☪ಝಿಯಾರತ್ತ್ ಕೇಂದ್ರ☪
🌹0⃣2⃣🌹
🕌 *ಅಜ್ಮೀರ್ ದರ್ಗಾ ಶರೀಫ್* 🕌
✍ಗಫೂರ್ ಬಾಯಾರ್.
🌹🌹🌹🌹🌹🌹🌹🌹
👉ಭಾಗ 0⃣1⃣👈
🕌[ರಜಬ್ 0⃣6⃣ ಖ್ವಾಜಾರವರ (ರ) ವಾರ್ಷಿಕ ಅನುಸ್ಮರಣೆ ದಿನ.
➖➖➖➖🕌➖➖➖➖
ಅಜ್ಮೀರಿನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಸುಲ್ತಾನುಲ್ ಹಿಂದ್ ಖ್ವಾಜಾ ಮುಹೀನುದ್ದೀನ್ ಚಿಸ್ತಿ (ರ) ಅವರ ಮಖ್ಬರ ಭಾರತದಲ್ಲಿಯೇ ಅತೀ ಹೆಚ್ಚು ಶ್ರದ್ದಾ ಕೇಂದ್ರವಾದ ದರ್ಗವಾಗಿದೆ...
ಹಿಜ್ರ 536ರಲ್ಲಿ ಪೇರ್ಶಿಯನ್ ನಲ್ಲಿ ಜನಿಸಿ ಪ್ರವಾದಿಯವರ ﷺ ಕನಸು ಕಂಡು ಅದನ್ನು ಅನುಸರಿಸಿ ಇಸ್ಲಾಮಿಕ ಪ್ರಭೋಧನೆ ಯಾತ್ರೆಯಲ್ಲಿ ಭಾರತಕ್ಕೆ ತಲುಪಿದ ಖ್ವಾಜ (ರ)ಅವರು "ಸುಲ್ತಾನುಲ್ ಹಿಂದ್"
(ಭಾರತದ ರಾಜ) ಎಂದೂ,
"ಗರೀಬ್ ನವಾಝ್"
(ಬಡವರ ಸೇವಕ)
ಎಂದೂ ಅರಿಯಲ್ಪಟ್ಟರು.
ಚಿಸ್ತಿ ಆತ್ಮಿಯ ಸರಣಿಯಲ್ಲಿ ಶೈಖ್ ಉಸ್ಮಾನ್ ಹಾರೂನಿ (ರ) ರವರು ಖ್ವಾಜರವರ (ರ)
ಗತ ಕಾಲದ ನೇತಾರರಾಗಿಯೂ, ಶೈಖ್ ಕುತುಬುದ್ದೀನ್ ಬಖ್ತ್ಯಾರ್ ಕಾಕಿ (ರ) ರವರ ಅನುಯಾಯಿಯಾಗಿದ್ದರು.
ಶೈಖ್ ಅವರ ಆತ್ಮಿಯ ಔನತ್ಯದಲ್ಲಿಯು, ಉನ್ನತ ವ್ಯಕ್ತಿತ್ವದಲ್ಲಿ, ಆಕರ್ಷಿಕವಾಗಿ ಲಕ್ಷಾಂತರ ಜನರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ಖ್ವಾಜಾರವರ (ರ) ಸೇವನೆಗಳನ್ನು ಕುರಿತು ಮರ್ಹೂಂ: ಸಯ್ಯದ್ ಅಬುಲ್ ಹಸನ್ ಆಲಿ ನದವಿ ಸಾಹೇಬ್ (ರ) ಅಂತಹ ಹಲವರು ಸಂಕ್ಷಿಪ್ತವಾಗಿ ಬರೆದಿದ್ದಾರೆ. ಇಂದು ಭಾರತ ಉಪ ಭೂಕಂಡದಲ್ಲಿ ಇರುವ ಮುಸ್ಲಿಂ ಜನ ಸಂಖ್ಯೆಯಲ್ಲಿ ಒಳ್ಳೆಯ ಶತಮಾನವು ಶೈಖ್ ಅವರ ಮುಖಾಂತರ ಇಸ್ಲಾಮಿಗೆ ಬಂದವರ ಹಿಂದಿನ ತಲೆಮಾರುಗಳಾಗಿದೆ ಎಂದು ಹೇಳಲ್ಪಡುತ್ತದೆ. ಆದ್ದರಿಂದಲೇ ಭಾರತದ ಇಂದಿನ ಮುಸ್ಲಿಂಗಳು ಮಹಾನರತ್ತಿರ ತುಂಬಾ ಆಭಾರಿಯಾಗಿದೆ.
