Saturday, November 4, 2017

ಝಿಯಾರತ್ತ್_ಕೇಂದ್ರ
        👉20👈
➖➖➖➖➖➖➖
#ಅಶಿಖುರ್ರಸೂಲ್_ಅಬ್ದುಲ್ #ಖಾದಿರ್ #ಉಸ್ತಾದ್ (ರ) ಗೌಸಿಯ್ಯ ನಗರ್,
 ಕುಂಡೂರ್ ಮಲಪ್ಪುರಂ*
💧💧💧➡💧💧💧

✍ ಗಫೂರ್ ಬಾಯಾರು
➖➖➖➖➖➖➖
🕌1935 ಜುಲೈ 7ರಂದು ಕು0ಞಮುಹಮ್ಮದ್-ಖದೀಜ ದಂಪತಿಗಳ ಮಗನಾಗಿ, ಮಲಪ್ಪುರಂ ಜಿಲ್ಲೆಯ ತಿರೂರಂಗಡಿಯ ನಬಿಡಿಪ್ಪರಂ ಮನೆತನದಲ್ಲಿ *ಶೈಖುನಾ ಕುಂಡೂರ್ ಅಬ್ದುಲ್ ಖಾದಿರ್ ಮುಸ್ಲಿಯಾರ್*(ರ) ಜನಿಸಿದರು.

1400 ವರ್ಷಗಳಷ್ಟು ಹಳೆಯ ಮಲಿಕ್ ಇಬ್ನು ದಿನಾರ್ (ರ) ರವರ ಸಂತಾನ ಪರಂಪರೆಗೆ ತಲುಪುವ ಕುಟುಂಬವಾಗಿದೆ ಮಹಾನರ ತಂದೆಯವರದ್ದು, ಆದ್ದರಿಂದ ಸಣ್ಣ ಪ್ರಾಯದಲ್ಲೇ ದೊಡ್ಡ ಭಕ್ತಿಯಲ್ಲಿಯೂ, ಸೂಕ್ಷ್ಮತೆಯಿಂದಲೂ ತುಂಬಿದ ಜೀವನವಾಗಿತ್ತು... ಆಟ, ತಮಾಷೆಗಳಲ್ಲಿ ಭಾಗಿಯಾಗದೆ, ಅನಾವಶ್ಯಕ ಚಟುವಟಿಕೆಗಳಿಗೆ ಕಿವಿಗೊಡದೆ ಸಮಯ ಹಾಳು ಮಾಡದೆ, ಪರಿಮಿತಿಯೊಳಗೆ ತಖ್ವದೊಂದಿಗೆ ಮಾದರಿಯೋಗ್ಯ ಜೀವನವನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದರು  ಶೈಖುನರವರು..

ಸ್ವತಃ ತಂದೆಯವರಿಂದಲೇ ತಮ್ಮ ಅರಿವಿನ ಪ್ರಥಮ ಅಕ್ಷರಗಳನ್ನು ಕಲಿತಿರುವುದು.  ಈಗಿನ ಈಸ್ಟ್ ಬಝಾರ್ ಎಂಬ ಸ್ಥಳದಲ್ಲಿ ಅಹ್ಮದ್ ಮೊಲ್ಲ ಎಂಬವರ *"ಓತುಪಲ್ಲಿ"* ಎಂಬ ದರ್ಸಿನಲ್ಲಿ ಬಾಲ್ಯದ ವಿದ್ಯಾಭ್ಯಾಸ ಪೂರ್ತಿಗೊಳಿಸಿದ ಉಸ್ತಾದರು ನಂತರ ದೊಡ್ಡ ಪಂಡಿತರಾದ ಕೆ.ಎಂ.ಎಸ್.ಎ. ಪೂಕೋಯ ತಂಗಳವರ ದರ್ಸ್ ನಲ್ಲಿ ಸೇರಿ ದರ್ಸ್ ಜೀವನಕ್ಕೆ ಕಾಲಿಟ್ಟರು....

