Tuesday, October 31, 2017

*ಅಹ್ಲುಸ್ಸುನ್ನತ್ ವಲ್ ಜಮಾಅತ್*
*••••••••••••••••••••••••••••••••••••*
*📝ಮುನೀರ್ ಸಖಾಫಿ, ಸಾಲೆತ್ತೂರು*
*°°°°°°°°°°°°°°°°°°°°°°°°°°°°°°°°°*
   

*ವಿಷಯ 1:*

 *ಮೀಲಾದುನ್ನಬೀ.*
*------------------------------------------*
*ಭಾಗ ---3.*

*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಸ್ತಳ.*


ರಬೀವುಲ್ ಅವ್ವಲ್ 12 ರಂದು ಪ್ರವಾದಿ ವರ್ಯರು ಜನಿಸಿದ ಸ್ಥಳವನ್ನು ಮಕ್ಕಾ ನಿವಾಸಿಗಳು ಸಂದರ್ಶಿಸುತ್ತಿದ್ದರು ಎಂಬುವುದನ್ನು ಈಗಾಗಲೇ ವಿವರಿಸಿಯಾಗಿದೆ.
ಅದನ್ನು ಅವರು ಒಂದು ಸತ್ಕರ್ಮವಾಗಿ ಕಂಡಿದ್ದರು.
ಅವರ ಆ ಚರ್ಯೆಯನ್ನು ನಂತರದ ಉಲಮಾಗಳು ಅಂಗೀಕರಿಸಿದ್ದಾರೆ. ಒಂದು ವೇಳೆ ಅದು ಬಿದ್'ಅತ್ ಆಗಿದ್ದಲ್ಲಿ ವಿಧ್ವಾಂಸರು ಅದನ್ನು ಒಪ್ಪುತ್ತಿರಲಿಲ್ಲ.
ಮಾತ್ರವಲ್ಲ, ಮಕ್ಕಾಗೆ ತೆರಳಿದವರು ಸಂದರ್ಶಿಬೇಕಾದ ಸ್ಥಳಗಳನ್ನು ವಿವರಿಸುತ್ತಾ ಇಮಾಮ್ ನವವೀ (ರ) ಪ್ರಖ್ಯಾತ ಗ್ರಂಥವಾದ ಈಳಾಹ್ ನಲ್ಲಿ ಹೇಳುವುದನ್ನು ನೋಡಿ;

*الرابع عشرة :يستحب زيارة المواضع المشهورة بالفضل في مكة والحرم وقد قيل انها ثمانية موضعا ،منها البيت الذي ولد فيه رسول الله صلي الله عليه وسلم .*
*(كتاب الايضاح 404)*

*ಹಜ್ಜಾಜ್ ಗಳಿಗೆ ಸುನ್ನತ್ತಾದ 14 ನೇ ಕಾರ್ಯ.*
*ಮಕ್ಕಾದಲ್ಲಿರುವ ಪ್ರಸಿದ್ಧವಾದ ಸ್ಥಳಗಳನ್ನು ಸಂದರ್ಶಿಸುವುದಾಗಿದೆ.ಅದು18 ಸ್ಥಳಗಳಿವೆ. ಅದರಲ್ಲೊಂದಾಗಿದೆ ಪುಣ್ಯ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಸ್ಥಳ.*
*(ಈಳಾಹ್ 404)*

'ಸೂಖುಲ್ಲೈಲ್' ಎಂಬ ಸ್ಥಳದಲ್ಲಿದ್ದ ಆ ಮನೆಯನ್ನು ಕೆಡವಿ ಅದರ ಬದಲು ಅಲ್ಲಿ ಒಂದು ಲೈಬ್ರರಿಯನ್ನು ಸ್ಥಾಪಿಸಲಾಗಿದೆ.
ಹಲವು ದರ್ಗಾಗಳನ್ನು, ಖುಬ್ಬಗಳನ್ನು ನೆಲಸಮ ಮಾಡಿದ ವಹ್ಹಾಬಿಗಳಿಂದ ಇದನ್ನಲ್ಲದೆ ಬೇರೆ ಏನನ್ನು ನಿರೀಕ್ಷಿಸಬಹುದು?

ಪ್ರವಾದೀ ಸಲ್ಲಲ್ಲಾಹು ಅಲೈಹಿ ಜನಿಸಿದ ಸ್ಥಳ ಪುಣ್ಯ ಸ್ಥಳವಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.
ಅದನ್ನು ಸಂದರ್ಶಿಸುವುದು ಈಮಾನಿನ ಭಾಗವಾಗಿದೆ.
ಮಕ್ಕಾ ನಿವಾಸಿಗಳು ಅದನ್ನು  ಸಂದರ್ಶಿಸುತ್ತಿದ್ದರೆಂದು ಇಮಾಮರುಗಳು ಸ್ಪಷ್ಟಪಡಿಸಿದ್ದಾರೆ.