ದರ್ಗಾ ಝಿಯಾರತಿಗೆ ವಿಶ್ವಾಸಿಗಳ ಪ್ರವಾಹ ಮಹಾನವರಿಗೆ ಅಲ್ಲಾಹು ಕೊಟ್ಟ ಮಾರಣಾಂತರ ಬಹುಮಾನವಾಗಿ ನಮಗೆ ಗ್ರಹಿಸಬಹುದು. ಧಾರಾಳ ಪಂಡಿತರು, ಮುಸ್ಲಿಂ-ಅಮುಸ್ಲಿಂ ಆಡಳಿತಧಿಕಾರಿಗಳು ಈ ಮಹಾನರ ಸಂದರ್ಶನ ನಡೆಸುತ್ತಾರೆ.
(ಅಮೇರಿಕನ್ ಅದ್ಯಕ್ಷರು ಮತ್ತು ಭಾರತದ ಪ್ರಧಾನ ಮಂತ್ರಿಯುವರು ಅಜ್ಮೀರಿಗೆ ಚಾದರ ಕಳುಹಿಸಿ ಕೊಟ್ಟಿರುವುದಾಗಿ ವಾರ್ತೆಗಳಲ್ಲಿ ನೋಡಿದ್ದೇನೆ)
ಪ್ರತಾಪಶಾಲಿಯಾಗಿದ್ದ ಅಕ್ಬರ್ ಚಕ್ರವರ್ತಿ ತನ್ನ ರಾಣಿಯ ಜೊತೆ ಆಗ್ರಾದಿಂದ ಕಾಲ್ನಡೆಯಲ್ಲಿ ಬಂದು ಖಾಜಯವರ (ರ) ಮಖ್ಬರ ಝಿಯಾರತ್ ನಡೆಸಿರುತ್ತಾರೆ.
ಮೊದಲೇ ಗಂಡು ಮಕ್ಕಳಿಲ್ಲದ ಅವರು ಪ್ರಶಸ್ತ ಸೂಫಿಯವರಾಗಿದ್ದ ಶೈಖ್ ಸಲೀಂ ಚಿಸ್ತಿಯವರ (ರ) ಹತ್ತಿರ ನಮಗೆ ಒಂದು ಗಂಡು ಮಗು ಜನಿಸಬೇಕೆಂದು ಆಗ್ರಹ ಹೇಳಿದರು. ಉತ್ತರವಾಗಿ ನೀವು "ಭಾರತದ ಸುಲ್ತಾನರ ಹತ್ತಿರ ಹೇಳಿ ಎಂದರು. ಅದಕ್ಕೆ ಅವರು 'ಈಗ ನಾನಲ್ಲವೇ ಭಾರತದ ಸುಲ್ತಾನ್' ಎಂದು ಶೈಖ್ ರವರ ಹತ್ತಿರ ಅಕ್ಬರ್ ಕೇಳಿದರು. ಆಗ ಶೈಖ್ ರವರ ಉತ್ತರ; 'ಭಾರತದ ಸುಲ್ತಾನ್ ನೀವು ಅಲ್ಲ. ಅದು ಅಜ್ಮೀರಿನ ಖ್ವಾಜರಾಗಿದ್ದಾರೆ. (ರ)
ಝಿಯಾರತ್ತಿನ ನಂತರ ಅವರಿಗೆ ಜನಿಸಿದ ಮಗುವಾಗಿದೆ ಸಲೀಂ ಜಹಾಂಗೀರ್ (ರ) (ಮಗುವಿಗೆ ಶೈಖ್ ಸಲೀಂ ಚಿಸ್ತಿಯವರ ಹೆಸರಾಗಿದೆ ಇಟ್ಟಿರುವುದು.)
