Tuesday, October 31, 2017

ಝಿಯಾರತ್ತ್ ಕೇಂದ್ರ
        🌷08🌷

☪ಉಸ್ತಾದರ ಉಸ್ತಾದ್ OK ಝೈನುದ್ದೀನ್ ಬಾಖವಿ ಉಸ್ತಾದ್ ಒಂದು ನೆನಪು☪

✍ಗಫೂರ್ ಬಾಯರ್.

ಇಸ್ಲಾಮಿಕ ಪ್ರಜಾರಣ ರಂಗದಲ್ಲಿ ಹಲವರು ಸಂಭಾವನೆಗಳು ಅರ್ಪಿಸಿದ ಮಹಾನ್ ವ್ಯಕ್ತಿತ್ವವಾಗಿದೆ ಉಸ್ತದುಲ್ ಅಸಾತ್ತಿದ್ ಎಂಬ OK ಉಸ್ತಾದ್.
ಒಂದು ಪುರುಷ ಆಯುಷ್
 ಮೊತ್ತ ಪರಿಶುದ್ದ ದೀನಿ ವಿಜ್ಞಾನ ಸೇವೆಗಾಗಿ ಮುಡಿಪಾಡು ಇಟ್ಟ ಯುಗಾoತರಗಳಲ್ಲಿ ಸ್ಮರಣಿಯವರಾದರೆಂಬುದಾಗಿದೆ ಓಕೆ ಉಸ್ತಾದರ ಮಹತ್ತರವಾದ ಕರಾಮತ್ತ್.
ಕೊಟಕಲ್ಲಿನತ್ತಿರ ಕುಯಿಪ್ಪುರತ್ ನಲ್ಲಿ 1916ರಲ್ಲಿ ಒಡಕ್ಕಲ್ ಮನೆತನನಲ್ಲಿ ಜನನ. ಕೈಪಟ್ಟ ಮಮ್ಮುಟ್ಟಿ ಮುಸ್ಲಿಯಾರ ದರ್ಸ್ ಗೆ ಸೇರಿದರು. 1932 ಚೆಮ್ಮoಡವು ನಲ್ಲಿಯು, ನಂತರ ವಂಡೂರ್ ತಲಕಡತ್ತೊರ್ ಎಂಬಿ ಸ್ಥಳಗಳಲ್ಲಿಯು, ಸ್ವದಾಕತುಲಲ್ಲಾಹಿ ಮುಸ್ಲಿಯಾರ ಶಿಷ್ಯತ್ವರಾದರು. 1940ರಲ್ಲಿ ನಡುತ್ತ್ ಕಾಪ್ಪಡ್ ಕುಂಞ ಅಹಮದ್ ಮುಸ್ಲಿಯಾರರ ದರ್ಸ್ ನಲ್ಲಿ ಸೇರಿದರು. [13/13/1978] ಅಲ್ಲಿ ಶಂಸುಲ್ ಉಲಾಮ ಉಸ್ತಾದ್, ಕಾಡೇರಿ, ಅಂಡೋನ ಅಬ್ದುಲ್ಲ ಮುಸ್ಲಿಯಾರ್, ಶೈಖ್ ಹಸ್ಸನ್ ಹಜ್ರತ್ ಮೊದಲಾದವರು ಕಲಿತಿದ್ದಾರೆ. 1944ರಲ್ಲಿ ಬಾಖಿಯಾತಿನಲ್ಲಿ ಸೇರಿದರು. ಪುಂದಾವನಂ ಅಬ್ದುಲ್ಲ ಮುಸ್ಲಿಯಾರ್, ಪನ್ನೂರ್ C ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಕೊಟ್ಟುಮಲ ಅಬೂಬಕ್ಕರ್ ಮುಸ್ಲಿಯಾರ್ ಮೊದಲಾದವರು ಅಲ್ಲಿ ಸಹಪಾಟಿ ಆಗಿದ್ದರು. 