Saturday, November 4, 2017

#ಝಿಯಾರತ್ತ್_ಕೇಂದ್ರ
          📗21📗
       🔹ಭಾಗ 02🔹
➖➖➖➖➖➖➖
ಅಹ್ಲಾ ಹಝ್ರತ್ ಇಮಾಂ ಅಹ್ಮದ್ ರಝಾ ಖಾನ್ (ರ) ಬರೇಲ್ವಿ, ಉತ್ತರ ಪ್ರದೇಶ.
➖➖➖🕌🕌➖➖➖

✍ ಗಫೂರ್ ಬಾಯಾರ್.

🕌ಹಿಜರಿ ವರ್ಷ 1340, ಸಫರ್ 25ನೇ ಶುಕ್ರವಾರ ಮಧ್ಯಾಹ್ನ 2:38 ಕ್ಕೆ ಬರೇಲಿಯಲ್ಲಾಗಿತ್ತು ಮಹಾನುಭಾವರ ವಿಯೋಗ (ವಫಾತ್).

ವಿಶ್ವಾಸಿ ಸಮೂಹಕ್ಕೆ ಮಾರ್ಗದರ್ಶನ ನೀಡಿ, ವೈಜ್ಞಾನಿಕ ಲೋಕಕ್ಕೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿಯಾಗಿದೆ ಧನ್ಯವಾದ ಆ ಪವಿತ್ರ ಜೀವನದ ಗಳಿಗೆಗಳು ಸಾಗಿರುವುದು..

ಮಹಾನರ ಅಂತ್ಯನಿಮಿಷಗಳಿಗೆ ಸಾಕ್ಷಿಯಾದ *ಮೌಲಾನ ಹುಸೈನ್ ರಝಾ ಖಾನ್* ಬರೆಯುತ್ತಾರೆ..👇

ಎಲ್ಲವೂ ಮೊದಲೇ ನಿಶ್ಚಯಿಸಿದಂತೆಯಾಗಿತ್ತು ಮಹಾನರುಗಳ ಅಂದಿನ ಸ್ವಭಾವ. ಸಮಯ ಮಧ್ಯಾಹ್ನ 1:56ಕ್ಕೆ ಮಹಾನರು ಸಮಯ ಕೇಳುತ್ತಾರೆ, ಗಡಿಯಾರವನ್ನು ಕೆಳಗೆ ಇಡಲು, ಚಿತ್ರಗಳನ್ನು ಕೋಣೆಯಿಂದ ತೆಗೆಯಲು ಹೇಳಿದರು.  ಕೋಣೆಯಲ್ಲಿ ಚಿತ್ರಗಳು ಇರಲಿಲ್ಲ.
ಕೂಟವಾಗಿ ನಿಂತಿರುವ ಜನರು ಆಶ್ಚರ್ಯಭರಿತರಾಗಿ ನೋಡುತ್ತಾ ಇದ್ದರು. ಆದರೆ ಕಾರ್ಡುಗಳು, ಕರೆನ್ಸಿ ಹಾಗೂ ಕವರುಗಳು ಎಂಬಿತ್ಯಾದಿಗಳನ್ನು ಉದ್ದೇಶಿಸಿಯಾಗಿತ್ತು ಮಹಾನವರು ಚಿತ್ರ ಎಂದು ಹೇಳಿರುವುದೆಂದು ವ್ಯಕ್ತಪಡಿಸಿದರು. ತದನಂತರ ಸಹೋದರನಾದ ಮೌಲಾನಾ ಮುಹಮ್ಮದ್ ರಝಾ ಖಾನ್ ನೊಂದಿಗೆ ವುಳೂಹ್ ಮಾಡಿ ಮುಸ್ಹಫ್ ನೊಂದಿಗೆ ಬರಲು ಆವಶ್ಯಪಟ್ಟರು. ಆಮೇಲೆ ಮತ್ತೊಂದು ಸಹೋದರನಾದ ಮುಸ್ತಫಾ ರಝಾಖಾನ್ ನ ಹತ್ತಿರ ಯಾಸಿನ್, ರಹ್ ದ್ ಸೂರಗಳ ಪಾರಾಯಣ ಮಾಡಲು ನಿರ್ದೇಶಿಸಿದ್ದರು.