ಬ್ರಿಟಿಷರು ಅವಿಭಕ್ತ ಭಾರತದ ಮುಸ್ಲಿಮರ ನಡುವೆ ನಡೆಸಿದ ಒಂದು ಸಾಮೂಹಿಕ ಶಾಸ್ತ್ರ ಸರ್ವೆಯಲ್ಲಿ ಭಾರತದ ಮುಸ್ಲಿಮರ ಅತ್ತಿ ದೊಡ್ಡ ಶಕ್ತಿ ಅಜ್ಮೀರ್ ಖ್ವಾಜಾರ ಮಖ್ಬರವಾಗಿದೆ ಎಂದು ಅಭಿಪ್ರಾಯಪಟ್ಟಿರುತ್ತಾರೆ.
ಝಿಯಾರತ್ತಿನ ಇಸ್ಲಾಮಿನ ವಿಧಿ ವಿಧಾನಗಳ ಅರಿವು ಇಲ್ಲದವರೂ ವ್ಯತ್ಯಸ್ಥ "ಮದ್ ಹಬ್" ಗಾರರೂ, ವಿವಿಧ ಮತ ವಿಶ್ವಾಸ ಹೊಂದಿದವರೂ, ಅಲ್ಲಿಗೆ ಸಂದರ್ಶಕರಾಗಿ ಬರುತ್ತಾರೆ. ಅದರಿಂದ್ದ ಅಲ್ಲಿ ನಡೆಯುವ ಎಲ್ಲಾ ಕಾರ್ಯಗಳೂ, ಅನುಕರಣಿಯ ಆಗಬೇಕೆಂದು ಇಲ್ಲ.
(ಖಬರಿನ ಮೇಲೆ ಹೂವು ಹಾಕುವ ಅಚಾರ ನಮ್ಮ ಕರಾವಳಿ ಭಾಗದಲ್ಲಿ ಇಲ್ಲ. ಆದರೂ ಅದು ಅನಾಚಾರ ಆಗಿದೆಯೆಂದು ಹೇಳಲು ಸಾದ್ಯವಿಲ್ಲ.)
ಇಂತಹ ಆಚಾರ ಪರವಾದ ಕಾರ್ಯಗಳಲ್ಲಿ ಅಭಿಪ್ರಾಯ ವ್ಯತ್ಯಾಸಗಳು ಸ್ವಾಬಾವಿಕವಾಗಿದೆ. ಆದರೆ ಝಿಯಾರತ್ತಿನ ಲಕ್ಷ್ಯ ಕೇವಲ ಮರಣ ಸ್ಮರಣ ಮಾತ್ರವಾಗಿದೆಯೆಂದು, ಬರ್ಕತ್ತ್ ಬಯಸಿ ಹೋಗುವ ಝಿಯಾರತ್ತ್ ಇಸ್ಲಾಮಿನಲ್ಲಿ ಆಧಾರರಹಿತವಾದುದೆಂದು ಹೇಳುತ್ತಿರುವವರು ದೀನಿ ವಿಷಯಗಳಲ್ಲಿ ಅರಿವು ಇಲ್ಲದವರಾಗಿದ್ದಾರೆ..
ಇಸ್ಲಾಮಿನ ಬಾಲ ಪಾಠಗಳು ಕೂಡ ಸರಿಯಾಗಿ ಲಬಿಸದೆ ಹೋದ ಹಲವು ನಿರ್ಗತಿಕ ಜನರು ಅಲ್ಲಿ ಬರುತ್ತಾರೆ. ಅವರು ಕಲಿತ ಶೈಲಿಯಲ್ಲಿ ಕೇವಲ ಬರ್ಕತ್ತ್ (ಪುಣ್ಯ) ಸಂಪಾದಿಸಲು ಎಂಬುದಾಗಿದೆ ಹಲವರ ಝಿಯಾರತ್ತ್.
ಖ್ವಾಜರವರ (ರ) ಸನಿಹದದಲ್ಲಿ ಸಲಾಂ ಹೇಳುವುದು, ಅವರ ಸನ್ನಿಧಿಗೆ 'ಫಾತಿಹ', ಯಾಸೀನ್ ಓದಿ
ಹದ್ ಯ ಮಾಡುವುದು ಎಂಬುದೊಂದು ಹಲವರಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ...
