*ಅಹ್ಲುಸ್ಸುನ್ನತ್ ವಲ್ ಜಮಾಅತ್*
*••••••••••••••••••••••••••••••••••••*
*📝ಮುನೀರ್ ಸಖಾಫಿ, ಸಾಲೆತ್ತೂರು*
*°°°°°°°°°°°°°°°°°°°°°°°°°°°°°°°°°*
*ವಿಷಯ 1:*
*ಮೀಲಾದುನ್ನಬೀ.*
*------------------------------------------*
*ಭಾಗ ---4.*
ಇಮಾಮ್ ಶರ್'ವಾನಿ(ರ) ಬರೆಯುತ್ತಾರೆ;
*وان افضل الليالي ليلة المولد الشريف ،ثم ليلة القدر ،ثم ليلة الجمعة ،ثم ليلة الاسراء هذا* *بالنسبة لنا واما بالنسبة له* ﷺ
*فليلة الاسراء افضل الليالي؛لانه رأى فيها ربه بعيني رأسه علي الصحيح* (شرواني 2/405)
*ರಾತ್ರಿಗಳ ಪೈಕಿ ಅತೀ ಶ್ರೇಷ್ಟವಾದ ರಾತ್ರಿ ಪ್ರವಾದೀ ﷺ ಜನಿಸಿದ ರಾತ್ರಿಯಾಗಿದೆ. ನಂತರ ಲೈಲತುಲ್ ಖದ್ರ್ ತದ ನಂತರ ಶುಕ್ರವಾರ ರಾತ್ರಿ ಹಾಗೂ ಆಮೇಲೆ ಇಸ್ರಾ ನಡೆದ ರಾತ್ರಿಯೂ ಆಗಿದೆ. ಈ ಹೇಳಿದ್ದು ನಮ್ಮನ್ನು ಅಪೇಕ್ಷಿಸಿಯಾಗಿದೆ. ಪ್ರವಾದೀ ﷺ ರನ್ನು ಅಪೇಕ್ಷಿಸಿ ಶ್ರೇಷ್ಟವಾದ ರಾತ್ರಿ ಇಸ್ರಾ ರಾತ್ರಿಯಾಗಿದೆ. ಕಾರಣ ಅಲ್ಲಾಹನನ್ನು ದರ್ಶಿಸಿದ ರಾತ್ರಿಯಾಗಿದೆ ಇಸ್ರಾ ರಾತ್ರಿ.*
(ಶರ್'ವಾನಿ 2/405)
ಅದೇ ರೀತಿ ಶರ್'ವಾನಿಯ 3/462 ರಲ್ಲೂ ಕಾಣಬಹುದಾಗಿದೆ.
*-------------------------------------------*
ಇಮಾಮ್ ಬರೂಸವೀ (ರ)ಹೇಳುತ್ತಾರೆ;
*وافضل الليالي ليلة المولد المحمدي لولاه ما نزل القرأن ولا نعتت ليلة القدر وهو الاصح*
(روح البيان 6/360)
*ಅತೀ ಶ್ರೇಷ್ಟವಾದ ರಾತ್ರಿ ಮೀಲಾದ್ ರಾತ್ರಿಯಾಗಿದೆ. ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಇಲ್ಲದಿದ್ದರೆ ಖುರ್'ಆನ್ ಇರುತ್ತಿರಲಿಲ್ಲ, ಲೈಲತುಲ್ ಖದ್ರ್'ಗೆ ಮಹತ್ವ ಲಭಿಸುತ್ತಿರಲಿಲ್ಲ.*
(ರೂಹುಲ್ ಬಯಾನ್ 6/340)
*------------------------------------------*
*ಜನ್ಮ ದಿನ ಆಚರಣೆ*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮ ನಮಗೆ ಅಲ್ಲಾಹನು ನೀಡಿದ ಸೌಭಾಗ್ಯವಾಗಿದೆ.
ಆ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಬೇಕಾದದ್ದು ಸತ್ಯ ವಿಶ್ವಾಸಿಯ ಕರ್ತವ್ಯವಾಗಿದೆ.
