Saturday, October 7, 2017

*ಬೀವಿ ಆತಿಕಾ (ರ)*

ಭಾಗ--1

📝ಮುನೀರ್ ಸಖಾಫಿ, ಸಾಲೆತ್ತೂರು.

ಸ್ವಹಾಬೀ ವನಿತೆಯಾದ ಆತಿಕ ಬೀವಿ (ರ) ರನ್ನು ನಮಾಜಿಗಾಗಿ ಮಸೀದಿ ಹೋದ ಬಗ್ಗೆ ವಹ್ಹಾಬಿಯೊಬ್ಬ ಬರೆದುದನ್ನು ನೋಡಿ ಈ ಲೇಖನ ಬರೆಯಲು ಪ್ರಾಂಬಿಸಿದ್ದೇನೆ.
ಆತಿಕ ಬೀವಿ ಯಾರು?
ಅವರು ಮಸೀದಿಗೆ ಯಾವಾಗ ಹೋದದ್ದು?
ನಂತರ ಅವರು ಮಸೀದಿಗೆ ಹೋಗದಿರಲು ಕಾರಣವೇನು?
ನನ್ನನ್ನು ನೀವು ಮದುವೆಯಾದಲ್ಲಿ ಮಸೀದಿಗೆ ನಮಾಝಿಗೆ ಹೋಗಲು ಅನುಮತಿ ನೀಡಬೇಕೆಂದು ಹೇಳಿಯೂ  ಉಮರ್ (ರ) ಅವರನ್ನು ವಿವಾಹವಾಗಲು ಕಾರಣವೇನು?
ಸತ್ಯಕ್ಕೆ ಬೇಕಾಗಿ ಜೀವನವನ್ನೇ ಸಮರ್ಪಿಸಿದ ಉಮರ್ (ರ) ಅವರ ಮಸೀದಿಯ ನಮಾಜು ಅನುಮತಿಸಿದ್ದರೇ?
ಮುಂತಾದ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಅತ್ಯಮೂಲ್ಯವಾದ ಲೇಖನವಾಗಿದೆ ಇದು.
ಇದರ ಎಲ್ಲಾ ಭಾಗಗಳನ್ನು ಓದುಗರು ಗಮನದಲ್ಲಿಟ್ಟು ಓದಬೇಕಾಗಿ ವಿನಂತಿ.

*ಆತಿಕಾ (ರ)*


ತಂದೆ :ಅಂರು ಬಿನ್ ನುಫೈಲ್
ತಾಯಿ:ಉಮ್ಮು ಕುರ್ ಝ್.

ಪತಿ:
*ಒಂದನೇ ಪತಿ  ಅಬ್ದುಲ್ಲ (ರ).* ಇವರು ಸಿದ್ದೀಖ್ (ರ) ರವರ ಪುತ್ರರು.

ಆತಿಕ (ರ) ಅತೀ ಸುಂದರಿಯಾಗಿದ್ದರು.ಪತ್ನಿಯ ಸೌಂಧರ್ಯದಲ್ಲಿ ಆಕರ್ಷಿತನಾಗಿ ಪತಿ ಯಾದ ಅಬ್ದುಲ್ಲ (ರ) ಯುದ್ಧಕ್ಕೆ ಹೋಗುವುದು ಕೂಡಾ ಮರೆತು ಬಿಟ್ಟರು.
ಈ ಕಾರಣದಿಂದ ಸಿದ್ದೀಖ್ (ರ) ರವರು ಮಗನಲ್ಲಿ ಆತಿಕ (ರ) ತಲಾಖ್ ಹೇಳುವಂತೆ ಆಞ್ಞಾಪಿಸಿದರು.ತಂದೆಯ ಮಾತಿಗೆ ಬೆಲೆ ಕೊಟ್ಟು ಅಬ್ದುಲ್ಲ(ರ)ರವರು ಆತಿಕ (ರ) ರನ್ನು ತಲಾಖ್ ಮಾಡಿದರು.ಆದರೆ ಮಗನಿಗೆ ತಲಾಖ್ ಹೇಳಲ್ಪಟ್ಟ ಆತಿಕ (ರ) ರದೇ ನೆನಪು ಎಂದು ತಂದೆಗೆ ಮನವರಿಕೆಯಾದಾಗ ಪುನಃ ಪತ್ನಿಯಾಗಿ ಸ್ವೀಕರಿಸುವಂತೆ ಸೂಚಿಸಿದರು.
ತಾಯಿಫ್ ನಲ್ಲಿ ಒಂದು ಯುದ್ಧವುಂಟಾದಾಗ ಅಬ್ದುಲ್ಲ(ರ) ರವರು ಆ ಯುದ್ಧದಲ್ಲಿ ಮರಣಹೊಂದಿದರು.
*ನಂತರ ಆತಿಕ (ರ) ರವರನ್ನು ಝೈದ್ ಬಿನ್ ಖತ್ತಾಬ್ ವಿವಾಹವಾದರು.* ಅವರು ಯಮಾಮ ಯುದ್ಧದಲ್ಲಿ ಶಹೀದ್ ಆದರು.

*ನಂತರ ಅವರನ್ನು ಉಮರ್ (ರ) ವಿವಾಹವಾದರು.*

*ಉಮರ್(ರ) ರವರ ವಫಾತ್ ನಂತರ ಝುಬೈರ್ ಬಿನ್ ಅವ್ವಾಂ (ರ) ಅವರನ್ನು ವಿವಾಹವಾದರು.*
ಅವರು ಮಕ್ಕಾದಿಂದ ಮದೀನಾಗೆ ಯಾತ್ರೆ ಹೋಗುವಾಗ ಧಾರಿ ಮಧ್ಯೆ ಅವರನ್ನು ಕೊಲೆಗೆಯ್ಯಲಾಯಿತು.

ಆತಿಕ (ರ)ರನ್ನು ವರಿಸಿದ ನಾಲ್ಕು ಮಹಾತ್ಮರೂ ಶಹೀದ್ ಆದರು.
ಆದುದರಿಂದಲೇ ಆ ಕಾಲದಲ್ಲಿ ಒಂದು ಮಾತು ಪ್ರಚಲಿತದಲ್ಲಿತ್ತು.
من أراد الشهادة فليتزوج بعاتكة بنت نفيل".
*ರಕ್ತ ಸಾಕ್ಷಿಯಾಗಲು ಆಸೆಯಿರುವವರು ಆತಿಕ ಬೀವಿಯನ್ನು ವರಿಸಿರಿ*
(ನೋಡಿರಿ ಇಮಾಂ ಇಬ್ನ್ ಹಜರ್ (ರ) ರವರ  ಅಲ್ ಇಸ್ವಾಬ 2/107)


*ಮುಂದುವರಿಯುವುದು*

ಇದು ನಿಮಗೆ ಇಷ್ಟವಾದಲ್ಲಿ ಇತರರಿಗೆ ಶೇರ್ ಮಾಡಿ

No comments:

Post a Comment