☪ಝಿಯಾರತ್ತ್ ಕೇಂದ್ರ☪
👉5⃣👈🏽
✍🏾 ಗಫೂರ್ ಬಾಯಾರ್.
🔰🔰🔰🔰🔰🔰🔰🔰
🕌ಪ್ರಭೆ ಪ್ರಸರಿಸಿದ ಮಹಾಗುರು
ಅಶೈಖ್ ಅಬ್ದುರ್ರಹ್ಮಾನ್
ನಖ್ ಶ ಬಂದಿ(ರ) ತಾನೂರ್.
➖➖➖➖➖➖➖➖
🕌ಕೇರಳದ ಮಲಪ್ಪುರಂ ಜಿಲ್ಲೆಯ ತಾನೂರಿನ ಮಖಾಮಿನಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಪುಣ್ಯ ಯೋಗಿ. ಮಹಾನರವರು ಯಮನ್ ದೇಶದವರಾಗಿದ್ದಾರೆ. ಪೂರ್ವಿಕರಲ್ಲಿ ಹೆಚ್ಚಾಗಿ ಯಮನ್ ದೇಶದಿಂದಾಗಿದೆ ಕೇರಳಕ್ಕೆ ಆಗಮಿರುವುದು.
ಶೈಖ್ ಅಹ್ಮದುಲ್ ಯಮನಿ (ರ) ರವರು ಯಮನ್ ನಿಂದ ಭಾರತಕ್ಕೆ ಬಂದರು. ಜೊತೆಗೆ ಮೂವತ್ತು ಜನರ ಸಂಘವು ಇತ್ತು.
ಉಡುಪಿ ಜಿಲ್ಲೆಯ ಕುಂದಾಪುರದ ಪರಿಸರದಲ್ಲಿ ವಾಸವಾಗಿದ್ದರು. ಅಲ್ಲಿಯೇ ಅವರ ಮಕ್ಬರ ಕೂಡ ಇರುವುದು.
ಅದೇ ಪ್ರಕಾರ ಇದೇ ಪರಂಪರೆಯಲ್ಲಿ ಒಳಗೊಂಡ ಶೈಖ್ ಅಹ್ಮದುಲ್ ಯಮನಿ (ರ) ಎರಡನೇಯವರು ಪಾಂಡಿಚೇರಿ ರಾಜ್ಯದ ಮಾಹಿ ಎಂಬಲ್ಲಿ ಸ್ಥಿರ ವಾಸವಾಗಿದ್ದರು. ಅಲ್ಲಿಯೇ ಒಂದು ಮಸ್ಜಿದ್ ನಿರ್ಮಿಸಿದರು. ಅವರ ಪುತ್ರರಾಗಿದ್ದಾರೆ ಶೈಖ್ ಅಲಿಯ್ಯುಲ್ ಮದನಿ (ರ) ರವರು.
ಇವರ ಹಾಗೂ ಪಿತೃರವರ ಮಕ್ಬರಗಳು ಮಾಹಿಯಲ್ಲಾಗಿದೆ ಇರುವುದು. ಶೈಖ್ ಅಲಿಯ್ಯುಲ್ ಮದನಿಯವರ (ರ) ಮಗನಾಗಿದ್ದಾರೆ " ತಾನೂರಿನ ಶೈಖ್ ಅಬ್ದು ರ್ರಹ್ಮಾನ್ ನಖ್ ಶ ಬಂದಿ (ರ) ರವರು."
ನೂಜ್ಞೆರಿಯ ಅಹ್ಮದ್ ಅಬೂ
ಅಬ್ದಿಲ್ಲಾಹಿ ಸೂಫಿ (ರ) ಅವರಾಗಿದ್ದಾರೆ ಮಹಾನವರುಗಳ ಪ್ರಧಾನ ಶೈಖ್.
ನಖ್ ಶಬಂದಿ ತ್ವರೀಖತ್ತ್ ನ ಶೈಖ್ ಕೂಡ ಆಗಿದ್ದಾರೆ ಇವರು.
ಮಹಾನರಾದ ಪುತ್ತನ್ ಪಳ್ಳಿ ಶೈಖ್ ಕುಂಞ ಅಹಮ್ಮದ್ ಮುಸ್ಲಿಯಾರ್ (ರ) ರವರು ಪ್ರಧಾನ ಶಿಷ್ಯರಾಗಿದ್ದಾರೆ.
ಆತ್ಮಿಯ ತರಗತಿಗಳಿಂದಲೂ, ತನ್ನ ರಚನೆಗಳಿಂದಲೂ, ಪ್ರಭೆ ಪ್ರಸರಿಸಿದ ಮಹಾನರವರು, ಇಲಾಹೀ ಪ್ರೇಮದ ಅನಂತವಿಹಾಸ್ಸಿಗೆ ಹೃದಯವನ್ನು ಬಡಿದೆಬ್ಬಿಸಿ ಕೈ ಹಿಡಿದು ಮುನ್ನಡೆಸಿದರು.
اسرار المحققين في معرفة ربّ العالمين
افاضة القدسية
ಮೊದಲಾದ ಹಲವಾರು ಅತೀಂದ್ರಿಯ ಜ್ಞಾನದ ಬಾಗಿಲುಗಳು ತೆರೆದಿಟ್ಟುಕೊಂಡು ಮಹತ್ತಾದ ರಚನೆಗಳು ಸಮ್ಮಾನಿಸಿದರು.
ಮಲಪ್ಪುರಂ ತಾನೂರಿನಲ್ಲಿ ಸ್ವತಃ ನಿರ್ಮಿಸಿದ ಮಸ್ಜಿದ್ ನ ಅಂಗಳದಲ್ಲಿಯೇ ಅಂತ್ಯ ವಿಶ್ರಮ ಹೊಂದುತ್ತಿರುತ್ತಾರೆ.
115 ವರ್ಷಗಳಿಗೆ ಮೊದಲು ಶವ್ವಾಲ್ 22 ರಂದು ಮಹಾನರವರು ವಫಾತಾದರು.
ಮಹಾತ್ಮಾರುಗಳ ನೆರಳಿನಲ್ಲಿ ಅಲ್ಲಾಹು ನಮ್ಮನ್ನೂ ಕುಟುಂಬದವರನ್ನೂ ಅನುಗ್ರಹಿಸಲಿ,
ಆಮೀನ್....
✍🏾ಗಫೂರ್ ಬಾಯಾರ್
🔰🔰🔰🔰🔰🔰🔰🔰
No comments:
Post a Comment