Thursday, October 5, 2017

ಉರೂಸ್ ಆಚರಣೆ ಇಸ್ಲಾಮಿನಲ್ಲಿ.

ಭಾಗ -4

📝 ಟಿ. ಎಂ. ಮುಹ್ಯಿದ್ದೀನ್ ಖಾಮಿಲ್ ಸಖಾಫಿ, ತೋಕೆ.

2. ಮತ ಪ್ರವಚನ:
ಉರೂಸ್ ನ ವೇಳೆ ನಡೆಸುವ ಇನ್ನೊಂದು ಪ್ರಮುಖ ಕಾರ್ಯವೇನೆಂದರೆ ಧಾರ್ಮಿಕ ಪ್ರವಚನಗಳು.
ಇದು ಸುನ್ನತ್ ಆಗಿದೆಯೆಂಬುವುದಕ್ಕೆ ಪುರಾವೆ ಮಂಡಿಸುವ ಆವಶ್ಯಕತೆಯಿಲ್ಲ.ಏಕೆಂದರೆ ಮತ ಪ್ರವಚನಗಳ ಉದ್ದೇಶ ಇಲ್ಮ್ ಹೇಳಿ ಕೊಡುವುದು ಮಾತ್ರವಾಗಿದೆ.ಆದರಿಂದ ಇದನ್ನು ಯಾರಾದರೂ ವಿರೋಧಿಸುವರೆಂದು ನನಗೆ ಅನಿಸುತ್ತಿಲ್ಲ.

3.ವಲಿಯ್ಯರ ಹೆಸರಲ್ಲಿ ದಾನ ಮಾಡುವುದು:

ಉರೂಸಿನಲ್ಲಿ ನಡೆಸುವ ಮೂರನೇ ಕಾರ್ಯ ವಲಿಯ್ಯವರ ಹೆಸರಿನಲ್ಲಿ ಅನ್ನ ಸಂತರ್ಪಣೆ , ಸೀರಣೆ ವಿತರಣೆ ಮುಂತಾದವುಗಳ ಮೂಲಕ ದಾನ ಮಾಡುವುದು.ಇದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿಳಿಸಿದ ಸುನ್ನತ್ತಾದ ಕಾರ್ಯವಾಗಿದೆ.
       ಆಯಿಶ ರಳಿಯಲ್ಲಾಹು ಅನ್ಹಾ ಹೇಳುತ್ತ್ತಾರೆ,ಒಬ್ಬ ವ್ಯಕ್ತಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರಲ್ಲಿ ಕೇಳಿದರು, " ಪ್ರವಾದಿ ವರ್ಯರೇ, ನನ್ನ ತಾಯಿ ಅನಿರೀಕ್ಷಿತವಾಗಿ ಮರಣ ಹೊಂದಿದ್ದಾರೆ.ಅವರ ಹೆಸರಿನಲ್ಲಿ ದಾನ ಮಾಡಬಹುದೇ?"  ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು, " ಹೌದು , ಅವರ ಹೆಸರಿನಲ್ಲಿ ದಾನ ಮಾಡು"( ಬುಖಾರಿ386/1,  186/1,  ಮುಸ್ಲಿಮ್ 41/2,  ಅಬೂದಾವೂದ್ 42/2)

ಇಬ್ನ್ ಅಬ್ಬಾಸ್ ರಳಿಯಲ್ಲಾಹು ಅನ್ಹು ಹೇಳುತ್ತಾರೆ,
ಸಅದ್  ಬಿನ್ ಉಬಾದತ್ ರಳಿಯಲ್ಲಾಹು ಅನ್ಹುರವರ ತಾಯಿ ತೀರಿದಾಗ ಸ ಅದ್ ರಳಿಯಲ್ಲಾಹು ಅನ್ಹು ರವರು ಊರಿನಲ್ಲಿರಲಿಲ್ಲ.ಊರಿಗೆ ಮರಳಿದ ಬಳಿಕ ಅವರು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಳಿ ಬಂದು ಹೇಳಿದರು. " ಪ್ರವಾದಿಯವರೇ ನನ್ನ ತಾಯಿ ಮರಣ ಹೊಂದುವಾಗ ನಾನು ಊರಿನಲ್ಲಿರಲಿಲ್ಲ.ಅವರ ಹೆಸರಿನಲ್ಲಿ ದಾನ ಮಾಡಿದರೆ ಅವರಿಗೆ ಪ್ರಯೋಜನ ಉಂಟೇ? ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು.ಹೌದು , ಪ್ರಯೋಜನವುಂಟು." ಆಗ
ಸಅದ್ ರಳಿಯಲ್ಲಾಹು ಅನ್ಹು ಹೇಳಿದರು, " ಹಣ್ಣುಗಳಿರುವ ನನ್ನ ತೋಟವನ್ನು ಅವರ ಹೆಸರಿನಲ್ಲಿ ನಾನು ದಾನ ಮಾಡಿರುತ್ತೇನೆ." ( ಬುಖಾರಿ 387/ 1)

