Saturday, November 4, 2017

ಝಿಯಾರತ್ತ್ ಕೇಂದ್ರ
          ▶ 15 ◀
🔹🔹????🔹🔹??🔹
#ಅಸ್ಸಯ್ಯದ್_ಖುತುಬ್_ಮುಹಮ್ಮದ್ #ಮೌಲಲ್_ಬುಖಾರಿ (ಖ:ಸಿ) 
   #ಕಣ್ಣೂರು_ಸಿಟಿ.*
➖➖➖➖➖➖➖
✍ಗಫೂರ್ ಬಾಯಾರ್.
➖➖➖➖➖➖➖

🕌 ಆತ್ಮೀಯ ಲೋಕದ ಮಿನುಗು ತಾರೆ ಸಯ್ಯದ್ ಖುತುಬ್ ಮುಹಮ್ಮದ್ ಮೌಲಲ್ ಬುಖಾರಿ (ಖ:ಸಿ)ರವರು.

🕌ಕೇರಳಕ್ಕೆ ತಲುಪಿದ ಮಹಾನರಾದ ಅಸ್ಸಯ್ಯದ್ ಅಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ (ಖ:ಸಿ) ರವರ ಹಿಂದಿನ ತಲೆಮಾರಿನಲ್ಲಿ ಒಳಪಟ್ಟ ಸಯ್ಯದ್ ಮುಹಮ್ಮದ್ ಬುಖಾರಿ (ಖ:ಸಿ) ರವರಾಗಿದ್ದಾರೆ  ಮಹಾನವರ ತಂದೆಯವರು.

🕌ಸಯ್ಯದ್ ಮುಹಮ್ಮದ್ ಮೌಲಲ್ ಬುಖಾರಿ (ಖ:ಸಿ) ಯವರು ಹಿಜರಿ ವರ್ಷ 1144 ರಲ್ಲಿ ಲಕ್ಷದ್ವೀಪಿನ *ಕವರತ್ತಿ* ಎಂಬ ಸ್ಥಳದಲ್ಲಿ ಜನಿಸಿದರು.

🕌ಮಹಾನವರ ತವರೂರು ಕಣ್ಣೂರಿನ ವಳಪಟ್ಟಣ ಎಂಬ ಸ್ಥಳವಾಗಿದೆ.

🕌ಶೈಖ್ ಖಾಸಿಂ ವಲಿಯುಲ್ಲಾಹಿ (ಖ:ಸಿ) ಹಾಗು ಉಮರ್ ಹೈದ್ರೋಸುಲ್ ಮಕಿಯ್ (ಖ:ಸಿ) ಎಂಬಿಬ್ಬರಾದ ಮಹತ್ತುಕಳಾಗಿದ್ದರು ಮಹಾನವರ ಪ್ರಧಾನ ಗುರುವರ್ಯರು.

🕌ಅಣ್ಣನಾದ ಸಯ್ಯದ್ ಇಬ್ರಾಹಿಂ ಖಾಝಿ (ಖ:ಸಿ) ರವರು, ಮೌಲಾ (ಖ:ಸಿ) ತಂಗಳವರನ್ನು ವಳಪಟ್ಟಣಕ್ಕೆ ಕರೆದುಕೊಂಡು ಬಂದರು.

🕌ಇಸ್ಲಾಮಿಕ ಪ್ರಬೋಧನೆಕ್ಕಾಗಿ ಕೇರಳ, ತಮಿಳುನಾಡು, ಲಕ್ಷದೀಪ, ಮೊದಲಾದ ಸ್ಥಳಗಳಲ್ಲಿ ಸಂಚರಿಸಿ ಸಾವಿರಾರು ಜನರ ಆತ್ಮೀಯ ಗುರು ಅದರು. ಅಲ್ಲದೆ ಇತರ ಧರ್ಮ ಪುರೋಹಿತರೊಳಗೊಂಡ ಅನೇಕ ಜನರು ಪವಿತ್ರ ಇಸ್ಲಾಂ ಧರ್ಮ ಅಶ್ಲೇಷಿಸಿಸಲು ಕಾರಣವಾದರು.

🕌ಮಹಾನರುಗಳಾದ ಹೈದರ್ ಅಲಿ (ರ), ಟಿಪ್ಪು ಸುಲ್ತಾನ್ (ರ) _ಅಲ್ಲಫಲ್ ಅಲಿಫ್_ ರಚನೆಗಾರರಾದ ಉಮರುಲ್ ಖಾಹಿರಿ (ರ) ಹಾಗು ಗುಣಂ ಗುಡಿ ಮಸ್ತಾನ್ (ರ) ಚೆನ್ನೈ ಮೊದಲಾದ ಉನ್ನತರಾದ ಅನೇಕ ಶಿಷ್ಯರು ಸಯ್ಯದ್ ಮೌಲಾ (ಖ:ಸಿ) ತಂಗಳವರಿಗೆ ಇದೆ.

🕌ಖಾದಿರಿಯ್ಯ ತ್ವರೀಖತ್ತಿನ ಶೈಖ್ ಆಗಿದ್ದರು ಮಹಾನವರು.

🕌ಅನೇಕ ಸ್ಥಳಗಳಲ್ಲಿ ಮಸೀದಿಗಳನ್ನು ನಿರ್ಮಿಸಿದರು.
ಕೊಚ್ಚಿ ಚೆಬಿಟ್ಟ ಮಸೀದಿ, ನೆಟ್ಟೂರ್ ಮಸೀದಿ, ವಡುತಲ ಕೊಟ್ಟೂರ್ ಮಸೀದಿ ಮುಂತಾದವುಗಳು ಉದಾರಣೆ.

