Tuesday, October 31, 2017

*16 ವರ್ಷಗಳಿಂದ ಮುಸ್ಲಿಮರ ಜುಮಾ ಬಾತಿಲ್ ಮಾಡಿದ ಪ್ರಬಂಧಕ.*

📝 *ಮುನೀರ್ ಸಖಾಫಿ, ಸಾಲೆತ್ತೂರು.*

ಪತ್ರಿಕೆಯ ವರದಿಯೊಂದರಲ್ಲಿ 16 ವರ್ಷಗಳಿಂದ ಕನ್ನಡದಲ್ಲಿ ಖುತ್ಬ ನಿರ್ವಹಿಸುತ್ತಿರುವ  ಖತೀಬರೊಬ್ಬರ ಬಗ್ಗೆ ಓದಲು ಸಾಧ್ಯವಾಯಿತು.
ಕನ್ನಡ ದಲ್ಲಿ ಖುತ್ಬ ಓದಿ ಸಭಿಕರ ಜುಮಾ ಅಸಿಂದುಗೊಳಿಸಿದ ಖತೀಬರ ನಡೆಯನ್ನು ಯಾವುದೋ ಒಂದು ಹೊಸ ರಾಷ್ಟ್ರವನ್ನು ಕಂಡು ಹಿಡಿದವನನ್ನು ಪ್ರಂಶಿಸಿದಂತೆ  ಪ್ರಶಂಸಿದ್ದನ್ನು ಕಾಣಲು ಸಾಧ್ಯವಾಯಿತು.
ಕನ್ನಡ ತಿಳಿಯುವ ಯಾರಿಗೂ ಇದು ಮಾಡಬಹುದಾದ ಸಂಗತಿಯಾಗಿದೆ. ಇದರಲ್ಲಿ ಅಚ್ಚರಿಯೇನಿಲ್ಲ.
ನಮ್ಮ ಕರ್ನಾಟಕದಲ್ಲಿ ಸಾವಿರಾರು ಮಸೀದಿಗಳಿವೆ.
ಬಹುತೇಕ ಸುನ್ನೀ ಮಸೀದಿಗಳಾಗಿವೆ. ಬೆರಳಣಿಕೆಯಷ್ಟು ಸಲಪಿಗಳ ಮಸೀದಿ ಮತ್ತು ಮೌದೂದಿಗಳ ಮಸೀದಿಯನ್ನೂ ಕಾಣಬಹುದು.
ಸುನ್ನೀ ಮಸೀದಿಯನ್ನು ಹೊರತು ಪಡಿಸಿ ಸಲಪೀ ಮತ್ತು ಮೌದೂದಿಗಳ ಮಸೀದಿಗಳಲ್ಲಿ ಅರಬೀಯೇತರ ಭಾಷೆಗಳಲ್ಲಿ ಖುತ್ಬ ಪ್ರವಚನ ನೀಡಲಾದರೆ ಸುನ್ನೀ ಮಸೀದಿಗಳಲ್ಲಿ ಅರಬೀ ಭಾಷೆಯಲ್ಲಿ ಪ್ರವಚನ ನೀಡಲಾಗುತ್ತಿದೆ.