ಮುಂದೆ ಸಾಗುತ್ತಿದ್ದಂತೆ ಕರಿಂಗನಾಡ್ ಮುಹಮ್ಮದ್ ಮುಸ್ಲಿಯಾರ್, ಇರಿಂಗಲ್ಲೂರ್ ಅಲವಿ ಮುಸ್ಲಿಯಾರ್, ತಿರುವೆಗಪ್ಪುರ ಮುಹಮ್ಮದ್ ಕೋಯ ತಂಙಳರು, ಕರಿಂಗಪ್ಪಾರ ಮುಹಮ್ಮದ್ ಮುಸ್ಲಿಯಾರು, ಮೊದಲಾದ ಪ್ರಮುಖರಾದ ಪಂಡಿತರುಗಳ ದರ್ಸ್ ನಲ್ಲಿ ಕಲಿತು ವಿದ್ಯಾಭ್ಯಾಸವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿದರು...

*1965* ರಲ್ಲಿ ವೆಲ್ಲೂರು ಬಾಖಿಯಾತ್ತಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳಿ *ಬಾಖವಿ*  ಬಿರುದುದಾರಿಯಾಗಿ ಹೊರಬಂದರು.

ಹಿಜರಿ ವರ್ಷ 1380 ರಬಿಉಲ್ ಅವ್ವಲ್ 19ರಂದಾಗಿತ್ತು ಉಸ್ತಾದರ ಜೀವನದ ಮಹತ್ತರ ಘಟ್ಟವಾದ ವಿವಾಹ... ಜೀವನ ಸಂಗಾತಿ ಫಾತ್ತಿಮ ಕುಟ್ಟಿಯವರ ಜೊತೆ ದಾಂಪತ್ಯದ ಹಾದಿಯಲ್ಲಿ ಮುನ್ನಡೆದಾಗ ಅಲ್ಲಾಹನ ಅನುಗ್ರಹದಿಂದ ಉಸ್ತಾದವರಿಗೆ ಆ ದಾಂಪತ್ಯ ಜೀವನದಲ್ಲಿ 9 ಸಂತಾನಗಳನ್ನು ಪಡೆದರು...

ತ್ವರಿಖತ್ತಿನಲ್ಲಿಯು, ನಿರಂತರವಾದ ಆತ್ಮೀಯತೆಯಿಂದಲು ಕೂಡಿದ ದಾರಿಗಳಲ್ಲಿ ಕುಂಡೂರು ಉಸ್ತಾದವರನ್ನು (ರ) ಮುನ್ನೆಡಸಿರುವುದು *ವಲಿಯುಲ್ಲಾಹಿ ಚಾಪ್ಪನಂಗಾಡಿ ಬಾಪ್ಪುಮುಸ್ಲಿಯಾರ್* (ರ) ರವರಾಗಿದ್ದರು. ಮಹಾನರಿಗೆ ಕುಂಡೂರ್
 ಉಸ್ತಾದವರನ್ನು ಪರಿಚಹಿಸಿ ಕೊಟ್ಟಿರುವುದು
ಕರಿಂಗಪ್ಪಾರ ಮುಹಮ್ಮದ್ ಮುಸ್ಲಿಯಾರಾಗಿದ್ದರು (ರ) ಆಗಿದ್ದರು.

 ಪರಿಪೂರ್ಣವಾಗಿ *ಅಶಿಖುರ್ರಸೂಲಾರಾಗಿದ್ದ* ಮಹಾನರು ಮುತ್ತು ನಬಿ ﷺ ರವರ ಸ್ನೇಹವನ್ನು ಮುಖ್ಯ ಧ್ಯೇಯ ಮಾಡಿ ಹಲವಾರು ರಚನೆಗಳನ್ನು ರಚಿಸಿದರು. ಅದರಲ್ಲಿ ಅತೀ ಹೆಚ್ಚು ಗುರುತಿಸಲ್ಪಟ ಬೈತ್
*ಆರಂಭ ಪೂವಾಯ ಮುತ್ತೂ ನೆಬೀಯೂಡೆ ಹಳ್ರತ್ತಿಲ್ ಚೆನ್ನೇತ್ತಾನ್ ಞಂಙಳ್ಕ್ ತೌಫೀಖ್ ಏಗಲ್ಲಾಹ್..*
 ಎಂಬುದಾಗಿತ್ತು.

