Saturday, November 4, 2017

☪ ಝಿಯಾರತ್ತ್ ಕೇಂದ್ರ☪
          💠17💠
➖➖➖➖➖➖➖➖
*ಹದ್ದಾದ್ (ರ) ಹಳರಮೌತ್ತ್, ಯೆಮೆನ್*
🔹🔹🔹🔹🔹🔹🔹🔹
✍ ಗಫೂರ್ ಬಾಯಾರ್
➖➖➖➖➖➖➖➖
🕌ಹದ್ದಾದ್ (ರ)ರವರ
 ಜೀವನ ಹಾಗು ಸಂದೇಶ
🔹🔹🔹🔹🔹🔹🔹
🕌 ದುಲ್ ಖಅದ್ 7
ಅಬ್ದುಲ್ಲ ಇಬ್ನು ಅಲವಿ ಅಲ್ ಹದ್ದಾದ್ (ರ) ತಂಗಳವರ ವಫಾತ್ ದಿನವಾಗಿದೆ.

ಆ ಮಹಾನವರನ್ನು ನೆನಪಿಸದ ಒಂದು ದಿನವೂ ನಮ್ಮ ಊರಿನ ಸುನ್ನಿ ವಿಶ್ವಾಸಿಗಳ ಜೀವನದಲ್ಲಿ ಇರಲಿಕ್ಕಿಲ್ಲ. ಹದ್ದಾದ್ ದಿನನಿತ್ಯ ಹೇಳುವವರಿಗೆ ಮಹಾನವರನ್ನು ಪರಿಚಯಸಬೇಕೆಂದಿಲ್ಲ.

ಪಾರಂಪರ್ಯವಾಗಿ ನಮಗೆ ಸಿಕ್ಕಿದ ಆತ್ಮೀಯ ಚೈತನ್ಯವಾಗಿದೆ *ಹದ್ದಾದ್ ರಾತ್ತಿಬ್*

ಹದ್ದಾದ್ ರಾತ್ತಿಬಿನ ಕ್ರೂಡೀಕರಣಕ್ಕೆ ಕಾರಣವಿದೆ.

ಶಿಹಾ ವಿಭಾಗವಾದ ಝೈದಿಯ್ಯಾಗಳು ಹಳರಮೌತ್ತಿನಲ್ಲಿ ಬಂದು ಅವರ ಆಶಯವನ್ನು ಪ್ರಚಾರ ಆರಂಭಿಸಿದಾಗ ಹದ್ದಾದ್ (ರ) ರವರ ಹತ್ತಿರ ದೂರು ತಲುಪಿತು. ಕೆಲವು ಪಂಡಿತರು ಮಹಾನವರತ್ತಿರ ಹೇಳಿದ್ದರು; *ಶಿಹಾ* ರಂಗ ಪ್ರವೇಶವು ಆಶಯ ಪ್ರಚಾರಣವನ್ನು ನಾವು ಭಯಪಡಬೇಕಾಗಿದೆ. ನಮ್ಮ ಈ ಪರಿಸರದ ಜನರ (ಅಖಿದ) ವಿಶ್ವಾಸಗಳು ಕೆಟ್ಟು ಹೋಗಲು ಸಾಧ್ಯತೆ ಇದೆ. ಅದರಿಂದ್ದ,  ನಮ್ಮಈಮಾನಿಗೆ ಕಾವಲು ಲಭಿಸಲಿಕ್ಕೆ ಬೇಕಾಗಿ ಹದೀಸುಗಳಲ್ಲಿ ಬಂದ ದಿಕ್ರ್ ದುಆಗಳನ್ನು ತಾವು ಕ್ರೂಡೀಕರಿಸಿ ಕೊಡುದಾದರೆ, ಜನರನ್ನು ಒಂದುಗೂಡಿಸಿ ಅದನ್ನು ನಿತ್ಯವು ಹೇಳಬಹುದಿತ್ತು.
ಇದನ್ನು ಆಲಿಸಿದ ಮಹಾನವರು ದಿಕ್ರ್ ಗಳನ್ನು ಕ್ರೂಡೀಕರಿಸಲು ಆರಂಭಿಮಾಡಿದರು.

ಹಿಜರಿ ವರ್ಷ 1071 ನಲ್ಲಾಗಿದೆ ಈ ಘಟನೆ ನಡೆದಿರುವುದು.

