*ಬೀವಿ ಆತಿಕಾ (ರ)*
ಭಾಗ--6
📝ಮುನೀರ್ ಸಖಾಫಿ, ಸಾಲೆತ್ತೂರು.
ಮೂರನೇಯ ಪ್ರಶ್ನೆಗೆ ಉತ್ತರ.
ಸ್ತ್ರೀಯರಿಗೆ ಅವರ ಮನೆಯೇ ಉತ್ತಮವೆಂಬ ಪ್ರವಾದಿ ವಚನ ಆತಿಕ ಬೀವಿಗೆ ತಲುಪದಿರುವುದರಿಂದ ಆತಿಕ ಬೀವಿ ಮಸೀದಿಗೆ ಹೋಗಲು ಅನುಮತಿ ಕೇಳಿರಬೇಕು.
ಕಾರಣ,ಉಮರ್ (ರ)ತನ್ನನ್ನು ತಡೆಯದಿರಲು ಕಾರಣ ವಿವರಿಸುವಲ್ಲಿ ಪ್ರಸ್ತುತ ವಿಷಯವನ್ನು ಆತಿಕ ಬೀವಿ ಪರಾಮರ್ಶಿಸುತ್ತಿಲ್ಲ.
ಆ ಪ್ರವಾದಿ ವಚನ ಆತಿಕ ಬೀವಿಗೆ ತಿಳಿದಿದ್ದರೆ ಒಮ್ಮೆಯೂ ಕೂಡಾ ಅವರು ಮಸೀದಿಗೆ ಹೋಗುತ್ತಿರಲಿಲ್ಲ ಅಥವಾ ಅಂತಹ ನಿಬಂಧನೆಯನ್ನು ವಿವಾಹದ ವೇಳೆ ಇಡುತ್ತಿರಲಿಲ್ಲ.
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲರೊಂದಿಗೆ ನಮಾಝು ಮಾಡಲು ಅನುಮತಿ ಕೇಳಿ ಬಂದ ಸ್ವಹಾಬೀ ವನಿತೆಯರೊಂದಿಗೆ "ನಿಮಗೆ ನಿಮ್ಮ ಮನೆಯೇ ನಮಾಜಿಗೆ ಉತ್ತಮ"ವೆಂಬ ಮಾತು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದಾಗ ಆ ಉಪದೇಶವನ್ನು ಚಾಚೂ ತಪ್ಪದೇ ಸ್ವಹಾಬೀ ವನಿತೆಯರು ಸ್ವೀಕರಿಸಿ ಅವರವರ ಮನೆಯಲ್ಲಿಯೇ ನಮಾಜು ನಿರ್ವಹಿಸಿದರು.
ಅದರ ನಂತರ ಮಸೀದಿಗೆ ಹಾಜರಾದದ್ದು ಆ ವಿಷಯ ತಲುಪದ ಮಹಿಳೆಯರಾಗಿದ್ದರೆಂದು ನೂತನವಾದಿಗಳು ನಾಯಕನೆಂದು ಒಪ್ಪಿಕೊಳ್ಳುವ ಶೌಕಾನಿಯೇ ಹೇಳಿದ್ದಾರೆ.
(ಶೌಕಾನಿ ನಮ್ಮ ಅನಿಷೇಧ್ಯ ನಾಯಕನೆಂದು ವಹ್ಹಾಬಿಗಳು "ಇಸ್ಲಾಹೀ ಪ್ರಸ್ಥಾನ ಚರಿತ್ರತ್ತಿನೊರು ಆಮುಗಂ " ಎಂಬ ಪುಸ್ತಕದ ಪುಟ 15 ರಲ್ಲಿ ಹೇಳಿದ್ದಾರೆ.)
ಶೌಕಾನಿಯ ಮಾತು ನೋಡಿರಿ;
( وبيوتهن خير لهن ) أي صلاتهن في بيوتهن خير لهن من صلاتهن في المساجد لو علمن ذلك ، لكنهن لم يعلمن فيسألن الخروج إلى الجماعة يعتقدن أن أجرهن في المساجد أكثر . ووجه كون صلاتهن في البيوت أفضل : الأمن من الفتنة ، ويتأكد ذلك بعد وجود ما أحدث النساء من التبرج والزينة
ಮಸೀದಿಯಲ್ಲಿ ಸ್ತ್ರೀಯರು ನಿರ್ವಹಿಸುವ ನಮಾಝಿಗಿಂತ ಮನೆಯಲ್ಲಿ ನಿರ್ವಹಿಸುವ ನಮಾಜು ಅವರಿಗೆ ಉತ್ತಮವಾಗಿದೆ.ಅದು ಸ್ತ್ರೀಯರಿಗೆ ತಿಳಿದಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು!.