ಸೌದಿಯದ ಪ್ರಮುಖ ಪಂಡಿತರು, ಸೂಫೀವರ್ಯರು, ಅನೇಕ ಗ್ರಂಥಗಳ ರಚನೆಗಾರರು ಆದ *ಸಯ್ಯಿದ್ ಅಲವಿ ಮಾಲಿಕಿ (ರ)* ರವರೊಂದಿಗೆ ಉಸ್ತಾದರಿಗೆ ಒಳ್ಳೆಯ ಸಂಬಂಧ ಕಾಪಾಡಿಕೊಂಡಿದ್ದ ಉಸ್ತಾದರು, ಮಾಲಿಕಿ (ರ)ಯವರು ಕೇರಳಕ್ಕೆ ಬಂದಾಗ ಅವರ ಮಂಬುರದ ಸ್ಥಾಪನೆಯಲ್ಲಿ ಸ್ವಾಗತವನ್ನು ಬಹಳ ವಿಜೃಂಬಣೆಯಿಂದ ಕೊಟ್ಟಿರುತ್ತಾರೆ.

*ಗರೀಬ್ ನವಾಝ್ ಖಾಜಾ ಮುಈನುದ್ದೀನ್ ಚಿಶ್ತಿ (ರ)* ಯವರನ್ನು ಅನುಸ್ಮರಿಸುವ ವಿಧದಲ್ಲಿ ಸಮೂಹ ಸೇವೆಗಳು, ಕಾರುಣ್ಯ ಚಟುವಟಿಕೆಗಳನ್ನು ಮಾಡಿ ಆತ್ಮ ಸಂತೃಪ್ತಿ ಕಂಡುಕೊಂಡಿದ್ದರು...

ಅಧ್ಯಾಪಕ ರಂಗದಲ್ಲಿ ಅತೀ ಹೆಚ್ಚು ಸೇವನೆ ಮಾಡಿರುವುದು ಕ್ಲಾರಿ ಚಿನಕಲ್ ಎಂಬ ಸ್ಥಳದಲ್ಲಾಗಿತ್ತು.. ದೀರ್ಘವಾದ 25 ವರ್ಷಗಳು. ಕ್ಲಾರಿಯಲ್ಲಿ ದರ್ಸ್ ನಡೆಸಿದ ಉಸ್ತಾದರು, ಕುಟ್ಟಿಪ್ಪಾಲ ಎಂಬ ಸ್ಥಳದಲ್ಲಿಯೂ ದರ್ಸ್ ನಡೆಸಿದನ್ನು ಮರೆಯುವಂತಿಲ್ಲ.

ಒಂದು ಪುರುಷಾಯಸ್ಸಿನಲ್ಲಿ  ಮಾಡಿ ಮುಗಿಸಲು ಸಾಧ್ಯವಾಗದಷ್ಟು ಒಳಿತನ್ನು ಸಮೂಹಕ್ಕೆ ಬೇಕಾಗಿ ಮಾಡಿ ತನ್ನನ್ನು ಸಮರ್ಪಿಸಿದ ಆ ಮಾದರಿ ಪುರುಷ ಮಾರ್ಚ್ 28 ( ಸಫರ್ 28) ಮಂಗಳವಾರ ಈ ಲೋಕದಿಂದ ಯಾತ್ರೆಯಾದರು. *ಇನ್ನಾಲಿಲ್ಲಾಹ್..*

1987 ರಲ್ಲಿ ಕುಂಡೂರು ಉಸ್ತಾದವರು (ರ) ಆರಂಭಿಸಿದ *ದಾರುತ್ತಹ್ ಲಿಮುಲ್ ಗೌಸಿಯ್ಯ*  ಎಂಬ ಸ್ಥಾಪನೆಯ ಸಮೀಪದಲ್ಲಿ ಮೊದಲೇ ಖರಿದಿಸಿಟ್ಟ ಸ್ಥಳದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿದ್ದಾರೆ.

*ದಾರುತ್ತಹ್ ಲಿಮುಲ್ ಗೌಸಿಯ್ಯ ಚಾರಿಟೇಬಲ್ ಟ್ರಸ್ಟ್* ನ ಅದೀನದಲ್ಲಿ ಯತೀಮ್ ಖಾನ, ನಿರಾಶ್ರಿತರಿಗಾಗಿ ಸೇವೆ, ಬೋರ್ಡಿಂಗ್, ದರ್ಸುಗಳು, ಮಸೀದಿಗಳು, ದಅವಾ ಕಾಲೇಜು, ಶಾಲೆ, ಓಪನ್ ಸ್ಕೂಲ್, ನರ್ಸರಿ, ಮೊದಲಾದ ಸ್ಥಾಪನೆಗಳು ಕಾರ್ಯಾಚಿಸುತ್ತದೆ.... ಅಲ್ಹಂದುಲಿಲ್ಲಾಹ್...!!!