1072ರ ಒಂದು ಶುಕ್ರವಾರ ಬೆಳಿಗ್ಗೆಯಿಂದ ಹಳರಮೌತ್ತಿನ ಶೈಖವರ ಮಸೀದಿಯಿಂದ *ಹದ್ದಾದ್ ರಾತ್ತಿಬ್* ನಿತ್ಯ ಹೇಳಲು ಆರಂಭವಾಯಿತು.

ತಡಮಾಡದೆ, ವಿಶ್ವದ ನಾನಾ ಮುಸ್ಲಿಂ ಜನವಾಸವಿರುವ ಎಲ್ಲಾ ಕಡೆಗಳ ಮಸೀದಿಗಳಲ್ಲಿ ಹದ್ದಾದ್ ನಿತ್ಯ ಹೇಳಲು ಶುರುವಾಯಿತು. ಒಂದು ಸಾಂಕೇತಿಕ ವಿದ್ಯೆ ಇಲ್ಲದೆಯೂ ಆ ಕಾಲದಲ್ಲಿ ಹದ್ದಾದ್ ಹೇಗೆ ಇಷ್ಟು ಸಾರ್ವತ್ರಿಕವಾಯಿತು? ಅದೊಂದು ಕರಾಮತ್ತು ಕೂಡ ಆಗಿರುತ್ತದೆ.
ಅವರ ಹದ್ದಾದ್, ವಿರ್ದು ಲತ್ವಿಫ್, ಮೊದಲಾದ ಔರಾದುಗಳ ಸಂಗ್ರಹಗಳ ಕುರಿತು ಧಾರಣೆ ಉಳ್ಳವರಾಗಿದ್ದೇವೆ ನಾವು.

 ಆದರೂ ಮಹಾನವರ ವ್ಯಕ್ತಿ ಜೀವನವನ್ನು ಕುರಿತು ಹೆಚ್ಚು ಅರಿಯುವವರು ಕಡಿಮೆ.

 ಜನನ;  ಹಿಜರಿ ವರ್ಷ ಸಫರ್ 05, 1044.

ತಂದೆ: ಅಲವಿ ಬಿನ್ ಮುಹಮ್ಮದ್ ಅಲ್ ಹದ್ದಾದ್ (ರ).
ಅವರು ದೊಡ್ಡ ಭಕ್ತಿ ಇರುವ ಪಂಡಿತರು, ಸಮಾಧಾನ ಪ್ರಿಯರು ಆಗಿದ್ದರು.

 ಪಿತೃಮಾತರಾದ ಸಲ್ಮಾ (ರ)  ಎಂಬವರು ಜ್ಞಾನ ಬಂಡಾರದ ಸೂಫಿ ವನಿತೆಯಾಗಿದ್ದರು.

ತಾಯಿಯ ಹೆಸರು ಕೂಡ ಸಲ್ಮಾ (ರ) ಎಂದಾಗಿತ್ತು.

ಉತ್ತಮ ಪರಂಪರೆಯಲ್ಲಿ ಜನಿಸಿದ ಹದ್ದಾದ್ (ರ)ರವರು ಆ ಪರಂಪರೆಯ ಮಹಿಮೆಯನ್ನು ಇನ್ನಷ್ಟು ವರ್ದಿಸಿದರು.
5 ವರ್ಷ ತುಂಬಿದಾಗ *ಸಿಡುಬು* ರೋಗ ಬಂದ ಕಾರಣ ಮಹಾನವರುಗಳು  ಕುರುಡರಾದರು.

ಆದರೂ ಮಹಾನವರಿಗೆ ಜ್ಞಾನ ಆರ್ಜಿಸಲು ಯಾವ ತೊಂದರೆಯು ಬರಲಿಲ್ಲ.
ಸ್ನೇಹಿತನ ಒಟ್ಟಿಗೆ ಮಸೀದಿಗೆ ಹೋಗಿ ಖುರ್ಆನ್ ಕಂಠಪಾಠ ಮಾಡುವುದು. ಹಾಗು ದಿನನಿತ್ಯ 200 ರಕಅತ್ತ್ ನಮಾಜು ಮಾಡುತಿದ್ದರು. ಆದ್ಯಗುರು ತಂದೆಯರೇ ಆಗಿದ್ದರು. ಸಣ್ಣ ವಯಸ್ಸಿನಲೇ ಖುರ್ಆನ್ ನೊಂದಿಗೆ ಬೇರೆ ಹಲವು ಗ್ರಂಥಗಳನ್ನು ಕಂಠಪಾಠ ಮಾಡುತ್ತಿದ್ದರು.

