Tuesday, October 31, 2017

☪ ಝಿಯಾರತ್ತ್ ಕೇಂದ್ರ☪
        👉4⃣👈🏽

ಖೈರುತ್ತಾಬಿಈನ್
ಸಯ್ಯಿದುನಾ ಉವೈಸುಲ್ ಖರನಿ (ರ:ಅ)
➖➖➖➖➖➖➖➖
     ✍ಗಫೂರ್ ಬಾಯಾರ್.

🕌ಫುರಾತ್ತ್ [ಯುಫಟ್ರಿಸ್ ಇರಾಖ್] ನದಿ ತೀರದಲ್ಲಿ ಒಬ್ಬ ಮನುಷ್ಯ ಕುಳಿತು ತನ್ನ ಬಟ್ಟೆ ತುಂಡುಗಳನ್ನು ತೊಳೆಯುತ್ತಿದ್ದಾರೆ.
ಮಾನಸಿಕ ರೋಗಿ ಎಂದು ಹೇಳಿ ಮಕ್ಕಳು ಅವರ ಮೇಲೆ  ಕಲ್ಲುಗಳು ಎಸೆಯುತ್ತಾ ಇದ್ದಾರೆ. ಆ ಮನುಷ್ಯ ಪುನಃ ತೊಟ್ಟಿಗಳಿಂದ ತನ್ನ ಬಟ್ಟೆ ತುಂಡುಗಳು ಹೆಕ್ಕಿ ತೊಳೆಯಲು ಶುರುಮಾಡುತ್ತಾರೆ.

ಆ ಮನುಷ್ಯರು ಹೇಳುತ್ತಾರೆ
ಮಕ್ಕಳೇ...
ನನ್ನ ಮೇಲೆ ದೊಡ್ಡ ಕಲ್ಲು ಎಸಯದಿರಲು ನಿಮಗೆ ಸಾದ್ಯವಾಗದಿದ್ದರೆ, ಸಣ್ಣ ಕಲ್ಲುಗಳಿಂದ ನನಗೆ ಎಸೆಯಿರಿ. ನೀವು ಎಸೆದು ನನ್ನ ಶರೀರದಿಂದ ರಕ್ತ ಚಿಮ್ಮುತ್ತದೆ, ಅಲ್ಪ ಸಮಯದ ನಂತರ ಆ ರಕ್ತವನ್ನು ತೊಳೆಯಲು ನೀರು ಸಿಗದಾಗಬಹುದೆಂದು ನಾನು ಭಯಬೀತನಾಗುತ್ತಿದೇನೆ.

ನಬಿ (ಸಅ) ಹೇಳಿದರು;
ಯೆಮನಿನ ಭಾಗದಿಂದ ಕರುಣಾನಿಧಿಯಾದ ಅಲ್ಲಾಹುವಿನ ತಂಗಾಳಿ ಬೀಸುವುದಾಗಿ ನಾನು ತಿಳಿದಿರುವೆನು ಎಂದು ಅವರನ್ನು ಸೂಚಿಸುವ ಮೂಲಕ ಪ್ರಶಂಸನೆಯ ಮಾತುಗಳಿಂದ  ಮುತ್ತು ನಬಿ (ಸಅ) ಹೇಳಿರುವುದು.

ಯಾರಗಿರಬಹುದು ಅವರು?
ಖರ್ಜೂರದ ಬಿತ್ತು ಹೆಕ್ಕಿ ತೆಗೆದು, ಆಹಾರವಾಗಿ ತಿನ್ನುತಿದ್ದ ಸರಳ ವಿಧದಲ್ಲಿರುವ ಕೆಲವು ಖರ್ಜೂರ ಸಿಕ್ಕರೆ ಅದನ್ನು ಉಪವಾಸ ತೆರೆಯಲು ತೆಗೆದು ಇಡುವಂತಹ ಸರಳ ಮನೋಭಾವದ ಮಹಾನ್  ಸಯ್ಯಿದುನಾ ಉವೈಸುಲ್ ಖರನಿ (ರ).

