🕌🕌🕌🕌🕌🕌🕌🕌🕌🕌🕌🕌 *ಸುಬಹಿ* *ನಮಾಝಿನಲ್ಲಿ* *ಖುನೂತ್.* 🕌🕌🕌🕌🕌🕌🕌🕌🕌🕌🕌🕌
*﷽*
*ಭಾಗ --0⃣9⃣*
📝 *ಮುನೀರ್* *ಸಖಾಫಿ,* *ಸಾಲೆತ್ತೂರು.*
------------------------------------------------------
_*ವಹ್ಹಾಬಿಗಳ*_ *_ಪುರಾವೆಗಳು_* _*ಮತ್ತು*_ _*ಅದಕ್ಕಿರುವ*_ _*ಉತ್ತರಗಳು..*_
ಸುಬಹಿ ನಮಾಝಿನಲ್ಲಿ ಖುನೂತ್ ಸುನ್ನತ್ತಿದೆಯೆಂದು ಈಗಾಗಲೇ ಪುರಾವೆ ಸಹಿತ ಸಮರ್ಥಿಸಿದ್ದನ್ನು ನೀವು ಓದಿದ್ದೀರಿ.
ಖುನೂತ್ ಬಿದ್ಅತ್ ಎಂದು ಚಿತ್ರೀಕರಿಸಲು ವಹ್ಹಾಬಿಗಳು ಓದುವ ಕೆಲವೊಂದು ಹದೀಸ್ ಗಳಿವೆ.ಆ ಹದೀಸ್ ಗಳು ಮತ್ತು ಇಮಾಮರುಗಳು ಅದಕ್ಕೆ ನೀಡಿದ ಉತ್ತರವೇನೆಂದು ನೋಡೋಣ.
*ಹದೀಸ್* *ನಂ:1.*
عن انس رضي الله عنه ان رسول الله صلي الله عليه وسلم قنت شهرا يدعوا علي احياء من احياء العرب ثم تركه.(مسلم 3/194)
ಅನಸ್ (ರ) ಹೇಳುತ್ತಾರೆ; ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಒಂದು ತಿಂಗಳ ಕಾಲ ಶತ್ರುಗಳಿಗೆ ವಿರುದ್ಧವಾಗಿ ಖುನೂತ್ ಓದಿ ಪ್ರಾರ್ಥಿಸಿದರು.ನಂತರ ಅದನ್ನು ತ್ಯಜಿಸಿದರು.
(ಮುಸ್ಲಿಂ 3/195)
-------------------------------
*ಹದೀಸ್* *ನಂ:2.*
عن انس بن مالك ان رسول الله صلي الله عليه وسلم قنت شهرا بعد الركوع في صلاة الفجر يدعو علي بني عصية
(مسلم 3/193)
ಅನಸ್ ಬಿನ್ ಮಾಲಿಕ್ (ರ) ಹೇಳುತ್ತಾರೆ;
"ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಒಂದು ತಿಂಗಳುಗಳ ಕಾಲ ಸುಬಹಿ ನಮಾಝಿನಲ್ಲಿ ರೂಕೂಅ ನ ನಂತರ ಬನೂ ಉಸಯ್ಯ ಗೋತ್ರದ ವಿರುದ್ಧ ಪ್ರಾರ್ಥಿಸಿದರು.
(ಮುಸ್ಲಿಂ )
-------------------------------
*ಹದೀಸ್* *ನಂ:3*
عن انس قال سألت عن القنوت قبل الركوع او بعد الركوع فقال قبل الركوع .قال ،قلت فان ناسا يزعمون ان رسو الله صلي الله عليه وسلم قنت بعد الركوع .فقال انما قنت رسو الله صلي الله عليه وسلم شهرا يدعو علي اناس قتلوا اناسا من اصحابه يقال لهم القراء.