ಆದರೆ ಅದು ಅವರಿಗೆ ತಿಳಿದಿರಲಿಲ್ಲ.ಆದುದರಿಂದಲೇ ಅವರು ಮಸೀದಿಗೆ ನಮಾಜಿಗೆ ತೆರಳಲು ಅನುಮತಿ ಕೇಳಿದರು.ಮಸೀದಿಯಲ್ಲಿ ನಮಾಜು ಮಾಡಿದಲ್ಲಿ ಪುಣ್ಯ ಅಧಿಕ ಲಭಿಸುವವು ಎಂಬ ತಪ್ಪು ಕಲ್ಪನೆ ಅವರಲ್ಲಿತ್ತು.
ಫಸಾದ್ ನಿಂದ ನಿರ್ಭಯವಿರುವುದರಿಂದ ಮನೆಯಲ್ಲಿ ನಿರ್ವಹಿಸುವ ನಮಾಜು ಅವರಿಗೆ ಉತ್ತಮವೆನಿಸಿತು.
ಸ್ತ್ರೀಯರಿಂದುಟಾದ ಸೌಂಧರ್ಯ ಪ್ರದರ್ಶನ ಕಾರಣದಿಂದ ಪ್ರತ್ಯೇಕವಾಗಿಯೂ.
(ನೈಲುಲ್ ಅವ್ ತಾರ್ 3/161)
ಇದೇ ರೀತಿ ಔನುಲ್ ಮಅಬೂದ್ ನ 2/274 ರಲ್ಲೂ ಕಾಣಬಹುದಾಗಿದೆ.
ಇಮಾಮ್ ಅಬ್ದುರ್ರಝಾಕ್ (ರ)ರವರ ಮುಸನ್ನಫ್ ನಲ್ಲಿ ವರದಿಯಾದ ಒಂದು ರಿಪೋರ್ಟ್ ಈ ರೀತಿ ಇದೆ.
عن أبي عمرو الشيباني أنه رأى عبد الله بن مسعود يخرج النساء من المسجد ويقول : أخرجن إلى بيوتكن خير لكن. (مصنف 3/173)
ಇಬ್ನ್ ಮಸ್ಊದ್ (ರ) ಸ್ತ್ರೀಯರನ್ನು ಮಸೀದಿಯಿಂದ ಹೊರ ಕಳುಹಿಸುವುದು ನಾನು ನೋಡಿದೆ.
"ನಿಮಗೆ(ನಮಾಜು ನಿರ್ವಹಿಸಲು) ಉತ್ತಮವಾದ ಮನೆಗೆ ನೀವು ತೆರಳಿರಿ" ಎಂದು ಅವರು ಹೇಳುತ್ತಾ ಇದ್ದರು.
ಮುಸನ್ನಫ್ 3/173).
ಈ ಹದೀಸಿನ ಕುರಿತು ಹಾಫಿಲ್ ಅಲ್ ಹೈಸಮೀ(ರ)ಹೇಳುತ್ತಾರೆ;
رواه الطبراني في الكبير ورجاله موثوقون (مجمع الزوائد 1/253)
ಈ ಹದೀಸನ್ನು ಇಮಾಮ್ ತ್ವಬ್ ರಾನಿ(ರ)ತನ್ನ ಕಬೀರ್ ನಲ್ಲಿ ವರದಿ ಮಾಡಿದ್ದಾರೆ.ಅದರ ವರದಿಗಾರರು ವಿಶ್ವಾಸಯೋಗ್ಯರಾಗಿದ್ದಾರೆ.
(ಮಜ್ ಮಉಝ್ಝವಾಇದ್ 1/253).
"ಸ್ತ್ರೀಯರಿಗೆ ನಮಾಜಿಗೆ ಅವರ ಮನೆಯೇ ಉತ್ತಮ"ವೆಂಬ ಹದೀಸ್ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿರುವಾಗ ಸ್ವಹಾಬಿಗಳು ಅದನ್ನು ಕಲಿತಿದ್ದರು.
ಸ್ವಹಾಬೀ ವನಿತೆಯರಲ್ಲಿ ಕೆಲವರಿಗೆ ಅದು ತಿಳಿದಿರಲಿಲ್ಲ.ಅವರು ನಮಾಜಿಗೆ ಮಸೀದಿಗೆ ಹಾಜರಾದಾಗ ಸ್ವಹಾಬಿಗಳು ಅವರನ್ನು ನೀವು ಮನೆಯಲ್ಲಿಯೇ ನಮಾಜು ನಿರ್ವಹಿಸಿರಿ ಎಂದು ಹೇಳಿ ಕಳುಹಿಸುತ್ತಿದ್ದರು.
ಇದು ಮೇಲೆ ಹೇಳಿದ ಹದೀಸಿನಿಂದ ಬಹಳ ಸ್ಪಷ್ಟವಾಗಿ ತಿಳಿಯಬಹುದಾಗಿದೆ.
*ಮಂದುವರಿಯುದು.....*
ಇದು ನಿಮಗೆ ಇಷ್ಟವಾದಲ್ಲಿ ಇತರರಿಗೆ ಶೇರ್ ಮಾಡಿರಿ
No comments:
Post a Comment