🕌🕌🕌🕌🕌🕌🕌🕌🕌🕌🕌🕌 *ಸುಬಹಿ* *ನಮಾಝಿನಲ್ಲಿ* *ಖುನೂತ್.* 🕌🕌🕌🕌🕌🕌🕌🕌🕌🕌🕌🕌
*﷽*
*ಭಾಗ --0⃣4⃣*
📝 *ಮುನೀರ್* *ಸಖಾಫಿ,* *ಸಾಲೆತ್ತೂರು.*
------------------------------------------------------
ಇಮಾಮ್ ದಾರ್ ಖುತ್ ನಿಯ ಸುನನ್ ನಲ್ಲಿ ವರದಿ ಮಾಡಿದ ಹದೀಸ್ ನೋಡಿ;
عن انس بن مالك قال :ما زال رسو الله صلي الله عليه وسلم يقنت في الفجر حتي فارق الدنيا
(سنن الدار قطني)
ಅನಸ್ ಬಿನ್ ಮಾಲಿಕ್ (ರ) ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಸುಬಹಿ ನಮಾಝಿನಲ್ಲಿ ವಫಾತ್ ತನಕ ಖುನೂತ್ ಓದುತ್ತಿದ್ದರು"
(ದಾರು ಖುತ್ ನಿ 2/39)
ಅದೇ ರೀತಿ ಇಮಾಮ್ ಬೈಹಖೀ (ರ) ತನ್ನ ಮ ಅರಿಫತು ಸುನನಿ ವಲ್ ಆಸಾರ್ 2/78 ನಲ್ಲಿ ಕೂಡಾ ಈ ಹದೀಸನ್ನು ವರದಿ ಮಾಡಿದ್ದಾರೆ.
ಇಮಾಮ್ ದಾರು ಖುತ್ ನೀ ವರದಿ ಮಾಡಿದ ಮೇಲಿನ ಹದೀಸಿನ ಕುರಿತು ಇಮಾಮ್ ಖುರ್ಥುಬೀ (ರ) ಸ್ವಹೀಹ್ ಎಂದು ಹೇಳಿದ್ದಾರೆ.
(ಖುರ್ಥುಬೀ 4/129)
"وروي الدارقطني باسناد صحيح عن انس انه قال : ما زال رسول الله صلي الله عليه وسلم يقنت في صلاة الغداة حتي فارق الدنيا". (قرطبي 4/129)
ಇಮಾಮ್ ಸಂಶುದ್ದೀನುಲ್ ಕರ್ಮಾನೀ (ರ) ಹೇಳುತ್ತಾರೆ;
"وقال الطبري الصواب فيه ان يقال صح عن النبي صلي الله عليه وسلم انه قنت علي قتلة القراء اماشهرا او اكثر في كل صلاة مكتوبة وصح ايضا انه لم يزل يقنت في صلاة الصبح حتي فارق الدنيا فيقول اذا نابت المسلمين نائبة كان القنوت حسنا في الصلوات كلها والا في الصبح.
( كرماني علي البخاري 6/97)
ಇಮಾಮ್ ತ್ವಬ್ರೀ (ರ) ಹೇಳುತ್ತಾರೆ;
"ಈ ವಿಷಯದಲ್ಲಿರುವ ವಾಸ್ತವಿಕತೆ , ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು, ಖುರ್ ಆನ್ ಕಂಠಪಾಠ ಮಾಡಿದ ಸ್ವಹಾಬಿಗಳನ್ನು ವಧಿಸಿದ ಶತ್ರುಗಳಿಗೆ ವಿರುದ್ಧವಾಗಿ ಒಂದು ತಿಂಗಳು ಅಥವಾ ಹೆಚ್ಚು ತಿಂಗಳು ಗಳ ಕಾಲ ಎಲ್ಲಾ ಪರ್ಳ್ ನಮಾಝಿನಲ್ಲಿ ಖುನೂತ್ ಓದುತ್ತಿದ್ದರು.
ಸುಬಹಿ ನಮಾಝಿನಲ್ಲಿ ಎಲ್ಲಾ ದಿವಸವೂ ವಫಾತ್ ತನಕ ಖುನೂತ್ ಓದಿ ನಮಾಝ್ ನಿರ್ವಹಿಸಿದ್ದರು ಎಂದು ಸ್ವಹೀಹಾದ ಹದೀಸಿನಲ್ಲಿ ಸಾಬೀತಾಗಿದೆ.
ಮುಸ್ಲಿಮರಿಗೆ ಯಾವುದಾದರೊಂದು ಸಂಕಷ್ಟ ಬಂದರೆ ಎಲ್ಲಾ ನಮಾಝಿನಲ್ಲೂ ಅದಿಲ್ಲದಿದ್ದರೆ ಸುಬಹಿ ನಮಾಝಿನಲ್ಲಿ ಮಾತ್ರ ಖುನೂತ್ ಓದಿ ನಮಾಝ್ ನಿರ್ವಹಿಸುವುದಾಗಿದೆ ಉತ್ತಮ.
