☪ಝಿಯಾರತ್ತ್ ಕೇಂದ್ರ☪
👉🏿0⃣3⃣👈
✍ಗಫೂರ್ ಬಾಯಾರ್
ಖುತುಬುಸ್ಸಮಾನ್ ಶೈಖುನ ಕಣಿಯಾಪುರಂ ಅಬ್ದುರ್ರಝಾಖ್
ಮಸ್ತಾನ್ ವಲಿಯ್ಯುಲ್ಲಾಹಿ (ರ)
➖➖➖➖➖➖➖➖
🕌ಆಧ್ಯಾತ್ಮಿಕ ಸರಣಿಯಲ್ಲಿ ಅತುಲ್ಯ ವ್ಯಕ್ತಿತ್ವವಾಗಿ ಪ್ರಶೋಭಿಸಿದ ಮಹಾಗುರು. ಮುದರ್ರಿಸ್, ಪ್ರಭಾಷಣಕಾರರು, ಮೊದಲಾದ ಎಲ್ಲಾ ನೆಲೆಗಳಲ್ಲಿಯೂ ಅವರು ಪಸರಿಸಿದ ಪ್ರಭೆ ಆತ್ಮೀಯ ಮುಸ್ಲಿಮರಿಗೆ ವಿಸ್ಮರಿಸದಿರಲು ಒಮ್ಮೆಯೂ ಸಾದ್ಯವಿಲ್ಲ.
ಜ್ಞಾನ ಒಂದು ಲಹರಿಯಾಗಿತ್ತು ಮಹಾನರಿಗೆ....
ಕಿತಾಬ್ ನೋಡದೆಯೇ ಯಾವುದೇ ವಿಷಯದ ಕುರಿತು ಶೈಖುನಾರವರು ಮಾತನಾಡುತ್ತಿದರು.
ವಬೇನಾಡ್, ಪೋನ್ನಾನಿ, ವಾಣಿಯಬಾಡಿ, ವೇಲೂರು, ಬೆಂಗಳೂರು, ಲಕ್ನೋ,....
ಮುಂತಾದ ಹಲವಾರು ಸ್ಥಳಗಳಲ್ಲಿ ವಿದ್ಯೆ ಕರಗತ ಮಾಡಿದವರು.
ಮೌಲಾನ ಮುಹಮ್ಮದಲಿ ತನ್ನ ಸ್ನೇಹಿತರಾಗಿದ್ದರು.
ಸುಮಾರು ಮೂವತ್ತು ವರ್ಷಗಳ ಕಾಲ ಕುಳಚ್ಚಲ್ ತಿರುನೆಲ್ ವೇಲಿ, ಇಡವ, ಓಚ್ಚಿರ, ವಾಡಾನಪಳ್ಳಿ, ಎಡವನಕಾಡ್, ವಬೆನಾಡ್, ಮೊದಲಾದ ಸ್ಥಳಗಳಲ್ಲಿ ದರ್ಸ್ ನಡೆಸಿದರು.
ಈ ಕಾಲದಲ್ಲಿಯೇ ರಾಷ್ಟ್ರದ ವಿವಿಧ ಭಾಗಗಳಲ್ಲಿ ದೀನಿ ಪ್ರಭಾಷಣಗಳು ನಡೆಸಿದರು. ವಿಶ್ವದ ಹಲವಾರು ಸ್ಥಳಗಳನ್ನು ಸಂಚರಿಸಿ ದೀನೀ ಪ್ರಭೋದನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರಾಗಿದ್ದರು.
ನಿಶ್ಚಲವಾದ ದರ್ಸುಗಳು, ಮದ್ರಸಗಳನ್ನು ಪುನರ್ಜಿವಿಸುದರಲ್ಲಿಯೂ, ಹೊಸ ಸ್ಥಾಪಿಸವುದರಲ್ಲಿಯೂ, ಕಠಿಣ ಪರಿಶ್ರಮ ನಡೆಸಿದ ಪುಣ್ಯಾತ್ಮರಾಗಿದ್ದಾರೆ ಅವರು. ಹಲವಾರು ಮಸ್ಜಿದುಗಳು, ಸ್ರಾಂಬಿಗಳು ನಿರ್ಮಿಸುದಕ್ಕೆ ನೇತೃತ್ವ ಕೊಟ್ಟರು.
