Sunday, October 1, 2017

ಝೀ ಎಂಬ ಸಳಪಿಯ ವಿಷಯ ಕೇಳಿ ಉಸ್ತಾದರ ಹತ್ತಿರ ಹೋಗಿ ಪ್ರಶ್ನೆ ಕೇಳಿದವನ ಖುದ್ದು ಅನುಭವ 👇👇



ನಿಂಙಳೊ ರಾಯತ್ತೋ ಉಸ್ತಾದ್ ರೊಟ್ಟುಗು 3 ಪ್ರಶ್ನೇ ಕೇಕೊರು..?
ಅಪ್ಪ ಉಸ್ತಾದ್ ನಿಂಙಳೊ ಸಲಫಿ ಆಕ್ಡ್
✳✳✳✳✳✳✳✳
▶ಪ್ರಶ್ನೇ 1  ಉಸ್ತಾದ್ ಬೆಲಿಯೋ ಪೆರ್ನಾಲ್ಗ್ ನೆಬಿ(ಸ)ತಂಙ ಎಂದ್ರೋ ಸುನ್ನತ್ ಪಡಿಪಾಟಿಡ್...?
ಉಸ್ತಾದ್ರೊ ಉತ್ತರ: ಉಸ್ತಾದ್ ಕಪಾಟ್ ಲುಲ್ಲೊ ಬುಖಾರಿ,ಮುಸ್ಲಿಂ,ಅಬೂದಾವೂದು,ನಸಾಯೀ ಪೊಲ್ತೊ ಬೆಲಿಯೊ ಬೆಲಿಯೊ ಹದೀಸ್  ಕಿತಾಬು ಎಡ್ತ್ತ್ ಉಸ್ತಾದ್  ಚೊಲ್ಲುಡು  ನೆಬಿ(ಸ)ಬೆಲಿಯೋ ಪೆರ್ನಾಲ್ಗ್  ,ಪುದಿಯೋ ಡ್ರೆಸ್ಸ್ ಇಡೊಗು ಚೊನ್ನುಡು ,ಕುಳಿಕ್ಕೊಗು ಚೊನ್ನುಡು, ಈದ್ಗತ್ತ್ ನಿಸ್ಕರಿಕ್ಕೊಗು ಚೊನ್ನುರು, ಕಾಳಿ ಬಯತ್ಲ್ ಪಲ್ಲಿಗ್ ಪೊಗು ಚೊನ್ನುಡು,ಸಂಮ್ಮಂದತ್ತಙಲೊ ಔತುಗು ಪೋಗು ಚೊನ್ನುಡು,ಪೆರ್ನಾಲ್ ನಿಸ್ಕಾರ ಚೊನ್ನುರು ಇಂಗನೆಲ್ಲ ನಂಙಾಲೋ ನೆಬಿ(ಸ)ಪಡಿಪ್ಪಾಟಿಡ್ ಚೊನ್ನುಟ್ಟು ಉಸ್ತಾದ್ ಚೊಲ್ಲುಡು

▶ಪ್ರಶ್ನೇ 2 ಉಸ್ತಾದ್  ಚೆರಿಯೋ ಪೆರ್ನಾಲ್ಗ್ ನೆಬಿ(ಸ)ಎಂದ್ರೊ ಸುನ್ನತ್ ಏಲ್ಲಾ ಪಡಿಪಾಟಿಡ್....?

ಉಸ್ತಾದ್ ಬುಖಾರಿ,ಮುಸ್ಲಿಂ ,ಅಬುದಾವೂದ್,ನಸಯಿ,ಪೊಲ್ತೊ ಬೆಲಿಯೋ ಬೆಲಿಯೋ  ಹದೀಸ್ ಕಿತಾಬು ಎಡ್ತ್ತ್ ಉಸ್ತಾದ್ ಚೊಲ್ಡು   ನೆಬಿ(ಸ) ಚೆರಿಯೋ ಪೆರ್ನಾಲ್ಗ್ ಪುದಿಯೋ ಡ್ರೆಸ್ಸ್ ಇಡೊಗು ಚೊನ್ನುರು ,ಕುಳಿಕ್ಕೊಗು ಚೊಲ್ಲುರು ,ತಕ್ಬೀರ್ ಚೊಲ್ಲೊಗು ಚೊನ್ನುರು , ಈದ್ಗತ್ತ್ ನಿಸ್ಕರಿಕ್ಕೊಗು ಚೊನ್ನುರು, ಬಯತ್ತ್ ಗ್ ಎಂದಾಯೆಂಗುಮ್ ತಿಂಡ್ ಪಲ್ಲಿಗ್  ಪೋಗು ಚೊನ್ನುರು ,ಸಂಮಂದತ್ತಂಗಲೊ ಔತುಗು ಪೊಗು ಚೊನ್ನುರು , ಇಂಗನೆ ಕೊರೇ ಸುನ್ನತ್ ನೆಬಿ(ಸ) ಚೆರಿಯೋ ಪೆರ್ನಾಲ್ಗ್ ಪಡಿಪ್ಪಾಟಿಡ್ ಚೊನ್ನುಟ್ಟು  ಉಸ್ತಾದ್ ಚೊಲ್ಲುಡು

