*ಅಹ್ಲುಸ್ಸುನ್ನತ್ ವಲ್ ಜಮಾಅತ್*
*••••••••••••••••••••••••••••••••••••*
*📝ಮುನೀರ್ ಸಖಾಫಿ, ಸಾಲೆತ್ತೂರು*
*°°°°°°°°°°°°°°°°°°°°°°°°°°°°°°°°°*
*ಮುನ್ನುಡಿ*
*""""""""""""""*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು, ಸ್ವಹಾಬಿಗಳು, ತಾಬಿವುಗಳು, ಇಮಾಮರುಗಳು (ಪುರಾವೆಗಳ ಮೂಲಕ) ನಮಗೆ ಕಲಿಸಿ ಕೊಟ್ಟ ಆದರ್ಶವಾಗಿದೆ ಸುನ್ನತ್ ಜಮಾಅತ್.
ಹಲವಾರು ಪುಣ್ಯ ಕರ್ಮಗಳನ್ನು ಕೆಟ್ಟ ಆಚಾರವಾಗಿ ಚಿತ್ರೀಕರಿಸಿ ಮುಸ್ಲಿಮರನ್ನು ಮುಶ್ರಿಕರೆಂದು, ಕಾಫಿರರೆಂದು ಹೇಳಿ ಸಮುದಾಯದ ಮಧ್ಯೆ ಭಿನ್ನತೆಯನ್ನು ಸೃಷ್ಠಿಸಿದವರಾಗಿದ್ದಾರೆ ಇಲ್ಲಿನ ನೂತನವಾದಿಗಳಾದ ಸಲಪಿ, ಜಮಾಅತೇ ಇಸ್ಲಾಮೀ, ತಬ್ಲೀಗಾದಿಗಳು.
ಸುನ್ನತ್ ಜಮಾಅತ್ ನ ಆಶಯ - ಆದರ್ಶಗಳನ್ನು ಪುರಾವೆಗಳ ಮೂಲಕ ಓದುಗರಿಗೆ ಮನದಟ್ಟಾಗುವಂತೆ ಸರಳವಾದ ಶೈಲಿಯಲ್ಲಿ ವಿವರಿಸುವ ಒಂದು ಬೃಹತ್ ಲೇಖನಗಳನ್ನು ಹಲವು ಭಾಗಗಳಾಗಿ ಬರೆಯಲು ತೀರ್ಮಾನಿಸಿದ್ದೇನೆ.
ಅಕ್ಷರ ತಪ್ಪುಗಳಿದ್ದಲ್ಲಿ ಓದುಗರು ಸರಿ ಪಡಿಸಿ ಇತರರಿಗೆ ಶೇರ್ ಮಾಡುವುದರಲ್ಲಿ ನನ್ನ ಅಭ್ಯಂತರವಿಲ್ಲ. ಎಲ್ಲರೂ ಸತ್ಯವನ್ನು ತಿಳಿಯಬೇಕೆಂಬ ಇರಾದೆಯಿಂದ ಮಾತ್ರ ಈ ಲೇಖನವನ್ನು ಬರೆಯಲು ಆರಂಬಿಸಿದ್ದೇನೆ.
*وما توفيقي الا بالله عليه توكلت واليه انيب.*
ಮೊದಲ ಭಾಗವಾಗಿ *ಈದ್ ಮೀಲಾದ್* ಎಂಬ ವಿಷಯವನ್ನು ಆಯ್ಕೆ ಮಾಡಿದ್ದೇನೆ.
*ವಿಷಯ 1:*
*ಮೀಲಾದುನ್ನಬೀ.*
*------------------------------------------*
*ಭಾಗ ---1.*
ರಬೀವುಲ್ ಅವ್ವಲ್ 12 ರಂದು ಪ್ರವಾದೀ ಜನ್ಮ ದಿನಾಚರಣೆ ಮಾಡುವಾಗ ವಹ್ಹಾಬಿಗಳು ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ.