  *ಅನುಸ್ಮರಣೆ*
ನೇತಾರರು, ಕಾರ್ಯಕರ್ತರು ಆದ ಸೂಫೀವರ್ಯರು..

ಮುಂದುವರಿಯುವುದು...
 ಇನ್ ಷಾ ಅಲ್ಲಾಹ್..

➖➖➖➖➖➖➖
             ಭಾಗ 02
🔷🔷🔷🔷🔷🔷🔷

#ಅನುಸ್ಮರಣೆ

ನೆಚ್ಚಿನ ನೇತಾರರು,  ದೀನೀ ಕಾರ್ಯಕರ್ತರು ಮತ್ತು  ಸೂಫೀವರ್ಯರು ಆದ *ಕುಂಡೂರು ಉಸ್ತಾದ್* (ರ) ಜೀವನ ಅಲಂಕಾರವಿಲ್ಲದ  ವ್ಯಕ್ತಿತ್ವವನ್ನು ಆಗಿತ್ತು....

ಕೇರಳೀಯರಿಗೆ ಸುಪರಿಚಿತರು, ಸುನ್ನಿಗಳಿಗೆ ಸೂಫೀವರ್ಯರು ಆಗಿದ್ದ ಉಸ್ತಾದರ
ಜೀವನ ವಿಶುದ್ಧಿಯನ್ನು, ಸಹಜೀವಿ ಸ್ನೇಹವನ್ನು, ಮಾದರಿಯಾಗಿ ಕಾಣುವ  ಅವರನ್ನು ಇಷ್ಟಪಡುವ ಜನರಿದ್ದರು.

ಕಲಿತ ಅರಿವುಗಳು ಅದೇ ರೀತಿ ಜೀವನದಲ್ಲಿ ಅಳವಡಿಸಿ ಕ್ರಿಯಾತ್ಮಕವಾಗಿ ಕಾರ್ಯಾಚರಿಸಿ ತೋರಿಸುತ್ತಿದ್ದರು.
ನೋವು ಅನುಭವಿಸುತ್ತಿದ್ದವರನ್ನು ಮನದಟ್ಟು ಮಾಡಿಕೊಂಡು ಸಹಾಯ ಮಾಡುತ್ತಿದ್ದರು. ಅವರ ಕಣ್ಣೀರು ಒರೆಸಲು ತನ್ನೊಂದಿಗೆ ಯಾರು ಇದ್ದಾರೆ ಎಂದು ನೋಡದೆ ಸಹಾಯಹಸ್ತ ಚಾಚುತ್ತಿದ್ದರು. ಕರ್ಕಡ ತಿಂಗಳಲ್ಲಿ ಸಮುದ್ರದ ಮಕ್ಕಳು ಎಂದು ತಿಳಿಯುವ ಬೆಸ್ತರು ತುಂಬಾ ತೊಂದರೆ ಅನುಭವಿಸುವ ಸಮಯಗಳಲ್ಲಿ ಅಕ್ಕಿ ಮತ್ತು ಆಹಾರ ಸಾಮಗ್ರಿಯನ್ನು ಉಸ್ತಾದರು ತೀರ ಪ್ರದೇಶವಾದ *ಪರಪ್ಪನಂಗಾಡಿ, ತಾನೂರು, ತಿರೂರು* ಎಂಬಿ ಸ್ಥಳಗಳಿಗೆ  ತಲುಪಿಸುತ್ತಿದರು....
ಕಷ್ಟಗಳು ಅನುಭವಿಸುವವರಿಗೆ  ಆಹಾರ ಕೊಡುತ್ತಿದ್ದ ಉಸ್ತಾದರು.., ಜೂನ್, ಜುಲೈ ತಿಂಗಳುಗಳಲ್ಲಿ ಸಮುದ್ರ ಆಕ್ರಮಣ ಜಾಸ್ತಿಯಾಗುವ ಸಮಯಗಳಲ್ಲಿ ಸಹಾಯದೊಂದಿಗೆ ಆಶ್ವಾಸನೆ ನೀಡಿ ಅವರ ಜೊತೆಗೆ ನಿಲ್ಲುತ್ತಿದ್ದರು... ಗ್ರಾಮ ಪಂಚಾಯತ್ತುಗಳಲ್ಲಿಯೋ, ಅಥವಾ ಇನ್ನಿತರ ಸರಕಾರಿ ಸಂವಿಧಾನವನ್ನೋ ಕಾದು ನಿಲ್ಲದೆ ರಸ್ತೆಗಳ ಹೊಂಡಗಳನ್ನು ಕಲ್ಲು ಮಣ್ಣು ಹಾಕಿ ಮುಚ್ಚಿ ಸಂಚಾರಯೋಗ್ಯ ಮಾಡುತ್ತಿದ್ದರು.. ಸಾರ್ವಜನಿಕವಾಗಿ ಹೊರಬಂದು ಜನಸಾಮಾನ್ಯರಿಗೆ ಸಂಚಾರ ಸೌಕರ್ಯ ಒದಗಿಸಿದ ವ್ಯತ್ಯಾಸ ಸ್ತರದ ಮಾದರಿ ಕೇರಳ ಕಂಡಿರುವುದು ಕುಂಡೂರು ಉಸ್ತಾದರಿಂದಾಗಿದೆ ಎನ್ನುವುದನ್ನು ಮರೆಯಲಾಗದು....

