☪ಝಿಯಾರತ್ತ್ ಕೇಂದ್ರ☪
👉09👈
*ಅಸ್ಸಯ್ಯದ್ ಶಿಹಾಬುದ್ದೀನ್ ಅಲಿಯ್ಯುಲ್ ಹಳ್ರಮಿ رضي الله عنه*
ವಳಪಟ್ಟಣಂ, ಕಣ್ಣೂರ್.
✍ -ಗಫೂರ್ ಬಾಯಾರ್-
➖➖➖➖➖➖➖
🕌 -ಶಿಹಾಬುದ್ದೀನ್ ( ಶಿಹಾಬ್)
ಪರಂಪರೆಯಿಂದ ಯೆಮೆನಿನ ಹಳರ್ ಮೌತ್ತಿನಿಂದ ಕೇರಳಕ್ಕೆ ಆಗಮಿಸಿದ ಮಹಾನವರಾಗಿದ್ದಾರೆ. ಅಸ್ಸಯ್ಯದ್ ಶಿಹಾಬುದ್ದೀನ್ ಅಲಿಯ್ಯುಲ್ ಹಳ್ರಮಿ (ರ ) ರವರು.
ಹಿಜರಿ: 1159 ರಲ್ಲಿ ಜನಿಸಿರು,
ಹಿಜರಿ: 1181 ರಲ್ಲಿ ಕಲ್ಲಿಕೋಟೆಗೆ ಆಗಮಿಸಿದರು.
ಅಸ್ಸಯ್ಯದ್ ಅಹ್ಮದ್ ಶಿಹಾಬುದ್ದೀನ್ (ರ) ರವರಿಂದ ಶಿಯಾಬ್ ಎಂಬ ಪರಂಪರೆಯಯ ಆರಂಭ. ಅದೇ ಪರಂಪರೆಯವರಾಗಿದ್ದರೆ
ಶಿಯಾಬುದ್ದೀನ್ ಅಲಿಯ್ಯುಲ್
ಹಳ್ರಮಿ (ರ) ರವರು.
ಮೊದಲಿಗೆ ಕೆಲವು ಕಾಲ ಶೈಖ್ ಜಿಫ್ರಿ (ರ) ರವರ ಜೊತೆಗೆ ವಾಸವಾಗಿದ್ದ ಅವರು ತದನಂತರ ವಳಪಟ್ಟಣ ಎಂಬ ಸ್ಥಳಕ್ಕೆ ಹೋಗಿ, ಅರಕ್ಕಲ್ ಕುಟುಂಬದಿಂದ ವಿವಾಹವಾದರು.
ಹಿಜರಿ: 1212 ರಲ್ಲಿ ಈ ಲೋಕದಿಂದ ಯಾತ್ರೆಯಾದರು..
ವಳಪಟ್ಟಣ ಮಸೀದಿ ಅಂಗಣದಲ್ಲಿಯಾಗಿದೆ ಅಂತ್ಯ ವಿಶ್ರಮ..
ಇವರ ಮಗನಾದ ಸಯ್ಯದ್ ಹುಸೈನ್ (ರ) ಎಂಬವರಿಂದ ಕುಟುಂಬ ಬೆಳೆಯಿತ್ತು. ಇವರ ನಂತರದ ತಲೆಮಾರಿನಲ್ಲಿ ಮೊಮ್ಮಗನಾದ ಅಸ್ಸಯ್ಯದ್ ಹುಸೈನ್ ಅಟ್ಟಕೋಯ ತಂಗಳ್ (ರ) ರವರಿಗೆ, ಹಲವಾರು ಕರಾಮತುಗಳು ಪ್ರಕಟವಾಗುತ್ತಿತ್ತು, ಅವರೊಬ್ಬ ಮಹಾನ್ ಸೂಫಿವರ್ಯರು ವಿದ್ವಾoಸರು ಆಗಿದ್ದರು.
ಅವರು ವೆಲ್ಲೂರಿನ (ತಮಿಳ್ನಾಡು) ಮಸ್ಜಿದ್ ನಲ್ಲಿ ಅಂತ್ಯ ವಿಶ್ರಮ ಹೊಂದಿರುತ್ತಾರೆ.
ಪಾಣಕಾಡ್ ಸಾದಾತ್ತುಗಳು ಈ ಪರಂಪರೆಯಲ್ಲಿ ಒಳಪಟ್ಟವರಾಗಿದ್ದಾರೆ.
ಅಲ್ಲಾಹು ಅಹ್ಲು ಬೈತ್ತಿನ ಬರ್ಕತ್ತಿನಿಂದ ನಮ್ಮ ಹೃದಯ ಪ್ರಕಾಶಿಸುವಂತಾಗಲಿ
ಆಮೀನ್..
✍ -ಗಫೂರ್ ಬಾಯಾರ್-
🍀🍀🍀🍀🍀🍀🍀
No comments:
Post a Comment