🕌🕌🕌🕌🕌🕌🕌🕌🕌🕌🕌🕌 *ಸುಬಹಿ* *ನಮಾಝಿನಲ್ಲಿ* *ಖುನೂತ್.* 🕌🕌🕌🕌🕌🕌🕌🕌🕌🕌🕌🕌
*ಭಾಗ --0⃣1⃣*
📝 *ಮುನೀರ್* *ಸಖಾಫಿ,* *ಸಾಲೆತ್ತೂರು.*
--------------------------
"ಝೀ "ಎಂಬ ತಿಳಿಗೇಡಿ ವಹ್ಹಾಬಿಯು ಖುನೂತ್ ನ ಕುರಿತು ಹಲವಾರು ದುರ್ವ್ಯಾಖ್ಯಾನ ನೀಡಿ ಒಂದು ಲೇಖನ ಬರೆದಿದ್ದ.
ಅದಕ್ಕೆ ನಾನು ಹದೀಸ್ ಗಳನ್ನು ವಿವರಿಸಿ ಉತ್ತರಸಿದ್ದೆ.
ಅದಕ್ಕೆ ಆತ ಇಮಾಮ್ ಇಬ್ನ್ ಹಜರ್ ಅಸ್ಖಲಾನಿ (ರ) ಗ್ರಂಥದಿಂದ ಅರ್ಧ ಭಾಗ ಕದ್ದು ತನ್ನ ವಂಚನೆ ಮಾರಾಟ ಮಾಡಲು ಶ್ರಮಿಸಿದ.ತಮ್ಮ ಆಶಯಕ್ಕೆ ವಿರುದ್ಧವಾದ ಎಲ್ಲಾ ಹದೀಸ್ ಗಳನ್ನು ಲಯೀಫೆಂದು ಹೇಳಿ ತಿರಸ್ಕರಿಸುವುದು ಇವರ ಚಾಳಿಯಾಗಿ ಬಿಟ್ಟಿದೆ.
ಅದಕ್ಕೆ ಉತ್ತರವಾಗಿ ನಾನು "ಖುನೂತ್" ನ ಬಗ್ಗೆ ಹಲವು ಭಾಗಗಳಾಗಿ, ಸವಿಸ್ತಾರವಾಗಿ ಲೇಖನ ಬರೆಯಲು ತೀರ್ಮಾನಿಸಿದೆ.
" ಝೀ " ಎಂಬ ಪಡು ಜಾಹಿಲ್ ನ ಎಲ್ಲಾ ವಾದಗಳನ್ನೂ ,ದುರ್ವ್ಯಾಖ್ಯಾನಗಳನ್ನೂ ಇದರಲ್ಲಿ ಖಂಡಿಸಲಾಗುವುದು.ಇಂಶಾ ಅಲ್ಲಾಹ್.
ವಿ.ಸೂ : ಈ ಲೇಖನದ ಎಲ್ಲಾ ಭಾಗಗಳನ್ನು ಓದುಗರು ತಪ್ಪದೇ ಓದಬೇಕಾಗಿ ವಿನಂತಿ.
----------------------------
ಶಾಫಿಈ ಮದ್ಸ್ ಹಬ್ ಪ್ರಕಾರ ಸುಬಹಿ ನಮಾಝಿನಲ್ಲಿ ಖುನೂತ್ ಸುನ್ನತ್ತಾಗಿದೆ.
*ಪವಿತ್ರ* *ಖುರ್* *ಆನಿನಲ್ಲಿ* *ಅಲ್ಲಾಹನು* *ಈ* *ರೀತಿ* *ಹೇಳುತ್ತಾನೆ;*
"حافظوا علي الصلوات والصلاة الوسطي وقوموا لله قانتين.(البقرة 238)
ನೀವು ಎಲ್ಲಾ ನಮಾಝಿನಲ್ಲಿ ಜಾಗರೂಕರಾಗಿರಿ , ಮುಖ್ಯವಾಗಿ ಸುಬಹಿ ನಮಾಝಿನಲ್ಲಿ.ಖುನೂತ್ ಓದುವವರಾಗಿಯೂ ನಿರ್ವಹಿಸಿರಿ.(ಅಲ್ ಬಖರ)
ಈ ಆಯತ್ ನಲ್ಲಿ ಹೇಳಿದ " ಸ್ವಲಾತುಲ್ ವುಸ್ತ್ವ" ಎಂಬುವುದಕ್ಕೆ ಹಲವಾರು ಅರ್ಥಗಳನ್ನು ಮುಫಸ್ಸಿರ್ ಗಳು ನೀಡಿದ್ದಾರೆ.
