Wednesday, October 4, 2017

🕌🕌🕌🕌🕌🕌🕌🕌🕌🕌🕌🕌 *ಸುಬಹಿ* *ನಮಾಝಿನಲ್ಲಿ* *ಖುನೂತ್.* 🕌🕌🕌🕌🕌🕌🕌🕌🕌🕌🕌🕌

*﷽*
*ಭಾಗ --0⃣5⃣*

📝 *ಮುನೀರ್* *ಸಖಾಫಿ,* *ಸಾಲೆತ್ತೂರು.*
------------------------------------------------------

*ಇಮಾಮ್ ಬೈಹಖೀ (ರ) ಅನಸ್ (ರ) ರಿಂದ ಈ ರೀತಿ ವರದಿ ಮಾಡುತ್ತಾರೆ;*
"عن انس بن مالك رضي الله عنه قال: صليت خلف رسول الله صلي الله عليه وسلم فقنت وخلف عمر فقنت وخلف عثمان فقنت"
(سنن الكبري)
ಅನಸ್ (ರ)  ಹೇಳುತ್ತಾರೆ;
ನಾನು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಹಾಗೂ ಉಮರ್ (ರ),ಉಸ್ಮಾನ್ (ರ) ಹಿಂದೆ ನಿಂತು ನಮಾಝ್
ಮಾಡಿದ್ದೇನೆ.ಅವರೆಲ್ಲರೂ ಖುನೂತ್ ಓದಿದ್ದರು"
(ಸುನನುಲ್ ಕುಬ್ರಾ 3/43)

ಇನ್ನೊಂದು ಹದೀಸ್ ನೋಡಿ;
"حدثنا العوام بن حمزة  قال: سألت ابا عثمان عن القنوت في الصبح قال بعد الركوع ،قلت عمن قال عن ابي بكر وعمر وعثمان رضي الله عنه"
(سنن الكبري 3/43)

*ಅವ್ವಾಮ್ ಬಿನ್ ಹಂಝ (ರ) ಹೇಳುತ್ತಾರೆ;*
ನಾನು ಅಬೂ ಉಸ್ಮಾನ್ ರೊಂದಿಗೆ ಖುನೂತ್ ನ ಬಗ್ಗೆ ಕೇಳಿದಾಗ ಅವರು ಹೇಳಿದರು,
"ರುಖೂಅ ನ ಬಳಿಕ ಖುನೂತ್ ನಿರ್ವಹಿಸಬೇಕು"
ಆವಾಗ ನಾನು ಕೇಳಿದೆ,
"ನೀವು ಇದನ್ನು ಯಾರಿಂದ ತಿಳಿದು ಹೇಳುತ್ತೀರಿ?"
ಅದಕ್ಕೆ ಅವರು "ಅಬೂಬಕರ್ (ರ) , ಉಮರ್ (ರ) , ಉಸ್ಮಾನ್ (ರ) ರವರಿಂದ ಹೇಳುತ್ತಿದ್ದೇನೆ " ಎಂದು ಉತ್ತರಿಸಿದರು.
(ಸುನನುಲ್ ಕುಬ್ರಾ 3/43)

