Saturday, November 4, 2017

ಝಿಯಾರತ್ತ್ ಕೇಂದ್ರ
           👉�11👈

*ನಫೀಸತ್ತುಲ್ ಮಿಸ್ರಿಯ್ಯ (ರ)* 
 ಕೈರೋ, ಈಜಿಪ್ಟ್.
🍂🍂🍂🍂🍂🍂🍂🍂

    ✍ -ಗಫೂರ್ ಬಾಯಾರ್-

🕌ಅಹ್ಲ್ ಬೈತ್ತಿನ ಸ್ವರ್ಣ ತಾರೆ..
ಹಸನ್ (ರ) ರವರ ಪರಂಪರೆಯಲ್ಲಿ *ಹಸನುಲ್ ಅನ್ವರ್ (ರ)* ತಂಗಳವರ ಮಗಳಾಗಿ ಜನಿಸಿದರು. 

🕌ಇಮಾನುನಾ ಶಾಫಿಈ (ರ) ರವರು, ಬೀವಿಯವರಿಂದ ಉಪದೇಶ, ನಿರ್ದೇಶಗಳು, ಹಾಗು  ದೀನಿ ಜ್ಞಾನಗಳನ್ನು ಪಡೆಯುತ್ತಿದ್ದರು. ನಿತ್ಯವೂ ಪ್ರಾರ್ಥಿನೆಗೆ ವಸಿಯ್ಯತ್ತ್ ಮಾಡುತ್ತಿದ್ದರು.

🕌ಕೊನೆಯ ಕಾಲದಲ್ಲಿ ರೋಗ ಉದ್ಭವಿಸಿದಾಗ ವೈದ್ಯರು ಉಪವಾಸ ಉಪೇಕ್ಷಿಸಲು ಹೇಳಿದರು. 
ಆಗ ಬೀವಿಯರ ಉತ್ತರ ಹೀಗಿತ್ತು....👇�

*ಮೂವತ್ತು ವರ್ಷದಿಂದ ನಾನು ಅಲ್ಲಾಹುವಿನೊಂದಿಗೆ ಪ್ರಾರ್ಥಿಸುತ್ತೇನೆ.
ಓ.. ಅಲ್ಲಾಹ್ ನೀನು ನನ್ನನ್ನು ಉಪವಾಸಿಯಾಗಿ ಮರಣ ಹೊಂದಿಸು..! 

ನಾನು ನನ್ನ ಅಲ್ಲಾಹುವಿನ ಹತ್ತಿರ ರೋಗ ಶಮನಕ್ಕೆ ಬೇಡುತ್ತೇನೆ* 

ಮರಣ ಆಸನ್ನವಾದ ಸಮಯದಲ್ಲಿ ಬೀವಿಯವರು ಖುರ್ಆನ್ ಪಾರಾಯಣದಲ್ಲಾಗಿದ್ದರು...

ಸೂರತ್ತುಲ್ ಅನ್ ಆಮಿನ 
*ಅವರ ರಬ್ಬಿನತ್ತಿರ ಅವರಿಗೆ ಶಾಂತಿಯ ಭವನವಿದೆ....
ಅವನು ಅವರ ರಕ್ಷಾದಿಕಾರಿಯಾಗಿರುವನು.... 
ಅವರು ಪ್ರವೃತ್ತಿಸಿರುತ್ತಿದ್ದ ಆ ಫಲವಾಗಿದಂತೆ ಅದು; (6:127)* 
ಎಂದು ಅರ್ಥ ಬರುವ ಸೂಕ್ತ ತಲುಪಿದಾಗ ಮಹದಿಯವರ  ರೂಹ್ ಈ ಲೋಕದಿಂದ ಬೇರ್ಪಟ್ಟಿತ್ತು.. 
ಇನ್ನಾಲಿಲ್ಲಾಹಿ.. 

🕌 ಬೀವಿಯವರ ಧಾರಾಳ ಕರಾಮತ್ತುಗಳು
ವರದಿ ಮಾಡಲಾಗಿದೆ.

ಆ ಮಹದಿಯವರ ಬರ್ಕತ್ತಿನಿಂದ  ನಮ್ಮೆಲ್ಲರ ಇಹಪರ ಅಲ್ಲಾಹು ವಿಜಯಗೊಳಿಸಲಿ..
ಆಮೀನ್..

✍ ಗಫೂರ್ ಬಾಯಾರ್
🍂🍂🍂🍂🍂🍂🍂🍂

No comments:

Post a Comment