▶ಪ್ರಶ್ನೇ 3"ಉಸ್ತಾದ್ ಈ'ದ್  ಮೀಲಾದಾಚರಣೆಗ್ ನೆಬಿ(ಸ)ಎಂದ್ರೋ ಸುನ್ನತ್ ಏಲ್ಲಾ ಪಡಿಪ್ಪಾಟಿಡ್...? ತೆಲ್ಲ್ ಕನ್ನಡ ಬಾಷೆಲಿ ಎಕ್ಸಪ್ಲೈನ್ ಆಕೋರು ಒಸ್ತಾದ್.

ಉಸ್ತಾದ್: ಟೇಬಲಿನ ಮೇಲೆ ಇರುವ ಪವಿತ್ರ ಕುರಾನ್ ತೆರದು ಅದರಲ್ಲಿರುವ ಸೂರಾ ಅಂಬಿಯಾದ 107ನೇ ಆಯತಿನ ಅರ್ಥ ಹೇಳಿದರು.

"(ಓ ನೆಬಿಯವರೇ..) ಲೋಕಕ್ಕೆ ಅನುಗ್ರಹವಾಗಿಯೇ ನಿಮ್ಮನ್ನು ನಾವು ನಿಯೋಗಿಸಿರುತ್ತೇವೆ"

ನಂತರ ಉಸ್ತಾದ್ ಕಪಾಟಿನ ಸೆಲ್ಪಿನಿಂದ ಇಬ್ನ್ ಕಸೀರ್ ಗ್ರಂಥದ ಭಾಗ ಮೂರು ತೆಗೆದು ಅದರ 202ನೇ ಪುಟ ತೋರಿಸುತ್ತಾ ಹೇಳಿದರು.

"ಅಲ್ಲಾಹನ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಲೋಕದ ಜನರಿಗೆ ಅನುಗ್ರವಾಗಿ ನಿಯೋಗಿಸಿದ್ದೇನೆಂದು ತಿಳಿಸುತ್ತಾನೆ. ಈ ಅನುಗ್ರಹವನ್ನು ಸ್ವೀಕರಿಸಿ ಅದಕ್ಕಾಗಿ ಕೃತಜ್ಞತೆ ಪ್ರಕಟಿಸುವವರು ಇಹ ಮತ್ತು ಪರದಲ್ಲಿ ಯಶಸ್ವಿಯಾಗತ್ತಾರೆ ಅದನ್ನು ತಿರಸ್ಕರಿಸುವವರು ಹಾಗೂ ನಿಷೇಧಿಸುವ (ಸಳಪಿಗಳು)ರು ಎರಡು ಲೋಕದಲ್ಲಿ ಪರಾಜಿತರಾಗುವರು"

(ಇಬ್ನ್ ಕಸೀರ್ 3/202)

ನಂತರ ಉಸ್ತಾದ್ ಜಾಸ್ತಿ ವಿವರಣೆಗೆ ಬೇಕಾಗಿ ರಾಝಿ ಮತ್ತು ಜಾಮಿಉಲ್ ಬಯಾನ್ ಗ್ರಂಥ ಕಾಪಾಟಿನಿಂದ ತೆರೆದು ಅದರ 11/232------17/106 ರ ಪುಟಗಳಲ್ಲಿರುವ ಇದೇ ವಿಷಯವನ್ನು ವಿವರಿಸುತ್ತಾ ಹೇಳಿದರು.

ಸಾಮಾನ್ಯ ಯುವಕ: ಸರಿ, ಮುಹಮ್ಮದ್ ನೆಬಿ ಅನುಗ್ರವಾಗಿದ್ದಾರೆ, ಆ ಅನುಗ್ರಹಕ್ಕಾಗಿ ಕೃತಜ್ಞತೆ ಸಲ್ಲಿಸಬೇಕೆಂದು ತಿಳಿಯಿತು. ಹಾಗಾದರೆ ಅನುಗ್ರಹ ಲಭಿಸಿದ ಹೆಸರಲ್ಲಿ ಸಂತೋಷಿಸಬಹುದೇ ಉಸ್ತಾದ್?