 ನಂತರ ಹಲವಾರು ಪ್ರಶಿದ್ದ ಗುರುಗಳ ಹತ್ತಿರ ಕಲಿತರು.  ಮಹಾನವರನ್ನು ಅತೀ ಹೆಚ್ಚು ಸ್ವಾದಿನಿಸಿರುವುದು ಹಾಗು ಸೂಫಿ ಸರಣಿಗೆ ತಲುಪಿಸಿದ್ದು ಪ್ರಶಿದ್ದ ಪಂಡಿತರಾದ *ಉಮರ್ ಬಿನ್ ಅಬ್ದುಲ್ ರಹ್ಮಾನ್ ಅಲ್ ಅತ್ತಾಸ್ (ರ) ರವಾಗಿದ್ದರು.*

ಹಳರಮೌತ್ತ್ ಸಾಮಾನ್ಯವಾಗಿ ಶಾಂತ ಪ್ರದೇಶವಾಗಿದೆ. ಪ್ರಶಸ್ತವಾದ *ಸಾಂಬಳ್* ಖಬರ್ಸ್ತಾನವಿರುವುದು ಇಲ್ಲಿಯಾಗಿದೆ ನೆಲೆಗೊಳ್ಳುವುದು.

 ಇದೇ ಸ್ಥಳದಲ್ಲಾಗಿದೆ
ಹದ್ದಾದ್ ತಂಗಳ್ (ರ) ರವರು ಮತ್ತು ಫಖಿಹಿಲ್ ಮುಖದ್ದಮ್ (ರ) ಹಾಗು ಹಲವಾರು ಮಹಾತ್ಮಾರುಗಳು ಅಂತ್ಯ ವಿಶ್ರಮ ಗೊಳ್ಳುವುದು.

ಸಾಂಬಲ್ ನಲ್ಲಿ ವಫಾತ್ತಾಗಿರುವ ಸಾದಾತ್ತುಗಳು ಇಂದು ಕೂಡ ಆ ಊರಿಗೆ ನಿಶಬ್ದತೆಯ ಸಾನಿಧ್ಯವಾಗಿ ಆತ್ಮೀಯ ನೇತೃತ್ವ ಕೊಡುತ್ತಾ ಇದ್ದಾರೆ.

             ಭಾಗ 02

ಹಳರಮೌತ್ತಿನ ಅರಿವಿನ ಗನಿ *ತರಿಮಿ*  ಎಂಬ ಸ್ಥಳವಾಗಿದೆ.
ಇದೆ ತರಿಮಿನಲ್ಲಾಗಿದೆ ಹದ್ದಾದ್ ತಂಗಳ್ (ರ) ರವರು ಜನಿಸಿ ಬೆಳೆದಿರುವುದು.

ಮಹಾನವರುಗಳ ಪಾದೆ ಸ್ಪರ್ಶಗೊಂಡಿದರಿಂದಾಗಿರಬಹುದು ತರಿಮಿಗೆ ಇಂದು ಕೂಡ ಅದೇ ಪರಂಪರೆ ಸಂರಕ್ಷಿಸಲು ಸಾದ್ಯವಾಗುತಿದೆ.

ಸರ್ವರು ಅಂಗಿಗರಿಸಿದವರಗಿದರೂ, ಬಹಳ ವಿನಯ ತೋರುತ್ತಿದ್ದ ಮಹಾನವರು ಪ್ರಶಿದ್ದಿಯನ್ನು ತುಂಬಾ ವಿರೋದಿಸುವ ವ್ಯಕ್ತಿಯಾಗಿದ್ದರು.

