🕌ಝಿಯಾರತ್ತ್ ಕೇಂದ್ರ🕌
👉006⃣👈🏽
☪ಸಯ್ಯಿದುನಾ ಮುಹಮ್ಮದ್ ಇಬ್ನ್ ಇದ್ರಿಸ್ ಅಲ್ ಇಮಾಂ ಶಾಫಿಈ (ರಅ)☪
📚ಜ್ಞಾನ ವಿಹಾಯುಸ್ಸಿನ ಅತ್ಯುನ್ನತ ಪ್ರತಿಭೆ, ಆತ್ಮೀಯ ನಭೋಮಂಡಲದ ಮಹಾ ರಾಜರು.📚
➖➖➖➖➖➖➖➖
✍ಗಫೂರ್ ಬಾಯಾರ್
ಅವರ ಕಾಲಾವಧಿ ಕಳೆದು 1233 ವರ್ಷಗಳು ಕಳೆಯಿತು. ರಜಬ್ 29 ರಂದಾಗಿದೆ ವಫಾತ್ತ್ ದಿವಸ.
" ಈ ಭೂಲೋಕ ಸಂಪೂರ್ಣವಾಗಿ ವಿಜ್ಞಾನದಿಂದ ತುಂಬಿಸುವ ಒಂದು ಖುರೈಶಿ ವಿದ್ವಾಂಸರು ಬರಲಿದ್ದಾರೆ. ಎಂಬ ಪ್ರವಾದಿ (ಸಅ)ರವರ ದೀರ್ಘ ದರ್ಶನದ ಅಮೂಲ್ಯವಾದ ನಿಧಿಯಾಗಿದ್ದಾರೆ ಸಯ್ಯಿದುನಾ ಇಮಾಂ ಶಾಫಿಈ (ರ)ರವರು.
ಉತ್ತಮ ಶತಮಾನದಲ್ಲೇ ಜನನ,
[ಹಿಜ್ರ 150-204].
ಮುತ್ತು ನಬಿ (ಸಅ) ರವರ ನಾಲ್ಕನೆಯ ಪಿತಾಮಹಾನರಾದ ಅಬ್ದು ಮನಾಫ್ (ರ) ಇಮಾಂ ರವರ ಹತ್ತನೆಯ ಪಿತಾಮಹರಾಗಿದ್ದಾರೆ.
ಪಲೆಸ್ತೀನ್ ನ " ಗಸ್ಸ "
(ಈಗಿನ ಹೆಸರು ಗಾಝ) ದಲ್ಲಿ ಅವರ ಜನನ. ಅಸ್ಖಲಾನಿಯಲ್ಲೂ, ಯೆಮೆನಿನಲ್ಲಿಯೂ
ಶೈಶವ ಕಾಲವನ್ನು ಕಳೆದರು.
ಮಹಾ ಪಂಡಿತರಾದ ಅಬ್ದುಲ್ ರಹ್ಮಾನ್ ಇಬ್ನು ಮಹದಿ (ರ)ರವರ ನಿರ್ದೇಶನದ ಪ್ರಕಾರ ಕರ್ಮಶಾಸ್ತ್ರಕ್ಕೆ ಒಂದು ವಾಸ್ತವ ಶಾಸ್ತ್ರವಾಗಿ
" ಅರ್ ರಿಸಾಲ " ಎಂಬ ಗ್ರಂಥ ರಚಿಸಿದರು.
📚ಉಸೂಲುಲ್ ಫಿಖ್ಹ್ ನ
[ ಕರ್ಮಶಾಸ್ತ್ರ ನಿಧಾನ ಶಾಸ್ತ್ರ]
ಸ್ಥಾಪಕರಾಗಿ ಅರಿಯಲ್ಪಟ್ಟರು.
🕌ಇಮಾಂ ಮುಸ್ನಿ (ರ) ರವರು ಹೇಳುತ್ತಾರೆ;
" ಇಮಾಮಿನ " ಅಲ್ ರಿಸಾಲ " 500 ಸಲ ನಾನು ಪಾರಾಯಣ ಮಾಡಿದ್ದೇನೆ.
ಒಂದೊಂದು ಸಲ ಪಾರಾಯಣ ಮಾಡುವಾಗಲೂ, ಒಂದೊಂದು ಹೊಸ ಹೊಸ ವಿವರಗಳು ನನಗೆ ಅದರಿಂದ ಲಭಿಸುತ್ತಿತ್ತು.
🕌 ಇಮಾಂ ಅಹ್ಮದ್ ಬಿನ್ ಹಂಬಲ್ (ರ)ರವರು ಹೇಳುತ್ತಾರೆ;
" ಪೆನ್ನು ಮತ್ತು ಶಾಯಿ ಮುಟ್ಟಿದ ಯಾರೆಲ್ಲ ಇದ್ದಾರೆಯೋ ಅವರೆಲ್ಲರಿಗೂ ಇಮಾಂ ಶಾಫಿಈ (ರ) ಭಾದ್ಯತೆ ಇಲ್ಲದಿರಲಿಕ್ಕಿಲ್ಲ."