(صحيح مسلم 3/193)
ಆಸಿಮ್ (ರ) ಹೇಳುತ್ತಾರೆ;
"ನಾನು ಅನಸ್ (ರ) ರೊಂದಿಗೆ ಖುನೂತ್ ನ ಬಗ್ಗೆ ಕೇಳಿದಾಗ ಅವರು ಹೇಳಿದರು," ಖುನೂತ್ ರುಕೂಅ ನ ಮುಂಚೆಯಾಗಿದೆ".ಆಗ ನಾನು ಕೇಳಿದೆ,ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ರುಕೂಅ ನ ನಂತರ ಖುನೂತ್ ಓದಿದ್ದರು ಎಂದು ಕೆಲವರು ವಾದಿಸುತ್ತಾರಲ್ಲವೇ?.ಆಗ ಅನಸ್ (ರ) ಹೇಳಿದರು;
"ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಒಂದು ತಿಂಗಳುಗಳ ಕಾಲ ಖುರ್ ಆನ್ ವಿಧ್ವಾಂಸರಾದ ಸ್ವಹಾಬಿಗಳನ್ನು ಕೊಂದ ಶತ್ರುಗಳಿಗೆ ವಿರುದ್ಧವಾಗಿ ಪ್ರಾರ್ಥಿಸಿದ್ದರು"
(ಮುಸ್ಲಿಂ 3/193)
*ಈ ಮೂರು ಹದೀಸಿಗೆ *ಉತ್ತರ:*
ಇಮಾಮ್ ನವವೀ (ರ) ಹೇಳುತ್ತಾರೆ;
" وأما الحواب عن حديث أنس وأبى هريرة رضي الله عنهما في قوله ثم تركه فالمراد ترك الدعاء على أولئك الكفار ولعنتهم فقط لا ترك جميع القنوت أو ترك القنوت في غير الصبح. وهذا التأويل متعين لان حديث أنس في قوله " لم يزل يقنت في الصبح
حتى فارق الدنيا " صحيح صريح فيجب الجمع بينهما وهذا الذى ذكرناه متعين للجمع وقد روى البيهقي باسناده عن عبد الرحمن بن مهدي الامام انه قال انما ترك اللعن ويوضح هذا التأويل رواية أبي هريرة السابقة وهي قوله " ثم ترك الدعاء لهم "
(شرح المهذب 3/505)
ಅನಸ್ (ರ) ಮತ್ತು ಅಬೂಹುರೈರ (ರ) ರವರ ಹದೀಸಿನಲ್ಲಿ " ನಂತರ ಖುನೂತ್ ತ್ಯಜಿಸಿದರು" ಎಂಬುವುದರ ಅರ್ಥ ಕುಫ್ಫಾರ್ ಗಳ ವಿರುದ್ಧ ಪ್ರಾರ್ಥಿಸುತ್ತಿದ್ದ ಪ್ರಾರ್ಥನೆಯನ್ನು ತ್ಯಜಿಸಿದರು ಅಥವಾ ಸುಬಹಿಯೇತರ ನಮಾಝಿನಲ್ಲಿ ಖುನೂತ್ ತ್ಯಜಿಸಿದರು ಎಂದಾಗಿದೆ.ಅದಲ್ಲದೇ ಖುನೂತ್ ಸಂಪೂರ್ಣ ತ್ಯಜಿಸಿದರು ಎಂದರ್ಥವಲ್ಲ.ಈ ಹೇಳಿದ ವ್ಯಾಖ್ಯಾನ ಪ್ರಸ್ತುತ ಹದೀಸಿಗೆ ನಿರ್ಣಯವಾಗಿದೆ.ಏಕೆಂದರೆ , ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ವಫಾತ್ ತನಕ ಖುನೂತ್ ಓದಿದ್ದರೆಂದು ಅನಸ್ (ರ) ವರದಿ ಮಾಡಿದ ಹದೀಸಿನಲ್ಲಿ ಸ್ವಹೀಹಾಗಿ ವರದಿಯಾಗಿದೆ.ಮಾತ್ರವಲ್ಲ , ಇಮಾಮ್ ಬೈಹಖೀ (ರ) ರವರ ತನ್ನ ಗ್ರಂಥದಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಶತ್ರುಗಳ ವಿರುದ್ಧ ಶಾಪ ಪ್ರಾರ್ಥನೆಯನ್ನು ತ್ಯಜಿಸಿದರೆಂದು ವರದಿ ಮಾಡಿದ್ದಾರೆ"
(ಶರಹುಲ್ ಮುಹದ್ದಬ್ 3/505)
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಖುನೂತ್ ತ್ಯಜಿಸಿದರೆಂದು ಹೇಳಿದ್ದು ಸುಬಹಿ ನಮಾಝಿನಲ್ಲಿ ಮಾಡುತ್ತಿದ್ದ ಖುನೂತ್ ನ ಬಗ್ಗೆಯಲ್ಲವೆಂದೂ ಅದು ಶತ್ರುಗಳ ನಿರ್ವಹಿಸುತ್ತಿದ್ದ ಪ್ರಾರ್ಥನೆಯನ್ನು ತ್ಯಜಿಸಿದರು ಎಂದಾಗಿದೆ ಅದರ ಅರ್ಥ ಎಂದು ಈ ವ್ಯಾಖ್ಯಾನದಿಂದ ಸ್ಪಷ್ಟವಾಯಿತು.
ಇದೇ ವ್ಯಾಖ್ಯಾನವನ್ನು ಇಮಾಮ್ ನವವಿಯವರು ಶರಹ್ ಮುಸ್ಲಿಮಿನಲ್ಲೂ
(ಶರಹು ಮುಸ್ಲಿಂ 3/193), ಇಮಾಮ್ ಇಬ್ನ್ ಅಲ್ಲಾನ್ (ರ) ತನ್ನ ಫುತೂಹಾತುರಬ್ಬಾನಿಯ್ಯದ (2/286) ರಲ್ಲೂ ಇಮಾಮ್ ಬಗವೀ (ರ) ತನ್ನ ಶರಹುಸ್ಸುನ್ನ (3/123) ರಲ್ಲೂ ವಿವರಿಸಿದ್ದಾರೆ.
*ಮುಂದುವರಿಯುವುದು....*
No comments:
Post a Comment