ಮಿಹ್ರಾಜ್ ನ ರಾತ್ರಿ,
ಪುಣ್ಯ ನಬಿಯವರು (ಸಅ) ಸ್ವರ್ಗ ಕಂಡಾಗ
ಅಲ್ಲಿ ಪ್ರಜ್ವಲಿಸುವ ಪ್ರಕಾಶ ಕಾಣಲು ಸಾದ್ಯವಾಯಿತು. ಅದು ಏನೆಂದು ಜಿಬ್ರೀಲ್ ಅ.ಸ ರವರಲ್ಲಿ ಕೇಳಿದಾಗ, ಅದು ತಮ್ಮ ಸಮುದಾಯದಲ್ಲಿ ಈಗ ಜೀವಿಸುತ್ತಿರುವ ಉವೈಸುಲ್ ಖರನಿ ಯವರ (ರ) ಪ್ರಕಾಶವಾಗಿದೆಯೆಂದು ಮಲಕ್ (ದೇವದೂತರು) ಹೇಳಿದ್ದರು.
ಅದಕ್ಕೊಂದು ಕಾರಣವೂ ಇದೆ..
ಯೆಮನಿನಲ್ಲಿ ತನ್ನ ರೋಗ ಗ್ರಸ್ಥ ತಾಯಿಯನ್ನು ಶುಶ್ರೂಷಣೆ ಮಾಡುವುದರಿಂದಾಗಿ ಮದೀನಾದ ಮುತ್ತನ್ನು ಹೋಗಿ ಕಾಣಲು ಸಾದ್ಯವಾಗಲಿಲ್ಲ ಅವರಿಗೆ.

ಆದರೆ ನಬಿ (ಸಅ) ತಂಙಳವರಿಗೆ ಇವರ ಕುರಿತು ಅರಿವು ಸಿಕ್ಕಿದೆ,

ಒಮ್ಮೆ ಉಮರ್ (ರ) ರವರನ್ನು, ಅಲಿ (ರ) ಯವರನ್ನು, ಕರೆದು ನಬಿ (ಸಅ) ಹೇಳಿದ್ದರು.

"ನನ್ನ ಕಾಲಾನಂತರ ಖರನಿ ಎಂಬ ಸ್ಥಳದಿಂದ ಒಂದು ಸಂಘ ಇಲ್ಲಿಗೆ ಬರುವರು, ಅದರಲ್ಲಿ ಉವೈಸ್ (ರ) ಎಂಬ ಓರ್ವರು ಇರುವರು, ಅವರಿಂದ್ದ ಈ (ಉಮ್ಮತ್ತ್) ಸಮುದಾಯಕ್ಕೆ ಮಗ್ಫಿರತ್ತ್ ಗಾಗಿ ದುವಾ ಮಾಡಿಸಬೇಕು." ಎಂದು

ಅತ್ಯುನ್ನತ ಪದವಿಯಲ್ಲಿ ಪ್ರಶೋಭಿಸಿದ ಸಯ್ಯಿದುನಾ ಊವೈಸುಲ್ ಖರನಿ (ರ) ರವರಿಗೆ ಪುಣ್ಯ ನಬಿ (ಸಅ) ರವರ ಹತ್ತಿರ ಸ್ನೇಹದ ಉತ್ತುಂಗೆಯಲಿ ಇದ್ದರು.
 ಉಹ್ದ್  ಯುದ್ದದಲ್ಲಿ ನಬಿ (ಸಅ) ರವರ ಒಂದು  ಹಲ್ಲು ತುಂಡಾಗಿದೆ ಎಂದು ಅರಿತ ಉವೈಸ್ (ರ) ರವರು, ಅದು ಯಾವ ಹಲ್ಲು ಎಂದರಿಯದೆ ತನ್ನ  ಎಲ್ಲಾ ಹಲ್ಲುಗಳನ್ನು ಕಿತ್ತು ತೆಗೆದು ಬಿಸಾಡಿದರು.