1946ರಲ್ಲಿ ಕುಯಿಪ್ಪುರತ್ ಮುದರಿಸ್ ಆದರು. ದರ್ಸ್ ಗೆ ಹೆಸರಿಟಿದ್ದು ಮದರಸ ಸಿರಾಜುಲ್ ಉಲೂಂ ಎಂದಾಗಿತ್ತು. K C ಜಮಾಲುದ್ದೀನ್ ಮುಸ್ಲಿಯಾರ್ ಮೊದಲಾದ ಪ್ರಗಲ್ಬರು ಪ್ರಥಮ ವರ್ಷದಲ್ಲೇ ಶಿಷ್ಯರಾದರು. 1948ರಲ್ಲಿ KC ಉಸ್ತಾದ್ ಒಳಗೊಂಡ ಪ್ರಥಮ ಸಂಘವನ್ನು ಬಾಖಿಯಾತಿಗೆ ಕಳುಹಿಸಿದರು. 1951ರಲ್ಲಿ ಬಿರುದು ಪಡೆದು ಬಂದ KC ಜಲಾಲುದ್ದೀನ್ ಮುಸ್ಲಿಯಾರ್ ಕಾಯಂಕುಲಂ ಹಸನಿಯ್ಯದಲ್ಲಿ ಮುದರಿಸ್ ಆಗಿರುವಾಗ, ತನ್ನ ಗುರು OK ಉಸ್ತಾದರನ್ನು ಅಲ್ಲಿಯ ಪ್ರದಾನ ಮುದರಿಸಾಗಿ ನೇಮಿಸಿದರು. ನಂತರ ಚೆರುಶೊಲೆ, ಮಾಟ್ಟುಲ್, ವೇದಾಂಬ್ರ ಎಂಬಿ ಸ್ಥಳಗಳಲ್ಲಿ ದರ್ಸ್ ನಡೆಸಿದರು.
1953ರಲ್ಲಿ ಚಾಲಿಯತ್ ಮುದರಿಸ್ ಆದರು. ದರ್ಸ್ ಶುರುಮಾಡುವುದು 80 ಮುತ್ತಅಲ್ಲಿಂ ಒಳಗೊoಡು ಆಗಿತ್ತು. 1959/60ರ, 2 ವರ್ಷ ತಲಕಡತೂರ್ ನಲ್ಲಿ ಮುದರಿಸ್ ಆದರು. ಪುನಃ ಚಾಲಿಯತ್ ಎಂಬಲ್ಲಿ 1979 ವರೆಗೆ. 1956, 79, 83 ರಲ್ಲಿ ಹಜ್ ಗೆ ಹೋದರು. 1980/88 ಕಾಲಘಟದಲ್ಲಿ ರಂಡತಾಣಿ ಕಿಯಕೋಪ್ಪುರಂ ಮುದರಿಸ್ ಆದರು. 1989ರಲ್ಲಿ ಪೊಟಿಯಾಟ್ ಅಳತೂರ್ ಪಡಿ ಎಂಬಲ್ಲಿ ಮುದರಿಸ್ ಆದರು. 1990ರಿಂದ [ವಫಾತ್] (2002) ರ ಮರಣದ ವರೆಗೆ ಒದುಕುoಙಲ್ ಇಯ್ಯಉಸ್ಸುನ್ನ ದಲ್ಲಿದರು.
1956 ರ ಹಜ್ಜ್ ಯಾತ್ರೆಯಾಗಿದೆ ಇಯ್ಯಸ್ಸುನ್ನ ಎಂಬ ಸ್ಥಾಪನೆ ಸ್ಥಾಪಿಸಲು ಪ್ರೇರಣೆ ಆದದ್ದು. ಹಜ್ ಯಾತ್ರೆಯಲ್ಲಿ ಶಿಷ್ಯರಾದ ಕೊಟೂರ್ ಅಬ್ದುಲ್ ಮಜೀದ್ ಮುಸ್ಲಿಯಾರ್ ಜೊತೆಗಿದ್ದರು. ಮದೀನಕ್ಕೆ ತಲುಪಿ  ರೌಳಾ ಶರೀಫ್ ಝಿಯಾರಾತ್ ಮುಗಿಸಿ, ಪರಿಸರದಲ್ಲಿ ಇರುವ ಎಲ್ಲಾ ಝಿಯರಾತ್ ಕೇಂದ್ರಗಳಿಗೆ ಹೋಗುವ ನಡುವೆ ಅಲ್ಲಲ್ಲಿ ಕಾಣುವ ಸಣ್ಣ ಸಣ್ಣ ಮಸ್ಜಿದ್ ಕಂಡ ಅವರಿಗೆ ಮನಸ್ಸಿನಲ್ಲಿ ಒಂದು ಮಸ್ಜಿದ್ ನಿರ್ಮಿಸಬೇಕೆಂಬ ಚಿಂತೆ ಆಯಿತ್ತು.