ಮಂದಹಾಸ ಮತ್ತು ಚಿಂತನೆ ಮಹಾನರ ನಯನಗಳಲ್ಲಿ ದೃಶ್ಯವಾಗುತ್ತಿತು...

ನಿರ್ಗತಿಯರನ್ನು ಕಂಡರೆ ಅವರಿಗೆ ಪರಿಹಾರ ನಿರ್ದೇಶಿಸುತ್ತಿದ್ದರು.

ಆತ್ಮೀಯ ಪ್ರಕಾಶ ಜ್ವಲಿಸಿ ನಿಲ್ಲುವ ವದನವಾಗಿತ್ತು ಮಹಾನರದ್ದು.
ದಿಕ್ರ್ ನ ಮಂತ್ರ ಧ್ವನಿಗಳು ಸದಾ ಸಮಯ ಹೇಳುತ್ತಿದ್ದ ಉಸ್ತಾದರ ಹಲ್ಲು ಮತ್ತು ತುಟಿಗಳು ಆಕರ್ಷಕವಾದ ದೃಶ್ಯವೇ ಆಗಿತ್ತು.

ಆದರ್ಶ ರಂಗದಲ್ಲಿ ಕೃತ್ಯವಾದ ನಿಲುವುಗಳೊಂದಿಗೆ ಗಟ್ಟಿಯಾಗಿ ನಿಂತು ಧೀರ ಕೇಸರಿಯಾಗಿದ್ದರು ಮಹಾನರು.

ಸುನ್ನಿ ಆದರ್ಶದಲ್ಲಿ ಕೆಲವರಿಗೆ ಅಭಿಪ್ರಾಯ ವ್ಯತ್ಯಾಸ ಬಂದ ಘಟ್ಟಗಳಲ್ಲಿ *ತಾಜುಲ್ ಉಲಮಾ (ಖ:ಸಿ), ನೂರುಲ್ ಉಲಮಾ (ಖ:ಸಿ) ಹಾಗು ಖಮರುಲ್ ಉಲಮಾ* ರವರ ಜೊತೆಗೆ ಗಟ್ಟಿಯಾಗಿ ನೆಲೆಗೊಂಡು ಕಾರ್ಯಕರ್ತರಿಗೆ ನೇತೃತ್ವ ಕೊಡಲು ಉಸ್ತಾದರು ತನ್ನ  ಸಮಯವನ್ನು ಸದಾ ವಿನಿಯೋಗಿಸಿದ್ದರು.

ಒಂದಕ್ಕಿಂತ ಒಂದು ವಿನಯವಾಗಿತ್ತು ಮಹಾನರ ಸ್ವಭಾವ ಮತ್ತು ಸದ್ಗುಣಗಳು..