ಅಬೂಹುರೈರ ರಳಿಯಲ್ಲಾಹು ಅನ್ಹು ಹೇಳುತ್ತಾರೆ,ಒಬ್ಬರು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಬಳಿ ಬಂದು ಹೇಳಿದರು, " ಪ್ರವಾದಿಯವರೇ ನನ್ನ ತಂದೆ ಮೃತರಾಗಿದ್ದಾರೆ.ಅವರು ಮರಣ ಹೊಂದುವಾಗ ಯಾವುದೇ ವಸಿಯ್ಯತ್ ಮಾಡಿಲ್ಲ.ಆದ್ದರಿಂದ ಅವರ ಹೆಸರಿನಲ್ಲಿ ದಾನ ಮಾಡಿದರೆ ಅವರ ಪಾಪಗಳು ಮನ್ನಿಸಲ್ಪಡಬಹುದೇ?
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು, "ಹೌದು, ಮನ್ನಿಸಲ್ಪಡುವುದು."  (ಮುಸ್ಲಿಮ್ 41/2)

ಒಮ್ಮೆ ಸಅದ್ ಬಿನ್ ಉಬಾದತ್ ರಳಿಯಲ್ಲಾಹು ಅನ್ಹು ಹೇಳಿದರು,
ಪ್ರವಾಸಿಯವರೇ, ನನ್ನ ತಾಯಿ ಮೃತರಾಗಿದ್ದಾರೆ.ಅವರ ಹೆಸರಿನಲ್ಲಿ ದಾನ ಮಾಡುವುದಾದರೆ ಯಾವುದಾಗಿದೆ ಅತ್ಯಂತ ಶ್ರೇಷ್ಟವಾದುದು? " ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು, "ನೀರು ಆಗಿದೆ"
ನಂತರ ಸಅದ್ ರಳಿಯಲ್ಲಾಹು ಅನ್ಹು ಒಂದು ಬಾವಿ ತೋಡಿದರು ಹಾಗೂ ಇದರ ನೀರನ್ನು ಉಮ್ಮು ಸಅದ್ ರವರ ಹೆಸರಿನಲ್ಲಿ ದಾನ ಮಾಡಿರುತ್ತೇನೆ ಎಂದು ಹೇಳಿದರು.
(ಅಹ್ಮದ್ , ಕಿತಾಬು ರೂಹ್ .ಪುಟ 106)

ಇಮಾಮ್ ಮುಸ್ಲಿಮ್ ವರದಿ ಮಾಡಿದ ಹದೀಸನ್ನು ವ್ಯಾಖ್ಯಾನಿಸುತ್ತಾ ಇಮಾಮ್ ನವವೀ ಹೇಳುತ್ತಾರೆ,
ಮರಣ ಹೊದಿದದವರ ಹೆಸರಿನಲ್ಲಿ ದಾನ ಮಾಡುವುದು ಸುನ್ನತ್ತಾಗಿದೆಯೆಂದೂ, ಅದರ ಪ್ರತಿಫಲವು ಅವರಿಗೆ ಲಭಿಸುತ್ತದೆಯೆಂದೂ , ಅವರಿಗೆ ಅದರಿಂದ ಪ್ರಯೋಜವಿದೆಯೆಂದೂ , ಮಾತ್ರವಲ್ಲ ದಾನ ಮಾಡಿದವನಿಗೂ ಪ್ರಯೋಜವಿದೆಯೆಂದೂ ಈ ಹದೀಸ್ ನಲ್ಲಿದೆ.ಇದೆಲ್ಲವೂ ಮುಸ್ಲಿಮರ ಒಮ್ಮತವಾದ ಕಾರ್ಯವಾಗಿದೆ." ( ಶರಹ್ ಮುಸ್ಲಿಮ್ 41/ 2)

ಒಟ್ಟಿನಲ್ಲಿ ಮರಣ ಹೊಂದಿದವರ ಹೆಸರಿನಲ್ಲಿ ಹೊಂದಿದವರ ಹೆಸರಿನಲ್ಲಿ ದಾನ ಮಾಡಬಹುದೆಂದೂ ಅದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಕಲಿಸಿದ ಹಾಗೂ ಮುಸ್ಲಿಮರಿಗೆ ಯಾವುದೇ ತರ್ಕವಿಲ್ಲದ ಕಾರ್ಯವೆಂದೂ ಸ್ಪಷ್ಟವಾಯಿತು.

ಮುಂದುವರಿಯುವುದು...

No comments:

Post a Comment