ಯುಗಪುರುಷರಾದ ಮಹಾನರು  ನಮ್ಮಿಂದ ಬೇರ್ಪಡುವ ನಿಮಿಷಗಳು ಹತ್ತಿರವಾದವು. ಇನ್ನು ಕೆಲವೇ ನಿಮಿಷಗಳು ಮಾತ್ರ ಆ ಪವಿತ್ರ ಜೀವ ಬಾಕಿ ಇರುವುದು. ಮಹಾನರ ನಿರ್ದೇಶದಂತೆ 2 ಸೂರಾಃ ಗಳು ಪಾರಾಯಣ ಮಾಡಿ ಮುಗಿಸಿದ ಸಂದರ್ಭ, ಸಹೋದರನೊಂದಿಗೆ ಮಹಾನರವರು ಕೂಡ ಮೆಲು ದ್ವನಿಯಲ್ಲಿ ಖುರಾನ್ ಪಾರಾಯಣ ಮಾಡುತಿದ್ದರು. ಅದೃಶ್ಯ ಲೋಕದಿಂದ ನಿರ್ದೇಶನ ಸಿಕ್ಕಿದಾಗೆ ದೈನಂದಿನದ ಪ್ರಾರ್ಥನೆಗಳು, ಕೆಲವು ಪ್ರತ್ಯೇಕ ದ್ಸಿಕ್ರ್ ಹಾಗೂ ಪ್ರಾರ್ಥನೆಗಳಲ್ಲಿ ನಿರತರಾದರು.

ನಂತರ *ಕಲಿಮಃ* ಉಚ್ಚರಿಸಿದರು. ಶ್ವಾಸ ಎದೆಯಲ್ಲಿ ನಿಂತ ಹಾಗೆ ವಚನಗಳು ತುಟಿಗಳಲ್ಲಿ ಅಲುಗಾಡುವುದು ಕಾಣಲು ಸಾಧ್ಯವಾಯಿತು. ಒಂದು ನಿಮಿಷ ಮಹಾನವರುಗಳ ಮುಖ ಕಮಲ ಪ್ರಕಾಶಗೊಂಡಿತು. ಸೂರ್ಯಪ್ರಭೆ ಮುಖದ ಸುತ್ತಲೂ ಪಸರಿಸಿದ ರೀತಿಯಲ್ಲಿ ಆಗಿತ್ತು ಈ ಕ್ಷಣಗಳು.
ಆ ಪ್ರಕಾಶ ಅಪ್ರತ್ಯಕ್ಷವಾದಾಗಲೇ ಪವಿತ್ರವಾದ ಆ ಅತ್ಮವು ಅಲ್ಲಾಹನೆಡೆಗೆ ಯಾತ್ರೆಯಾಗಿತ್ತು. ಇನ್ನಾಲಿಲ್ಲಾಹ್....

ಬರೇಲಿಯಲ್ಲಿ ಮಹಾನರುಗಳ ಮಖ್ಬರದಲ್ಲಿ ಜನರ ನಿರಂತರವಾದ  ಜನಪ್ರವಾಹವು ಸದಾ ಸಮಯವೂ ಕಾಣಬಹುದು.

ಮಸೀದಿ ಮತ್ತು ದೀನಿ ಮತ ವಿಜ್ಞಾನ ಸಮುಚ್ಚಯವು ಮಖ್ಬರದ ಹತ್ತಿರವೇ ಇದೆ.

ನಮ್ಮ ಊರಿನ ದರ್ಸ್ ಸಂಪ್ರದಾಯವನ್ನು ಅನುಸ್ಮರಿಸುವ ರೀತಿಯಲ್ಲಿ ಬೆಳಿಗ್ಗೆ ಮಸೀದಿಯಲ್ಲೇ ದೀನಿ ವಿದ್ಯೆ ನಡೆಸುವುದು  ಆಕರ್ಷಣೀಯವಾಗಿದೆ.

ಫಜರ್ ನಮಾಜಿನ ನಂತರ ನಿತ್ಯವೂ
 *ಮುಸ್ತಫಾ ಜಾನೆ ರಹ್ಮತ್ ಪೆ ಲಾಖೋ ಸಲಾಂ* ಎಂಬ ಪ್ರವಾದಿ ﷺ ಪ್ರಕೀರ್ತನೆ ಕಾವ್ಯ ಆಲಾಪಿಸಿಯಾಗಿದೆ ಜನರು ಮರಳಿ ಹೋಗುವುದು.