*ಯಾಕಾಗಿ ಅರಬೀ ಪ್ರವಚನ?*

ಬಹುಷ ಕರ್ನಾಟಕದ ಯಾರೂ ಕೂಡಾ ಕನ್ನಡ ಗೊತ್ತಿಲ್ಲದವರು ಇರಲಾರರು.ದಕ್ಷಿಣ ಕನ್ನಡದ ಉಲಮಾ/ಮೌಲ್ವಿಗಳು ಮಲಯಾಳಂ ಗೊತ್ತಿಲ್ಲದವರೂ ಇರಲಾರರು.
ಖುತ್ಬ ಪ್ರವಚನ ಕೇವಲ 10 ನಿಮಿಷದಿಂದ 20 ನಿಮಿಷಗಳ ವರೆಗೆ ಶುಕ್ರವಾರ ನಡೆಯುತ್ತದೆ.
ಈ 20 ನಿಮಿಷಗಳ ಕನ್ನಡ ಅಥವಾ ಮಲಯಾಳಂ ಭಾಷೆಯಲ್ಲಿ ಪ್ರವಚನ ನೀಡಲು ತಾಕತ್ತಿಲ್ಲದ ಯಾರೂ ಕೂಡ ಇಲ್ಲಿ ಇಲ್ಲ.
ಕನ್ನಡ ಗೊತ್ತಿದ್ದು ಮತ್ಯಾಕೆ ಅರಬಿಯಲ್ಲೇ ಸುನ್ನೀ ಮಸೀದಿಗಳಲ್ಲಿ ಖುತ್ಬಾ ಪ್ರವಚನ ನೀಡಲಾಗುತ್ತಿದೆ?
ಬಹುಷ ಮೌದೂದಿಗಳು ಭಾವಿಸಿರಬೇಕು ಕನ್ನಡ ಗೊತ್ತಿಲ್ಲದ್ದರಿಂದ ಸುನ್ನಿಗಳು ಅರಬಿಯಲ್ಲಿ ಖುತ್ಬಾ ನಿರ್ವಹಿಸುತ್ತಾರೆ ಎಂದು.
ಕನ್ನಡದಲ್ಲಿ ಮೌದೂದಿಗಳಿಗಿಂತ ನಿರರ್ಗಳವಾಗಿ ಭಾಷಣ ಮಾಡಬಲ್ಲವರು ಸುನ್ನೀ ಉಲಮಾಗಳಲ್ಲಿ ಇದ್ದಾರೆ. ಹಿರಿಯ ಸುನ್ನೀ ಸಾಹಿತಿಗಳಿದ್ದಾರೆ.
ಇಷ್ಟೆಲ್ಲಾ ಇದ್ದು ಮತ್ಯಾಕೇ ಅರಬೀ ಭಾಷೆಯನ್ನು ಅವಲಂಬಿಸುತ್ತಿದ್ದಾರೆ ಎಂಬುವುದು ಇಲ್ಲಿನ ಪ್ರಶ್ನೆಯಾಗಿದೆ.

*ಉತ್ತರ.*

ನಮಾಝ್ ಒಂದು ಆರಾಧನೆಯಾದಂತೆ ಖುತ್ಬಾ ಪ್ರವಚನ ಎಂಬುವುದು ಆರಾಧನೆಯಾಗಿದೆ. ಅರಾಧನೆಯನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು  ಕಲಿಸಿಕೊಟ್ಟ ಅದೇ ರೀತಿಯಲ್ಲೇ ನಿರ್ವಹಿಸಬೇಕೆಂಬುವುದು ಇಸ್ಲಾಮಿನ ತತ್ವವಾಗಿದೆ.
ಇದನ್ನು ನಾನು ನನ್ನ ಸ್ವಂತಿಕೆಯಿಂದ ಹೇಳುತ್ತಿಲ್ಲ.
ಇಸ್ಲಾಮಿನ ಕರ್ಮ ಶಾಸ್ತ್ರ ವಿದ್ವಾಂಸರು ಹೇಳುವುದನ್ನು ನೋಡಿ,
وشرط فيهما عربية
 (فتح المعين128)
ಎರಡು ಖುತ್ಬಾ (ಶುಕ್ರವಾರ 2 ಖುತ್ಬಾವನ್ನು ನಿರ್ವಹಿಸಲಾಗುತ್ತಿದೆ) ಅರಬೀ ಭಾಷೆಯಲ್ಲೇ ಆಗಿರಬೇಕೆಂಬುವುದು ನಿಯಮವಾಗಿದೆ.(ಫತ್'ಹುಲ್ ಮುಹೀನ್ 128)
----------------------------------
ويشترط كونها عربية
(منهاج 1/287)
ಖುತ್ಬಾ ಅರಬೀ ಭಾಷೆಯಲ್ಲಾಗಿರಬೇಕು.
(ಮಿನ್'ಹಾಜ್ 1/287)
----------------------------------
ಇಮಾಮ್ ಮಹಲ್ಲಿ(ರ) ಹೇಳುತ್ತಾರೆ,

ويشترط كونها كلها عربية
(محلي 1/287)
ಖುತ್ಬಾ ಸಂಪೂರ್ಣ ಅರಬಿ ಭಾಷೆಯಲ್ಲಾಗಿರಬೇಕು. ಅದು ನಿಬಂಧನೆಯಾಗಿದೆ.
(ಶರಹುಲ್ ಮಹಲ್ಲಿ 1/287).
----------------------------------
وكونها بالعربية وان كان الكل اعجمين للاتباع
(بشري الكريم 2/7)
ಸಭಿಕರೆಲ್ಲರೂ ಅರಬಿಯೇತರರಾಗಿದ್ದರೂ ಖುತ್ಬಾ ಅರಬಿಯಲ್ಲಾಗಿರಬೇಕು.
(ಬುಷ್ರಲ್ ಕರೀಂ 2/7)
----------------------------------
وكونها عربية وان كان القوم عجما لا يفهمونها
(شرقاوي 1/273)