ಒಮ್ಮೆ ಅದ್ಬುತ ಸಿದ್ಧಿಗಳ ಕ್ರೂಡೀಕರಣ ನಡೆಸಿದ ಶಿಷ್ಯರು, ರಚನೆಯ  ಪ್ರಸಿದ್ದೀಕರಣಕ್ಕೆ ಅನುಮತಿ
ಕೇಳಲು ತಮ್ಮ ಉಸ್ತಾದರಾದ ಮಹಾನವರ ಹತ್ತಿರ ಬಂದರು. ಅದನ್ನು ನೋಡುತ್ತಲೇ ಆ ಮುಖ ವಿವರ್ಣವಾಯಿತು. ಕೂಡಲೇ ಬರೆದದ್ದೆಲ್ಲವನ್ನು ಅಳಿಸಬೇಕೆಂದು ಶಿಸ್ಯರಿಗೆ ಪರಮಾನು ಕೊಟ್ಟರು.

ಒಳ್ಳೆಯ ಶರೀರ ಪ್ರಕೃತಿವಿರುವ ವ್ಯಕ್ತಿಯು, ತುಂಬಾ ಎತ್ತರವಿರುವ ಬೆಳ್ಳಗಿನ ಶರೀರವು, ಗಾಂಭಿರ್ಯವುಳ್ಳ ಮುಖಭಾವವು ಆಗಿತ್ತು ಮಹಾನವರದ್ದು.

ಕಲಿಯುವ ಕಾಲದಲ್ಲಿ ಮಹಾನವರ ಆತ್ಮೀಯ ಸಾನಿಧ್ಯ ನೋಡಿ ಅವರ ಉಸ್ತಾದರುಗಳು ಪ್ರತ್ಯೇಕ ಪರಿಗಣನೆ ಕೊಡುತಿದ್ದರೆಂದು ಗ್ರಂಥಗಳಲ್ಲಿ ಕಾಣಬಹುದು.

ನಂತರದ ಕಾಲದಲ್ಲಿ ಮಹಾನವರ ಸಮುದ್ರ ಸಮಾನವಾದ ಜ್ಞಾನಗಳನ್ನು ಕಂಡು ಉಸ್ತಾದವರುಗಳು ಮಹಾನವರ ತರಗತಿಗಳಿಗೆ  ಬರುತ್ತಿದ್ದರು.

ಅಬ್ದುಲ್ಲಾ ಇಬ್ನು ಅಹ್ಮದುಲ್ ಫಖಿಹ್ (ರ) ಎಂಬ ಪ್ರಶಿದ್ದ ಪಂಡಿತರಾಗಿದ್ದರು ಕಲಿಯುವ ಕಾಲದ ಹತ್ತಿರದ ಸ್ನೇಹಿತರು.

ಅವರು ಹೇಳುತ್ತಾರೆ;
ನಾವೆಲ್ಲರೂ ಒಟ್ಟಿಗೆಯಾಗಿದೆ ಬೆಳೆದಿರುವುದು. ಆದರೆ ಹದ್ದಾದ್ ತಂಗಳವರ (ರ) ಆತ್ಮೀಯ ಬೆಳವಣಿಗೆ ನಮ್ಮನ್ನು ಅದ್ಬುತಗೊಳ್ಳಿಸುವಂತಿತ್ತು.
ಬಾಲ್ಯ ಕಾಲದಲ್ಲೇ ಯಾಸಿನ್ ಓದಲು ಆರಂಭಿಸಿದರೆ  ಅಳುತ್ತಿದ್ದರು.

ಇನ್ನೊಂದು ಸ್ಥಳದಲ್ಲಿ ಹದ್ದಾದ್ ತಂಗಳರು (ರ ) ಹೇಳುತ್ತಾರೆ;
ನಾವು ಮೊದಲ ಕಾಲಗಳಲ್ಲಿ ವಫಾತ್ತ್ ಆದವರು, ಜೀವಿಸಿರುವವರು ಆದ ಸಜ್ಜನರನ್ನು ಹುಡಿಕಿಕೊಂಡು ಯಾತ್ರೆ(ಝಿಯಾರತ್ತಿಗೆ) ಹೋಗುತ್ತಿದೆವು. ಈ ಯಾತ್ರೆಗಲ್ಲೆಲವು ಕಾಲ್ನಡೆಯಾಗಿತ್ತು.

