واتخذوا خطباءها سخريا ; لأن للعربية سلطانا على أرواحهم يخشعون لها ، وإن لم يفهموا كل عباراتها ; ولأنهم اعتادوا أن يسمعوها بنغم خاص وأداء خاص لا تقبله اللغة التركية كالعربية .
(تفسير المنار 9/313)
ಪ್ರಪಂಚಾದಾದ್ಯಂತ ಮುಸ್ಲಿಮರು ಖುರ್'ಆನ್, ನಮಾಜಿನಲ್ಲಿ ಮತ್ತು ಹಜ್ಜ್, ಇನ್ನಿತರ ಸಂದರ್ಭದಲ್ಲಿ ಅರಬಿಯಲ್ಲಿ ಮಾತ್ರ 'ದ್ಸಿಕ್ರ್' ನಿರ್ವಹಿಸುತ್ತಿದ್ದರು. ಅದೇ ರೀತಿ ಜುಮು ಖುತುಬ ಮತ್ತು ಎರಡು ಪೆರ್ನಾಳ್ ಖುತುಬ ಕೂಡಾ. ಕಮಾಲ್ ಪಾಷರ ತುರ್ಕಿ ಆಡಳಿತವು ಇಸ್ಲಾಮನ್ನು ಇಲ್ಲವಾಗಿಸಲು ಎಲ್ಲಾ ಖತೀಬರುಗಳೊಂದಿಗೆ ಖುತ್ಬಾವನ್ನು ತುರ್ಕೀ ಭಾಷೆಯಲ್ಲಿ ನಿರ್ವಹಿಸುವಂತೆ ಆಜ್ಞಾಪಿಸಿತು. ನಮಾಜನ್ನು ತುರ್ಕೀ ಭಾಷೆಗೆ ಪರಿವರ್ತನೆ ಮಾಡುವುದರ ಗೂಢ ತಂತ್ರವಾಗಿತ್ತು ಅದು. ಆದರೆ ನಮಾಜಿಗೆ ಹಾಜರಾಗಿದ್ದ ಮುಸ್ಲಿಮರು ತುರ್ಕಿ ಬಾಷೆಯಲ್ಲಿ ನಡೆದ ಖುತ್ಬ ಗೆ ವಿರೋಧ ವ್ಯಕ್ತಪಡಿಸಿದರು. ಕಾರಣ ಅರಬೀ ಭಾಷೆ ಅವರು ಅಷ್ಟಕ್ಕೂ ಪ್ರೀತಿಸುತ್ತಿದ್ದರು. ಅರಬಿಯಲ್ಲಿ ನಿರ್ವಹಿಸಿದರೆ ಎಲ್ಲಾ ಭಾಗವೂ ತಿಳಿಯದಿದ್ದರೂ ಅವರು ಅದನ್ನು ಗಮನವಿಟ್ಟು ಕೇಳುತ್ತಲಿದ್ದರು. ಮಾತ್ರವಲ್ಲ,
ಬಹಳ ಚಂದವಾಗಿ ಅದನ್ನು ಓದಲಾಗುತ್ತಿತ್ತು. ಹಾಗೆ ನಿರ್ವಹಿಸಲು ತುರ್ಕಿ ಭಾಷೆಯಲ್ಲಿ ಸಾಧ್ಯವಿಲ್ಲ.
(ತಫ್ಸೀರುಲ್ ಮನಾರ್ 9/313).
*ಕೊನೆಗೆ ಒಂದು ಮಾತು*
ಪೂರ್ವೀಕ ಸತ್ಯ ವಿಶ್ವಾಸಿಗಳಾರೂ ಖುತ್ಬಾವನ್ನು ಅರಬಿಯೇತರ ಭಾಷೆಯಲ್ಲಿ ನಿರ್ವಹಿಸಿಲ್ಲ.