ಸಭಿಕರೆಲ್ಲರೂ ಅರಬೀ ಭಾಷೆ ಗೊತ್ತಿಲ್ಲದ ಅರಬಿಯೇತರರಾಗಿದ್ದರೂ ಖುತ್ಬಾಗೆ ಅರಬೀ ಭಾಷೆ ನಿಬಂಧನೆಯಾಗಿದೆ.
(ಶರ್ಖಾವೀ 1/273)
----------------------------------
وكونها عربية وان كان الكل عجمية
(شرح بافضل 2/71)
ಸಭಿಕರೆಲ್ಲರೂ ಅರಬಿಯೇತರಾಗಿದ್ದರೂ ಖುತ್ಬಾ ಅರಬಿಯಲ್ಲಾಗಿರುವುದು ನಿಬಂಧನೆಯಾಗಿದೆ.
(ಶರಹು ಬಾಫಲಲ್ 2/71).
----------------------------------
فقد صرحوا باشتراط كون الخطبة عربية ،وان كانوا لا يفهمون معناها بل لا يشترط فهم الخطيب نفسه اركانها
(فتاوي الكردي 78)
ಅರಬಿಯಲ್ಲಿರುವ ಖುತ್ಬಾದ ಆಶಯಗಳು ಸಭಿಕರಿಗೆ ತಿಳಿಯದಿದ್ದರೂ ಖುತ್ಬಾ ಅರಬಿಯಲ್ಲೇ  ನಿಬಂಧನೆಯಾಗಿದೆಯೆಂದು ಇಮಾಮರುಗಳು ಸ್ಪಷ್ಟಪಡಿಸಿದ್ದಾರೆ.
ಮಾತ್ರವಲ್ಲ, ಖುತ್ಬ ನಿರ್ವಹಿಸುವ ಖತೀಬರಿಗೂ ಕೂಡಾ ಅದರ ಕಡ್ಡಾಯ ಭಾಗ್ದ ಅರ್ಥ ತಿಳಿಯಬೇಕೆಂದಿಲ್ಲ.
(ಫತಾವಲ್ ಕುರ್ದಿ 78)
----------------------------------
ಇಮಾಮ್ ನವವೀ(ರ) ಹೇಳುತ್ತಾರೆ,
فشرط فيه العربية كالتشهد وتكبيرة الإحرام مع قوله صلى الله عليه وسلم " صلوا كما رأيتموني أصلي " وكان يخطب بالعربية
(شرح المهذب 4/521)
ಅತ್ತಹಿಯ್ಯಾತ್, ತಕ್ಬೀರತುಲ್ ಇಹ್ರಾಂ (ನಮಾಝಿನಲ್ಲಿ) ಮುಂತಾದ ಕಡ್ಡಾಯ ಝಿಕ್ರ್ ನಂತೆ ಖುತ್ಬಾ ಕೂಡಾ ಝಿಕ್ರ್ ಆಗಿದೆ. ಆದುದರಿಂದ ಅತ್ತಹಿಯ್ಯಾತ್ ಮತ್ತು ತಕ್ಬೀರತುಲ್ ಇಹ್ರಾಂಗೆ ಅರಬೀ ಭಾಷೆ ಕಡ್ಡಾಯವಾದಂತೆ ಖುತ್ಬಾ ಗೂ ಅರಬೀ ಭಾಷೆ ಕಡ್ಡಾಯವಾಗಿದೆ.
ನಾನು ಯಾವ ರೀತಿ ನಮಾಝು ಮಾಡಿದ್ದೇನೋ ಅದೇ ರೀತಿ ನೀವು ನಮಾಝು ಮಾಡಿರೆಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದಾರೆ. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಅರಬೀ ಭಾಷೆಯಲ್ಲಿ ಖುತ್ಬಾ ನಿರ್ವಹಿಸಿದ್ದಾರೆ.
(ಶರಹುಲ್ ಮುಹದ್ದಬ್ 4/521).

ಜುಮಾ ನಮಾಝಿಗೆ ವಿಧ್ಯಾರ್ಥಿಗಳು ಬರುವರೆಂಬ ನೆಪವೊಡ್ಡಿ  ಖುತ್ಬಾದ ಭಾಷೆ ಬದಲಾವಣೆ ಮಾಡಲು ಯಾರಿಗೂ ಅಧಿಕಾರವಿಲ್ಲ. ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಮತ್ತು ಸ್ವಹಾಬಾ ಕಿರಾಮ್ ಹಾಗೂ ಪೂರ್ವೀಕ ಮಾಹಾತ್ಮರ್ಯಾರೂ ಕೂಡಾ ಖುತ್ಬಾಗೆ ಅರಬಿಯಲ್ಲದ ಭಾಷೆ ಉಪಯೋಗಿಸಿಲ್ಲ.
ಆ ಉತ್ತಮ ಸಮೂಹವೇ ಇದಕ್ಕೆ ದೊಡ್ಡ ಆಧಾರವಾಗಿದ್ದು, ಮುಸ್ಲಿಮರ ಜುಮಾ ಕುತ್ಬಾ ಆ ರೀತಿಯಾಗಿರತಕ್ಕದ್ದು.

