Saturday, November 4, 2017

☪ ಝಿಯಾರತ್ತ್ ಕೇಂದ್ರ
         🔰18🔰
➖➖➖➖➖➖➖
#ಚಂದ್ರನ ಬೆಳಕಿನಿಂದ ಪ್ರಜ್ವಲಿಸುವ ಮಖ್ಬರಗಳು. ನಿಲಾಮುಟ್ಟಂ, ಇರಿಕ್ಕುರ್, ಕಣ್ಣೂರು.
➖➖➖➖➖➖➖
✍ _ಗಫೂರ್ ಬಾಯಾರ್_
➖➖➖➖➖➖➖
🌺ನಿಲಾಮುಟ್ಟಂ (ಚಂದ್ರನ ಅಂಗಳ) ಹೆಸರಿನ ಹಾಗೆ.... ಮನಸ್ಸಿಗೆ ಚಂದ್ರನ ಬೆಳಕು ಸ್ಪರ್ಶಿಸುವ ಪ್ರತೀತಿಯಾಗಿದೆ ಕಣ್ಣೂರು ಜಿಲ್ಲೆಯ ಇರಿಕ್ಕುರ್ ನದಿತೀರದಲ್ಲಿರುವ *"ನಿಲಾಮುಟ್ಟಂ"*ಎಂಬ ಸ್ಥಳದಲ್ಲಿ ಇರುವ ಮಖ್ಬರಗಳು.

🌺 ವಿಶ್ವಾಸಿಗಳಿಗೂ, ಚರಿತ್ರೆಗಾರರಿಗೂ ಬಹಳಷ್ಟು ಪಥ್ಯವಾಗಿದೆ ಈ ಪವಿತ್ರ ಪ್ರದೇಶ. ಇಲ್ಲಿ ಯಾವಾಗಲು ಚಂದ್ರನ ಬೆಳಕು ಕಾಣುದರಿಂದಲೇ ಈ ಸ್ಥಳಕ್ಕೆ ನಿಲಾಮುಟ್ಟಂ ಎಂಬ ಹೆಸರು ಬರಲು ಕಾರಣವೆಂದು ಹೇಳಲಾಗುತ್ತಿದೆ!.

🌺ನದಿತೀರದ ಜನವಾಸವಿಲ್ಲದ ನಿಬಿಡ ವನಗಳ ಪ್ರತೀತಿಯಂತಿರುವ 2 ಎಕ್ಕರೆಯಷ್ಟು ಸ್ಥಳಗಳಲ್ಲಿ ವ್ಯಾಪಿಸಿರುವ ಅತೀ ಪುರಾತನವಾದ ಈ ಮಖ್ಬರಗಳಿಗೆ *ಹಿಜರಿ ವರ್ಷ 5ರ ಆರಂಭದ ಪುರಾತನ ಇತಿಹಾಸವಿದೆ...* (ಅಂದರೆ 1430 ವರ್ಷಕ್ಕಿಂತಲೂ ಹಳೆಯ ಮಖ್ಬರಗಳು!!!)

🌺ಪುರಾತನವಾದ ಲಿಖಿತಗಳು ಇಂದು ಕೂಡ ಹಲವು ಖಬರುಗಳ ಮೇಲೆ ಪ್ರತ್ಯೇಕ ಶಿಲೆಗಳಲ್ಲಿ ಕೆತ್ತನೆ  ಮಾಡಿರುವುದು ಕಾಣಲು ಸಾಧ್ಯವಿದೆ. *ಅದು ಏಳನೇ ಶತಮಾನದ ಈಜಿಪ್ಟ್ ಮತ್ತು ಸಿರಿಯ ದೇಶಗಳಲ್ಲಿಯ ಮುಸ್ಲಿಂ ಖಬರುಗಳ ನಿರ್ಮಾಣ ಶೈಲಿಯಲ್ಲಿರುವ 200ಕ್ಕಿಂತಲೂ ಹೆಚ್ಚು ಮಖ್ಬರಗಳನ್ನು ಇಲ್ಲಿ ಕಾಣಬಹುದು.*