ಅವರ ಜನ್ಮ ದಿನ ಆಚರಿಸುವುದು, ಆ ದಿನದಂದು ಸಂತೋಷಪಡುವುದು ಕೂಡಾ ಈಮಾನ್ ಇರುವ ಮನುಷ್ಯನ ಭಾಧ್ಯತೆ ಆಗಿದೆ.
ಇಮಾಮ್ ಸುಯೂಥೀ (ರ) ಹೇಳುತ್ತಾರೆ,
_وقد ظهر لي تخريجه على_ _أصل آخر ، وهو ما_ _أخرجه البيهقي عن أنس أن النبي صلى الله عليه وسلم عق عن نفسه بعد النبوة مع أنه قد ورد أن جده عبد المطلب عق عنه في سابع ولادته ، والعقيقة لا تعاد مرة ثانية ، فيحمل ذلك على أن_ _الذي فعله النبي صلى الله عليه وسلم إظهار للشكر على إيجاد الله إياه رحمة للعالمين وتشريع لأمته كما كان يصلي على نفسه لذلك ، فيستحب لنا أيضا إظهار_ _الشكر بمولده بالاجتماع وإطعام الطعام ونحو ذلك من وجوه القربات وإظهار المسرات_
(الحاوي للفتاوي 1/196)
_ಜನ್ಮ ದಿನ ಆಚರಣೆಗೆ ನಾನು ಮತ್ತೊಂದು ಆಧಾರವನ್ನು ಕಂಡು_ _ಹಿಡಿದಿದ್ದೇನೆ. ಅನಸ್ (ರ)ರಿಂದ ಇಮಾಮ್ ಬೈಹಖೀ (ರ) ವರದಿ ಮಾಡಿದ ಹದೀಸಿನಲ್ಲಿ ನುಬುವ್ವತ್ ನ ನಂತರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಅಖೀಖ ನೀಡಿದರು ಎಂದು ವರದಿಯಾಗಿದೆ. ಪ್ರವಾದೀ_ _ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಏಳನೇ ದಿನದಂದು ಅಜ್ಜ ಅಬ್ದುಲ್ ಮುತ್ತಲಿಬ್ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಅಖೀಖ ನೀಡಿದ ಬಗ್ಗೆ ಸ್ಥಿರಪಟ್ಟಿದೆ. ಅಖೀಖ_ _ಎರಡೆರಡು ಬಾರಿ ಕೊಡುವಂತದ್ದಲ್ಲ. ಆದುದರಿಂದ ಪ್ರಪಂಚಕ್ಕನುಗ್ರಹವಾಗಿ ತನ್ನನ್ನು ಸೃಷ್ಠಿಸಲ್ಪಟ್ಟಿದ್ದಕ್ಕೆ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ಭಾಗವಾಗಿ ತನ್ನ_ _ಸಮುದಾಯವನ್ನು ಕಲಿಸಿ ಕೊಡಲು ಅವರು ದ್ಸಬಹ್ ಮಾಡಿ ಕೊಟ್ಟಿದ್ದಾರೆ ಎಂದು ತಿಳಿದುಕೊಳ್ಳಬಹುದು. ಅದೇ ಉದ್ದೇಶಕ್ಕಾಗಿ ಅವರು ತನ್ನ ಮೆಲೇಯೇ ಸ್ವಲಾತ್_ _ಹೇಳುತ್ತಿದ್ದರು._
_ಒಟ್ಟಿನಲ್ಲಿ ಎಲ್ಲರೂ ಒಟ್ಟು ಸೇರಿ ಅನ್ನ ದಾನ ನಡೆಸಿಯೂ_ _ಹಾಗೂ ಇನ್ನಿತರ ಆರಾಧಾನ ಕರ್ಮಗಳ ಮೂಲಕವೂ ಪ್ರವಾದೀ ಸಲ್ಲಲ್ಲಾಹು_ _ಅಲೈಹಿವಸಲ್ಲಮರ ಜನನಕ್ಕೆ ಕೃತಜ್ಞತೆ ಸಲ್ಲಿಸುವುದು ಮತ್ತು ಸಂತೋಷಪಡುವುದು ಸುನ್ನತ್ ಆಗಿದೆ._
(ಅಲ್ ಹಾವೀ ಲಿಲ್ ಫತಾವ 1/196)
*------------------------------------------*
ಇಮಾಮ್ ಸುಯೂಥಿಯ ಪ್ರಸ್ತುತ ಮಾತನ್ನು ನಂತರದ ಎಲ್ಲಾ ಉಲಮಾ ಅಂಗೀಕರಿಸಿದ್ದಾರೆ.