*ಮಾತ್ರವಲ್ಲ ಅರಬೀ ಭಾಷೆಯನ್ನು ಖುತುಬಾದ ನಿಬಂಧನೆಯಾಗಿ ಅವರು ನಮಗೆ ಕಲಿಸಿ ಕೊಟ್ಟಿದ್ದಾರೆ.* *ನಿಬಂಧನೆ ಮೇಳೈಸದ ಆರಾಧನೆ ಅಸಿಂಧುವೆಂದು ತಿಳಿಯಲು ಹೆಚ್ಚು ಬುದ್ಧಿ ಶಕ್ತಿ ಬೇಕೆಂದಿಲ್ಲ.*
ಕನ್ನಡ, ಕೊಂಕಣೆ ಖುತುಬ ಓದಿ ನಮಾಝು ಮಾಡಿದ್ದಲ್ಲಿ ಬಾತಿಲ್ ಎಂಬುವುದು *ಸುಸಾಮ* ದ ತೀರ್ಮಾನವಲ್ಲ. ಅದು ಇಸ್ಲಾಮಿನ ತೀರ್ಮಾನವಾಗಿದೆ. ಅದನ್ನು ಇಮಾಮರುಗಳೇ ಹೇಳಿದ್ದಾರೆ.
ಪವಿತ್ರ ಖುರ್'ಆನ್'ನಲ್ಲಿ ಅಲ್ಲಾಹನು ಹೇಳುತ್ತಾನೆ.
وَمَن يُشَاقِقِ الرَّسُولَ مِن بَعْدِ مَا تَبَيَّنَ لَهُ الْهُدَىٰ وَيَتَّبِعْ غَيْرَ سَبِيلِ الْمُؤْمِنِينَ نُوَلِّهِ مَا تَوَلَّىٰ وَنُصْلِهِ جَهَنَّمَ ۖ وَسَاءَتْ مَصِيرًا
(النساء 115)
ಸನ್ಮಾರ್ಗವು ಮನದಟ್ಟಾದ ನಂತರ ಯಾರಾದರು ಪ್ರವಾದೀ ﷺ ವಿರುದ್ಧವಾಗಿ ನಡೆದರೆ, ಸತ್ಯ ವಿಶ್ವಾಸಿಗಳಲ್ಲದವರ ಹಾದಿಯನ್ನು ಸ್ವೀಕರಿಸಿದರೆ ಅವನು ತಿರುಗಿದ ಕಡೆಗೆ ಅವನನ್ನು ನಾವು ತಿರುಗಿಸುವೆವು. ಅತೀ ಭಯನಕವಾದ ನರಕಕ್ಕೆ ನಾವು ಅವನನ್ನು ತಳ್ಳುವೆವು.
(ಅನ್ನಿಸಾಅ 115)
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಖುತ್ಬಾ ದ ರೀತಿ ಯಾವುದೆಂದು ಎಲ್ಲರಿಗೂ ತಿಳಿದ ವಿಚಾರ. ಅದೇ ರೀತಿ ಪಾರಾಯಣ ಸತ್ಯ ವಿಶ್ವಾಸಿಗಳ ಕರ್ತವ್ಯವಾಗಿದೆ.
ವಿ.ಸೂ: ಅಹ್ಲುಸ್ಸುನ್ನತ್ ವಲ್ ಜಮಾಅ ಎಂಬ ವಿಷಯದಲ್ಲಿ ನಾನು ಭಾಗಗಳಾಗಿ ಲೇಖನ ಬರೆಯಲು ಪ್ರಾಂಭಿಸಿದ್ದು ಈಗಾಗಲೇ ಮೀಲಾದುನ್ನಬೀ ಎಂಬ ವಿಷಯನ್ನು ಬರೆಯುತ್ತಾ ಇದ್ದೇನೆ. "ಖುತ್ಬಾದ ಬಾಷೆ" ಎಂಬುವುದರ ಕುರಿತು ಸವಿಸ್ತಾರವಾಗಿ ಬರೆಯಲುದ್ದೇಶಿಸಿದ್ದೇನೆ.ಇಂಶಾ ಅಲ್ಲಾಹ್.
ಓದಿ ಸಹಕರಿಸಿ.
*ಮುನೀರ್ ಸಖಾಫೀ, ಸಾಲೆತ್ತೂರು*
*(ಸದಸ್ಯರು, ಸುನ್ನೀ ಸಾಹಿತ್ಯ ಮಂಡಳಿ ಮಂಗಳೂರು)*
No comments:
Post a Comment