*ಮೀಲಾದ್ ರಾತ್ರಿ*

ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿ ಅತೀ ಮಹತ್ವವಿರುವ ರಾತ್ರಿಯಾಗಿದೆ. ಕಾರಣ ಯಾವುದೇ ರಾತ್ರಿ ಅಥವಾ ಹಗಲಿಗೆ ಮಹತ್ವವುಂಟಾಗಳು ಕಾರಣ ಆ ಸಮಯದಲ್ಲಿ ಯಾವುದಾದರೊಂದು ಕಾರ್ಯವುಂಟಾಗಿರುವುದರಿಂದಆಗಿದೆ.ಉದಾಹಣೆಗೆ ಶುಕ್ರವಾರ ದಿನಕ್ಕೆ ಮಹತ್ವ ಬರಲು ಕಾರಣ ಅಂದು ಆದಮ್ ಅಲೈಹಿಸ್ಸಲಾಮರನ್ನು ಸೃಷ್ಠಿಸಲಾಗಿದೆ ಎಂಬುವುದಾಗಿದೆ.ಇದನ್ನು
ಇಮಾಮ್ ಮುಸ್ಲಿಂ( ರ ) ವರದಿ ಮಾಡಿದ 1976 ನಂಬ್ರ ಹದೀಸಿನಲ್ಲಿ ಕಾಣಬಹುದು.
*عن ابي هريرة رضي الله عنه قال قال رسول الله صلي الله عليه وسلم:خير يوم طلعت عليه الشمس يوم الجمعة فيه خلق ادم وفيه ادخل الجنة وفيه اخرج منها (مسلم )*


ಪವಿತ್ರ ರಂಝಾನ್ ಗೆ ಮಹತ್ವ ಉಂಟಾಗಲು ಕಾರಣ ಆ ತಿಂಗಳಲ್ಲಿ  ಖುರ್'ಆನ್ ಅವತೀರ್ಣಗೊಂಡಿದೆ ಎಂಬುವುದಾಗಿದೆ.

ಎಲ್ಲವನ್ನೂ ಸೃಷ್ಠಿಸಲು ಕಾರಣ ಕರ್ತರಾದ
 ಪುಣ್ಯ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿ ಲೈಲತುಲ್ ಖದ್'ರ್ ಗಿಂತಲೂ ಪುಣ್ಯ ದಿನವೆಂದು ಇಮಾಮ್ ಖಸ್ತಲ್ಲಾನೀ (ರ) ವಿವರಿಸಿದ್ದಾರೆ,

_فإن قلت: إذا قلنا بأنه عليه السلام ولد ليلا، فأيما أفضل: ليلة القدر أو ليلة مولده عليه السلام؟_
_أجيب: بأن ليلة مولده عليه السلام أفضل من ليلة القدر من وجوه ثلاثة:_
_أحدها: أن ليلة المولد ليلة ظهوره صلى الله عليه وسلم، وليلة القدر معطاة له، وما شرف بظهور ذات المشرف من أجله أشرف مما شرف بسبب ما أعطيه، ولا نزاع في ذلك، فكانت ليلة المولد أفضل من ليلة القدر._
_الثاني: أن ليلة القدر شرفت بنزول الملائكة فيها، وليلة المولد شرفت بظهوره صلى الله عليه وسلم. ومن شرفت به ليلة_ _المولد_ _أفضل ممن شرفت بهم ليلة القدر، على الأصح المرتضى، فتكون ليلة المولد أفضل._
_الثالث: أن ليلة القدر وقع فيها التفضيل على أمة محمد صلى الله عليه وسلم، وليلة المولد الشريف وقع التفضل فيها على_ _سائر الموجودات، فهو الذي بعثه الله عز وجل رحمة للعالمين،_ فعمت به النعمة على جميع_ _الخلائق، فكانت ليلة المولد أعم نفعًا، فكانت أفضل._
(المواهب اللدنية 1/136)

*ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ರಾತ್ರಿ ವೇಳೆ ಜನಿಸಿದ್ದಾರೆ. ಹಾಗಾದರೆ ಆ ರಾತ್ರಿಗಾ ಹೆಚ್ಚು ಮಹತ್ವ? ಅಥವಾ ಲೈಲತುಲ್ ಖ'ದ್'ರ್ ಗಾ ಹೆಚ್ಚು ಮಹತ್ವ ಎಂದು ಕೇಳಿದರೆ 3 ಕಾರಣಕ್ಕೆ ಮೀಲಾದ್ ನ ರಾತ್ರಿಗೆ ಹೆಚ್ಚು ಮಹತ್ವವೆಂದು ಉತ್ತರಿಸಬಹುದು.*
1.
*ಈ ರಾತ್ರಿಯಲ್ಲಿ ಜನಿಸಿದ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ನೀಡಲ್ಪಟ್ಟ ಒಂದಾಗಿದೆ ಲೈಲತುಲ್ ಖ'ದ್'ರ್. ಪ್ರವಾದೀ ಸಲ್ಲಲ್ಲಾಹು* *ಅಲೈಹಿವಸಲ್ಲಮರಿಗೆ ನೀಡಲ್ಪಟ್ಟ ಕಾರಣದಿಂದ  ಆ ರಾತ್ರಿಗೆ ಮಹತ್ವ ಉಂಟಾಗಿದ್ದರೆ ಆ  ಗೌರವಕ್ಕೆ ಕಾರಣ* *ಕರ್ತರಾದವರ ಪುಣ್ಯ ಹಬೀಬರ ಶರೀರ ಪ್ರತ್ಯಕ್ಷವಾದ ರಾತ್ರಿಗೆ ಯಾಗಿದೆಯಲ್ಲವೇ ಹೆಚ್ಚು ಮಹತ್ವ ?*
*ಇದರಲ್ಲಿ ಯಾವುದೇ ತರ್ಕಕ್ಕೆ ಆಸ್ಪದವಿಲ್ಲ.*
*ಆದುದರಿಂದ ಮೀಲಾದ್ ರಾತ್ರಿ  ಲೈಲತುಲ್ ಖದ್ ರ್ ಗಿಂತ ಮಹತ್ವವಿರುವ  ರಾತ್ರಿಯಾಗಿದೆ.*

*2. ಮಲಕುಗಳು ಇಳಿದು ಬರುವುದರಿಂದ ಲೈಲತುಲ್ ಖದ್ರ್ ಗೆ ಮಹತ್ವ ಲಭಿಸಿದೆ. ಮೀಲಾದ್ ರಾತ್ರಿಗೆ ಪ್ರವಾದೀವರ್ಯರು ಜನಿಸಿದರೆಂಬ ಕಾರಣದಿಂದಲೂ. ಪ್ರಬಲ ಅಭಿಪ್ರಾಯ ಪ್ರಕಾರ ಮಲಕ್ ಗಳಿಗಿಂತ  ಶ್ರೇಷ್ಠತೆ ಪ್ರವಾದಿ  ಸಲ್ಲಲ್ಲಾಹಿ ಅಲೈಹಿವಸಲ್ಲಮರಿಗೆ ಆಗಿದೆ.*
*ಆದುದರಿಂದ ಮಲಕ್ ಗಳಿಗಿಂತ ಶ್ರೇಷ್ಠರಾದ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು  ಜನಿಸಿದ ರಾತ್ರಿ ಮಲಕ್ ಗಳು ಇಳಿದು ಬರುವ ಲೈಲತುಲ್ ಖದ್ರ್ ನ ರಾತ್ರಿಗಿಂತ ಮಹತ್ವವಿರುವ ರಾತ್ರಿಯಾಯಿತು.*

*3. ಲೈಲತುಲ್ ಖದ್ರ್ ನ ಶ್ರೇಷ್ಠತೆ ಈ ಉಮ್ಮತ್ ಗೆ ಮಾತ್ರ ಸೀಮಿತವಾಗಿದೆ. ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿಯ ಶ್ರೇಷ್ಠತೆ ಎಲ್ಲಾ ಸೃಷ್ಠಿಗಳಿಗೂ  ಲಭ್ಯವಾಗಿದೆ. ಆದುದರಿಂದ ಈ ರಾತ್ರಿಯೂ ಲೈಲತುಲ್ ಖದ್ರ್ ನ ರಾತ್ರಿಗಿಂತಲೂ ಮಹತ್ವವಿರುವ ರಾತ್ರಿಯಾಯಿತು.*
*(ಅಲ್ ಮವಾಹಿಬುಲ್ಲದುನ್ನಿಯ್ಯ 1/136)*
*ಮುಂದುವರಿಯುವುದು.............*

*📝ಮುನೀರ್ ಸಖಾಫಿ, ಸಾಲೆತ್ತೂರು*
1/11/2017

No comments:

Post a Comment