ಎಷ್ಟು ಸಣ್ಣ ಕಾರ್ಯಕರ್ತನೇ ಆಗಿರಲಿ ಎಲ್ಲರ ಜೊತೆ ಬಹಳ ಒಳ್ಳೆಯ ರೀತಿಯಲ್ಲಿ ವರ್ತಿಸುತ್ತಿದ್ದ ಮಹಾನರು
*ನಾನು ನಿಮ್ಮಲ್ಲಿ ಓರ್ವನೆಂದು* ಅವರಲ್ಲಿ ಬಹಳ ವಿನಯದ ಮಾತಿನಿಂದ ಸರಳವಾಗಿ ಹೇಳುತ್ತಿದ್ದರು... ಯಾವ ಕೆಲಸವಾದರೂ ನಗುಮುಖದಿಂದ ಕಾರ್ಯಕರ್ತರೊಂದಿಗೆ ಹೆಗಲುಕೊಟ್ಟು ಮಾಡಿ ಮುಗಿಸಲು ಉಸ್ತಾದರಿಗೆ ಯಾವುದೇ ವೈಮನಸ್ಸು ಇರಲಿಲ್ಲ....

ಈ ತ್ಯಾಗಸನ್ನತೆ ಮತ್ತು ಸಂಘಟನಾ ಪ್ರತಿಬದ್ದತೆಯಾಗಿದೆ ಉಸ್ತಾದರನ್ನು ವ್ಯತ್ಯಸ್ತ ಮಾಡುವ ಹಲವು ಘಟಗಳಲ್ಲಿ ಪ್ರಬಲ ಕಾರಣಗಳಲ್ಲಿ ಒಂದು...

ಇದರೆಡೆಯಲ್ಲಿ ಮಹಾನವರಿಗೆ ದುಃಖ ತಂದ ಒಂದು ಘಟನೆಯಾಗಿತ್ತು ತನ್ನ ಮಗನಾದ *ಕುಂಜು* ರನ್ನು ಆದರ್ಶ ವಿರೋಧಿಗಳು ಮಾಡಿದ ದಾರುಣ ಕೊಲೆ!
ಆದರೂ ದೃತಿಗೆಡದ ಮಹಾನರು ಕೇಸಿನ ಹಿಂದೆ ಹೋಗದೆ ಅಲ್ಲಾಹುವಿನ ನ್ಯಾಯಾಲಯಕ್ಕೆ ಎಲ್ಲಾ ಭಾರವನ್ನು ಅರ್ಪಿಸಿದರು.

( *ಕುಂಜು*ರವರ ಶಹೀದಿಗೆ 28 ವರ್ಷಗಳಾಯಿತು. ಆದರೂ ಈಗಲೂ ಅವರ ಖಬರಿನ ಹತ್ತಿರ ಬೆಳಿಗ್ಗೆ ಮತ್ತು ಸಾಯಂಕಾಲ ಖುರ್ಆನ್ ಪಾರಾಯಣ ಮಾಡುತ್ತಾ ಇದ್ದಾರೆ! ಗೌಸಿಯ್ಯ ಸ್ಥಾಪನೆಯ ಉಸ್ತಾದರುಗಳು )

ಆತ್ಮೀಯ ಮಜ್ಲಿಸುಗಳ ಆಕರ್ಷಕ ಸಾನಿಧ್ಯವಾಗಿದ್ದ ಮಹಾನರು.,
*ಸಿರಾಜ್ ದಿನಪತ್ರ*ಕ್ಕೆ ಮರೆಯಲು ಆಸಾದ್ಯವಾದ ಬೆನ್ನೆಲುಬಿನಂತಹ ನೇತೃತ್ವವಾಗಿದ್ದರು...

