Thursday, October 5, 2017

ಉರೂಸ್ ಆಚರಣೆ ಇಸ್ಲಾಮಿನಲ್ಲಿ.

ಭಾಗ -14

📝 ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ , ತೋಕೆ.

 ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಕಟ್ಟಡದೊಳಗೆ ದಫನ್ ಮಾಡಲಾಗಿದೆ ಎಂಬುವುದನ್ನು  ತಿಳಿಸಿದ ನಂತರ ಬಹು! ಮುಹಮ್ಮದ್ ಹಬೀಬ್ ಅಶ್ಶಿಂಖೀತೀ ರಲಿಯಲ್ಲಾಹು ಅನ್ಹು ಹೇಳುತ್ತಾರೆ,
" ತನ್ನ ಎರಡು ಸಂಗಡಿಗರೊಂದಿಗೆ (ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹಾಗೂ ಸಿದ್ದೀಕ್ ರಲಿಯಲ್ಲಾಹು ಅನ್ಹು ) ತನ್ನನ್ನೂ ಅದೇ ಕಟ್ಟಡದೊಳಗೆ ದಫನ್ ಮಾಡಲು ಉಮರ್ ರಲಿಯಲ್ಲಾಹು ಅನ್ಹು ಬಹು! ಆಯಿಶ ಬೀವಿಯರೊಂದಿಗೆ ಅನುಮತಿಯನ್ನು ಕೇಳಿದ್ದರು.ಕೆಲವು ವರ್ಷಗಳ ಬಳಿಕ ಆ ಕಟ್ಟಡದಲ್ಲಿ ಲೋಪದೋಷಗಳು ಕಂಡಾಗ ತಾಬಿವುಗಳ ಒಮ್ಮತಾಭಿಪ್ರಾಯ ಪ್ರಕಾರ ಅದನ್ನು ದುರಸ್ತಿ ಗೊಳಿಸಲಾಯಿತು.ಬಹು! ಅಬೂಬಕರ್ ಸಿದ್ದೀಕ್ ರಲಿಯಲ್ಲಾಹು ಅನ್ಹು ಹಾಗೂ ಉಮರ್ ರಲಿಯಲ್ಲಾಹು ಅನ್ಹು ರವರನ್ನು ಪ್ರವಾದಿ ಸಲ್ಲಲ್ಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಸ್ವಹಾಬಿಗಳ ಒಮ್ಮತಾಭಿಪ್ರಾಯ ಪ್ರಕಾರ ಕಟ್ಟಡದೊಳಗೆ ದಫನ್ ಮಾಡಿದ್ದರಿಂದ ಖಬರ್ ಗಳ ಸುತ್ತ ಜಂಭತನದ ಉದ್ದೇಶವಿಲ್ಲದೆ ಕಟ್ಟಡ ನಿರ್ಮಿಸುವುದು ಅನುವದನೀಯವೆಂದು ಇದರಿಂದ ಸ್ಪಷ್ಟವಾಗುತ್ತದೆ.ಏಕೆಂದರೆ ಕಟ್ಟಡದೊಳಗೆ ದಫನ್ ಮಾಡುವುದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಪ್ರತ್ಯೇಕತೆಯಾಗಿದೆ ಎಂದು ಒಮ್ಮೆಯೂ ಸ್ಥಿರಪಟ್ಟಿಲ್ಲ. ಮಾತ್ರವಲ್ಲ, ಮೊದಲೇ ಇರುವ ಕಟ್ಟಡದೊಳಗೆ ದಫನ್ ಮಾಡುವುದೂ , ದಫನ್ ಮಾಡಿದ ನಂತರ ಕಟ್ಟಡ ನಿರ್ಮಿಸುವುದೂ ಒಂದೇ ಆಗಿದೆ.ಅವುಗಳೆಡೆಯಲ್ಲಿ ತೋರಿಕೆಯಲ್ಲಿ ಅಲ್ಲದೆ ಕಾರ್ಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ."
( ಝಾದ್ ಮುಸ್ಲಿಂ 32/2)
ಉರ್ವತ್ ರಲಿಯಲ್ಲಾಹು ಅನ್ಹು ಹೇಳುತ್ತಾರೆ,
" ವಲೀದ್ ಬಿನ್ ಅಬ್ದುಲ್ ಮಲಿಕ್ ರವರ ಕಾಲದಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರವರು ಅಂತ್ಯ ವಿಶ್ರಮಗೊಳ್ಳುತ್ತಿರುವ ಕಟ್ಟಡದ ಗೋಡೆಯು ಕುಸಿಯಿತು.ಆಗ ಜನರು ಅದನ್ನು ಪುನನಿರ್ಮಿಸಲು  ಆರಂಭಿಸಿದರು.ಅಷ್ಟರಲ್ಲಿ ( ಮಣ್ಣು ಅಗೆಯುವಾಗ) ಒಂದು ಕಾಲು ಗೋಚರಿಸಿತು.ಅವರೆಲ್ಲರೂ ಅದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಕಾಲು ಆಗಿರಬಹುದೆಂದು  ಭಾವಿಸಿ ಭಯಭೀತರಾದರು.
( ಮಹಾ ಪುರುಷರ ಮೃತ ಶರೀರವು ಮಣ್ಣು ತಿನ್ನಲಾರವು ಎಂಬುದಕ್ಕೆ ಇದು ಸ್ಪಪ್ಷ್ಟ ಸಾಕ್ಷಿಯಾಗಿದೆ, ಲೇ.)
ಅದು ಯಾರ ಕಾಲಾಗಿರಬಹುದೆಂದು ಖಚಿತವಾಗಿ ಹೇಳಲು ಯಾರೂ ಮುಂದೆ ಬಂದಿಲ್ಲ.ಆಗ ಉರ್ವತ್  ರಲಿಯಲ್ಲಾಹು ಅನ್ಹು ರವರು  ಹೇಳಿದರು ,
" ಅದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಕಾಲು ಅಲ್ಲ, ಹೊರತು ಅದು ಉಮರ್ ರಲಿಯಲ್ಲಾಹು ಅನ್ಹುರವರ ಕಾಲಾಗಿದೆ."
(ಬುಖಾರಿ 186/1)