ಪ್ರಶಸ್ತ ಕರ್ಮ ಶಾಸ್ತ್ರ ವಿದ್ವಾಂಸರಾದ ಇಮಾಮ್ ಇಬ್ನ್ ಖಾಸಿಮ್ (ರ) ಹೇಳುತ್ತಾರೆ;
*وقد أطال في إيضاح الاحتجاج لكون المولد محمودا مثابا عليه بشرطه مع إيضاح الرد على من خالف في ذلك بما ينبغي استفادته وجعل ذلك كله مؤلفا سماه حسن المقصد في عمل المولد فجزاه الله تعالى ما هو أهله(حاشية ابن قاسم 7/425)*
*ಕೆಲವು ನಿಬಂಧನೆಗಳ ಮೂಲಕ ಮೀಲಾದ್ ಆಚರಣೆ ಸ್ತುತ್ಯರ್ಹವೂ ಪ್ರತಿಫಾಲರ್ಹವೆಂದು ದೃಢಪಡಿಸಲು ಇಮಾಮ್ ಸುಯೂಥೀ (ರ) ಸವಿಸ್ತಾರವಾಗಿ ಬರೆದಿದ್ದಾರೆ. ಅದನ್ನು ವಿರೋಧಿಸಿದವರಿಗೆ ಖಂಡನೆಯನ್ನೂ ಬರೆದಿದ್ದಾರೆ. ಅದಕ್ಕಾಗಿ ಅವರು "ಹುಸ್ನುಲ್ ಮಖ್'ಸಿದ್ ಫೀ ಅಮಲಿಲ್ ಮೌಲಿದ್" ಎಂಬ ಹೆಸರಲ್ಲಿ ಒಂದು ಗ್ರಂಥವನ್ನು ಕ್ರೋಡೀಕರಿಸಿದರು. ಅವರ ಈ ಕೆಲಸಕ್ಕೆ ಅಲ್ಲಾಹನು ಪ್ರತಿಫಲ ನೀಡಲಿ.*
(ಹಾಶಿತಯತು ಇಬ್ನಿ ಖಾಸಿಮ್ 7/425)
ಇದೇ ರೀತಿ ಶರ್ವಾನಿ 7/425 ರಲ್ಲೂ ಕಾಣಬಹುದಾಗಿದೆ.
*------------------------------------------*
ಇಮಾಮ್ ಸುಯೂಥಿ (ರ) ಇಲ್ಲಿ (ಜನ್ಮ ದಿನಾಚರಣೆಗೆ ಪುರಾವೆ ನೀಡಿ) ಬಿದ್ ಅತ್ ಪ್ರಚಾರ ಪಡಿಸಿರುವುದಾದರೆ ನಂತರದ ವಿದ್ವಾಂಸರು ಅದನ್ನು ಒಪ್ಪುತ್ತಿರಲಿಲ್ಲ.
ತಪ್ಪು ಯಾರೇ ಹೇಳಿದರೂ ಅದನ್ನು ಮುಖ ನೋಡದೆ ವಿಮರ್ಶಿಸುವುದು ಇಮಾಮರುಗಳ ಶೈಲಿಯಾಗಿದೆ., ಆದರೂ ಅವರು ಇದನ್ನು ವಿಮರ್ಶಿಸಿಲ್ಲ. ಮಾತ್ರವಲ್ಲ ಅದಕ್ಕೆ ಬೆಂಬಲವನ್ನೇ ಸೂಚಿಸಿದ್ದಾರೆ.
*ಮುಂದುವರಿಯುವುದು.............*
*📝ಮುನೀರ್ ಸಖಾಫಿ, ಸಾಲೆತ್ತೂರು*
3/11/2017
No comments:
Post a Comment