ಈ ಹದೀಸಿನ ಕುರಿತು ಇಮಾಮ್ ಬೈಹಖಿಯವರೇ ಈ ರೀತಿ ಹೇಳುತ್ತಾರೆ;
"هذا اسناد حسن ويحيى بن سعيد لا يحدث الا عن الثقات
(سنن البيهقي )
*ಈ ಹದೀಸಿನ ಪರಂಪರೆ ಹಸನ್ ಆಗಿದೆ,ಇದರ
ಪರಂಪರೆಯಲ್ಲಿರುವ ಯಹ್ಯ ಬಿನ್ ಸಈದ್ ಎಂಬವರು ವಿಶ್ವಸ್ಥರಿಂದಲ್ಲದೇ ಹದೀಸ್ ವರದಿ ಮಾಡಿಲ್ಲ
(ಸುನನುಲ್ ಕುಬ್ರಾ)
*ಲಕ್ಷಕ್ಕೂ ಮಿಕ್ಕ ಹದೀಸ್ ಕಂಠಪಾಠ ಮಾಡಿದ ಇಮಾಮ್ ಬೈಹಖಿಯವರೇ ಹದೀಸ್ ಯೋಗ್ಯವಾದುದು ಎಂದು ಹೇಳುವಾಗ ದುರ್ವ್ಯಾಖ್ಯಾನ ವೀರರಾದ ವಹ್ಹಾಬಿಗಳ ಸರ್ಟಿಫಿಕೇಟ್ ಮುಸ್ಲಿಂ ಸಮುದಾಯಕ್ಕೆ ಅಗತ್ಯವಿಲ್ಲ.*

ಇಮಾಮ್ ದಾರು ಖುತ್ ನಿ ವರದಿ ಮಾಡಿದ ಹದೀಸ್ ಈ ರೀತಿ ಇದೆ ;
"عن انس : ان النبي صلي الله عليه وسلم قنت شهرا يدعوا عليهم ثم تركه ، فاما في الصبح فلم يزل يقنت حتي فارق الدنيا.
(دراقطني )

ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಶತ್ರುಗಳಿಗೆ ವಿರುಧ್ಧವಾಗಿ ಒಂದು ತಿಂಗಳ ಕಾಲ ಪ್ರಾರ್ಥಿಸಿದ ನಂತರ ಅದನ್ನು ನಿಲ್ಲಿಸಿದರು.
ಸುಬಹಿ ನಮಾಝಿನಲ್ಲಿ ವಫಾತ್ ತನಕ ಖುನೂತ್ ಓದುತ್ತಿದ್ದರು"
(ಸುನನು ದಾರು ಖುತ್ ನಿ)

ಇಮಾಮ್ ನವವೀ (ರ) ಬರೆಯುತ್ತಾರೆ;
"اعلم ان القنوت في الصبح سنة للحديث الصحيح فيه
عن انس رضي الله عنه: ان رسول الله صلى الله عليه وسلم لم يزل يقنت في الصبح حتى فارق الدنيا. رواه الحاكم ابو عبد الله في كتاب الاربعين، وقال: حديث صحيح.
(الاذكار 124)

*ಖಂಡಿತವಾಗಿಯೂ ಸುಬಹಿ ನಮಾಝಿನಲ್ಲಿ ಖುನೂತ್ ಸುನ್ನತ್ತಾಗಿದೆ.ಅನಸ್ (ರ) ರಿಂದ , ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ವಫಾತ್ ತನಕ ಖುನೂತ್ ಓದುತ್ತಿದ್ದರು ಎಂದು ಇಮಾಮ್ ಹಕಿಂ ವರದಿ ಮಾಡಿದ  ಸ್ವಹೀಹಾದ ಹದೀಸ್ ಅದಕ್ಕೆ ಪುರಾವೆಯಾಗಿದೆ"*
(ಅಲ್ ಅದ್ಸ್ ಕಾರ್ 124)

ಇಮಾಮ್ ನವವೀ (ರ) ಹೇಳುತ್ತಾರೆ;
"واحتج اصحابنا بحديث انس رضي الله عنه " ان النبي صلي الله عليه وسلم قنت شهرا يدعوا عليهم ثم ترك فاما في الصبح فلم يزل يقنت حتي فارق الدنيا حديث صحيح رواه جماعة من الحفاظ وصححوه .ومن نص علي صحته الحافظ ابو عبد الله محمد بن علي البلخي والحاكم ابو عبد الله في مواضع من كتبه والبيهقي ورواه الدارقطني من طرق باساند صحيحة.
(شرح المهذب 3/504)

"ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಒಂದು ತಿಂಗಳುಗಳ ಕಾಲ ಶತ್ರುಗಳಿಗೆ ವಿರುದ್ಧ ಪ್ರಾರ್ಥಿಸಿದ್ದರು.ಸುಬಹಿ ನಮಾಝಿನಲ್ಲಿ ವಫಾತ್ ತನಕ ಖುನೂತ್ ಓದುತ್ತಿದ್ದರು " ಎಂಬ ಹದೀಸನ್ನು ನಮ್ಮ ಅಸ್ ಹಾಬ್ ಖುನೂತ್ ಗೆ ಪುರಾವೆ ಮಾಡಿದ್ದಾರೆ.
ಪ್ರಸ್ತುತ ಹದೀಸನ್ನು ಹಲವಾರು ಹಾಫಿಲ್ ಗಳು ವರದಿ ಮಾಡಿದ್ದೂ , ಅದು ಸ್ವಹೀಹ್ ಆಗಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.ಹಾಫಿಲ್ ಅಬೂ ಅಬ್ದಿಲ್ಲಾಹಿ ಮುಹಮ್ಮದ್ ಬಿನ್ ಅಲಿಯ್ಯುಲ್ ಬಲ್ಖಿ, ಅಬೂ ಅಬ್ದಿಲ್ಲಾಹಿ ಹಾಕಿಂ , ಇಮಾಮ್ ಬೈಹಖೀ , ಇಮಾಮ್ ದಾರಖುತ್ ನಿ ಅವರಲ್ಲಿ ಪ್ರಮುಖರು.
(ಶರಹುಲ್ ಮಹದ್ದಬ್ 3/504)
ಇದೇ ವಿಷಯವನ್ನು ಇಮಾಮ್ ಸಂಶುದ್ದೀನುಲ್ ಕರ್ಮಾನಿ ತನ್ನ ಸ್ವಹೀಹುಲ್  ಬುಖಾರಿಯ ವ್ಯಾಖ್ಯಾನ ಗ್ರಂಥದಲ್ಲೂ (6/97) ವಿವರಿಸಿದ್ದಾರೆ.

*ಜೀವಮಾನವಿಡೀ ದೀನಿಗಾಗಿ ಹೋರಾಡಿ , ಶಿರ್ಕ್ ಮತ್ತು ಬಿದ್ ಅತ್ ನ ನಿರ್ಮೂಲನೆಗಾಗಿ ನೂರಾರು ಗ್ರಂಥಗಳನ್ನು ಸಮರ್ಪಿಸಿದ  ಇಮಾಮ್ ನವವೀ (ರ) ರವರಂತಹಾ  ವಿಧ್ವಾಂಸರು ಖುನೂತ್ ನ ಬಗ್ಗೆ ಇಷ್ಟೆಲ್ಲಾ ಸ್ಪಷ್ಟವಾಗಿ ಖುನೂತ್ ಸುನ್ನತ್ತಿದೆಯೆಂದೂ ಅದಕ್ಕಾಗಿ ಅವರು ಹದೀಸುಗಳನ್ನು ವಿವರಿಸುವವಾಗ ಬುದ್ಧಿಯಿರುವ ಯಾವ ಮನುಷ್ಯನಿಗೂ ಸತ್ಯ ಮನದಟ್ಟಾಗಬಹುದು.*
ಅಲ್ಲಾಹನು ಕೊಟ್ಟ ಬುದ್ಧಿಯನ್ನು ವಹ್ಹಾಬೀ ಕಛೇರಿಯಲ್ಲಿ ಅಡವಿಡದೆ ಸತ್ಯವನ್ನು ಅಂಗೀಕರಿಸುವ ಶ್ರೀಮಂತಿಕೆಯ ಮನಸ್ಸು ಮನುಷ್ಯನದ್ದಾಗಬೇಕು.

ಮುಂದುವರಿಯುವುದು...

No comments:

Post a Comment