ಉಸ್ತಾದ್: ಕುರಾನಿನ ಸೂರತ್ ಯೂನುಸ್ ತೆರೆದು ಪಾರಾಯಣ ಮಾಡುತ್ತಾ ಹೇಳಿದರು.

"ಹೇಳಿರಿ ಅಲ್ಲಾಹನ ಔದಾರ್ಯ ಮತ್ತು ಅನುಗ್ರಹ (ಮುಹಮ್ಮದ್ ನೆಬಿ) ದಿಂದ ಅವರು ಸಂತೋಷ ಪಟ್ಟುಕೊಳ್ಳಲಿ"

ಅಂದರೆ ಅನುಗ್ರಹ ಲಭಿಸಿದ ಕಾರಣ ಮುಸ್ಲಿಮರು ಸಂತೋಷಪಡಬೇಕು ಹಾಗೂ ಅದು ಇತರ ಎಲ್ಲಾ ಒಗ್ಗೂಡುವಿಕೆಯಿಂದಲೂ ಉತ್ತಮ ಕಾರ್ಯವಾಗಿದೆ ಎಂದು ಅಲ್ಲಾಹು ಹೇಳುತ್ತಾನೆ.
ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರು ಲೋಕಕ್ಕೆ ಅನುಗ್ರಹವಾಗಿದ್ದಾರೆ. ಹೀಗಿರುವಾಗ ಈ ಆಯತಿನ ಆಧಾರದಲ್ಲಿ ಮುತ್ತು ನೆಬಿ ಎಂಬ ಅನುಗ್ರಹ ಲಭಿಸಿದ್ದಕ್ಕಾಗಿ ಮುಸ್ಲಿಮರು ಸಂತೋಷ ಪ್ರಕಟಿಸಲೇ ಬೇಕಾಗುತ್ತದೆ

ನಂತರ ಉಸ್ತಾದ್ ಇಮಾಂ ಖಸ್ತಲ್ಲಾನಿಯವರ ಅಲ್ ಮವಾಹಿಬುಲ್ಲದುನ್ನಿಯ್ಯ ಎಂಬ ಕಿತಾಬ್ ತೋರಿಸಿ ಹೇಳಿದರು.

ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿಗೆ ಶ್ರೇಷ್ಠತೆ ಲಭಿಸಲು ಅವರ ಜನನವೇ ಕಾರಣವಾಗಿದೆ
(ಅಲ್ ಮವಾಹಿಬುಲ್ಲದುನ್ನಿಯ್ಯ 1/136)

ಪ್ರವಾದಿಯವರು ರಬೀವುಲ್ ಅವ್ವಲ್ ಹನ್ನೆರಡರಂದು ಜನಿಸಿದರೆಂದು ಅಭಿಪ್ರಾಯಪಡಲಾಗಿದೆ.ಮಕ್ಕಾದ ಮುಸ್ಲಿಮರು ಆದಿಕಾಲದಲ್ಲಿ(ಸಹಾಬಿಗಳ ಕಾಲದಲ್ಲಿ) ಮತ್ತು ಈ ಕಾಲದಲ್ಲಿ ಇದರ ಪ್ರಕಾರವೇ ನಡೆದುಕೊಂಡಿದ್ದಾರೆ ಈ ಸಂದರ್ಭದಲ್ಲಿ (ರಬೀವುಲ್ ಅವ್ವಲ್ 12 ರಂದು ಅವರು ಪ್ರವಾದಿಯವರು ಜನಿಸಿದ ಸ್ಥಳವನ್ನು ಸಂದರ್ಶಿಸುವುದಿದೆ"
(ಅಲ್ ಮವಾಹಿಬುಲ್ಲದುನ್ನಿಯ್ಯ 1/132)

ಸಾಮಾನ್ಯ ಯುವಕ: ಮುಹಮ್ಮದ್ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಅನುಗ್ರವಾಗಿದ್ದಾರೆಂದು ಆ ಅನುಗ್ರಹ ರಬೀಉಲ್ ಅವ್ವಲ್ ಹನ್ನೆರಡರಂದು ಉದಯವಾಯಿತೆಂದೂ, ಅದಕ್ಕಾಗಿ ನಾವು ಸಂತೋಷಗೊಳ್ಳಬೇಕೆಂದು ತಿಳಿಯಿತು.
ಅದು ಓಕೆ.
ನನ್ನ ಪ್ರಶ್ನೆ ಎರಡು ಪೆರ್ನಾಳ್ ಗೆ ಕೆಲವೊಂದು ಸುನ್ನತ್ ಗಳಿವೆ ತಾನೇ?
ಅಂತಹ ಸುನ್ನತ್ ಈದ್ ಮೀಲಾದ್ ಆಚರಣೆಗೂ ಇದೆಯಾ?