☪ಸ್ವಲ್ಪ ಚರಿತ್ರೆ☪
ಹಿಜ್ರ AH 5⃣3⃣6⃣ ರಲ್ಲಿ
ಪೇರ್ಶಿಯಾದ ಸಿಸ್ತಾನಿಯಲ್ಲಿ ನಬಿ (ಸಅ) ರವರ ಕುಟುಂಬದಲ್ಲಿ ಸಯ್ಯಿದ್ ಜಹ್ಫರ್ ಸ್ವಾದಿಖ್ (ರ) ತಂಗಳರವರ ಪರಂಪರೆಯಲ್ಲಿ ಜನನ.
ಬಾಲ್ಯ ಕಾಲದಲ್ಲಿಯೇ ಬೇರೆ ಮಕ್ಕಳಿಂದ ವ್ಯತ್ಯಸ್ಥವಾಗಿ ಪ್ರಾರ್ಥನೆಯಲ್ಲೂ, ದ್ಯಾನದಲ್ಲೂ, ಆಗಿ ಕಳೆಯುವುದಾಗಿತ್ತು ರೀತಿ.
15 ವಯಸ್ಸು ಆಗುತಲೇ ಮಾತಾಪಿತರು ವಫಾತ್ತ್ ಆಗಿದ್ದರು. ತನ್ನ ತಂದೆಯ ತಲೆಮಾರು ಸೊತ್ತಿನಿಂದ ಒಂದು ತೋಟವು, ಧಾನ್ಯ ಸಂಸ್ಕರಣಾ ಶಾಲೆಯು ಲಬಿಸಿತ್ತು.
ಜೀವನ ವೃತ್ತಿಗಾಗಿ ಅದರಲ್ಲಿ ನೆಲೆಗೊಂಡಿರುವಾಗ, ಒಂದು ದಿನ ಪ್ರಸಿದ್ದ ಸೂಫಿ ಶೈಖ್ ಇಬ್ರಾಹಿಂ ಖುಲ್ ದೂಸಿ (ರ) ಎಂಬ ಮಹಾನ್ ಆ ತೋಟಕ್ಕೆ ಬಂದರು. ಶೈಖರೊಂದಿಗಿನ ಮಾತುಕತೆ ಮಹಾನರ ಜೀವನದ ಹಾದಿ ಬದಲಾಯಿಸಿತ್ತು.
ಆಧ್ಯಾತ್ಮಿಕ ವಿಜ್ಞಾನ ದಾಹವಾಗಿ ಆ ಕಾಲಘಟದ ಪ್ರಶಸ್ತ ದೀನಿ ಕೇಂದ್ರವಾಗಿದ್ದ ಸಮರ್ಕಂದ್, ಬುಖಾರ, (ಈಗಿನ ಉಜ್ಬೇಕಿಸ್ತಾನ್) ಮೊದಲಾದ ಸ್ಥಳಗಳಲ್ಲಿ ಹೋಗಿ ಉನ್ನತ ಧಾರ್ಮಿಕ ವಿಜ್ಞಾನವನ್ನು ಕಲಿತರು. ಆಧ್ಯಾತ್ಮಿಕ ಹಾದಿಯಲ್ಲಿ ಶೈಖ್ ಉಸ್ಮಾನ್ ಹಾರೂನಿ (ರ) ರವರನ್ನು, ಗುರು ಆಗಿ ಸ್ವೀಕರಿಸಿದರು. ದೀರ್ಘ ಕಾಲ ಗುರುವಿನೊಂದಿಗಿರುವ ಸಹವಾಸದ ಸಮಯದಲ್ಲಿಯೇ ಅವರು ಮಕ್ಕ, ಮದೀನ, ಸಂದರ್ಶಿಸಿದರು.
ನಬಿ ﷺ ತಂಙಳರಿಂದ ಕನಸಿನಲ್ಲಿ ಬಂದು ಕೊಟ್ಟ ನಿರ್ದೇಶನದ ಪ್ರಕಾರ ಇಸ್ಲಾಮಿನ ಸುಂದರ ಮಹತ್ತರವಾದ ಸಂದೇಶವಹಾಕರಾಗಿ ಖ್ವಾಜರವರು (ರ) ಭಾರತಕ್ಕೆ ಬಂದರು...
💎ಮುಂದುವರಿಯುವುದು...
✍ಗಫೂರ್ ಬಾಯಾರ್.
🕎🕎🕎🕎🕎🕎🕎🕎



No comments:
Post a Comment