Saturday, November 4, 2017

ಝಿಯಾತ್ತ್ ಕೇಂದ್ರ
        👉�14👈
        ಭಾಗ 01
➖➖➖➖➖➖➖➖
 ✍ ಗಫೂರ್ ಬಾಯಾರ್
➖➖➖➖➖➖➖➖
♻ *ಖುತ್ತುಬುಲ್ ಆಲಂ, ಸಿ. ಎಂ. ವಲಿಯುಲ್ಲಾಹಿ ಮಡವೂರ್, (ಖ:ಸಿ) ಕಲ್ಲಿಕೋಟೆ.*♻

ಕೇರಳದ ಕಲ್ಲಿಕೋಟೆಯಲ್ಲಿ ಜೀವಿಸಿದ ಪ್ರಮುಖರಾದ ಆಧ್ಯಾತ್ಮಿಕ ವ್ಯಕ್ತಿತ್ವಗಳಲ್ಲಿ ಓರ್ವರಾದ *ಬಹುಮಾನ್ಯ ಶೈಖ್ ವಲಿಯುಲ್ಲಾಹಿ ಮಡವೂರ್ ಸಿ.ಎಂ (ಚಿಟ್ಟಾಡಿ ಮೀತ್ತಿಲ್) ಅಬೂಬಕ್ಕರ್ ಮುಸ್ಲಿಯಾರ್ (ಖ:ಸಿ)*

ಮಹಾನವರು ನಮ್ಮನ್ನು ಆಗಲಿ ಸುಮಾರು 25 ವರ್ಷಗಳಾಯಿತು. ಕೇರಳದ ಕಲ್ಲಿಕೋಟೆ ಜಿಲ್ಲೆಯ ಮಡವೂರಿನಲ್ಲಿ ಸೂಫಿವರ್ಯರು, ಪಂಡಿತರು ಆಗಿದ್ದ ಕುಂಞ ಮಾಹಿನ್ ಕೋಯ ಮುಸ್ಲಿಯಾರ್(ಖ:ಸಿ) ಹಾಗು ಆಯಿಷಾ ಹಜ್ಜುಮ್ಮ (ಖ:ಸಿ) ರವರ ಮಗನಾಗಿ ಹಿಜರ ವರ್ಷ 1348 ರಬಿಉಲ್ ಅವ್ವಲ್ 12
(1928) ರಂದು ಜನನ.

 ಮಹಾನವರ ಪೂರ್ವ ಪಿತಾಮಹಾನರವರುಗಳು ನೆಡಿಯನಾಡ್ ಎಂಬ ಊರಿನಿಂದ  ಮಡವೂರಿಗೆ ಬಂದವರಾಗಿದ್ದರು.

 ಪಿತಾಮಹಾನ್ ಕುಂಞ ಮಾಹಿನ್ ಮುಸ್ಲಿಯಾರ್ (ಖ:ಸಿ) ರವರು ಮಡವೂರಿನ ಖಾಝಿ ಮತ್ತು ಮುದರಿಸ್ ಆಗಿದ್ದರು.
ಪಂಡಿತರು, ವಾಗ್ಮಿಯೂ ಆಗಿದ್ದ ತಂದೆಯವರಿಂದಲೇ ಮಹಾನರವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಆರಂಭಿಸಿದರು.

 ನಂತರ ಮೊಂಗಂ ಅವರಾನ್ ಮುಸ್ಲಿಯಾರ್ (ಖ:ಸಿ) ರವರ ಹತ್ತಿರ ದರ್ಸ್ ವಿದ್ಯಾಭ್ಯಾಸ  ಆರಂಭಿಸಿದರು.

ಮಲಯಮ್ಮ ಅಬೂಬಕ್ಕರ್ ಮುಸ್ಲಿಯಾರ್ (ಖ:ಸಿ)
ಪ್ರಮುಖ ಪಂಡಿತರಾಗಿದ್ದ ಕುಟ್ಟಿಕಾಟ್ಟೂರ್ ಇಂಬಿಚ್ಚಾಲಿ ಮುಸ್ಲಿಯಾರ್ (ಖ:ಸಿ) ಮೊದಲಾದವರು ಪ್ರಮುಖ ಗುರುಗಳಾಗಿದ್ದರು.

 ಕೊಯಿಲಾಂಡಿಯಿಂದ ದರ್ಸ್ ವಿದ್ಯಾಭ್ಯಾಸ ಮುಗಿಸಿ ಉನ್ನತ ವಿದ್ಯಾಭ್ಯಾಸಕಾಗಿ ವೆಲ್ಲೂರ್ ಬಾಖಿಯಾತ್ತ್ ಸ್ವಾಲಿಯತ್ತ್ ಅರೇಬಿಕ್ ಕಾಲೇಜಿಗೆ ಹೋದರು. ಚಿಕ್ಕಂದಿನಿಂದ ಕಲಿಯುವ ಕಾಲದಲ್ಲಿಯೇ ಸೂಕ್ಷಮತೆಯನ್ನು  ಜೀವನದಲ್ಲಿ ಅಳವಡಿಸಿಕೊಂಡಿದರು.

  ಆಧ್ಯಾತ್ಮಿಕ ಚಿಂತೆಯಲ್ಲಿ ಮಗ್ನರಾಗುದರೋದಿಗೆ  ಆರಾಧನಾ ಕರ್ಮಗಳಲ್ಲಿ ನಿರತರಾಗಿದ್ದರು.