🕌ಪ್ರಸಿದ್ದ ಹದೀಸ್ ಪಂಡಿತರಾದ ಇಬ್ನು ಖುಸೈಮ(ರ)ರೊಂದಿಗೆ ಒಬ್ಬರು ಒಂದು ಪ್ರಶ್ನೆ ಕೇಳಿದರು;
ಇಮಾಂ ಶಾಫಿಈ (ರ) ರವರ ದೃಷ್ಟಿಯಲ್ಲಿ ಒಳಗೊಳ್ಳದ ಏನಾದರು ಹದೀಸುಗಳು ನಿಮ್ಮ ದೃಷ್ಟಿಗೆ ಬಿದ್ದಿದೆಯಾ?
ಇಬ್ನು ಖುಸೈಮ (ರ) ಉತ್ತರಿಸಿದರು;
ಇಲ್ಲ.... ಇಲ್ಲವೇ.... ಇಲ್ಲ....
🕌ಯಹ್ಯಾ ಇಬ್ನು ಸಹೀದುಲ್ ಖಥಾನ್ (ರ) ರವರು ಹೇಳುತ್ತಾರೆ;
" ಇಮಾಂ ಶಾಫಿಈ (ರ) ರವರಿಗೆ ಅಲ್ಲಾಹು ತಿಳಿದು ಕೊಟ್ಟ ವಿಜ್ಞಾನವು, ಅದರಿಂದ್ದ ಸರಿಯಾದ ಮಾರ್ಗದಲ್ಲಿ ಚಲಿಸಲು ಅಲ್ಲಾಹು ಅವರಿಗೆ ಅನುಗ್ರಹ ಕೊಟ್ಟದ್ದು, ಆ ಕಾರಣದಿಂದಾಗಿ 40 ವರ್ಷವಾಗಿ ಶಾಫಿಈ ಇಮಾಮ್ (ರ)ರವರಿಗೆ ಬೇಕಾಗಿ ಪ್ರಾರ್ಥಿಸದೆ ಒಂದು ನಮಾಝು ಕೂಡಾ ನಾನು ನಿರ್ವಹಿಸಲಿಲ್ಲ.
🕌ಹಂಬಲಿ ಇಮಾಂ ಶಾಫಿಈ ಇಮಾಮ್ (ರ)ತವರಿಗೆ ಬೇಕಾಗಿ ಮಾಡುತ್ತಿರುವ ಪ್ರಾರ್ಥನೆಯ ಅದಿಕ್ಯ ನೋಡಿದ, ಮಗನು ಕೇಳಿದರು;
ಯಾರಾಗಿದ್ದಾರೆ ಅಪ್ಪ ಅವರು?
ಇಷ್ಟಕ್ಕೂ ಮಹತ್ವವಿರುವ ಇಮಾಂ ಶಾಫಿಈ (ರ) ಯವರು.
ಇಮಾಂ ಅಹ್ಮದ್ ಇಬ್ನು ಹಂಬಲ್ (ರ) ರವರು ಮಗನ ಹತ್ತಿರ ವಿವರಿಸುತ್ತಾರೆ;
" ಮಗನೇ ಇಮಾಂ ಶಾಫಿಈ (ರ) ರವರು ಭೂಮಿಗೆ ಸೂರ್ಯನ ಪ್ರಕಾಶ ಆಗಿದ್ದರು. ಮನುಷ್ಯರಿಗೆ ಐಶ್ವರ್ಯದ ಹಾಗೆ ಆಗಿದ್ದರು.
🕌 ಹಿಜ್ರ; 204 ರಲ್ಲಿ ಈಜಿಪ್ಟ್ ನಲ್ಲಿ ವಫಾತ್ತ್ ಆದರು.
ಮಖ್ಬರ ಕೈರೋ ಈಜಿಪ್ಟಿನಲ್ಲಿ ಇದೆ.
🕌ಆ ಮಹಾತ್ಮರ ಬರ್ಕತ್ತಿನಿಂದ ನಮ್ಮ ಈಮಾನ್ ಹಾಗೂ ಇಲ್ಮು
ಉಳ್ಳವರಾಗಿ ನಮನ್ನು ಅನುಗ್ರಹಿಸು ಅಲ್ಲಾಹ್....
ನಮ್ಮಿಂದ ಮರಣ ಹೊಂದಿದರಿಗೆ ಮಗ್ಫಿರತ್ತ್, ಮರ್ಹಮತ್ತ್ ನೀಡಿ ಅನುಗ್ರಹಿಸು ಅಲ್ಲಾಹ್....
ಆಮೀನ್....
ಕನ್ನಡಕ್ಕೆ; ಗಫೂರ್ ಬಾಯಾರ್✍🏾
📚📚📚📚📚📚📚📚




No comments:
Post a Comment