ಅತಿಥಿಗಳನ್ನು ಮಹಾನವರು ಪರಿಗಣಿಸಿದ ರೀತಿಗಳಲ್ಲಿ ಪ್ರತ್ಯೇಕ ಮಾದರಿ ಇದೆ. ತನ್ನ ಸಭೆಯಲ್ಲಿರುವ ಒಬ್ಬೊಬ್ಬರನ್ನು ಹತ್ತಿರಕ್ಕೆ ಕರೆದು ವಿಷಯಗಳನ್ನು ಕೇಳಿ ಅವರ ಸುಖದುಃಖಗಳಲ್ಲಿ ಬಾಗಿಯಾಗುತ್ತಿದ್ದರು. ಲೌಕಿಕ ನೇತಾರರಿಗೂ ಅರ್ಹವಾದ ಪರಿಗಣನೆ ಕೊಡುತ್ತಿದ್ದರು. ಮಹಾನವರುಗಳ ಸಭೆಯಲ್ಲಿ ಕೂಡಿದ ಎಲ್ಲರೂ ಒಳ್ಳೆಯ ಶ್ರದ್ದೆಯಿಂದ ಅವರ ಮಾತನ್ನು ಆಲಿಸುತ್ತಿದ್ದರು. ಯಾವ ನೆಲೆಯಲ್ಲಾದರೂ ಮಹಾನವರಿಗೆ ಅಲ್ಲಾಹುವಿನಲ್ಲಿರುವ ಸಾಮಿಪ್ಯಕ್ಕೆ ಯಾವ ಕಡಿಮೆಯು ಇರುತ್ತಿರಲಿಲ್ಲ.

ಮಹಾನವರು ಹೇಳುತ್ತಾರೆ; ಒಬ್ಬರ ಕಾರಣದಿಂದ ನಾನು ನನ್ನ ಅಲ್ಲಾಹುವಿನಲ್ಲಿರುವ ಸಂಬಂಧದಲ್ಲಿ ಯಾವ ಕಮ್ಮಿಯೂ ಮಾಡಿಲ್ಲ.

ಮಂದಸ್ಮಿತವಾಗಿ ಮನದಾಳದಿಂದ ಎಲ್ಲರನ್ನು ಆಕರ್ಷಿಸುವ ರೀತಿಯು ಮಹಾನವರ ಸ್ವಬಾವ ಮಹಿಮೆ ಮನೋಹರವಾಗಿತ್ತು.

ಹಿಜರಿ ವರ್ಷ1132 ದುಲ್ ಖಹ್ದ್ 7ರಂದು ಮಹಾನವರು ಇಹಲೋಕ ವಾಸ ತ್ಯಜಿಸಿದರು.

ಸುಮಾರು 88 ವರ್ಷ ಕಾಲದ
ಮಹಾನವರ ಜೀವನ ಮಾದರಿ ಯೋಗ್ಯವಾಗಿತ್ತು.

ಮಹಾನವರು ಕ್ರೂಡೀಕರಿಸಿದ *ಹದ್ದಾದ್ ರಾತ್ತಿಬನ್ನು* ನಾವು ಇಂದಿಗೂ ಓದುವ ರೂಡಿಯಲ್ಲಿದ್ದೇವೆ.

ಅದರ ಹಾಗೆ ಮಹಾನವರು ರಚನೆ ಮಾಡಿದ ಇನ್ನಿತರ ರಚನೆಗಳು ನಮ್ಮ ನಿತ್ಯ ಜೀವನದಲ್ಲಿ ಆಲಪಡಿಸಿಕೊಂಡರೆ ಖಂಡಿತವಾಗಿಯೂ ನಮ್ಮ ಜೀವಿನ ಹೆಚ್ಚು ಸಾರ್ಥಕವಾಗುದರಲ್ಲಿ ಸಂಶಯವಿಲ್ಲ.

ಮಹಾನವರುಗಳ ಬರ್ಕತ್ತಿನಿಂದ ಅಲ್ಲಾಹು ನಮ್ಮ ಇಹಪರ ಲೋಕವನ್ನು ವಿಜಯಗೊಳಿಸಲಿ.
 ಆಮೀನ್....

ಮುಗಿಯಿತು.

✍ ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಗಳ್

ಕನ್ನಡಕ್ಕೆ; ಗಫೂರ್ ಬಾಯಾರ್
💠💠💠💠🌷🌷🌷🌷

No comments:

Post a Comment