ಬಾಖಿಯಾತಿನ ಉನ್ನತ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ತನ್ನ ಪಿತಾಮಹಾನುಬವರು ನೇತೃತ್ವ ಕೊಡುತಿದ್ದ ಮಡವೂರ್ ಮಸೀದಿಯಲ್ಲಿಯೇ ದರ್ಸ್ ಆರಂಭಿಸಿದರು.

ಅನೇಕ ಮಹಾತ್ಮರುಗಳೊಂದಿಗೆ ನಿಕಟ ಸಂಪರ್ಕವನಿಟ್ಟುಕೊಂಡವರಾಗಿದರು.

  ಸೂಕ್ಷಮಶಾಲಿಯಾದ ವಿದ್ಯಾರ್ಥಿಗಳನ್ನು ಹೆಚ್ಚು ಇಷ್ಟಪಡುತ್ತಿದ್ದರು.

ಉತ್ತಮ ಮತ ಪ್ರಭಾಷಣೆಗಾರರಾಗಿದ್ದ ಮಹಾನವರು, ಮದ್ರಸ,  ಮಸೀದಿ, ದರ್ಸ್ ಗಳನ್ನು ಸ್ಥಾಪಿಸಲು ಹಾಗು  ಇನ್ನಿತರ ಎಲ್ಲಾ ದೀನಿ ಕಾರ್ಯಗಳಿಗೂ ಪ್ರಭಾಷಣ ಮಾಡುದರ ಮೂಲಕ ಹಣ ಸಂಗ್ರಹಿಸುತ್ತಿದ್ದರು.

1962 ರಲ್ಲಿ ಹಜ್ಜ್ ಕರ್ಮ ನಿರ್ವಹಿಸಲು ಹೋದ ಮಹಾನವರುಗಳು ಮದೀನ ಸಂದರ್ಶಿನ ವೇಳೆಯಲ್ಲಿ ವಿಶುದ್ಧ  ರೌಳಾ ಶರೀಫಿನ ಹತ್ತಿರ ಮುತ್ತು ನಬಿ ﷺ ರವರೊಂದಿಗೆ ಇರುವ ಸ್ನೇಹ ತಾಳಲಾರದೆ   ಭೋದರಹಿತರಾಗಿ ಬಿದ್ದರು.

 ಬಹುಮಾನ್ಯರಾದ  ವಲಿಯುಲ್ಲಾವರು ಮಂಗಳೂರಿನವರಾದ *ನಖ್ ಶಬಂದಿ* ತ್ವರೀಖತ್ತಿನ ಶೈಖ್ ಖುತುಬುಝಮನ್ *ಮೊಯ್ಯಿದೀನ್ ಸಾಹಿಬ್*(ಖ:ಸಿ) ರವರು ಕಲ್ಲಿಕೋಟೆಯಲ್ಲಿ  ಆಗಮಿಸಿದ ವಿಷಯ ತಿಳಿದು  ಅವರನ್ನು ಸಂದರ್ಶಿಸಿದ್ದರು.  ಅವರ ಆತ್ಮೀಯ ಶಿಸ್ಯತ್ವದಲ್ಲಿ ತನ್ನ ಜೀವನವನ್ನು ಮುಂದುವರಿಸಿದರು.

 ಅವರಿಬ್ಬರ ನಡುವೆ ಇರುವ ಆತ್ಮೀಯ ಸಂಬಂದಗಳು ಅದ್ಬುತವಾಗಿತ್ತು. ಮಹಾನವರು ಶೈಖರರೊಂದಿಗೆ 8 ವರ್ಷಗಳ ಕಾಲ ಜೊತೆಯಲ್ಲಿ ವಾಸಿಸಿದ್ದರು.

ನಂತರದ 3 ವರ್ಷಗಳ
ಕಾಲದ ಜೀವನವು ಅದ್ಬುತ, ವಿಷ್ಮಯವನ್ನು ಉಂಟು ಮಾಡುತ್ತಿತ್ತು.
ಆ ಕಾಲದ ಸರಳ ಜೀವನದಲ್ಲಿ ಹಲವಾರು ವಿಶೇಷತೆಗಳನ್ನು ಕಾಣಲು ಸಾದ್ಯವಾಗುತ್ತಿತು. ನಿರಂತರವಾದ ಆರಾಧಾನ ಕ್ರಮ ದಿನನಿತ್ಯದ ಉಪವಾಸ ಕೇವಲ ಒಂದೊಂದು ಖರ್ಚೂರ ಆಹಾರವಾಗಿತ್ತು.
2 ದಿವಸಕ್ಕೊಮ್ಮೆ ಅಲ್ಪ ಆಡಿನ ಹಾಲು ಕುಡಿಯುತ್ತಿದ್ದರು. ಹೀಗೆ 3 ವರ್ಷ ಕಳೆದರು.

ತದನಂತರ..
ಯಾತ್ರೆಯ ಕಾಲವಾಗಿತ್ತು.

🕌ಮುಂದುವರಿಯುವುದು

✍ ಗಫೂರ್ ಬಾಯಾರ್
♻♻♻♻♻♻♻♻

No comments:

Post a Comment