ಝಿಯಾರತ್ತ್ ಕೇಂದ್ರ
👉07👈
☪ಪವಿತ್ರ ನಬಿ ﷺ ರವರ ಪ್ರಿಯ ಪುತ್ರಿ ಫಾತ್ತಿಮತ್ತುಲ್ ಬತ್ತೂಲ್ (ರ) ☪
[ಸ್ವರ್ಗಿಯ ಸ್ತ್ರಿಯರ ನೇತರಾರು]
➖➖➖➖➖➖➖➖
✍🏾ಗಫೂರ್ ಬಾಯಾರ್.
➿➿➿➿➿➿➿➿
☪ರಸೂಲ್ ﷺ ಹೇಳಿದ್ದರು; *ಫಾತಿಮಾ ನನ್ನ ಕರುಳಕುಡಿಯಾಗಿದೆ. ಯಾರಾದರು ಅವರತ್ತಿರ ಕೋಪ ಪ್ರಕಟಿಸಿದರೆ ನನ್ನನ್ನು ಕೋಪಿಸಿದಾಗೆ!!*
[ಬುಖಾರಿ (ರ)] [ಮುಸ್ಲಿಂ(ರ)]
ನಬಿ ﷺ ಹೇಳುತ್ತಿದ್ದರು:
*ಸ್ವರ್ಗಯ ಸ್ತ್ರಿಯರಲ್ಲಿ ಅತೀ ಶ್ರೇಷ್ಟರು ಖದಿಜಲ ಬೀವಿ, (ರ) ಫಾತಿಮಾ (ರ) ಮರ್ಯಂ ಬೀವಿ (ರ), ಹಾಗು ಆಸಿಯ ಬೀವಿ (ರ) ರವರಾಗಿದ್ದಾರೆ.*
[ತುರ್ಮುದಿ(ರ)] [ಅಹ್ಮದ್ (ರ)]
💠ಮಾತಿನಲ್ಲೂ, ಮುಖಛಾಯೆಯಲ್ಲೂ,
ಮಹದಿ ನಬಿ ﷺ ರವರ ಅದೇ ಸಾದೃಶ್ಯವತಿಯಾಗಿದ್ದರು.
ಊಮ್ಮುಸಲಾಮ (ರ) ರವರು ಹೇಳುತ್ತಾರೆ; *ರಸೂಲ್ ﷺ ರವರ ಪುತ್ರಿ ಫಾತಿಮಾ (ರ) ರವರ ಮುಖಬಾವದಲ್ಲಿ ರಸೂಲ್ ﷺ ರವರೊಂದಿಗೆ ಅತೀ ಸಾಮ್ಯತೆವುಳ್ಳವರಾಗಿದ್ದರು.*
(ಫತ್ಹುಲ್ ಬಾರಿ)
🔰ಆಯಿಷ (ರ)ರವರು ಹೇಳುತ್ತಾರೆ; *ಮಾತಿನಲ್ಲಿ ನಬಿ ﷺ ರೊಂದಿಗೆ ಸಾಮ್ಯತೆಯಾಗಿ
ಫಾತಿಮಾ (ರ) ರವರಷ್ಟು ಹತ್ತಿರವಾಗಿ ನಾನು ಬೇರೆ ಯಾರನ್ನು ಕಾಣಲಿಲ್ಲ*...
ನಬಿ ﷺ ರವರು ಫಾತಿಮಾ (ರ) ರವರು ಬರುವ ಸಮಯದಲ್ಲೆಲ್ಲ ಅವರನ್ನು ಚುಂಬಿಸುತಿದ್ದರು. ಹಾಗು ಹತ್ತಿರ ಕುಳ್ಳಿರಿಸುತಿದ್ದರೆಂದು ಆಯಿಷ (ರ ) ರವರು ಉದ್ದೆರಿಸಿದರು.
ನಬಿ ﷺ ಯುದ್ದ ಮುಗಿದು ಮರಳಿದಾಗ ಮಸ್ಜಿದಿಗೆ ಹೋಗಿ 2 ರಕಅತ್ತ್ ನಮಾಜು ಮಾಡಿದ ನಂತರ, ನೇರ ಫಾತಿಮಾ ಬೀವಿ (ರ)ರವರನ್ನು ಸಂದರ್ಶಿಸುತ್ತಿದ್ದರು. ನಂತರ ಮಡದಿಯರನ್ನು ಸಂದರ್ಶಿಸುವುದು ವಾಡಿಕೆಯಾಗಿತ್ತು. ಒಮ್ಮೆ ಅಲ್ಲಿಂದ ಹೇಳಿದ್ದರು;
*ಫಾತಿಮಾ ನೀನು ಕೋಪಿಸುಕೊಳ್ಳುವಲ್ಲಿ ನಿನ್ನ ಅಲ್ಲಾಹವು ಕೋಪಿಸುಕೊಳ್ಳುವನು. ನೀನು ತೃಪ್ತಿಪಡುವಲ್ಲಿ ನಿನ್ನ ಅಲ್ಲಾಹವು ತೃಪ್ತಿಪಡುವನು*
ಮಹದಿ ಹೇಳುತ್ತಿದ್ದರು, ನಾನು ಮರಣ ಹೊಂದಿದಾಗ ನನ್ನ ಜನಝಾವನ್ನು ಹಗಲು ಸಮಯ ಸಾರ್ವಜನಿಕವಾಗಿ ಕೊಂಡುಹೋಗುವುದು ತನ್ನ ಶರೀರಾಕೃತಿ ವ್ಯಕ್ತವಾಗಬಹುದೆಂದು ನೆನೆದು ಲಜ್ಜಯಿಂದ ಅವರು ಬೇಜಾರಗಿದ್ದರೆಂದು ಅಸ್ಮಾಹ್ (ರ) ರವರು ಹೇಳುತಿದ್ದರು.
ನಬಿ ﷺ ರವರ ವಫಾತಿನ 6 ತಿಂಗಳು ಕಳೆದು ಹಿಜ್ರ 11, ರಮಳಾನ್ 3 ರಂದು ಮಹದಿ ವಫಾತದರು. ಇನ್ನಾಲಿಲ್ಲಾಹಿ..
ಹಜ್ರತ್ ಅಲಿ (ರ)ರವರು ಹಾಗು ಅಸ್ಮಾಹ್ ಬೀವಿ (ರ) ರವರು ಮಯ್ಯತ್ತ್ ಸ್ನಾನ ಕರ್ಮವನ್ನು ನೆರೆವೆರಿಸಿದರು.
ಪತಿಯಾದ ಅಲಿ (ರ) ರವರು ಮಯ್ಯತ್ತ್ ನಮಾಜಿಗೆ ನೇತೃತ್ವ ಕೊಟ್ಟರು.
ಅಬ್ಬಾಸ್ (ರ), ಅಲಿ (ರ), ಹಾಗು
ಫಳ್ ಲುಬ್ನು ಅಬ್ಬಾಸ್ (ರ) ಎಂಬವರು ಸೇರಿ ಆ ಪವಿತ್ರವಾದ ಜನಝಾವನ್ನು ದಫನ ಮಾಡಿದರು. ಪರಿಶುದ್ದ ಮದೀನದ
ಜನ್ನತ್ತುಲ್ ಬಖಿಅದಲ್ಲಾಗಿದೆ ಅವರು ಅಂತ್ಯ ವಿಶ್ರಮಗೊಳ್ಳುತಿರುವುದು.
✍🏾ಗಫೂರ್ ಬಾಯಾರ್
🌀🌀🌀🌀🌀🌀🌀🌀


No comments:
Post a Comment