ತಾಯಿಯ ಪರಿಪಾಲನೆ ಮಾಡಿ
ಅಲ್ಲಾಹುವಿನ  ಪ್ರೀತಿ ತನ್ನದಾಗಿಸಿದ ಉವೈಸ್ (ರ)ರವರು.
ಪ್ರವಾದಿ (ಸಅ)ರವರನ್ನು  ತನ್ನ ಪ್ರಾಣಕ್ಕಿಂತಲೂ ಅತ್ಯಧಿಕವಾಗಿ ಪ್ರೀತಿಸಿದಂತಹ ಉವೈಸ್ (ರ)ರವರು.

ನಮ್ಮ ಸಮುದಾಯಕ್ಕೆ ಅವರಿಂದ ಅನೇಕ ಕಾರ್ಯಗಳನ್ನು  ಕಲಿಯಲು ಇದೆ.

ನಮ್ಮ ಸಮುದಾಯಕ್ಕೆ ಉವೈಸುಲ್ ಖರನಿ (ರ) ರವರಿಂದ ಹೇಳಿ ಮುಗಿಸಲಾಗದ ಭಾದ್ಯತೆ ಇದೆ.
ಈ ಸಮುದಾಯದ ಪಾಪಗಳನ್ನು ಮನ್ನಿಸಲು ದುವಾ ಮಾಡಲು ಪುಣ್ಯ ನಬಿ (ಸಅ) ರವರ ಸಲಹೆಯಂತೆ  ದುವಾ ಮಾಡಿದ ನಮ್ಮ ಎಲ್ಲವೂ ಆಗಿದ್ದಾರೆ ಸಯ್ಯಿದುನಾ ಉವೈಸುಲ್ ಖರನಿ (ರ) ರವರು.

ಅವರ ಜನನ AD; 594

ಅವರ ವಫಾತ್ತ್ AD; 657 ರ ರಜಬ್ ತಿಂಗಳಲಾಗಿದೆ.

ಅವರ ಮಕ್ಬರ ಸಿರಿಯಾ ದೇಶದ ರಕ಼್ಕ಼ ಎಂಬ ಸ್ಥಳದಲ್ಲಿ ಇದೆ.
2014 ರಲ್ಲಿ ಅವರ ಮಕ್ಬರವನ್ನು IS ಭಯೋತ್ಪದಕರು ದ್ವಂಸಗೊಳಿಸಿದ್ದರು.

ನಾವೂ ಅವರ ಮಖ್ಬರಕ್ಕೆ ಒಂದು ಫಾತಿಹಾ ಹದ್ಯ ಮಾಡೋಣ...

ಪುಣ್ಯ ಮಹಾತ್ಮರನ್ನು ಸ್ಮರಿಸುವುದು
 ನಾವು ನಮ್ಮ ಜೀವನವನ್ನು ಧನ್ಯಗೊಳಿಸುದಾಗಿದೆ.
ಆದ್ದರಿಂದ ನಮ್ಮ ಜೀವನವನ್ನು ಅವರನ್ನು ಪ್ರೀತಿಸುವ ಮೂಲಕ ಧನ್ಯಗೊಳಿಸೋಣ...

ಅಲ್ಲಾಹು ಸ್ವೀಕರಿಸಲಿ.
ಇವರ ಬರ್ಕತ್ತ್ ನಿಂದ ನಮ್ಮನ್ನು
ನಮ್ಮ ಕುಟುಂಬವನ್ನು ಅಲ್ಲಾಹು ಅನುಗ್ರಹಿಸಲಿ
ಆಮೀನ್....

✍ ಗಫೂರ್ ಬಾಯಾರ್.
📚📚📚📚📚📚📚📚

No comments:

Post a Comment