(ಕರಮಾನೀ ಅಲಲ್ ಬುಖಾರಿ 6/97)
ಸುಬಹಿ ನಮಾಝಿನಲ್ಲಿ ಖುನೂತ್ ಇದೆಯೆಂದೂ ಖುನೂತ್ ಓದಿ ನಮಾಝ್ ನಿರ್ವಹಿಸುದಾಗಿದೆ ಉತ್ತಮವೆಂದು ಈ ಉದ್ಧರಣಿಯಿಂದಲೂ ಸ್ಪಷ್ಟವಾಯಿತು.
ಇಮಾಮ್ ಅಬ್ದುರ್ರಝಾಕ್(ರ)ವರದಿ ಮಾಡಿದ ಒಂದು ಹದೀಸ್ ಹೀಗಿದೆ;
"عن انس بن مالك قال ما زال رسول الله صلي الله عليه وسلم يقنت في الفجر حتي فارق الدنيا.
(مصنف عبد الرزاق)
ಅನಸ್ (ರ) ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಸುಬಹಿ ನಮಾಝಿನಲ್ಲಿ ವಫಾತ್ ತನಕ ಖುನೂತ್ ಓದುತ್ತಿದ್ದರು"
(ಮುಸನ್ನಫ್ ಅಬ್ದುರ್ರಝ್ಹಾಕ್ 3/110 )
ಇಮಾಮ್ ಇಬ್ನ್ ಅಬೀ ಶೈಬ ವರದಿ ಮಾಡಿದ ಹದೀಸ್ ನೋಡಿ;
"عن انس ان النبي صلي الله عليه وسلم قنت في الفجر.
(مصنف ابن ابي شيبة 2/211)
ಅನಸ್ (ರ) ವರದಿ ;
"ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಸುಬಹಿ ನಮಾಝಿನಲ್ಲಿ ಖುನೂತ್ ಓದುತ್ತಿದ್ದರು"
(ಮುಸನ್ನಫ್ ಇಬ್ನ್ ಅಬೀ ಶೈಬ)
ಇಮಾಮ್ ಬಗವೀ (ರ) ಹೇಳುತ್ತಾರೆ;
"اخبرنا أبو سعد أحمد بن محمد الحميدي ، أنا الحاكم أبو عبد الله الحافظ ، نا أبو بكر محمد بن عبد الله الشافعي ، نا محمد بن إسماعيل السلمي ، نا أبو نعيم ، نا أبو جعفر الرازي ، عن الربيع ، عن أنس ، قال : ما زال رسول الله صلى الله عليه وسلم يقنت في صلاة الصبح حتى فارق الدنيا.
ಅನಸ್ (ರ) ಹೇಳುತ್ತಾರೆ;" ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ವಫಾತ್ ತನಕ ಖುನೂತ್ ಓದಿಯೇ ಸುಬಹಿ ನಮಾಝ್ ನಿರ್ವಹಿಸುತ್ತಿದ್ದರು"
قال الحاكم : وإسناد هذا الحديث حسن ،
ಇಮಾಮ್ ಹಾಕಿಂ ಹೇಳುತ್ತಾರೆ;
ಈ ಹದೀಸಿನ ಪರಂಪರೆ ಹಸನ್ ಆಗಿದೆ".
وروى شعبة ، عن عمرو بن مرة ، قال : سمعت ابن أبي ليلى ، يحدث عن البراء ، عن النبي صلى الله عليه وسلم أنه كان يقنت في الصبح .
ಬರ್ರಾಅ (ರ) ಹೇಳುತ್ತಾರೆ ;
"ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಸುಬಹಿ ನಮಾಝಿನಲ್ಲಿ ಖುನೂತ್ ಓದುತ್ತಿದ್ದರು"
وعن الأسود قال : صليت خلف عمر في السفر والحضر ما لا أحصي ، فكان يقنت في صلاة الفجر.
(شرح السنة للبغوي 3/124)
ಅಸ್ ವದ್ (ರ) ಹೇಳುತ್ತಾರೆ;
"ನಾನು ಉಮರ್ (ರ) ರೊಂದಿಗೆ ಯಾತ್ರೆಯಲ್ಲಿ ಮತ್ತು ಊರಿನಲ್ಲಿ ಲೆಕ್ಕವಿಲ್ಲದಷ್ಟು ಸಲ ನಮಾಝ್ ಮಾಡಿದ್ದೇನೆ.ಅವರು(ಉಮರ್ (ರ) ) ಸುಬಹಿ ನಮಾಝಿನಲ್ಲಿ ಖುನೂತ್ ಓದುತ್ತಿದ್ದರು."
(ಶರಹುಸ್ಸುನ್ನ 3/124)
ಮುಂದುವರಿಯುವುದು...
ವಿ.ಸೂ:
ಮುಂದಿನ ಭಾಗಗಳಲ್ಲಿ ಇನ್ನೂ ಹಲವಾರು ಹದೀಸ್ ಗಳು ಮತ್ತು ವಹ್ಹಾಬಿಗಳ ಬಾಲಿಶವಾದಗಳಿಗೆ ಸೂಕ್ತ ಉತ್ತರಗಳನ್ನು ನಿರೀಕ್ಷಿಸಿ,ಓದುಗರು ಎಲ್ಲಾ ಭಾಗಳನ್ನು ತಪ್ಪದೇ ಓದಿರಿ..
No comments:
Post a Comment