ಹಜ್ಜ್ ಮುಗಿಸಿ ಊರಿಗೆ ತಲುಪಿದ ಅವರು ಪಳ್ಳಿ ನಿರ್ಮಿಸಲು ತಯಾರಿ ನಡೆಸುವಾಗ ಕುಟುಂಬದವರಿಂದಲೇ ವಿರೋಧಗಳು ಎದುರಾಯಿತ್ತು. ಕಾರಣ ಸರಿಯಾಗಿ ಮಲಗಲು ಒಂದು ಮನೆ ಆದ ಮೇಲೆ ಮಸ್ಜಿದ್ ನಿರ್ಮಿಸಿದರೆ ಸಾಕು ಎಂದಾಗಿತ್ತು. ಆದರೆ ಶೈಖುನ ಅದು ಕಿವಿ ಕೊಡದೆ
ಪಳ್ಳಿ ನಿರ್ಮಿಸಲು ಸ್ಥಳ ಖರೀದಿಸಿ ಪಳ್ಳಿ ನಿರ್ಮಿಸಿದರು. ದರ್ಸ್ ಕೂಡ ಶುರುಮಾಡಿದರು. ಅಬ್ದುಲ್ ಮಜೀದ್ ಮುಸ್ಲಿಯಾರ್ ಮುದರ್ರಿಸರಾದರು. ಶೈಕುನರವರ ಕನಸು ನನಸಾಯಿತ್ತು. ಊರಿನವರಾದ ಕುಂಞಾಲವಿ ಹಾಜಿ ಶೈಕುನವರನ್ನು ಕರೆದುಕೊಂಡು ಹೋಗಿ ಒದುಕುoಙಳ್ ಬಜಾರ್ ನಲ್ಲಿರುವ ತನ್ನ 3 ಎಕ್ಕರೆ ಸ್ಥಳವನ್ನು ಸುತ್ತಿ ತೋರಿಸಿ ಕೊಟ್ಟು ಹೇಳಿದರು, ಇದು ನಿಮಗೆ ಕೊಡುತೇನೆ ಎಂದು, ಯಾರದೂ ಔದಾರ್ಯ ಸ್ವೀಕರಿಸಲು ಇಷ್ಟಪಡದ ಶೈಕುನ, ಅದು ಸ್ವೀಕರಿಸಲು ಅಸಮ್ಮತಿ ಹೇಳಿದಾಗ, ಶೈಕುನರಿಂದ ಹಾಜಿಯವರು ನೂರು ರುಪಾಯಿ ಕೇಳಿ ಪಡೆದು ಸ್ಥಳವನ್ನು ಹಸ್ತಾoತರಿಸಿದರು. ಆದರೆ ಹಾಜಿಯವರು ಆ ನೂರು ರೂಪಾಯಿಯಿಂದ ಆ ಸ್ಥಳದ ಸುತ್ತ ಗೋಡೆ ಕಟ್ಟಿಸಿ ಕೊಟ್ಟರು.
ಅಲ್ಲಾಹುವಿನಿಗೆ ಸುಜೂದ್ ಮಾಡಲು, ಇಲ್ಮ್  ಕಲಿಯಲು ಒಂದು ಮಸ್ಜಿದ್ ನಿರ್ಮಿಸಿದಾಗ ನಾಡಿಗೆ ಮೊತ್ತವಾಗಿ ಅಲ್ಲಾಹು ಕೊಟ್ಟ ಬಹು ದೊಡ್ಡ ಅನುಗ್ರಹವಾಗಿದೆ ಈ ಸಣ್ಣ ಮಸೀದಿಯಿಂದ ಇಂದು ಕೇರಳದಲ್ಲಿ ಅರಿಯಲ್ಪಡುವ 55 ವರ್ಷದ ಇತಿಹಾಸ ವಿರುವ ದೊಡ್ಡ ಅರೇಬಿಕ್ ಕಾಲೇಜು ಆಗಿ ಪರಿವರ್ತನೆಯಾದ ಒದುಕುoಙಳ್ ಇಯ್ಯಉಸ್ಸುನ್ನ ಎಂಬ ಸೌದ. ಹಲವಾರು ಅಹಸನಿ ಪಂಡಿತರು ಈ ಮೊದಲೇ ಹೊರಬಂದಿದ್ದಾರೆ. 1966 ರಿಂದ ಕಾಲೇಜಿನ ಪ್ರದಾನ ಮುದರಿಸಾದ ರೈಸುಲ್ ಉಲಾಮ E ಸುಲೈಮಾನ್ ಉಸ್ತಾದ್ ಆಗಿದ್ದಾರೆ ಇಂದಿನವರೆಗೆ  ಪ್ರಿoಸಿಪಾಲರು.