ಉತ್ತರ ಭಾರತದ ಮಖ್ಬರಗಳಲ್ಲಿ ನೆಲೆಗೊಳ್ಳುವ ಅನಾಚಾರಗಳು, ಸ್ತ್ರೀ ಪುರುಷ ಸಮ್ಮಿಲನವು ಇಲ್ಲಿ ಕಾಣಲಿಕ್ಕಿಲ್ಲ. ಮುತ್ತು ನಬಿ ﷺ ರವರ ಪವಿತ್ರ ಕೇಶ ಮಖ್ಬರದೊಂದಿಗೆ ಇರುವ ಕೋಣೆಯಲ್ಲಿ ಸಂರಕ್ಷಿಸಿಡಲಾಗಿದೆ. ಈ ಕೋಣೆಯ ಸಮೀಪದಲ್ಲಿಯು ಪ್ರಕೀರ್ತನೆ ಕಾವ್ಯಗಳನ್ನು ಆಲಾಪಿಸುವ ಪ್ರವಾದಿ ﷺ ಸ್ನೇಹಿಗಳನ್ನು ಕಾಣಬಹುದು.

ವರ್ಷದಲ್ಲಿ 2 ಸಲ ಮಾತ್ರ ಪ್ರತ್ಯೇಕ ಸಂರಕ್ಷಿಸಿದ ಪುಣ್ಯ ಪವಿತ್ರ ಕೇಶವನ್ನು ಹೊರ ತೆಗೆದು ಪ್ರದರ್ಶಿಸುವುದು.

ಝಿಯಾರತಿಗೆ ಬರುವ ಸ್ತ್ರೀಯರಿಗೆ ಪ್ರತ್ಯೇಕ ಸೌಕರ್ಯಗಳನ್ನು ಅಲ್ಲೇ ಏರ್ಪಡಿಸಲಾಗಿದೆ.

📗ಮುಂದುವರಿಯುವುದು.

✍ಗಫೂರ್ ಬಾಯಾರ್
🍄🍄🍄🍄🍄🍄🍄

 ಝಿಯಾರತ್ತ್ ಕೇಂದ್ರ
         🌹�21🌹
           🔹ಭಾಗ 03🔹

*ಅಹ್ಲಾ ಹಜ್ರತ್ ಇಮಾಂ ಅಹ್ಮದ್ ರಝಾ ಖಾನ್ ಬರೇಲ್ವಿ (ರ).* ಬರೇಲಿ, ಉತ್ತರ ಪ್ರದೇಶ್
〰〰〰〰〰〰〰〰
✍  _ಗಫೂರ್ ಬಾಯಾರ್_

🕌ಕೇರಳಿಯರ ಕುರಿತು ಅಲ್ಲಿಯ ವಿದ್ಯಾರ್ಥಿಗಳಿಗೆ ಒಳ್ಳೆಯ ಅಭಿಪ್ರಾಯವಾಗಿದೆ.
*ಶೈಖ್ ಅಬೂಬಕ್ಕರ್ ಅಹ್ಮದ್* (ಎ.ಪಿ ಉಸ್ತಾದ್) ರವರ ಕೇರಳದ ಇಸ್ಲಾಮಿಕ ನವಜಾಗರಣದ ಕುರಿತು ಉತ್ತರ ಭಾರತದ ವಿದ್ಯಾರ್ಥಿಗಳು ಹೇಳುವುದು ಕೇಳುವಾಗ ಯಾರು ಕೂಡ ಆಶ್ಚರ್ಯಚಕಿತರಾಗುವರು.