🕌ಉಲ್ಕೃಷ್ಟವಾದ ಸ್ವಭಾವದವರಾಗಿದ್ದರು ಮಹಾನವರು.

🕌ಬುಖಾರಿ ಕುಟುಂಬಗಳು ಚರಿತ್ರೆಗಳಲ್ಲಿ ಉನ್ನತವಾದ ಸ್ಥಾನಮಾನ ಅಲಂಕರಿಸಿದವರಾಗಿದ್ದಾರೆ.

🕌ತಮಿಳ್ನಾಡಿನ ಕಾಯಲ್ ಪಟ್ಟಣ, ಕೀಳಕೆರೆ, ಮೇಲೆಪ್ಪಾಳಯಂ, ಮೊದಲಾದ ಮುಸ್ಲಿಂ ಕೇಂದ್ರಗಳು, ಹಾಗು ಶ್ರೀಲಂಕಾ, ಮಲೇಷ್ಯಾ, ಇಂಡೋನೇಷ್ಯಾ, ಮೊದಲಾದ ದೇಶಗಳ ತಮಿಳು ಮುಸ್ಲಿಂ ಕೇಂದ್ರಗಳಲ್ಲಿಯು ಮಹಾನವರು ಇಂದು ಕೂಡ ಪ್ರಶಿದ್ದರಾಗಿದ್ದಾರೆ.

🕌ಸಾಹಿಬಲ್ ಅರೂಸ್ ಮುಹಮ್ಮದ್ ಮಾಪ್ಪಿಳ ಲಬ್ಬ ಆಲಿಂ (ರ) ರವರು ರಚಿಸಿದ " *ಮಿನ್ಹತುಲ್ ಬಾರಿ ಫೀ ಮದ್ಹತ್ತಿಲ್ ಬುಖಾರಿ* " ಎಂಬ ಗ್ರಂಥ ಮೌಲಾ (ಖ:ಸಿ)  ತಂಗಳವರ ಜೀವನ ಚರಿತ್ರೆಯಾಗಿದೆ..

🕌' *ರಾತ್ತಿಬ್ಬುಲ್ ಜಲಾಲಿಯ್ಯ*' ಎಂಬ ಕೃತಿ ಮಾಪ್ಪಿಳ ಲಬ್ಬಾ ಆಲಿಂ (ರ) ಯವರು ಸಮರ್ಪಿಸಿರುವುದು ಸಯ್ಯದ್ ಮುಹಮ್ಮದ್ ಮೌಲಲ್ ಬುಖಾರಿಯರ (ಖ:ಸಿ) ರವರ ಹೆಸರಿನಲ್ಲಾಗಿದೆ.

🕌 ಪ್ರಶಿದ್ಧವಾದ ಕೊಚ್ಚಿ ಚೆಬಟ್ಟಿ ಮಸೀದಿ ನಿರ್ಮಿಸುವ ಮೊದಲು, ಜೂದ ಪುರೋಹಿತನಿಗೆ ಉಂಟಾದ ಅನುಭವಗಳು ಅಲ್ಲದೆ ಧಾರಾಳ ಕರಾಮತ್ತುಗಳು ಮಹಾನವರ ಚರಿತ್ರೆಯಲ್ಲಿ ಕಾಣಬಹುದು..

🕌ಮಹಾನವರಿಗೆ 4 ಹೆಣ್ಣು ಮಕ್ಕಳು ಇತ್ತು.

🕌ಅಂತ್ಯ ಘಟ್ಟದಲ್ಲಿ ನೆಟ್ಟೂರಿನಿಂದ ಕಣ್ಣೂರಿಗೆ ತಲುಪಿದ ಮಹಾನವರು ಹಿಜರಿ ವರ್ಷ 1207, ಶವ್ವಾಲ್ 3 ರಂದು ತನ್ನ 63ನೇ ವಯಸ್ಸಿನಲ್ಲಿ ಈ ನಶ್ವರ ಲೋಕದಿಂದ ಯಾತ್ರೆಯಾದರು.

🕌ಕಣ್ಣೂರ್ ಸಿಟಿ ಎಂಬ ಸ್ಥಳದಲ್ಲಿರುವ ದೊಡ್ಡ ಜುಮಾಅತ್ತ್ ಮಸೀದಿಯ ಹತ್ತಿರದಲ್ಲಿರುವ ಮಖಾಮಿನಲ್ಲಾಗಿದೆ ಮಹಾನವರು ಅಂತ್ಯ ವಿಶ್ರಮಗೊಳ್ಳುವುದು.

🕌ಮಹಾತ್ಮರುಗಳನ್ನು ಸಂದರ್ಶಿಸಲು, ಚರಿತ್ರೆ ಅರಿಯಲು, ಅವರ ಸಚ್ಚರಿತವಾದ ಪಾದೆಯಲ್ಲಿ ಸಂಚರಿಸಲು ಅಲ್ಲಾಹು ನಮಗೆ ಭಾಗ್ಯವ ನೀಡಲಿ.
ಆಮೀನ್....

🕌✍ _ಗಫೂರ್ ಬಾಯಾರ್_
🖋✒🖋✒🖋✒🖋✒

No comments:

Post a Comment