ನೋಡಿ , ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಅಂತ್ಯ ವಿಶ್ರಮಗೊಳ್ಳುತ್ತಿರುವ ಕಟ್ಟಡದ ಗೋಡೆ ಕುಸಿದಾಗಲೂ ಅದನ್ನು ಅವರು ಪುನನಿರ್ಮಿಸಿದರಲ್ಲದೆ ಕೆಡವಿ ಹಾಕಲಿಲ್ಲ.ಅದು ಶಿರ್ಕಾಗಿದ್ದರೆ ಅದನ್ನು ಕೆಡವಬೇಕಿತ್ತಲ್ಲವೇ? ಆದ್ದರಿಂದ ಸ್ವಹಾಬಿಗಳು , ತಾಬಿವುಗಳು, ತಾಬಿವುತ್ತಾಬಿವುಗಳು ಹಾಗೂ ನಂತರ ಬಂದ ಇಮಾಮರುಗಳೆಲ್ಲರೂ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಅಂತ್ಯ ವಿಶ್ರಮಗೊಳ್ಳುತ್ತಿರುವ ಕಟ್ಟಡಕ್ಕೆ ತಮ್ಮ ಒಮ್ಮತಾಭಿಪ್ರಾಯದ ಮೂಲಕ ಅನುಮತಿಯನ್ನು ನೀಡಿದ್ದರಲ್ಲದೇ ಅವರಿಂದ ಒಬ್ಬರೂ ಕೂಡಾ ಅದನ್ನು ವಿರೋಧಿಸಿಲ್ಲ.ಇನ್ನು ಕೆಲವು ಮಹಾತ್ಮರುಗಳ ದರ್ಗಾಗಳ ಕುರಿತು ತಿಳಿದು ಕೊಳ್ಳೋಣ.........

ಮುಂದುವರಿಯುವುದು...

No comments:

Post a Comment