ಇಮಾಮ್ ರಾಝೀ ಬರೆಯುದನ್ನು ನೋಡಿ,
"القول الثالث انها صلاة الصبح وهذا القول من الصحابة قول علي عليه السلام وعمر وابن عباس وجابر بن عبد الله وابي امامة الباهلي ومن التابعين قول طاوس وعطاء وعكرمة ومجاهد وهو مذهب الشافعي رحمه الله .(تفسير الرازي)
ಮೂರನೇ ಅಭಿಪ್ರಾಯ : ಸ್ವಲಾತುಲ್ ವುಸ್ತ ಎಂದು ಹೇಳಿದರೆ ಅದು ಸುಬಹಿ ನಮಾಝ್ ಆಗಿದೆ.ಈ ಅಭಿಪ್ರಾಯವನ್ನು ಸ್ವಹಾಬಿಗಳ ಪೈಕಿ ಅಲಿಯ್ಯ್ (ರ), ಉಮರ್ (ರ), ಇಬ್ನ್ ಅಬ್ಬಾಸ್ (ರ), ಜಾಬಿರ್ ಬಿನ್ ಅಬ್ದಿಲ್ಲಾಹ್ (ರ), ಅಬೂ ಉಮಾಮ (ರ), ಮುಂತಾದವರೂ ತಾಬಿಈಗಳ ಪೈಕಿ ತ್ವಾವೂಸ್ (ರ), ಇಕ್ರಿಮ (ರ), ಅತ್ವಾಅ (ರ), ಮುಜಾಹಿದ್ (ರ),
ಮುಂತಾದವರೂ ಹೇಳಿದ್ದಾರೆ.ಇದುವೇ ಆಗಿದೆ ಇಮಾಮ್ ಶಾಫಿಈ (ರ) ರವರ ಅಭಿಪ್ರಾಯ.
(ರಾಝಿ6/126)
ನಂತರ ಇಮಾಮ್ ರಾಝೀ (ರ) ರವರು ಸ್ವಲಾತುಲ್ ಉಸ್ತ್ವ ಎಂಬುವುದಕ್ಕೆ ಸುಬಹಿ ನಮಾಝ್ ಎಂದುನ್ ಅರ್ಥ ನೀಡಿದ್ದಕ್ಕೆ ಹಲವಾರು ಕಾರಣಗಳನ್ನು ವಿವರಿಸುತ್ತಾ ಹೇಳುತ್ತಾರೆ;
انه تعالي قال بعد ذكر الصلاة الوسطي وقوموا لله قانتين.قرن هذه الصلاة بذكر القنوت وليس في الشرع صلاة ثبت بالاخبار الصحاح القنوت فيها الا الصبح.فدل علي ان المراد بالصلاة الوسطي هي صلاة الصبح.(رازي)
"ಅಲ್ಲಾಹನು ಸ್ವಲಾತುಲ್ ಉಸ್ತ್ವ ಎಂದು ಹೇಳಿದ ನಂತರ "ನೀವು ಖುನೂತ್ ನಿರ್ವಹಿಸಿ ನಮಾಝ್ ಮಾಡಿರಿ" ಎಂದು ಹೇಳಿದರಿಂದಲೇ ತಿಳಿದು ಬಂತು "ಸ್ವಲಾತುಲ್ ವುಸ್ತ್ವ" ಎಂದರೆ ಅದು ಸುಬಹಿ ನಮಾಝ್ ಎಂದು,ಕಾರಣ ಸ್ವಹೀಹ್ ಆದ ಹದೀಸ್ ಗಳಿಂದ ಖುನೂತ್ ಸಾಬೀತಾದ ನಮಾಝ್ ಸುಬಹಿ ನಮಾಝ್ ಮಾತ್ರವಾಗಿದೆ.(ರಾಝೀ6/127)
ಒಟ್ಟಿನಲ್ಲಿ ನೀವು ಖುನೂತ್ ಓದಿ ನಮಾಜ್ ನಿರ್ವಹಿಸಿರಿ ಎಂದು ಅಲ್ಲಾಹನು ಹೇಳಿದುದರ ತಾತ್ಪರ್ಯ ಸುಬಹಿ ನಮಾಝಿನಲ್ಲಿ ಖುನೂತ್ ಓದಿ ನಿರ್ವಹಿಸುವ ನಮಾಝ್ ಆಗಿದೆ ಎಂದು ಇಮಾಮ್ ರಾಝಿಯವರ ಈ ವ್ಯಾಖ್ಯಾನದಿಂದ ತಿಳಿಯಬಹುದು.
ಮುಂದುವರಿಯುದು...
No comments:
Post a Comment