ಹಲವು ವರ್ಷದಿಂದ ಹಲವಾರು ಶಿಷ್ಯ ಸಂಪತು ಸಂಪಾದಿಸಿದ್ದಾರೆ ಶೈಖುನರು. ಅದು ಕೂಡ ವಿಜ್ಞಾನ ಸೈನಿಕರಾದ ಬಿರುದದಾರಿಗಳು. ಹಲವರು ವಫಾತ್ತಾದರೂ, ಪ್ರಗಲ್ಬರಾದ ಹಲವರು ಇಂದು ಜೀವಿಸಿದ್ದಾರೆ.
ರೈಸುಲ್ ಉಲಾಮ E ಸುಲೈಮಾನ್ ಉಸ್ತಾದ್, ಸುಲ್ತಾನುಲ್ ಉಲಾಮ AP ಉಸ್ತಾದ್, ನಿಬ್ರಾಸುಲ್ ಉಲಾಮ AK ಉಸ್ತಾದ್, ಆನಕರ ಕೊಯಕುಟ್ಟಿ ಉಸ್ತಾದ್, ಪೊಂಮ್ಮಲ ಉಸ್ತಾದ್  ಮೊದಲಾದವರು.  ಶೈಖುನವರ ವಿಜ್ಞಾನ ಸಾಗರಕ್ಕೆ ಬಂದ ಯಾರನ್ನು ವಿಜ್ಞಾನ ಕೊಡದೆ ಸುಮ್ಮನೆ ಬಿಡಲಿಲ್ಲ. ಅರಿವು, ಆದರ, ಗುರುತ್ವಗಳು ಕಲಿಸಿ ಕೊಟ್ಟು ಸಮುದಯಕ್ಕೆ ಉಪಯುಕ್ತವಾದ ಪಂಡಿತರನ್ನಾಗಿಸಿ ಪಳಗಿಸಿ ಕೊಟ್ಟು ಶೈಕುನರು ಯಾತ್ರೆಯಾದದ್ದು. ಅದರಿಂದಲೆ ಇದಕ್ಕೆ ಅನಸ್ವರವಾಗುವ ವಿಧದಲ್ಲಿ ಪ್ರಿಯ ಶಿಷ್ಯರಾದ ಕಾಂತಪ್ಪುರಂ ಉಸ್ತಾದರು ಹೆಸರಿಟ್ಟು ಕರೆದದ್ದು ☄ಬಹರುಲ್ ಉಲೂಂ☄ ಎಂದು. ಇಲ್ಮನ್ನು ಪಳಗಿಸಲು (ಪ್ರಸರಿಸಲು) ಜೀವನ ಮೊತ್ತ ತ್ಯಾಗ ಮಾಡಿದ ಆ ಪಂಡಿತ ಕುಲಪತಿಯಾದ ಸೂರ್ಯ ತೇಜಸ್ಸ್ 2002 ಆಗೋಸ್ಟ್ 15ಕ್ಕೆ (ಹಿಜರ: 1423 ಜಮಾದುಲ್ ಅಖಿರ್ 6 ಗುರುವಾರ) ಈ ಬೌದಿಕ ಲೋಕದಿಂದ ಯಾತ್ರೆಯಾದರು.  ಅಲ್ಲಾಹು ಅವರೊಂದಿಗೆ ನಮ್ಮನ್ನು ಸ್ವರ್ಗ ಲೋಕದಲ್ಲಿ  ಒಂದುಗೂಡಿಸಲಿ ಆಮೀನ್.
ಶೈಕುನಯವರ 14ನೇ ಅಂಡ್ ನೇರ್ಚೆ 16/03/2016ನಲ್ಲಿ ಮಲಪ್ಪುರಂ ಓದುಕುoಙಲಿನ ಉಸ್ತಾದರ ಮಖಾಂ ಪರಿಸರದಲ್ಲಿ ಬಹಳ ಅದ್ದೂರಿಯಿಂದ ನಡೆಯಿತು.

✍ಗಫೂರ್ ಬಾಯಾರ್
🌸🌸🌸🌸🌸🌸🌸

No comments:

Post a Comment