*ಚರಿತ್ರೆಯಲ್ಲಿ*

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿ ಅರಂಬಿಸಿದ ಜುಮಾ ಖುತ್ಬಾ ಮಕ್ಕಾದಲ್ಲೇ ಕಡ್ಡಾಯವಾದರೂ ಬಹಿರಂಗವಾಗಿ ಸೇರಿ ಜುಮಾ ನಡೆಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಮದೀನಲ್ಲಿ ಅಸ್ ಅದು ಬಿನ್ ಝುರಾರ(ರ)ರವರ ನೇತೃತ್ವದಲ್ಲಿ ಮೊದಲನೇ ಜುಮಾ ಅರಂಬಿಸಲಾಯಿತು.
(ತುಹ್'ಫಾ2/405) ಆ ಕಾಲದಲ್ಲಿ ಹಲವಾರು ಅರಬಿಯೇತರ ಊರುಗಳಲ್ಲಿ ಜುಮಾ ಖುತ್ಬಾ ನಡೆದಿದ್ದು ಅರಬೀ ಭಾಷೆಯಲ್ಲಾಗಿದೆ. ಸ್ವಹಾಬಿಗಳು ಹಲವು ರಾಷ್ಟ್ರಗಳಿಗೆ ತೆರಳಿ ಇಸ್ಲಾಮ್ ಪ್ರಚುರಪಡಿಸಿದ್ದಾರೆ.
ಕೇರಳ,ಕರ್ನಾಟಕಕ್ಕೆ ಸ್ವಹಾಬಿಗಳು ಬಂದ ಚರಿತ್ರೆಗಳಿವೆ. ಅವರು ಯಾರೂ ಕೂಡಾ ಅರಬಿಯಲ್ಲದ ಭಾಷೆಯಲ್ಲಿ ಖುತ್ಬ ನಿರ್ವಹಿಸಿಲ್ಲ. ಕೇರಳ ಮತ್ತು ಕರ್ನಾಟಕದಲ್ಲಿ
ಸ್ವಹಾಬಿಗಳು ಸ್ವತಃ ನಿರ್ಮಿಸಿದ 10  ಮಸೀದಿಗಳು ಇವೆ.ಮಂಗಳೂರಿನ ಝೀನತ್ ಬಕ್ಷ್ ಮಸೀದಿ ಮತ್ತು ಉಡುಪಿ ಜಿಲ್ಲೆಯ ಬಾರ್ಕೂರಿನಲ್ಲಿರುವ ಮಾಲಿಕ್ ದೀನಾರ್ ಮಸೀದಿ ಸ್ವಹಾಬಿಗಳು ಕಟ್ಟಿದವುಗಳು ಎಂದು ಚರಿತ್ರೆಯಲ್ಲಿದೆ.
ಆ ಮಸೀದಿಗಳಲ್ಲಿ ಎಲ್ಲೂ ಕನ್ನಡ, ಕೊಂಕಣಿಯಲ್ಲಿ ಖುತ್ಬ ನಡೆದಿಲ್ಲ.
ಕಾರಣವಿಷ್ಟೆ,
ಖುತ್ಬಾ ಎಂಬುವುದು ಆರಾಧನೆಯಾಗಿದೆ. ಆರಧನೆಯನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಕಲಿಸಿಕೊಟ್ಟಂತೆ ನಿರ್ವಹಿಸಬೇಕು.
ನಮಗೆ ತೋಚಿದಂತೆ ಬದಲಾವಣೆಗೆ ಇಸ್ಲಾಮಿನಲ್ಲಿ ಅವಕಾಶವಿಲ್ಲ.

ಇನ್ನಷ್ಟು ವಿವರಣೆಗಳು ಬೇಕಾದಲ್ಲಿ ಮುದೆ ವಿವರಿಸೋಣ.

*ಮುನೀರ್ ಸಖಾಫೀ, ಸಾಲೆತ್ತೂರು.*
(ಸದಸ್ಯರು ಸುನ್ನೀ ಸಾಹಿತ್ಯ ಮಂಡಳಿ, ಮಂಗಳೂರು.)

No comments:

Post a Comment