Saturday, November 4, 2017

#ಝಿಯಾರತ್ತ್ #ಕೇಂದ್ರ
     ♦ 19 ♦
➖➖➖➖➖➖➖
✍ ಗಫೂರ್ ಬಾಯಾರು
➖➖➖➖➖➖➖
*ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ರ) ಉಳ್ಳಾಲ, ಮಂಗಳೂರು*

🕌ಕೇರಳ-ಕರ್ನಾಟಕ ರಾಜ್ಯಗಳ ಸಂಗಮ ಕೇಂದ್ರವಾದ ಉಳ್ಳಾಲದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಖುತುಬುಝ್ಝಮಾನ್ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ರ) ರವರು 400 ವರ್ಷಗಳಿಗೆ ಮೊದಲು ಮದೀನದಿಂದ ಉಳ್ಳಾಲಕ್ಕೆ ಆಗಮಿಸಿದರು.

ಕಣ್ಣಿಗೆ ಕಾಣದಷ್ಟು ದೂರದ ವಿಶಾಲವಾಗಿರುವ ಸಮುದ್ರದ ಮೇಲೆ ಒಂದು ನಮಾಜು ಚಾಪೆ ಹಾಸಿ, ಅದರಲ್ಲಾಗಿತು ಮಹಾನವರ ಯಾತ್ರೆ!

ಉಳ್ಳಾಲ ಸಮುದ್ರಕಿನಾರೆಯ ಹತ್ತಿರವಿರುವ *ಮೇಲಂಗಡಿ*ಎಂಬ ಸ್ಥಳದ ಮಸೀದಿಯಲ್ಲಾಗಿತ್ತು ಮಹಾನರು ವಾಸವಾಗಿದ್ದು.
ಮಸೀದಿಯಲ್ಲಿ ಸದಾ ಸಮಯ ಆರಾಧನೆಯಲ್ಲಿ ತಲ್ಲೀನರಾಗಿದ್ದ ಮಹಾನರು, ಜನಸೇವೆಯನ್ನು ಆರಾಧನೆಯ ಭಾಗವಾಗಿ ಕಂಡರು.

ಮಾನಸಿಕವಾಗಿ ನೊಂದು ತನ್ನನ್ನು ಸಮೀಪಿಸಿದವರೆಲ್ಲರಿಗೂ ಆಶ್ವಾಸನೆ ನೀಡಿ, ಅಂತವರಿಗೆ ಸಾಂತ್ವನವಾಗಿ ನೆಲೆಗೊಂಡರು.

ಹಲವಾರು ಮಾರಕವ್ಯಾಧಿಗಳು, ಸಾಂಕ್ರಾಮಿಕ ರೋಗಗಳು, ಪೈಶಾಚಿಕ ಬಾಧೆಗಳನ್ನು ಮಹಾನರು ಗುಣ ಮಾಡಿರುತ್ತಾರೆ.

ಧರ್ಮನಿಯಮಗಳಲ್ಲಿ ಅಗಾಧ ಪಾಂಡಿತ್ಯವಿರುವ ಮದನಿ ತಂಗಳರು (ರ), ಧರ್ಮ ನಿಯಮಗಳನ್ನು ಅನುಸರಿಸಿ ಮಾದರಿ ಯೋಗ್ಯವಾದ ಜೀವನ ಜೀವಿಸಿದರು. ಅದನ್ನು ಪ್ರಚರಿಸುವುದರ ಭಾಗವಾಗಿ ಸಾರ್ವಜನಿಕವಾಗಿಯೂ ಜನರೊಂದಿಗೆ ಬೆರೆತು ವಿವಿಧ ಸಾಮೂಹಿಕ, ಸಾಮಾಜಿಕ ಕಾರ್ಯಗಳಿಗೆ ನೇತೃತ್ವ ಕೊಟ್ಟರು.

ಕಡ್ಡಾಯವಾದ ಇಬಾದತ್ತುಗಳನ್ನು ಬಹಳ ಸೂಕ್ಷ್ಮತೆಯೊಂದಿಗೆ ಪರಿಪೂರ್ಣವಾದ ನೆಲೆಯಲ್ಲಿ ನಿರ್ವಹಿಸುತ್ತಿದ್ದರು. ಸುನ್ನತ್ತಾದ ಆರಾಧನೆಗಳು ಕಡ್ಡಾಯದ ತರ ನಿರ್ವಹಿಸುತ್ತಿದ್ದರು.

ಇಸ್ಲಾಂ ಧರ್ಮ ವಿರೋಧಿಸಿದನ್ನು ಸಂಪೂರ್ಣವಾಗಿ ನಿಷಿದ್ಧ ಮಾಡಿಕೊಂಡು ದೂರ ಸರಿದರು. ಹೀಗೆ ಜೀವಿಸಿದ ಸಯ್ಯದ್ ಮದನಿ (ರ) ರವರ ಪ್ರಾರ್ಥನೆಗೆ ದೊಡ್ಡ ಫಲ ಸಿಕ್ಕುತ್ತಿತ್ತು.

ಕೆಲವು ಕಾಲದ ನಂತರ ಒಂದು ಕಿ.ಮೀ ದೂರವಿರುವ ನದಿ ತೀರದ ಹತ್ತಿರವಿರುವ *ಅಲೇಕಳ* ಎಂಬ ಊರಿನಿಂದ ಮದುವೆ ಆದರು. (ಸಂತಾನಗಳು ಇರುವುದಾಗಿ ಚರಿತ್ರೆ ಇಲ್ಲ.)