ಬರೇಲಿ ಶರೀಫಿನ ಪಂಡಿತರನ್ನು ಜೊತೆ ಸೇರಿಸಿ ದೇಶದ ಎಲ್ಲಾ ಸ್ಥಳಗಳಲ್ಲಿ *ಕಾಂತಪುರಂ ಉಸ್ತಾದರು* ನಡೆಸುವ ಜೀವ ಕಾರುಣ್ಯ ಪ್ರವರ್ತನೆಗಳು, ಐಕ್ಯ ಶ್ರಮಗಳ ಅಂಗೀಕಾರವನ್ನು ಹಾಗು ಉತ್ತರ ಭಾರತದ ಜನ ಸಮೂಹದ ಹಿಂದುಳಿದ ಅವಸ್ಥೆಯನ್ನು ಇಲ್ಲದಾಗಿಸಲು ಶ್ರಮಿಸುವ ಅವರ ಕಠಿಣ ಪರಿಶ್ರಮ ಅಪಾರವಾಗಿದೆ ಎಂದು ಅಲ್ಲಿಯವರು ಸದಾ ಹೇಳುತ್ತಾ ನೆನಪಿಸುತ್ತಾರೆ.

ಅಹ್ಮದ್ ರಝಾಖಾನ್ (ರ) ರವರ ಶಿಷ್ಯ ಸಂಪತ್ತು ವಿಶಾಲವಾಗಿದೆ.

ಕೇರಳದ ಪಂಡಿತ ಲೋಕದ ವಿಸ್ಮಯವಾಗಿದ್ದ *ಅಹ್ಮದ್ ಕೋಯ ಶಾಲಿಯಾತ್ತಿ* (ರ) ರವರ ಹನಫೀ ಕರ್ಮಶಾಸ್ತ್ರದ ಉಸ್ತಾದರಾಗಿದ್ದರು ಮಹಾನರು.

ಇಂದು ಕೂಡಾ ಉತ್ತರ ಭಾರತದ
ಮುಸ್ಲಿಂ ಜನ ಸಮೂಹದ ಜೀವನದ ಭಾಗವಾದ *ಮುಸ್ತಫಾ ಜಾನೆ ರಹ್ಮತ್ ಪೆ ಲಾಖೋ ಸಲಾಂ* ಎಂದು ಆರಂಭಿಸುವ *ಬೈತ್ತ್* ಪ್ರವಾದಿ ﷺ ರವರ ಪ್ರಕೀರ್ತನೆ ರಂಗದಲ್ಲಿ ಮಹಾನವರ ಸಂಭಾವನೆಗಳಲ್ಲಿ ಅತೀ ಹೆಚ್ಚು ಜನಪ್ರಿಯ ಪ್ರಚಾರ ಆರ್ಜಿಸಿದ ಸಾಲುಗಳಲ್ಲಿ ಒಂದಾಗಿ ನೆಲೆಗೊಂಡಿರುತ್ತದೆ. ಪ್ರವಾದಿ ﷺ ರವರ ಮೇಲೆ ಇರುವ ಸ್ನೇಹ, ಅರಿವು,  ವಿಶ್ವಾಸ ದೃಢತೆ ಮತ್ತು ಆಶಯ ಆದರ್ಶ ಬೋಧನೆಯನ್ನು ಪಸರಿಸಿ, ಆದರ್ಶ ವ್ಯತ್ಯಾಸ ಚಿಂತನೆಗಾರರನ್ನು ಕಠಿಣವಾಗಿ ಪ್ರತಿರೋಧಿಸಿದ  ಪ್ರಮುಖ ಪಂಡಿತರು, ಸೂಫಿವರ್ಯರು, ವೈಜ್ಞಾನಿಕ ಲೋಕದ ತೇಜಸ್ಸು ಆದ  ಹಝ್ರತ್ತ್ ಅಹ್ಮದ್ ಖಾನ್ (ರ)ರವರನ್ನು ಎಲ್ಲಾ ಕಾಲವೂ ಸ್ಮರಿಸುತ್ತಿದೆ.

ಮಹಾನರನ್ನು ಸಂದರ್ಶಿಸಲು, ಅವರ ಹಕ್ ಜಾಹ್ ಬರ್ಕತ್ತಿನಿಂದ ಅಲ್ಲಾಹು ನಮಗೆಲ್ಲರಿಗೂ ತೌಫೀಖ್ ನೀಡಿ ಅನುಗ್ರಹಿಸಲಿ ಆಮೀನ್.

ಮುಗಿಯಿತು..📗

✍ ಗಫೂರ್ ಬಾಯಾರ್
📗📗📗📗📗📗📗

No comments:

Post a Comment