ಶಾದುಲಿ ತ್ವರಿಖತ್ತಿನ ಶೈಖ್ ಆಗಿದ್ದ ಮಹಾನರು ಹಲವು ಮಸ್ಜಿದುಗಳಲ್ಲಿ ಶಾದುಲಿ ದಿಕ್ರ್ ಹಲ್ಕಾಗಳು ಸಂಘಟಿಸಿ ನಡೆಸಿದರು.
ಮಹಾ ಪಂಡಿತರಾಗಿದ್ದ ಶೈಖರು ಅಂದು ನೀಡಿದಂತಹ ಫತ್ವಾಗಳು ಪ್ರಕಟವಾಗುತ್ತಿದ್ದರೆ ಇಂದು ಅದೊಂದು ಬಹು ದೊಡ್ಡ ಸಂಪತ್ತು ಆಗುತ್ತಿತ್ತು.
ಅರಬಿ ಬಾಷೆಯಲ್ಲಿ ಅಗ್ರಗಣ್ಯರಾಗಿದ್ದ ಶೈಖುರು, ಇಂಗ್ಲಿಷ್, ಉರ್ದು, ಭಾಷೆಗಳಲ್ಲಿಯೂ ಪ್ರಾವಿಣ್ಯ ಹೊಂದಿದ್ದರು.
ಕರಾಮತ್ತುಗಳಿಂದ ಧನ್ಯವಾಗಿತ್ತು ಅವರ ಪರಿಶುದ್ದ ಜೀವನ.
ಉಡುಗೊರೆಯಾಗಿ ಲಭಿಸುತ್ತಿದ ಸಂಪತ್ತನ್ನು ಸಂಪೂರ್ಣವಾಗಿ ದಾನ ಮಾಡುವ ಸ್ವಬಾವವಾಗಿತ್ತು. ಒಂದು ಭಯಾನಕ ಪೈಸೆಯೂ ತನ್ನ ಸ್ವಂತಕ್ಕಾಗಿ ತೆಗೆದಿಡದೆ ಜೀವಿಸಿದ ಮಹಾತ್ಮರಾಗಿದ್ದರು.
" ಅವರೊಂನ್ನು ನನ್ನಾಹಿ ಒರು
ನೂಕ್ ನೂಕುಕಿಲ್....
ಅತಿನಾಲ್ ವಲಿಯ ನಿಲನೆ
ಕೊಡುತ್ತೂವರ್ "
ಶೈಖ್ ಕಣಿಯಾಪುರಂ ಮಸ್ತಾನ್ (ರ) ಊರು ಸುತ್ತಿ ನಡೆಯುವ ಕಾಲ.
ಇಲಾಹಿ ಪ್ರೇಮದಲ್ಲಿ ಕರಗಿ ಅತೀಂದ್ರಿಯ ಜ್ಞಾನದಲ್ಲಿಯೂ
ಅದ್ಯಾತ್ಮಿಕ ಆಸ್ವಾದನೆಯಲ್ಲಿಯೂ, ಜೀವಿಸುತ್ತಿರುವ ಸಮಯ,
ಒಮ್ಮೆ ಅನ್ಯ ಧರ್ಮದವರಾದ ಒಬ್ಬರನ್ನು ತನ್ನ "ಜಾತಿ ಹೆಸರು" ಸೇರಿಸಿ ಮುಸ್ಲಿಯಾರೆಂದು ಜೋರಾಗಿ ಕರೆದರು.
ನಂತರ ಜನರು ಕಂಡದ್ದು ಶೈಖ್ ಐಲಕಾಡ್ ಸಿರಾಜುದ್ದೀನ್ ಖಾದಿರಿಯವರ (ರ) ಶೈಖ್ ಕಮಾಲುದ್ದೀನ್ ಖಾದಿರಿಯವರುಗಳ, (ರ) ಇಷ್ಟ ಶಿಷ್ಯರು ಅತೀ ಪ್ರಾಧಾನವಾದ ಅನುಯಾಯಿಯಾದ ಶೈಖ್ ಯೂಸಫುಲ್ ಖಾದಿರಿಯವರನ್ನು (ರ) ಆ ಒಂದು ಕರೆಯಿಂದಲೇ ವಿಲಾಯತ್ತಿನ ಉನ್ನತ ಸ್ಥಾನಕ್ಕೆ ತಲುಪಿದ ಯುಸಫುಲ್ ಖಾದಿರಿ (ರ) ಪಯುನ್ನನರವರು ಶೈಖ್ ಕಣಿಯಾಪುರಂ ಮಸ್ತಾನವರ (ರ) ಪ್ರಜ್ವಲಿಸುವ ಕರಾಮತ್ತಿನ ದೃಸಾಕ್ಷಿಯಾಗಿದ್ದಾರೆ.