ಉಸ್ತಾದ್: ಇಸ್ಲಾಮಿನಲ್ಲಿ ಕೆಲವೊಂದು ಕಾರ್ಯಗಳು ಅದು ಸ್ಪಷ್ಣವಾಗಿದೆ. ಉದಾಹರಣೆಗೆ ಐದು ಹೊತ್ತು ನಮಾಜು, ಪೆರ್ನಾಳ್ ನಮಾಜು, ರಮಳಾನ್ ವೃತ, ಹಜ್ಜ್ ಮುಂತಾದ ಕಾರ್ಯಗಳು ಅದರಲ್ಲಿ ಸೇರಿಸುವುದು/ಕಳೆಯುವುದು ಇಲ್ಲ.
ಳುಹರ್ ನಾಲ್ಕು ರಕಾತ್ ಅದನ್ನು ಐದು ಅಥವಾ ಮೂರಾಗಿ ಏರಿಳಿತ ಮಾಡುವಂತಿಲ್ಲ.
ಬೇರೆ ಕೆಲವೊಂದು ಪುಣ್ಯಕರ್ಮಗಳು ಇಸ್ಲಾಮಿನಲ್ಲಿ ಸ್ಪಷ್ಟ ಆದಾರವಿದ್ದರೂ ಅದರ ರೂಪ ಇಂತಹದೇ ಆಗಬೇಕೆಂದು ಸ್ಪಷ್ಟಪಡಿಸಲಿಲ್ಲ.

ಉದಾಹರಣೆಗೆ ಜ್ಞಾನ ಕಲಿಯುವುದು ಪ್ರತಿಯೊಬ್ಬ ವಿಶ್ವಾಸಿ/ವಿಶ್ವಾಸಿನಿಯ ಮೇಲೆ ಇಸ್ಲಾಂ ಕಡ್ಡಾಯ ಗೊಳಿಸಿದೆಯಾದರೂ, ಅದಕ್ಕಾಗಿ ಇಂತಹದೇ ಶೈಲಿ ರೂಡಿಮಾಡಿಕೊಳ್ಳಬೇಕೆಂದು ಸ್ಪಷ್ಟ ಪಡಿಸಲಿಲ್ಲ. ಹಾಗಾಗಿ ನಾವಿಂದು ಮದರಸ, ಪುಸ್ತಕ, ಸಿಲಬೆಸ್ ಮುಂತಾದ ನೆಬಿಯವರು ಸ್ಪಷ್ಟ ಪಡಿಸದ ಶೈಲಿಗಳನ್ನು ಅನುಸರಿಸುತ್ತೇವೆ. ಇದೆಲ್ಲದರ ಮೂಲ, ಜ್ಞಾನ ಸಂಪಾದನೆ ಎಂಬ ಇಸ್ಲಾಂ ಕಲಿಸಿದ ಆದೇಶವನ್ನು ಪಾಲಿಸುವುದರ ಭಾಗವಾಗಿದೆ.
ಅದಕ್ಕೆ ಪೆರ್ನಾಳ್ ನಮಾಜಿನಂತೆ ಸ್ಪಷ್ಟ ರೂಪಭಾವಗಳಿಲ್ಲ. ಇಸ್ಲಾಂ ನಿಷೇಧಿಸದ ಯಾವುದೇ ರೂಪಗಳನ್ನು ಅನುಸರಿಸಬಹುದು.