🌺ಹಲವಾರು ಮಹಾತ್ಮರುಗಳು ಅಂತ್ಯ ವಿಶ್ರಮಗೊಳ್ಳುತ್ತಿರುವ ಈ ಮಖ್ಬರಗಳಲ್ಲಿ *ಬದರ್ ಯುದ್ಧದಲ್ಲಿ ಭಾಗವಹಿಸಿದ ಸ್ವಹಾಬಿವರ್ಯರಲ್ಲಿ ಒಳಪಟ್ಟ ಕೆಲವರು ಹಾಗು ತಾಬಿಈಗಳು ಇಲ್ಲಿ ಅಂತ್ಯವಿಶ್ರಮ ಗೊಳ್ಳುತ್ತಿದ್ದಾರೆಂದು ವಿಶ್ವಾಸ. ಮಾಲಿಕ್ ಇಬ್ನು ಕಮಾಲ್ (ರ) ಎಂಬವರ ಮಖ್ಬರವು ಈ ಸ್ಥಳದಲ್ಲಿದೆ.*

🌺ಇರಿಕ್ಕುರಿನ ಹತ್ತಿರದ ಗುಡ್ಡೆಯ ಮೇಲೆ *ಕುನ್ನುಮ್ಮಲ್ ಮಖಾಮಿನಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ "ಕುನ್ನುಮ್ಮಲೆ ವಲಿಯುಪ್ಪಾಪ" ಎಂಬ ಹೆಸರಿನಲ್ಲಿ ಅರಿಯಲ್ಪಡುವವರು 2೦೦ ವರ್ಷಗಳ ಮೊದಲು ಆಫ್ಘಾನಿಸ್ತಾನದ ' ಬುನೆಯರ ' ಎಂಬ ಸ್ಥಳದಿಂದ ಕೇರಳಕ್ಕೆ ಕುಟುಂಬ ಸಮೇತ ಇಸ್ಲಾಮಿನ ಪ್ರಬೋಧನೆಗಾಗಿ ಆಗಮಿಸಿದ ಸಯ್ಯಿದ್ ಅಬ್ದುಲ್ ಖಯ್ಯುಮ್ (ರ) ಎಂಬ ಮಹಾನರಾಗಿದ್ದಾರೆ. "ನಿಲಾಮುಟ್ಟಂ" ಎಂಬಲ್ಲಿರುವ ಮಖ್ಬರಗಳನ್ನು ಕಂಡು ಹಿಡಿದು ಬೆಳಕಿಗೆ ತಂದವರು ಈ ಮಹಾನರಾಗಿದ್ದಾರೆ.* (ಮಹಾನರು ವಾಸವಿದ್ದ ಮನೆ ಈಗಲೂ ಮಖ್ಬರದ ಪರಿಸರದಲ್ಲಿ ಕಾಣಬಹುದು. ಆ ಮನೆ ಈಗ ಜಿನ್ನುಗಳ ವಾಸಸ್ಥಳವಾಗಿದೆ.)

🌺ಪ್ರಸಿದ್ಧವಾದ ನಿಲಾಮುಟ್ಟಂ ಉರೂಸು  *"ದನುಪತ್ತ್ ಆಘೋಷಮ್"* ಎಂಬ ಹೆಸರಿನಲ್ಲಾಗಿದೆ ಅರಿಯಲ್ಪಡುವುದು. (ಇದು ಮಲಯಾಳಂ ತಿಂಗಳ ಹೆಸರಾಗಿದೆ) ದನು ಒಂದರಿಂದ ಹತ್ತರವರೆಗಿನ ದಿವಸಗಳಲ್ಲಾಗಿದೆ ಇಲ್ಲಿ ಉರೂಸು ನಡೆಯುವುದು. ನಿಲಾಮುಟ್ಟಂ ಮಸೀದಿಯ ಹತ್ತಿರವಿರುವ ಬತ್ತಿ ಹೋಗದ ಜಲ ಪ್ರವಾಹವು, ಅಮಾವಾಸ್ಯೆ  ದಿನಗಳ ರಾತ್ರಿಯಲ್ಲಿ ಪ್ರಕಾಶ ದರ್ಶನವಾಗುವುದು, ಮುಂತಾದ ಹಲವಾರು ಪ್ರತ್ಯೇಕತೆಗಳು ಇಲ್ಲಿ ಇದೆ.

