Thursday, November 2, 2017

ಇವರೆಲ್ಲ ಎಲ್ಲಿಂದ ಬಂದರಯ್ಯಾ...?

ಮರಣ ಹೊಂದಿದ ಮನೆಯಲ್ಲಿ ತಹ್ಲೀಲ್ ಹೇಳಿದ್ದು   ವಂಚನೆಯಾಯಿತಾ.....?
ಅದು ವಂಚನೆಯಾಗಿದ್ದರೆ ಈಗ skಯವರು ತಹ್ಲೀಲ್ ಹೇಳುವುದೇಕೆ....?

ಇದರಲ್ಲಿ ಇಸ್ಲಾಂ ಧರ್ಮವನ್ನು ಅಡವಿಟ್ಟದ್ದು ಹೇಗೆ ....?
ಸುಮ್ಮನೆ ಬಾಯಿಗೆ ಬಂದದ್ದೆಲ್ಲಾ ಬರೆಯುತ್ತಿದ್ದೀರಾ....?

ಕೂದಲು ತಂದು ವಂಚಿಸಿದರಂತೆ.. ನಊದ್ಸುಬಿಲ್ಲಾಹ್...
ಇವರು ಹೇಳುವುದನ್ನು ನೋಡಿದರೆ ಎಪಿ ವಿಭಾಗಕ್ಕೆ ಮೊದಲು ಪವಿತ್ರವಾದ ಕೂದಲು ಸಿಕ್ಕಿದ ಹಾಗೆ ಆಡುತ್ತಾರಲ್ಲಾ...?
ಪವಿತ್ರ ಕೂದಲು ಮರ್ಕಝ್ ನಲ್ಲಿ ಮಾತ್ರವಲ್ಲ, ಕಾಶ್ಮೀರದಲ್ಲಿ, ತಮಿಳುನಾಡಿನಲ್ಲಿ, ಭೊಪಾಲಿನಲ್ಲಿ ಎಲ್ಲಾ ಕಡೆ ಇದೆ. ಇವರಿಗೆ ಕಣ್ಣು ಸಹ ಕಾಣುವುದಿಲ್ವಾ....?
ಇನ್ನು ಮರಣದ ಮನೆಯಲ್ಲಿ ತಹ್ಲೀಲ್ ಹೇಳುವುದು ಹರಾಂ ಎಂದು ಹೇಳಿದವರ್ಯಾರು...? ಅಲ್ಲಿ ತಹ್ಲೀಲ್ ಹೇಳಿದರೆ ಧರ್ಮಕ್ಕೆ ಚ್ಯುತಿ ಉಂಟಾಗುವುದು ಹೇಗೆ ...?

ತಹ್ಲೀಲ್ ಹೇಳಿ ಅಹ್ಲುಸುನ್ನತಿ ವಲ್ ಜಮಾಅತಿನ ಧಾರ್ಮಿಕತೆಯನ್ನು ನಾಶಮಾಡಿದರಂತೆ,
   ಇವರ ಹಣೆಬರಹಕ್ಕೆ ಏನು ಹೇಳುವುದು ...?

ಖುದ್ದಾಗಿ ಇವರು ಮಾಡುವುದಿಲ್ಲ, ಮಾಡಲಿಕ್ಕೆ ಬಿಡುವುದೂ ಇಲ್ಲ

ಮೊನ್ನೆ ಸಂಘಟನೆಯೊಂದು ಬೆಂಗಳೂರಿನಲ್ಲಿ ಬೀದಿನಾಟಕ ಮಾಡಿ ಸಮುದಾಯದ ಮಾನ ಹರಾಜು ಹಾಕಿತು.ಆಗ ಈ ಧರ್ಮಸುಧಾರಕರು ಎಲ್ಲಿ ಅವಿತು ಕುಳಿತಿದ್ದರು ....?

ಆಗ ಬಾಯಿ ಬಂದ್ ಆಗಿತ್ತಾ....?
 ಕೆಡುಕು ವಿಜೃಂಬಿಸಿದಾಗ ಸುಮ್ಮನೆ ಕುಳಿತವರು ಈಗ ಧರ್ಮ ಸುಧಾರಕರಾಗಿ ಹೊರಬಂದಿದ್ದಾರೆ.. ನಾಚಿಕಯಿಲ್ಲದವರು

No comments:

Post a Comment