*ಉರೂಸು ಮತ್ತು ಕರಾಮತ್ತುಗಳು*

🕌ಆಜ್ಮೀರ್ ಖಾಜಾ ಮುಈನುದ್ದೀನ್ ಚಿಶ್ತಿ (ರ) ತಂಗಳವರ ದರ್ಗಾದ ನಂತರ ಅತೀ ಹೆಚ್ಚು ಜನರು ಪಾಲ್ಗೊಳ್ಳುವ ಉರೂಸು ಉಳ್ಳಾಲದಾಗಿದೆ ಎಂದು ಹೇಳಲಾಗುತ್ತದೆ. ಈ ಉರೂಸಿನಲ್ಲಿ ಯಾವುದೇ ಅಸೌಕರ್ಯಗಳು ಅನುಭವವಾಗುವುದಿಲ್ಲ ಎಂಬುದು ಕೂಡ ಮಹಾನವರ ಕರಾಮತ್ತಾಗಿದೆ. ಉರೂಸು ಸಮಾರೋಪ ದಿವಸ ತಲುಪುವ ಲಕ್ಷಾಂತರ ಜನರಿಗೆಲ್ಲ ತುಪ್ಪದನ್ನ ಮತ್ತು ಆಡು ಮಾಂಸದ ಸಾರಿನ ಊಟವನ್ನು ವಿತರಣೆ ಮಾಡಲಾಗುತ್ತದೆ.

ಇಲ್ಲಿಗೆ ನೇರ್ಚೆ ಮಾಡಿ ಬಿಡುವ ಆಡು ಹಾಗು ಕುರಿಗಳು ಉರೂಸು ಸಮೀಪಿಸುವಾಗ ದೂರ ದೂರದಿಂದ ಮಖಾಂ ಪರಿಸರಕ್ಕೆ ತಲುಪುತ್ತದೆ.!

ಉಳ್ಳಾಲ ಪ್ರದೇಶವು ಒಮ್ಮೆ ಭೀಕರವಾದ ಜಲಕ್ಷಾಮದಿಂದ ತತ್ತರಿಸಿತು. ಅದೇ ವರ್ಷದಲ್ಲಿಯೇ ಆಗಿತ್ತು ಉರೂಸು ಕೂಡ!
ಸಾವಿರಾರು ಜನರಿಗೆ ಆಹಾರ ಮಾಡಲು ಅಲ್ಲದೆ ಪ್ರಾಥಮಿಕ ಅವಶ್ಯಗಳಿಗೆ ಕೂಡ ನೀರಿಲ್ಲದೇ ತುಂಬಾ ತೊಂದರೆ ಆಯಿತು. ಹತ್ತಿರದ ಊರಿನಲ್ಲಿಯೂ ನೀರು ಇರಲಿಲ್ಲ.
ಹೀಗೆ ಇರುವಾಗ ಕಮಿಟಿ ಪದಾಧಿಕಾರಿಗಳು, ಅಲ್ಲದವರು ಮಖಾಂ ಶರೀಫಿಗೆ ಹೋಗಿ ತಮ್ಮ ಅಹವಾಲು ಬೋಧಿಸಿ ಪ್ರಾರ್ಥನೆ ಮುಗಿಸಿ ಕಣ್ಣೀರು ಒರೆಸುವ ಸಂಧರ್ಭದಲ್ಲಿ ಒಂದು ದೊಡ್ಡ ಶಬ್ದ ಕೇಳಲಾಯಿತು. ಮಖಾಮಿನ ಪಕ್ಕದಲ್ಲೇ ಇರುವ ಬಾವಿಯಿಂದಾಗಿತ್ತು ಆ ಶಬ್ದ!
ಅಲ್ಲಿರುವರೆಲ್ಲರೂ ಆಕಡೆ ತೆರಳಿದರು. ಏನದ್ಬುತ! ಬತ್ತಿ ಹೋಗಿದ್ದ ಬಾವಿಯಲ್ಲಿ ನೀರು ತುಂಬಿಕೊಂಡು ಬರುತ್ತಿದೆ.! ನೋಡಿದವರೆಲ್ಲರೂ ಮೂಕವಿಸ್ಮಿತರಾದರು.
1945 ರಲ್ಲಿಯಾಗಿತ್ತು ಈ ಘಟನೆ. ಖುತ್ತುಬುಝ್ಝಮಾನರಾದ ಸಯ್ಯಿದರ ಕರಾಮತ್ತುಗಳು ಬಹಳಷ್ಟು ಇವೆ. ಅಲ್ಲಿಯ ನೇರ್ಚೆಗೂ, ಝಿಯಾರತ್ತಿಗೂ ಅದ್ಭುತವಾದ ಫಲಗಳು ಇವೆ. ಬರೆದರೆ ಮುಗಿಯಲಿಕ್ಕಿಲ್ಲ.

ಉಳ್ಳಾಲ....

ಮುಂದುವರಿಯುವುದು..

✍ _ಗಫೂರ್ ಬಾಯಾರು_
💦💦💦💦💦💦💦

No comments:

Post a Comment