ಅದೇ ರೀತಿಯಾಗಿದೆ ನೆಬಿ ದಿನಾಚರಣೆ.
ನೆಬಿದಿನಾಚರಣೆಯಲ್ಲಿ ಉಪವಾಸ ಹಿಡಿದು ಆಡು ದ್ಸಬಹ್ ಮಾಡಿ ಸ್ವತಃ ನೆಬಿಯರೇ ಸಂತೋಷ ವ್ಯಕ್ತಪಡಿಸಿದಾಗ, ಸಹಾಬಿಗಳು ನೆಬಿಯವರ ಜನ್ಮ ಸ್ಥಳ ಸಂದರ್ಶಿಸಿ ಮನಸಂತೃಪ್ತಿ ಪಡೆಯುವಾಗ, ಮುಹಮ್ಮದ್ ನೆಬಿಯೆಂಬ ಅನುಗ್ರಹದ ಉದಯದಲ್ಲಿ ನೀವೆಲ್ಲಾ ಸಂತೋಷ ಪ್ರಕಟಿಸಿರಿ ಎಂದು ಕುರಾನ್ ಆದೇಶ ನೀಡುವಾಗ ನೆಬಿಜನ್ಮದಲ್ಲಿ ಸಂತೋಷ ಪಡುವುದು ಇಸ್ಲಾಮಿಕವೆಂದು ಬರುತ್ತದೆ. ಆದರೆ ಅದರ ರೂಪ ಇಂತಹದೇ ರೀತಿಯಲ್ಲಿ ಆಗಬೇಕೆಂದು ಆದೇಶ ಇಲ್ಲದಿರುವಾಗ ನಮಗೆ ಇಂದಿನ ಕಾಲದಲ್ಲಿ ಇಸ್ಲಾಂ ಅನುಮತಿ ನೀಡಿದ ವೈವಿದ್ಯಮಯ ರೂಪದಲ್ಲಿ ಆಚರಿಸಬಹುದು.
ಅದು  ಅನ್ನದಾನ, ಕುರಾನ್ ಪಾರಾಯಣ, ಮೌಲೂದ್, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಜನರಿಗೆ ತೊಂದರೆಯಾಗದಂತೆ ಜಾಥ ನಡೆಸುವುದು ಎಲ್ಲವೂ ಪುಣ್ಯ ಕಾರ್ಯದಲ್ಲಿ ಒಳಪಡುತ್ತದೆ.

ಆದ್ದರಿಂದಲೇ ಮೀಲಾದಾವರಣೆಗ್ ನೆಬಿ(ಸ) ಎಂದ್ರೋ ಸುನ್ನತ್ ಪಡಿಪಾಟಿಡ್? ಎಂಬ ಪ್ರಶ್ನೆಯೇ ಜಹಾಲತಿನ ಪ್ರಶ್ನೆಯಾಗಿದೆ.

ಉಸ್ತಾದರ ವಿವರಣೆಯಿಂದ ತುಂಬಾ ಕಾರ್ಯ ತಿಳಿಯುವಂತಾಯಿತೆಂಬ ಮನಸಂತೃಪ್ತಿ ಹೊಂದಿದ ಯುವಕ, ಸಳಪಿಗಳ ಈದ ಆಚರಣೆಗ್ ಎಂದ್ರೋ ಸುನ್ನತೆಲ್ಲಾ ಪಡಿಪಾಟಿಡ್? ಎಂಬ ಪ್ರಶ್ನೆಯೇ ಬಾಲಿಶವೆಂದು ಮನದಟ್ಟು ಮಾಡಿದ.

ನೆಬಿದಿನಾಚರಣೆಗೆ ಏನು ಸುನ್ನತ್ ಅಂತ ಕೇಳಿದರೆ ಉಸ್ತಾದರುಗಳು ಆದಾರವಾಗಿ ಕುಸುಮ, ಸುನ್ನಿವಾಣಿ, ಅಲ್ ಅನ್ಸಾರ್ ಮಾತ್ರ ತೋರಿಸುತ್ತಾರೆ, ಕಿತಾಬ್, ಆಯತ್ ಹದೀಸ್ ತೋರಿಸುವುದಿಲ್ಲ ಎಂಬ ಸಳಪಿಯ ಹಸಿ ಹಸಿ ಸುಳ್ಳು ಮತ್ತು ಕೇಳಿದವರನ್ನು ಸಳಪಿ ಮಾಡುತ್ತಾರೆಂಬ ಅಪ್ಪಟ ಬಡಾಯಿ ಮತ್ತು ಅವರ ಕುತಂತ್ರ ಪ್ರಶ್ನೆಗಳ ನಿಜಾಂಶಗಳನ್ನು ಅರತು ಆ ಸಾಮಾನ್ಯ ಯುವಕನಿಗೆ ಅವರ ಕುರಿತು ತುಂಬಾ ಅಸಹ್ಯ ಹುಟ್ಟಿತು.
ಅವರ ಜನ್ಮಕ್ಕೆ ಇಷ್ಟು ಉಪ್ಪು ಹಾಕ ನಸ್ರಾಣಿಗಳು ಅಂತ ಗೊಣಗುತ್ತಾ ಆ ಯುವಕ ಉಸ್ತಾದರ ಕೈ ಚುಂಬಿಸಿ ಹೊರನಡೆದ.

✳✳✳✳✳✳✳
-ಅಬೂಶಝ

No comments:

Post a Comment