ಎಲ್ಲರೂ ಬಹುಮಾನಿಸುವ ಗುರುವೆಂಬ ಪರಿಗಣನೆಯನ್ನು ಲೆಕ್ಕಿಸದೆ *ಸಿರಾಜ್ ದಿನಪತ್ರ*ದ ಕಟ್ಟುಗಳನ್ನು ತನ್ನ ತಲೆಯಲ್ಲಿಟ್ಟು ಪತ್ರವನ್ನು ವಿತರಿಸುತ್ತಿದ್ದ ಉಸ್ತಾದರನ್ನು ನೆನಪಿಸಲು ಮರೆಯದಿರಿ...
ಅಂತಹ ಮಹಾ ತೇಜಸ್ಸು ಕುಂಡೂರು ಉಸ್ತಾದ್ ಎಂಬ ದೊಡ್ಡ ಪಂಡಿತರು, ಸೂಫಿವರ್ಯರು, ಅಶಿಖುರ್ರಸೂಲು ಆಗಿದ್ದರೂ ಮಾನವೀಯತೆಯ ಪ್ರತಿಬಿಂಬ ಅವರ ಮುಖದಲ್ಲಿ ಸದಾ ಪ್ರಜ್ವಲಿಸುತ್ತಿತ್ತು..... (ಮಹಾನವರ ಮಕ್ಬರವಿರುವ ಕಟ್ಟಡದ ಒಳಗೆ ಮರ್ಕಝಿನಲ್ಲಿರುವ 2 ಶಹರೇ ಮುಬಾರಕಿನ ಫೋಟೋ ಪ್ರೈಮ್ ಮಾಡಿ ಇಡಲಾಗಿದೆ. ಹೋದವರು ನೋಡಿರಬಹುದು.)

*ಉಸ್ತಾದರ 11ನೇ ಉರೂಸು ಮುಬಾರಕ್ ನವಂಬರ್ 28ರಿಂದ ದಿಶಂಬರ್ 4ರ ವರೆಗೆ ನಡೆಯಲಿದೆ.*

ವಿಯೋಗದ 10 ವರ್ಷ ಕಳೆಯಿತು ಎಂಬುದು  ಲೆಕ್ಕದಲ್ಲಿ ಮಾತ್ರವಾಗಿದೆ. ಅವರನ್ನು ಪ್ರೀತಿಸುವವರಿಗೆ ಇದು ಅಲ್ಪ ಸಮಯವಾಗಿದೆ.
ಮಹಾತ್ಮರು ವಿಯೋಗಾಂತರವು ಜೀವಿಸುತ್ತಾರೆ ಎಂಬುದು ಎಷ್ಟು ಸರಿ ಅಲ್ಲವೇ!
ನೆನಪಿನಾಂಗಳದಲ್ಲಿ ಮಾತ್ರವಲ್ಲ, ಕಣ್ಣೆದುರಿಗೂ ಉಸ್ತಾದರು ಇದ್ದಾರೆ ಎಂದು ಆದರ್ಶ ಸುನ್ನಿಗಳು ಒಟ್ಟಿಗೆ ಹೇಳುತ್ತಾರೆ... ಮಾತ್ರವಲ್ಲ
ಆದರ್ಶ ಹಾದಿಯಲ್ಲಿ ಉಸ್ತಾದರು ತೋರಿಸಿಕೊಟ್ಟ  ವ್ಯವಸ್ಥಾಪಿತ ಹಾದಿಯಲ್ಲಿ ಮುನ್ನಡೆಯಲು, ಅದರ ಕಾರಣದಿಂದ ಇಸ್ಲಾಮಿಕ ಪ್ರಸ್ಥಾನಕ್ಕೆ ಶಕ್ತಿ ತುಂಬಲು ನಮಗೆ ಅಲ್ಲಾಹು ತೌಫೀಖ್ ನೀಡಲಿ... ಕೊನೆಗೆ ಮಹಾತ್ಮರುಗಳೊಂದಿಗೆ ಸ್ವರ್ಗದ ಮಡಿಲು ಸೇರುವ ಮಹಾಭಾಗ್ಯ ಅಲ್ಲಾಹು ನಮಗೂ ನೀಡಲಿ ಆಮೀನ್... ಆಮೀನ್..!!!

*ಮಹಾನವರ ಉರೂಸು ನಡೆಯುವ ಈ ಸಮಯದಲ್ಲಿ ಅವರ ಮೇಲೆ ನಮಗೊಂದು ಫಾತಿಹಾ ಓದೋಣ..*
ಇನ್ ಷಾ ಅಲ್ಲಾಹ್

_ಮುಗಿಯಿತು.._

✍ ಗಫೂರ್ ಬಾಯಾರು
🕎🕎🕎🕎🕎🕎🕎


No comments:

Post a Comment