ತಿರುವನಂತಪುರ ಕಣಿಯಾಪುರಂವಾಗಿದೆ ಜನ್ಮಸ್ಥಳ. ಪುರಾತನ ಕುಟುಂಬ ಅಂಗವು, ಮತ ಪಂಡಿತರು ಆಗಿದ್ದ ಮುಹಮ್ಮದ್ ಕುಂಞ್ಞು ಲಬ್ಬ ಸಾಹಿಬ್ ಪಿತರು, ಸಾರ ಉಮ್ಮ ತಾಯಿಯೂ ಆಗಿದ್ದಾರೆ.
ಚಿಮ್ಮಿಣಿ ತಂಙಳ್, ಪೆರಿಯ ತಂಙಳ್, ಎಂಬಿತ್ಯಾದಿ ನಾಮದಿಂದ ದಕ್ಷಿಣ ಕೇರಳದಲ್ಲಿಯೂ, ತಮಿಳುನಾಡಿನಲ್ಲಿಯೂ, ಪ್ರಸಿದ್ದಿ ಪಡೆದ ಮಹಾತ್ಮರು ಆಗಿದ್ದರು ಶೈಖ್ ಅಬ್ದುದು ರಝಾಖ್ ಮಸ್ತಾನ್ (ರ).
90 ವಯಸ್ಸು ಕಾಲದವರೆಗ ಜೀವಿಸಿದ ಮಹಾನರು ಹಿಜರಿ, 1391 ರಜಬ್ 12
[ 1971 ಸೆಪ್ಟಂಬರ್ ] ನಲ್ಲಿ ಈ ನಶ್ವರ ಲೋಕದಿಂದ ಯಾತ್ರೆಯಾದರು.
ಆಲುವಾದಿಂದ ಪೆರುಂಬಾವೂರ್ ದಾರಿಯಲ್ಲಿ ಪೆರಿಯಾರಿನ ತೀರದಲ್ಲಿ " ಮುಡಿಕಲ್ " ನಲ್ಲಿ ಮಹಾನರು ಅಂತ್ಯ ವಿಶ್ರಮ ಹೊಂದುತ್ತಿದ್ದಾರೆ.
ಮಹಾನುಭಾವರ ಬರ್ಕತ್ತಿನಿಂದ ನಮಗೂ, ಕುಟುಂಬದವರಿಗೂ, ಸ್ನೇಹಿತರಿಗೂ, ಧೀರ್ಘಾಯುಷ್ಯ, ಆಯುರಾರೋಗ್ಯ, ಆಫಿಯತ್ತ್, ನೀಡು!....
ಅಲ್ಲಾಹ್....
ನಮ್ಮಿಂದ ಮರಣ ಹೊಂದಿದವರಿಗೆ ಮಗ್ಫಿರತ್ತ್, ಮರ್ಹಮತ್ತ್ ನೀಡು....
ಅಲ್ಲಾಹ್.... ಆಮೀನ್....
ಎಲ್ಲಾ ವರ್ಷ ಎಪ್ರಿಲ್ ತಿಂಗಳಲ್ಲಿ ಮಹಾನರ ಉರೂಸ್ ಮುಬಾರಕ್ ನಡೆಯುತ್ತದೆ.
ಎಲ್ಲರೂ ಒಂದೊಂದು ಫಾತಿಹ ಓದಿ ಹದ್ ಯಾ ಮಾಡಿರಿ✋
✍ಗಫೂರ್ ಬಾಯಾರ್
🍄🍄🍄🍄🍄🍄🍄🍄



No comments:
Post a Comment