ಅವುಗಳಲ್ಲಿ ಕೆಲವೊಂದು ಈ ರೀತಿಯಾಗಿರಬಹುದು.
1. ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ತನ್ನ ಜನ್ಮ ದಿನಾಚರಣೆ ಆಚರಿಸಿದ್ದರೇ?
2. ಸ್ವಹಾಬಿಗಳು ಯಾರಾದರೂ ಅಚರಿಸಿದ್ದಾರೆಯೇ?
3. ಅವರು ಅಂದು ಓದಿದ ಮೌಲಿದ್ ಯಾವುದು?
4. ಅವರು ಮೆರವಣಿಗೆಗೆ ಹಿಡಿದ ಧ್ವಜದ ಬಣ್ಣ ಯಾವುದು?
ಹೀಗೇ ಹಲವಾರು ಪ್ರಶ್ನೆಗಳು.
ವಾಸ್ತವದಲ್ಲಿ ಮೌಡ್ಯತನದಿಂದ ಕೂಡಿದ ಪ್ರಶ್ನೆಯಾಗಿದೆ ಇದು.
ವಿಷಯವನ್ನು ಸರಿಯಾಗಿ ಗ್ರಹಿಸಿದಲ್ಲಿ ಇಂತಹಾ ಪ್ರಶ್ನೆಗಳು ಉದ್ಭವಿಸಲಾರದು.
ಇಂಶಾ ಅಲ್ಲಾಹ್ ಎಲ್ಲವನ್ನೂ ಸರಿಯಾಗಿಯೇ ವಿವರಿಸುವೆನು.
ರಬೀವುಲ್ ಅವ್ವಲ್ 12 ರಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮ ದಿನ ಆಚರಣೆಗೆ ಮೀಲಾದುನ್ನಬೀ, ಈದ್ ಮೀಲಾದ್ ಎನ್ನುತ್ತೇವೆ.
*ಪ್ರವಾದೀ ಜನ್ಮ ಯಾವಾಗ?*
ಈದ್ ಮೀಲಾದ್ ಆಚರಿಸುವವರಿಗೆ ಪ್ರವಾದಿವರ್ಯರು ಯಾವಾಗ ಜನಿಸಿದರು ಎಂಬ ನಿಖರವಾದ ಮಾಹಿತಿ ಇಲ್ಲ ಎಂಬ ಆರೋಪ ವನ್ನು ವಹ್ಹಾಬಿಗಳು ಹೊರಿಸುತ್ತಾರೆ.
ಹಿಜ್ರ 150 ರಲ್ಲಿ ಮರಣ ಹೊಂದಿದ ಇಮಾಮ್ ಇಬ್ನ್ ಇಸ್'ಹಾಕ್ (ರ)ಅದಕ್ಕೆ ಈ ರೀತಿ ಉತ್ತರಿಸುತ್ತಾರೆ,
*قال ابن اسحاق :ولد رسول الله صلي الله عليه وسلم يوم* *الاثنين ،لاثنتي عشرة ليلة خلت من شهر ربيع الاول ،عام الفيل*
*(سيرة ابن هشام 1/161)*
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಗಜ ವರ್ಷದ ರಬೀವುಲ್ ಅವ್ವಲ್ 12 ರಂದು ಸೋಮವಾರ ಜನಿಸಿದರು.*
*(ಸೀರತು ಇಬ್ನಿ ಹಿಶಾಂ 1/161).*
ಈ ರೀತಿ ನೂರಾರು ಗ್ರಂಥಗಳಲ್ಲಿ ದಾಖಲಿಸಲ್ಪಡಲಾಗಿದೆ.
*ಮುಂದುವರಿಯುವುದು.............*
*📝ಮುನೀರ್ ಸಖಾಫಿ, ಸಾಲೆತ್ತೂರು*
No comments:
Post a Comment