🌺ಆಧ್ಯಾತ್ಮಿಕ ರಂಗದಲ್ಲಿ ಅತೀ ಉನ್ನತರಾಗಿ ಜೀವಿಸಿದ  ಕೇರಳದ ಹಲವು ಔಲಿಯಾಗಳು ಈ ಮಖ್ಬರಗಳ ಇರುವಿಕೆಯ ಕುರಿತು ಸಮೂಹಕ್ಕೆ ತಿಳಿವಳಿಕೆ ಕೊಟ್ಟಿರುತ್ತಾರೆ. ಶೈಖುನಾ ಶಂಸುಲ್ ಉಲಮಾ EK ಉಸ್ತಾದರು (ಖ:ಸಿ) ಅಧಿಕೃತವಾಗಿ ಈ ಮಖ್ಬರಗಳ ಕುರಿತು ಹೇಳಿಕೆ  ನೀಡಿರುತ್ತಾರೆ.

🌺ಕೇರಳ ಮುಸ್ಲಿಂ ಚರಿತ್ರೆಗಾರರಲ್ಲಿ ಪ್ರಮುಖರಾದ Dr. CK ಕರೀಂ ಸಾಹಿಬ್ ಹಾಗು ಸಲಫಿ ಆಶಯಗಾರನೂ ಬರಹಗಾರನೂ ಆದ CN ಅಹ್ಮದ್ ಮೌಲವಿ ಎಂಬಿಬ್ಬರು ಜಂಟಿಯಾಗಿ ನಡೆಸಿದ ಸಂಶೋಧನೆಯಿಂದ ಹಿಜಿರ ವರ್ಷ 5ರಲ್ಲಿ ರಚಿಸಿದ ಶಿಲಾಫಲಕಗಳನ್ನು ಕಂಡುಹಿಡಿದು ಅವರದನ್ನು ಪ್ರಸಿದ್ಧಪಡಿಸಿರುವುದು ಜನರೆಡೆಯಲ್ಲಿ ಪ್ರಸಿದ್ಧವಾಗಿವೆ...

🌺ಪವಿತ್ರವಿರುವ ಶಾಂತಿಯ ತಾಣವಾದ ನಿಲಾಮುಟ್ಟಂನಲ್ಲಿ ಕಳೆಯುವ ಒಂದೊಂದು ನಿಮಿಷಗಳೂ ವಿಶ್ವಾಸಿಗಳಿಗೆ ಒಂದು ಆತ್ಮೀಯ ಅನುಭೂತಿಯನ್ನು ನೀಡುದರಲ್ಲಿ ಸಂಶಯವಿಲ್ಲ.
ಅಲ್ಲಾಹುವಿನ ಅನುಗ್ರಹಿತರುಗಳ ಸಾಮೀಪ್ಯವಿರುವ ಈ ಸ್ಥಳ ಸಂದರ್ಶಿಸುವವರ ಮನಸ್ಸಿಗೆ ಅತ್ಯಂತ ಮದ ನೀಡುವ  ಅನುಭವಗಳನ್ನು  ನೀಡುತ್ತದೆ.

 🌺  *ವಿಶುದ್ಧ ಖುರ್ ಆನಿನ          "كونوا مع الصادقين” ಎಂಬ ಸೂಕ್ತದ ವಿಶಾಲವಾದ ಅರ್ಥಗಳಲ್ಲಿ  ಮಹತ್ತುಗಳಾದ ವ್ಯಾಖ್ಯಾನಿತರು, ಇಮಾಮಿಗಳು, ಮತ್ತು ಸಲಫುಸ್ವಾಲಿಹಿಗಳು ಮಹಾತ್ಮರುಗಳ ಮಖ್ಬರ ಝಿಯಾರತ್ತನ್ನು ಪ್ರೋತ್ಸಾಹಿಸುವುದರ ಹಿಂದಿನ ಅನೇಕ ಆತ್ಮೀಯ ಗುಣ ಮತ್ತು ಪ್ರತಿಫಲಗಳ ಕುರಿತು ವಿವರಿಸಿರುತ್ತಾರೆ.*

🌺ಅಲ್ಲಾಹುವಿನ ವಿಶುದ್ಧರಾದ ಪರಿಶುದ್ಧಾತ್ಮಗಳನ್ನು ಝಿಯಾರತ್ತ್ ಮಾಡಲು, ಅದರಿಂದ ವಿಶುದ್ಧಿ ಲಭಿಸುವ ಸೌಭಾಗ್ಯವನ್ನು ಸರ್ವಾಧಿಪತಿಯಾದ ಅಲ್ಲಾಹು ನಮಗೆ ಕರುಣಿಸಲಿ ಆಮೀನ್.

✍ಗಫೂರ್ ಬಾಯಾರ್
🌺🌺🌺🌺🌺🌺🌺




No comments:

Post a Comment